ಬೆಳ್ಳಿತೆರೆಯಲ್ಲಿ `ಮೇಲುಕೋಟೆ’ಯ ದೃಶ್ಯಕಾವ್ಯ!: ದಂಡಿನಶಿವರ ಮಂಜುನಾಥ್

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾಗ ಖಂಡಿತಾ ನೀವು ಅದರಲ್ಲಿ ಕಲ್ಯಾಣಿಯೊಂದರ ಹಿನ್ನೆಲೆ ಹೊಂದಿರುವ ಬೆಟ್ಟದ ತುದಿಯಲ್ಲಿ ದೇವಾಲಯದ ಗೋಪುರದ ದೃಶ್ಯವನ್ನು ಆಗಾಗ ನೋಡುತ್ತಿರುತ್ತೀರಿ.  ಹೆಚ್ಚಾಗಿ ಕಾಡುಗಳ ದೃಶ್ಯಗಳಲ್ಲಿ ಈ ಸ್ಥಳದ ಪರಿಚಯ ನಿಮಗಾಗಿರುತ್ತದೆ. ಇದು ನಮ್ಮ ನಾಡಿನ ಸ್ಥಳವೇ ಆಗಿದೆ ಎಂದು ತಿಳಿದಾಗ ನಿಜಕ್ಕೂ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದುವೇ ಮೇಲುಕೋಟೆಯ ಮೋಹಕ ದೃಶ್ಯಕಾವ್ಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ಸ್ಥಳ ಹಲವು ಭಾಷೆಗಳ ಚಿತ್ರರಂಗದವರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಶೂಟಿಂಗ್ ಸ್ಪಾಟ್ … Read more

ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ

ಕಾಲೇಜು ಆರಂಭವಾಗಿ ಆರು ತಿಂಗಳುಗಳೇ ಕಳೆದಿವೆ. ಹೇಳದೆ ಪ್ರೀತಿಸುವ  ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಒಂದು ವೇದಿಕೆ ಸಿದ್ಧವಾಗಿದೆ. ಹುಡುಗ ಹುಡುಗಿಯರೆಲ್ಲಾ ಸೂಕ್ತ ಪ್ರಿಯತಮ/ಮೆಯ ಹುಡುಕಾಟದಲ್ಲಿದ್ದಾರೆ. ಆ ಪ್ರಯತ್ನದಲ್ಲಿ ಕೆಲವರು  ಯಶಸ್ವಿಯು ಆಗಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನು ಹೇಗೆ ಅವಳಿ/ನಿಗೆ ಅರಿಕೆ ಮಾಡಿಕೊಳ್ಳಬೇಕೆಂಬ  ತೋಳಲಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ “ವ್ಯಾಲೇಂಟೆನ್ಶ ಡೇ” ಸಮೀಪಸಿದೆ. ಹುಡುಗ ಹುಡುಗಿಯರ ಎದೆಯಲ್ಲಿ ಲಬ್-ಡಬ್ ಶುರುವಾಗಿದೆ.  ನಾನು ಪ್ರೀತಿಸಿದ ಹುಡುಗ/ಗಿ ನನ್ನಲ್ಲಿ ಬಂದು ಗುಲಾಬಿ ಹಿಡಿದು ಪ್ರೀತಿ ಯಾಚಿಸುತ್ತಾನಾ/ಳಾ??  ನನ್ನ … Read more

ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ

ತ್ರಿವರ್ಣ ಗಣಪ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ … Read more

ವಿಶ್ವಾಮಿತ್ರ!!: ಎಸ್.ಜಿ.ಶಿವಶಂಕರ್

ಅರಳೀಕಟ್ಟೆಯಲ್ಲಿ ಕೂತಿದ್ದ ಶತಾಯುಶಿ ಹನುಮಜ್ಜ ತನ್ನಷ್ಟೇ ವಯಸ್ಸಾದಂತೆ ಕಾಣುತ್ತಿದ್ದ ಕನ್ನಡಕವನ್ನು ಸರಿಪಡಿಸಿಕೊಂಡು ತನ್ನ ಮುಂದೆ ಧೂಳೆಬ್ಬಿಸುತ್ತಾ ಹೋದ ಕಾರು ನೋಡಿದ. ಇದು ಎಷ್ಟನೆಯ ಕಾರು ಎಂದು ಅಚ್ಚರಿಪಟ್ಟ. ಸುಮಾರು ಅರ್ಧ ಗಂಟೆಯಿಂದ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಕಾರುಗಳು ಅವನು ಕೂತಿದ್ದ ಆರಳೀಕಟ್ಟೆಗೆ ಧೂಳಿನ ಅಭಿಷೇಕ ಮಾಡಿದ್ದವು.  "ಇವತ್ತೇನು ನಡೀತೈತೆ ಆ ಫಾರಮ್ಮಿನಾಗೆ..?" ಹನುಮಜ್ಜ ಗೊಗ್ಗರು ದನಿಯಲ್ಲಿ ತನಗೆ ತಾನೇ ಎಂಬಂತೆ ಹೇಳಿಕೊಂಡ. "ಏನು ನಡದ್ರೆ ನಮಗೇನು..? ನಾವು ಹೊಲಗೈಯಾದು ತಪ್ಪತೈತ..?" ಹನುಮಜ್ಜನಿಗಿಂತ ಹತ್ತು ವರ್ಷ ಕಿರಿಯ ಭರಮಜ್ಜ … Read more

ಪಂಜು ಕಾವ್ಯಧಾರೆ

ನಕ್ಷತ್ರಗಳೆಂದರಿಷ್ಟ  ಹೊಸ್ತಿಲು ದಾಟಿ ಬಂದಂತೆ ಕಂಡದ್ದು ಅರ್ಧಚಂದ್ರ ಚೆಲ್ಲಿದ ಮುದ್ದು ಬೆಳದಿಂಗಳು. ಹೊನಲಿನಲ್ಲಿ ಗೋಚರವಾಗಿ  ಹಗಲಲ್ಲಿ ಕಣ್ಮರೆಯಾಗುವ ದಿಗಂತದ ಪರದೆಯಲ್ಲಿ ಬೆಚ್ಚಿ ಬೀಳಿಸುವ  ಶಶಿಯ ಇಂದ್ರಜಾಲ. ನಭೋಮಂಡಲವೇ ರಾತ್ರೋರಾತ್ರಿ ಬೆತ್ತಲಾದಾಗ ನಕ್ಷತ್ರಗಳು ಜಿನುಗುತ್ತವೆ. ಬರಿಗಣ್ಣಿಗೆ ನಂಬಲಾರದಷ್ಟು ಹೆಸರಿಲ್ಲದ ತಾರಾ ಪುಂಜಗಳು ಮೋಡಿಗಾರನ ಕೈಯ ಅಂಕುಶದ ಮಾಯಾಜಾಲದೊಳಗೆ. ಯಾರೋ ದೇವಕನ್ನೆ ರಾತ್ರಿ ಆಕಾಶದಲ್ಲಿ ಜೋಡಿಸದೇ ಹಾಗೇ ಬಿಟ್ಟ ರಂಗೋಲಿ ಚುಕ್ಕಿಯಂತೆ ನೀವು. ನಗರದಾಚೆ ಗಲ್ಲಿಯಲ್ಲಿ ಮಲಗದೇ ಹಠ ಹಿಡಿದು ಅಳುತ್ತಿರುವ ಕಂದಮ್ಮನ ಕಣ್ಣಿಗೆ ನೀವೆಲ್ಲಾ ಹೊಳೆಯುವ ಆಟಿಕೆಗಳು. ಕಂಡಾಗಲೆಲ್ಲಾ … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 2): ಪ್ರಸಾದ್ ಕೆ.

