ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಈಶ್ವರ ಭಟ್ ಅವರ ಚುಟುಕಗಳು

ಬರಹ "ಸೋತು ಬರೆಯುವ ಚಟ ನಿನಗೆ ಎಂದು ಜರೆಯದಿರು; ಗೆದ್ದಾಗ ಸಂಭ್ರಮಿಸುತ್ತೇನೆ ಬರೆಯಲಾಗುವುದಿಲ್ಲ."   ಒಳಗಿಳಿಯುವುದು "ಕೆಲವು ಬಣ್ಣಗಳು ಹೀಗೇ ಗಾಢವಾಗುತ್ತಾ ಕಾಡುತ್ತವೆ. ಕೊನೆಗೆ ಕಪ್ಪು ಎಂದೇ ಅನಿಸುತ್ತದೆ."   ಕೃಷ್ಣ "ಕಪ್ಪು?.. ನೀಲ ಮುರಳೀಲೋಲ ಹಗಲು ಗೊಲ್ಲ ರಾತ್ರಿ ನಲ್ಲ!"   ಸು-ಭಾಷಿತ "ಓ ಹುಡುಗಿ ದಾರಿಯಲಿ ನೆನೆನೆನೆದು ಕೃಷ್ಣನನು ಪಡೆಯದಿರು ಸೀರೆಯನು ಉಳಿಸೆ ಮಾನ! ಈ ಬಾರಿ ಕತ್ತಿಯನು ಬೇಡಿಕೋ ಓ ಹುಡುಗಿ ಉಳಿಸಲಾರರು ಯಾರೂ ನಿನ್ನ ಪ್ರಾಣ!"   ನಾನಾಗುವುದು "ನಾನು ಕಡಲೆಂದುಕೊಂಡಿದ್ದೇನೆ! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಾಂಧಿ @ ಕೂರ್ಮಾವತಾರ:ಮಹಾದೇವ ಹಡಪದ

ಸಾಹಿತ್ಯದ ಜೊತೆಗಿನ ಸಿನೆಮಾ ನಂಟು ಬಹಳ ಹಳೆಯದು. ಸಿನೆಮಾ ಅಂದ್ರೆ ಪ್ರಾಯೋಗಿಕವಾಗಿ ನಿರ್ದೇಶಕನೇ ಕುಂತು ಕತೆಗಾರನೊಂದಿಗೆ ಕತೆ ಕಟ್ಟುತ್ತ ಹೋಗುತ್ತಾನೆ. ಆದರೆ ಸಾಹಿತ್ಯಿಕ  ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಚಿತ್ರದ ವಿನ್ಯಾಸದಲ್ಲಿ ಅಳವಡಿಸುವುದು ಗಿರೀಶ ಕಾಸರವಳ್ಳಿಯವರ ವಿಶೇಷ ವ್ಯಾಕರಣವಾಗಿದೆ. ಘಟಶ್ರಾದ್ಧದಿಂದ ಕೂರ್ಮಾವತಾರದ ವರೆಗಿನ ಪಯಣದಲ್ಲಿ ಅವರು ಕತೆಯ ಆಯ್ಕೆಯಲ್ಲಿ ವಿಶೇಷವಾದ ಆಸಕ್ತಿ ತೋರಿಸಿದ್ದಾರೆ. ಕನ್ನಡದ ಪ್ರಸಿದ್ಧ ಕತೆಗಾರರಾದ ಕುಂವೀ ಅವರ ಸಣ್ಣ ಕತೆಯಾಧಾರಿತ ಕೂರ್ಮಾವತಾರ ಸಿನೆಮಾವನ್ನು ಕನ್ನಡದ ಪ್ರಸಿದ್ಧ ಚಿತ್ರನಿರ್ದೇಶಕರಾದ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಮೊದಲ ದೃಶ್ಯದಲ್ಲಿಯೇ ಗಾಂಧಿ ಸಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾಗಿರಥಿ:ಪಾರ್ಥಸಾರಥಿ ಎನ್

ಗಂಗೋತ್ರಿಯ ಹೋಟೆಲ್ 'ಮಂದಾಕಿನಿ'  ಕೊಠಡಿಯ ಕಿಟಿಕಿಯಿಂದ ಒಮ್ಮೆ ಹೊರಗಡೆ   ನೋಡಿದೆ,  ಹಸಿರು ಬೆಟ್ಟಗಳ ಸಾಲು.  ಕೊರೆಯುವ ಚಳಿ . ಬೆಂಗಳೂರಿನಂತಲ್ಲದೆ ಅಲ್ಲಿಯದೆ ಆದ ಸಂಸ್ಕೃತಿ , ಜನಗಳು,   ಮನೆಗಳು, ರಸ್ತೆ ಎಲ್ಲವು ಹೊಸ ಲೋಕವೊಂದನ್ನು ನನ್ನೊಳಗೆ ಸೃಷ್ಟಿಸಿತ್ತು. "ದ ಗ್ರೇಟ್ ಹಿಮಾಲಯನ್ ಟ್ರಕ್ಕಿಂಗ್ ಅಸೋಸಿಯೇಷನ್"  ನನ್ನ ಹಲವು ವರ್ಷಗಳ ಕನಸಿಗೆ ನಿಜ ರೂಪ ಕೊಡಲು ಸಿದ್ದವಾಗಿದ್ದ ಸಂಸ್ಥೆ.  ಚಿಕ್ಕವಯಸಿನಿಂದಲು ಬೆಟ್ಟಗುಡ್ಡ ಏರುವದರಲ್ಲಿ ಎಂತದೊ ಆಸಕ್ತಿ. ಹೈಸ್ಕೂಲಿನ ಎನ್ ಸಿ ಸಿ ಸಹ ಅದಕ್ಕೆ ಪೂರಕವಾಗಿತ್ತು. ಕಾಲೇಜಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಸ್ ಸ್ಟ್ಯಾಂಡ್ ಬದುಕು:ಗವಿಸ್ವಾಮಿ

