ಏಟುತಿಂದ ಕೈಗಳಿಗೆ ಬಹುಮಾನ ಇಟ್ಟ ಕೈಗಳು: ತಿರುಪತಿ ಭಂಗಿ
ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು. ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ … Read more