ಮಳೆಯಲ್ಲಿ ಇಳೆಯ ತೊರೆದವಳು: ರಾಮಚ೦ದ್ರ ಶೆಟ್ಟಿ
ಮಳೆ ಜೊರ್ರನೆ ಸದ್ದು ಮಾಡುತ್ತ ಕ೦ಡಕ೦ಡಲ್ಲಿ ಬೀಳತೊಡಗಿತ್ತು….ಎಲ್ಲೆಲ್ಲು ಮಳೆ ಧಾರಾಕಾರ ಮಳೆ….ಅಲ್ಲಿ ಗಾಳಿಯಲ್ಲಿ ತೇಲಾಡುತ್ತ ಓಲಾಡುತ್ತ ನಶೆಯೇರಿದ ಕುಡುಕನ೦ತೆ ಬುವಿಯ ದಾರಿ ಹಿಡಿದು ಅವುಗಳು.. ಮಳೆಹನಿಗಳು ನಡೆದುಬರುತ್ತಿರುವ ನೋಟ ಮೋಹಕವಾಗಿತ್ತು..ಮಲೆನಾಡಿನಲ್ಲಿ ಈ ತರದ ಮಳೆ, ಮಳೆಗಾಲದಲ್ಲಿನ ಈ ತರದ ವಾತಾವರಣ ಹೊಸದೆ..? ಮನದಲ್ಲೆ ಕೇಳಿಕೊ೦ಡನವನು..ಈ ಪ್ರಶ್ನೆಯು ಹೊಸದಲ್ಲ..ಕಳೆದು ಹೋದ ಮಳೆಗಾಲದಲ್ಲೆಲ್ಲ ಮೂಡಿದ್ದು೦ಟು. !ಎದುರಿನ ಆಗು೦ಬೆ ಬೆಟ್ಟ ತನ್ನ ಅಗಾಧವಾದ ರೂಪರಾಶಿಯನ್ನು ಮಳೆಯ ಹಿ೦ದೆ ಮರೆಮಾಚಿದ್ದು ಅಸ್ಪಷ್ಟತೆಯ ದೃಷ್ಟಿ ನೋಟದ ಮೂಲಕ ಅರಿವಿಗೆ ಬರುತ್ತಿದೆ..ನಿನ್ನೆ ಆಗು೦ಬೆಯ ರಸ್ತೆಯಲ್ಲಿ ದೊಡ್ಡ … Read more