ಇಲ್ಲಿಯವರೆಗೆ ಇತ್ತ ಕತ್ತಲಿನಲ್ಲಿ ಸುಳಿವಿಗಾಗಿ ತಡಕಾಡುತ್ತಿದ್ದ ಮೊಟ್ರೋಪಾಲಿಟನ್ ಟೊರಾಂಟೋ ಪೋಲೀಸರಿಗೆ ಮಹತ್ವದ್ದೇನೂ ಸಿಕ್ಕಿರಲಿಲ್ಲ. ಬದಲಿಗೆ 1987 ರ ಡಿಸೆಂಬರಿನಲ್ಲಿ ಹದಿನೈದರ ಪ್ರಾಯದ ಇನ್ನೊಬ್ಬ ಬಾಲಕಿ ಆಗಂತುಕನೊಬ್ಬನಿಂದ ಎಂದಿನ ರೀತಿಯಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು. ಸ್ಕಾರ್-ಬೋರೋ ನಗರದ ನಿವಾಸಿಗಳು ಸ್ವಾಭಾವಿಕವಾಗಿಯೇ ಕಂಗಾಲಾಗಿದ್ದರು. ಪೋಲೀಸರೂ ಕೈಚೆಲ್ಲಿ ಕುಳಿತಿರುವಾಗ ಯಾರ ಬಳಿ ಸಹಾಯಕ್ಕೆ ಧಾವಿಸುವುದೆಂಬುದೇ ಅವರಿಗೆ ತಿಳಿಯಲಿಲ್ಲ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು ಸ್ಪಷ್ಟವಾಗಿತ್ತು. ಕತ್ತಲಾದ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ಅಲೆದಾಡುವುದನ್ನು, ಓಡಾಡುವುದನ್ನು ಆದಷ್ಟು ಕಮ್ಮಿ ಮಾಡಬೇಕೆಂದೂ, ಪ್ರಕರಣದ ಬಗ್ಗೆ ಯಾವ ಸುಳಿವು ಸಿಕ್ಕರೂ … Read more

ಬಿಸಿಲನಾಡಿನಲ್ಲೊಂದು ಕಾವ್ಯಮನೆಯ ಉದ್ಘಾಟನೆ: ಕೆ.ಎಂ.ವಿಶ್ವನಾಥ ಮರತೂರ.

ಕರ್ನಾಟಕ ರಾಜ್ಯ ಹಲವು ವಿಶೇಷಗಳನ್ನು ಹುಟ್ಟುಹಾಕಿದೆ. ಇಡಿ ದೇಶ ಹಾಗೂ ಪ್ರಪಂಚದಲ್ಲಿ ಹಲವು ಪ್ರಥಮಗಳನ್ನು ಸೃಷ್ಠಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದು, ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಮಾಡಿರುವ ಸಾಧನೆ ನಮ್ಮದು. ಇದೆಲ್ಲವೂ ಕನ್ನಡದ ಹೆಸರಾಂತ ಕವಿಗಳ ಸಾಹಿತ್ಯ ಮತ್ತು ಹೋರಾಟದಿಂದ ಸಾಧ್ಯವಾಗಿದೆ. ಕನ್ನಡ ಇಂದು ಬಹು ಶ್ರೀಮಂತವಾಗಿ ಬೆಳೆಯಲು ಹಲವರ ಕೊಡುಗೆ ಅಪಾರವಾಗಿದೆ.      ಪ್ರಸ್ತುತ ದಿನಗಳಲ್ಲಿ ಕಾವ್ಯ, ಕಥೆ, ಕಾದಂಬರಿ ಅರ್ಥ ಕಳೆದುಕೊಂಡು “ಕವಿತೆ ಯಾರು ಕೊಳ್ಳತ್ತಾರೆ” ಎಂಬ … Read more

