ಕಾಲೇಜ್ ಕಹಾನಿ: ಪ್ರಶಸ್ತಿ ಅಂಕಣ
ನೀರವ ರಾತ್ರಿ. ಜೀವನವೇ ಜಿಗುಪ್ಸೆಯಾಗಿ , ಮನಶ್ಯಾಂತಿಯನ್ನು ಹುಡುಕಿ ಅಲೆಯುತ್ತಿರೋ ಅಲೆಮಾರಿಯಂತೆ ಒಬ್ಬ ಕೆರೆಯನ್ನೇ ದಿಟ್ಟಿಸುತ್ತಾ ಅದರ ದಡದಲ್ಲಿ ಕುಳಿತಿದ್ದ. ಬೆಳದಿಂಗಳ ರಾತ್ರಿ. ಕೆರೆಯ ಅಲೆಗಳಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನ ಬಿಂಬ ನೋಡುತ್ತಿದ್ದರೆ ಆಗಸದ ಆ ಶಶಿ ಈತನಿಗೆ ಸಾಂತ್ವನ ಹೇಳಲೆಂದೇ ಭುವಿಗಿಳಿದು ಬಂದು ಕೆರೆಯಲ್ಲಿ ಈಜಾಡುತ್ತಿದ್ದಾನೇನೋ ಅನಿಸುತ್ತಿತ್ತು. ರೋಹಿಣೀಪತಿ ಪ್ರಭೆಯ ರಾತ್ರಿ ಸಭೆಗೆ ಆಗಮಿಸಿದ್ದ ತಾರೆಗಳೆಲ್ಲಾ ಮಿಂಚುತ್ತಾ ಆಗಸದಲ್ಲಿ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸುತ್ತಿದ್ದವು. ಸೃಷ್ಟಿಕರ್ತನ ಚುಕ್ಕಿಯಾಟಕ್ಕೋ , ರಂಗೋಲಿಗೋ ಅಂಗಳವಾದಂತಿದ್ದವು. ತಂಗಾಳಿಗೆ ಗತ್ತು ಬಂದಂತೆ ಕೊಂಬೆಗಳನ್ನು … Read more