ಮನಸ್ಸಿದೆ! ಕನಸಿದೆ! ಅನುಕಂಪ ಬೇಡ, ಅವಕಾಶ ಕೊಡಿ: ಪಾ.ಮು. ಸುಬ್ರಮಣ್ಯ, ಬ.ಹಳ್ಳಿ.
ನಾವು ಯಾರಿಗೇನೂ ಕಮ್ಮಿ ಇಲ್ಲ. ಯಾರ ಹಂಗೂ ನಮಗಿಲ್ಲ. ನಮಗೂ ಒಂದು ಮನಸ್ಸಿದೆ. ಕನಸಿದೆ. ಬದುಕಿದೆ. ಅಸಹಾಯಕತೆಯ ಅನುಕಂಪದಲೆಯಲ್ಲಿ ಮುಳುಗಿಸಿ, ಕಾರುಣ್ಯಧಾರೆಯಲ್ಲಿ ತೇಲಿಸುವ ಅಗತ್ಯವಿಲ್ಲ. ನಮಗೆ ಅವಕಾಶ ಕೊಡಿ. ’ಆಗುವುದಿಲ್ಲ’ ಎಂಬುದನ್ನೆಲ್ಲಾ ’ಆಗಿಸಿ’ ಬಿಡುತ್ತೇವೆ. ಪ್ರತಿಯೊಬ್ಬ ವಿಕಲಚೇತನರಲ್ಲಿ ಕಂಡು ಕೇಳಿ ಬರುವ ದೃಢ ವಿಶ್ವಾಸದ ನುಡಿಗಳಿವು. ವಿಕಲಚೇತನರೆಂದರೆ ಸಮಾಜದಲ್ಲಿ ಅವಗಣನೆಗೆ ಒಳಗಾಗಿ ಅವರಿಗೆ ತಮ್ಮದೇ ಆದ ಸ್ವಂತಿಕೆ ಇಲ್ಲದಂತಹ ಸ್ಥಿತಿಗೆ ತಂದು ಬಿಟ್ಟಿದ್ದೇವೆ. ಯಾರೀ ವಿಕಲಚೇತನರು? ’ಅಂಗವಿಕಲ’ ಎಂಬ ಪದಕ್ಕೆ ಪರ್ಯಾಯವಾಗಿ ಇಂದು … Read more