ಮಲಯಾಳ ಸಿನೆಮಾ ರಂಗವೂ ಮಲಬಾರಿನ ಸಂಸ್ಕೃತಿಯೂ: ಕೃಷ್ಣವೇಣಿ ಕಿದೂರ್

            ಬಹಳಷ್ಟು  ಜನರಿಗೆ  ಮಲಯಾಳ   ಚಿತ್ರಗಳೆಂದರೆ  ಅದು ನೀಲಿ ಚಿತ್ರಗಳಿಗೆ  ಹತ್ತಿರದ್ದು ಎಂಬ  ತಪ್ಪು ಕಲ್ಪನೆಯಿದೆ.    ಜಾಹೀರಾತುಗಳು ತೋರಿಸುವ   ಚಿತ್ರಗಳು   ಹಾಗಿರುತ್ತದೆ ಎನ್ನಬಹುದು.   ಆದರೆ ಒಬ್ಬ ಕೇರಳೀಯಳಾಗಿ  ಮಲಯಾಳಂ  ಚಲನಚಿತ್ರಗಳೆಂದರೆ  ಅಲ್ಲಿ ಮಲಬಾರಿನ ( ಕೇರಳ) ಸಾಂಸ್ಕೃತಿಕ  ಹಿನ್ನಲೆಗೆ  ಹೆಚ್ಚಿನ ಒತ್ತು  ಸಿಗುತ್ತದೆ  ಎಂದು  ಕಂಡ  ಕಾರಣ ಆ ಮಿಥ್ಯೆಯನ್ನು  ಅಲ್ಲಗಳೆಯಬೇಕಾಗಿದೆ. ಅರಬ್ಬಿ ಸಮುದ್ರದ  ಪಕ್ಕದ ಪುಟ್ಟ ರಾಜ್ಯ  ಕೇರಳ.  ಇದಕ್ಕೆ ಕೇರ … Read more

ಕಾಡು(ವ) ಕಟ್ಟುವ ಕತೆ!! ಭಾಗ-8: ಅಖಿಲೇಶ್ ಚಿಪ್ಪಳಿ

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ವರ್ಷದ ಎಲ್ಲಾ ಋತುಮಾನಗಳು ನಿಸರ್ಗದತ್ತವಾಗಿ ಸಸೂತ್ರವಾಗಿ ನಡೆದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳು ಸುರಕ್ಷಿತವಾಗಿ ಇರಬಲ್ಲವು. ಭೂತಾಯಿಯ ಬುದ್ಧಿವಂತ ಮಕ್ಕಳಾದ ನಾವು ಮಾಡಿದ್ದೇ ಸರಿ ಎಂಬ ಅಹಂಕಾರವನ್ನು ಹೊಂದಿದ್ದೇವೆ. ಇಡೀ ಭೂಮಿ ಇರುವುದೇ ನಮ್ಮ ಲಾಭಕ್ಕಾಗಿ, ನಮ್ಮ ಸುಖಕ್ಕಾಗಿ ಎಂದು ಭಾವಿಸಿಕೊಂಡಿದ್ದೇವೆ. ಪ್ರಕೃತಿಯ ನೈಸರ್ಗಿಕ ಪ್ರಯೋಗಾಲವನ್ನು ಛಿಧ್ರ ಮಾಡಿ, ಇಡೀ ನಿಸರ್ಗವನ್ನು ನಮ್ಮ ಸುಖದ ಹುಡುಕುವಿಕೆಯ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದೇವೆ. ಹವಾಗುಣ ಬದಲಾವಣೆಯಿಂದಾಗಿ ಇಡೀ ಪ್ರಪಂಚದ ಎಲ್ಲಾ ಪ್ರದೇಶಗಳು … Read more

ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು. ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು … Read more

ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ

    ಪದ್ದು ಮುಂಜಾನೆ ಮಂಜಾನೆ ಹಾಸಿಗೆಲಿ ಇದ್ದಾಗಲೆ ಮನ್ಯಾಗ ಒಕ್ಕರಿಸಿಕೊಂಡ, ‘ಏನಾತೋ ಪದ್ದು ಹಿಂಗ್ಯಾಕ ಗಾಬರಿ ಆಗಿದಿ’ ಅಂದೆ. ‘ಇಲ್ಲ ದೊಸ್ತ್ಯಾ ಸಾಲಗಾರರ ಕಾಟ ಬಾಳ ಆಗ್ಯಾದ. ಮಾರ್ಯದೆಯಿಂದ ಬದುಕೊ ಮನುಷ್ಯ. ಸಾಲ ಸಕಾಲಕ್ಕ ತೀರಿಸುವುದಾಗವಲ್ತು ಮೂರು ತಿಂಗಳ ಟೈಮು ಸಿಕ್ರ ಎಲ್ಲಾನೂ ಅಡ್ಜೆಸ್ಟ ಮಾಡಬಹುದು. ಇವರು ಸಿಕ್ಕ-ಸಿಕ್ಕಲ್ಲಿ ವಾಮಾಗೋಚರವಾಗಿ ಬಯ್ಯತಾರ ಏನು ಮಾಡಲಿ’ ಎಂದು ತನ್ನ ಅಳಲು ತೋಡಿಕೊಂಡ.  ‘ಅದಕ್ಯಾಕ ಚಿಂತಿ ಮಾಡತಿ ಒಂದು ವ್ರತ ಅದ ಮಾಡ್ತಿ ಏನು?’  ‘ವ್ರತಾನ! ವ್ರತದಿಂದ ಸಾಲ … Read more

ವಸುಮತಿ ರಾಮಚಂದ್ರ ‘ಮಕ್ಕಳ ಮನೋಭೂಮಿ’ ಕೃತಿ ಪರಿಚಯ: ಗುಂಡೇನಟ್ಟಿ ಮಧುಕರ

ಮಕ್ಕಳ ಮನಸ್ಸನ್ನು ಅರಳಿಸುವ ಕೃತಿ ಕೃತಿಪರಿಚಯ: ಗುಂಡೇನಟ್ಟಿ ಮಧುಕರ  ಮೊ: 8904632798 ಈಗ ಮಕ್ಕಳ ಸಾಹಿತ್ಯ ರಚಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು. ಪ್ರೌಢ ಸಾಹಿತ್ಯ ರಚಿಸುವುದಕ್ಕಿಂತ ಮಕ್ಕಳ ಸಾಹಿತ್ಯ ರಚನೆ ತುಂಬ ಕಷ್ಟದ ಕೆಲಸ. ನಾವು ಮಕ್ಕಳ ಮನಸ್ಸನ್ನರಿತು ನಾವೂ ಮಕ್ಕಳಾಗಿಯೇ ರಚಿಸಿದಾಗ ಮಾತ್ರ ಒಳ್ಳೆಯ ಮಕ್ಕಳ ಸಾಹಿತ್ಯ  ಹೊರಬರಲು ಸಾಧ್ಯ. ಇದಕ್ಕಾಗಿ ಮಕ್ಕಳ ಮನಸ್ಸನ್ನು ಅಭ್ಯಾಸ ಮಾಡಬೇಕಾದುದು ಅತ್ಯವಶ್ಯವಾಗಿದೆ. ಅದಕ್ಕಾಗಿ ನಾವು ಮಕ್ಕಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದವರಿಂದ ಮಾತ್ರ ಉತ್ಕøಷ್ಟ ಮಕ್ಕಳ ಕೃತಿಗಳನ್ನು ರಚಿಸಲು ಸಾಧ್ಯ. ಹಿಂದಿನ … Read more

