ಸುಖಾಂತ: ಅಶ್ಫಾಕ್ ಪೀರಜಾದೆ
-೧- ಮೊದಮೊದಲು ಕ್ಷೇಮವಾಗಿಯೇ ಇತ್ತು ಜೀವನ, ಹೂವಿನಹಾಸಿಗೆಯಾಗಿತ್ತು. ಯಾರಿಗೆ ಗೊತ್ತಿತ್ತು? ಹೀಗೆ ಮುಳ್ಳಿನದಾರಿಯಾಗುವುದೆಂದು?, ಬದುಕು ಕಣ್ಣೀರ ಕಡಲಾಗುವದೆಂದು. ಮನೆಗೆನಾನೊಬ್ಬಳೆ ಮಗಳು, ಅರಮನೆಯಂಥ ಮನೆಗೆ ನಾನೇ ಒಡತಿ. ಅವ್ವನನ್ನನ್ನು ಅಪ್ಪನ ಕೈಗಿಟ್ಟು ಶಿವನ ಪಾದಾ ಸೇರಿದ್ದಳು. ಅವ್ವ ಹೋದಮ್ಯಾಗ ಊರ ಜನ ಅಪ್ಪನಿಗೆ ಇನ್ನೊಂದು ಮದುವೆ ಆಗುವ ಸಲಹೆನೀಡಿದ್ದರೂ, ಹೊಸದಾಗಿ ಬರುವ ಹೆಂಗಸು ಹೆಂಗಿರತಾಳೋ?. ತಾಯಿ ಇಲ್ಲದ ತಬ್ಬಲಿಗೆ ಮಲತಾಯಿ ಹಿಂಸೆ ಬೇರೆ ಬೇಡ ಅಂತಾ ಕಣ್ಣಲ್ಲಿ ಕಣ್ಣಿಟ್ಟು, ಅಂಗೈಯಲಿ ಅರಗಿಣಿ ಸಾಕಿದಾಂಗ ನನ್ನ ಸಾಕಿದ್ದ. ನಾ ಬೆಳದ … Read more