ನೆಗಡಿಯಾದಾಗ ಮೂಗನ್ನೇ ಕೊಯ್ದರೆ,,,!: ಆರ್.ಬಿ.ಗುರುಬಸವರಾಜ. ಹೊಳಗುಂದಿ

ಮೂಗು ಇದ್ದವರಿಗೆಲ್ಲಾ ನೆಗಡಿ ಬರುವುದು ಸರ್ವೇ ಸಾಮಾನ್ಯ. ಪದೇ ಪದೇ ನೆಗಡಿ ಬರುತ್ತದೆ ಅಂತ ಮೂಗನ್ನೇ ಕೊಯ್ದು ಹಾಕುತ್ತೇವೆಯೇ? ಇಲ್ಲವಲ್ಲ. ಆದರೆ ಈಗ ಕರ್ನಾಟಕ ರಾಜ್ಯದಲ್ಲಿ ಇಂತಹದ್ದೊಂದು ಮೂಗನ್ನು ಕೊಯ್ಯಲು ಮುಂದಾದ ಪ್ರಕ್ರಿಯೆ ಶುರುವಾಗಿದೆ. ಅದೇನೆಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಅದೇ ಲೋಕಾಯುಕ್ತ ಸಂಸ್ಥೆಯನ್ನು ಕೋಲೇ ಬಸವನಂತೆ ಮಾಡ ಹೊರಟಿರುವುದು.      ಭ್ರಷ್ಟಾಚಾರ ನಿಗ್ರಹಕ್ಕಾಗಿ ಭಾರತದ ರಾಜ್ಯಗಳಲ್ಲಿ ನಿಯೋಜಿತಗೊಂಡಿರುವ ‘ಲೋಕಾಯುಕ್ತ’ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸಿ ಅದಕ್ಕೆ ಪರ್ಯಾಯವಾಗಿ ಇನ್ನೊಂದು ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಎನ್ನುವ ಸಂಸ್ಥೆಯನ್ನು … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ: ಪ್ರಸಾದ್ ಕೆ.

  1987 ರ ದಿನಗಳು ಕೆನಡಾದ ಓಂಟಾರಿಯೋ ಪ್ರೊವಿನ್ಸಿನ ಸ್ಕಾರ್-ಬೋರೋ ಭಾಗದಲ್ಲಿ ಸೂರ್ಯ ಎಂದಿನಂತೆ ಮುಳುಗುತ್ತಾ ಕತ್ತಲೆಯ ಚಾದರವನ್ನು ಮೆಲ್ಲಗೆ ಎಳೆಯುತ್ತಿದ್ದ. ಅತ್ತ ಸಂಜೆಯೂ ಅಲ್ಲದ, ಇತ್ತ ಪೂರ್ಣ ಪ್ರಮಾಣದ ರಾತ್ರಿಯೂ ಇಲ್ಲದ ಈ ಹೊತ್ತಿನಲ್ಲಿ ಕೈ-ಕೈ ಹಿಡಿದು ಪಾರ್ಕುಗಳಿಗೆ ಹೋಗುವ ಜೋಡಿಗಳು, ವಾಕಿಂಗಿಗೆ ತೆರಳುವ ವೃದ್ಧರು, ಬಿಯರ್ ಕುಡಿಯುವ ನೆಪದಲ್ಲಿ ಸಂಗಾತಿಗಳನ್ನು ಅರಸಿಕೊಂಡು ಹೋಗುವ ಹದಿಹರೆಯದ ಯುವಕ-ಯುವತಿಯರು ಹೀಗೆ ಹಲವು ಬಗೆಯ ಜನರು ತಮ್ಮದೇ ಗುಂಗಿನಲ್ಲಿ ಅಡ್ಡಾಡುವುದು ಇತರರಂತೆ ಸ್ಕಾರ್-ಬೋರೋ ನಿವಾಸಿಗಳಿಗೂ ಹೊಸದೇನಲ್ಲ. ಆದರೆ ಕಳೆದ … Read more

ಹೊಸ ಸ್ನೇಹ: ಅನಂತ ರಮೇಶ್

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ,  ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ.  ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, " ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು" ಅನ್ನುತ್ತಾಳೆ ಅಮ್ಮ. ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ … Read more

ಮರಳಿ ಬಂದನೆ ದೀಪು: ನಾಗರತ್ನಾ ಗೋವಿಂದನ್ನವರ.

ಮುಸ್ಸಂಜೆಯ ಸಮಯ ಕಡಲಿನ ಅಲೆಗಳು ಜೋರಾಗಿ ದಂಡೆಗೆ ಅಪ್ಪಳಿಸುತ್ತಾ ಇದ್ದರೂ ಅವುಗಳ ಕಡೆ ಗಮನ ಕೊಡದೆ ತನ್ನ ಇರುವನ್ನೆ ಮರೆತು ಮರಳಿನಲ್ಲಿ ಏನೆನೊ ಚಿತ್ತಾರಗಳನ್ನು ಬರೆಯುವುದರಲ್ಲಿ ಮಗ್ನಳಾಗಿದ್ದಳು ಸರೋಜಾ. ಅದೆಷ್ಟು ಹೊತ್ತು ಹಾಗೆ ಬರೆಯುತ್ತಿದ್ದಳೊ ತಕ್ಷಣ ಏನೊ ನೆನಪಾದವಳಂತೆ ಮೆಲಕ್ಕೆದ್ದು ವೇಗವಾಗಿ ನಡೆಯುತ್ತಾ ಲಾಡ್ಜ್‍ನ್ನು ತಲುಪಿದಳು. ಎದುರಿಗೆ ಬರುತ್ತಿದ್ದ ಸರೋಜಾಳನ್ನು ನೋಡಿದ ಕಿರಣಗೆ ವಿಪರೀತ ಕೋಪಬಂದು ಎಲ್ಲಿ ಹೋಗಿದ್ದೆ ನಿನಗಾಗಿ ಅದೆಷ್ಟೊತ್ತು ಅಂತ ಕಾಯೋದು. ಎಲ್ಲಿಯೂ ಹೋಗಿಲ್ಲಾ ನಡಿರಿ ಎನ್ನುತ್ತಾ ಅವನೊಡನೆ ಹೆಜ್ಜೆ ಹಾಕಿ ರೂಮಿನೊಳಗೆ ಹೋದಳು. … Read more

ಆಹಾ..ಬೆಂಗಳೂರು!!: ಎಸ್.ಜಿ.ಶಿವಶಂಕರ್,

ಪದೇಪದೇ ನಿಟ್ಟುಸಿರುಬಿಡುತ್ತಿದ್ದ್ದ್ದೆ! ಏನೋ ಒಂದು ರೀತಿಯ ಅಧೀರತೆ! ದುಗುಡ! ಯಾವ ಕೆಲಸವನ್ನೂ ಮಾಡಲಾರದೆ ಟಿವಿಯತ್ತ ನೋಡುತ್ತಿದ್ದೆ. ಜನಪ್ರಿಯ ಸೀರಿಯಲ್ಲಿನ ನಾಲ್ಕುನೂರ ಇಪ್ಪತ್ತನೆಯ ಎಪಿಸೋಡು ಬಿತ್ತರವಗುತ್ತಿತ್ತು! ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮೂಲ ಕತೆ ಹಳ್ಳ ಹಿಡಿದಿದೆ ಎನ್ನುವುದು ಗೊತ್ತಿದ್ದರೂ ರಬ್ಬರಿನಂತೆ ಎಳೆಯುತ್ತಿದ್ದರು! ನನ್ನವಳು ಹುರಿಳಿಕಾಯಯನ್ನು ಚಟಚಟನೆ ಮುರಿಯುತ್ತಾ, ತುಟುಪಿಟಿಕ್ಕನ್ನದೆ ಸೀರಿಯಲ್ಲಿನಲ್ಲಿ ಕಣ್ಣು ನೆಟ್ಟಿದ್ದಳು. ನಾಲ್ಕು ನಿಮಿಷ ಸೀರಿಯಲ್ಲಿನ ನಂತರ ಐದು ನಿಮಿಷದ ಜಾಹೀರಾತು! ಮತ್ತೆ ನಾಲ್ಕು ನಿಮಿಷ ಸೀರಿಯಲ್ಲು ಹೀಗೆ ಸಾಗಿತ್ತು ಸೀ..ರಿ..ಯಲ್ಲು! ದೀರ್ಘ ಜಾಹೀರಾತಿನ ನಡುವೆ ಮನೆಯವಳು … Read more

ಮದರ್ಸ್ ಡೇ: ಪಾರ್ಥಸಾರಥಿ ಎನ್

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ … Read more