ಸಂಜೆ ಏಳಾಗಿತ್ತು. ಮಳೆ ಬೀಳುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿದ್ದವು. ಆದರೂ, ಒಂದು chance ತೆಗೆದುಕೊಂಡು ಊರಿನತ್ತ ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಮೂರು ಕಿಮೀ ಮುಂದೆ ಹೋಗುವಷ್ಟರಲ್ಲಿ ಟಪ್ ಟಪ್ ಟಪ್ ಟಪ್ ಅಂತ ಚುಚ್ಚತೊಡಗಿದವು ದಪ್ಪ ದಪ್ಪ ಹನಿಗಳು. ಮುಂದೆ ಹೋದಂತೆ ಮಳೆಯ ರಭಸ ಇನ್ನೂ ಹೆಚ್ಚಾಯಿತು. ಹೇಗೋ ಸಹಿಸಿಕೊಂಡು ಒಂದು ಮೈಲಿಯಷ್ಟು ಮುಂದೆ ಹೋಗಿ ಹಳ್ಳಿಯೊಂದರ  ಬಸ್ ಸ್ಟ್ಯಾಂಡ್ ತಲುಪಿಕೊಂಡೆ. ಅಲ್ಲಾಗಲೇ ಐದಾರು ಬೈಕುಗಳು ನೆನೆಯುತ್ತ ನಿಂತಿದ್ದವು.  ಬಸ್ ಸ್ಟ್ಯಾಂಡ್ ಅಕ್ಷರಷಃ ಹೌಸ್ಫುಲ್ಲಾಗಿತ್ತು. ಆಗ ತಾನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಈ ತು ಮಾಮ ತಂಬ್ಯೆನ್:ವಾಸುಕಿ ರಾಘವನ್

ನೀವು ತುಂಬಾ ಮಡಿವಂತರಾ? ನಿಮ್ಮ ಭಾವನೆಗಳು ಸುಲಭವಾಗಿ ಹರ್ಟ್ ಆಗ್ತವಾ? ನಿಮಗೆ "ನೈತಿಕತೆ" ಕನ್ನಡಕ ಬಿಚ್ಚಿಟ್ಟು ಪ್ರಪಂಚವನ್ನ ನೋಡೋ ಅಭ್ಯಾಸಾನೇ ಇಲ್ವಾ? ಹಂಗಿದ್ರೆ ಈ ಚಿತ್ರ ನಿಮಗಲ್ಲ ಬಿಡಿ. ಈ ಆರ್ಟಿಕಲ್ ಕೂಡ ನಿಮಗೆ ಸರಿಹೋಗಲ್ಲ! ನೀವು ಈ ಗುಂಪಿಗೆ ಸೇರಿಲ್ವಾ? ಹಾಗಾದ್ರೆ ಇನ್ನೇನ್ ಯೋಚ್ನೆ ಇಲ್ಲ, ಬನ್ನಿ ಈ ಫಿಲ್ಮ್ ಬಗ್ಗೆ ಮಾತಾಡೋಣ! ಆಲ್ಫೊನ್ಸೋ ಕ್ವಾರೋನ್ ನಿರ್ದೇಶನದ "ಈ ತು ಮಾಮ ತಂಬ್ಯೆನ್" ("ನಿನ್ನ ಅಮ್ಮ ಕೂಡ") 2001ರಲ್ಲಿ ಬಿಡುಗಡೆಯಾದ ಮೆಕ್ಸಿಕನ್ ಚಿತ್ರ. "ಕಮಿಂಗ್ ಆಫ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಐಸ್ ಕ್ರೀಂ ನೆನಪುಗಳಲ್ಲಿ..:ಪ್ರಶಸ್ತಿ

ಸಣ್ಣವನಿದ್ದಾಗ ಬೆಂಗಳೂರು ಎಂದರೆ ಉದ್ಯಾನನಗರಿ ಎಂಬ ಹೆಮ್ಮೆಯಿತ್ತು. ಎರಡು ಬಾರಿ ಬಂದಾಗಲೂ ಇಲ್ಲಿದ್ದ ತಣ್ಣನೆಯ ಹವೆ ಖುಷಿ ನೀಡಿತ್ತು. ಆದರೆ ಈಗ.. ಬೆಂಗಳೂರು ಅಕ್ಷರಶ: ಬೇಯುತ್ತಿದೆ. ಸುಡ್ತಿರೋ ಬಿಸಿಲಲ್ಲಿ, ಆಗಾಗ ಬಂದು ಫೂಲ್ ಮಾಡೋ ಮಳೆಯಿದ್ರೂ ಯಾಕೋ ಕಾಡೋ ಐಸ್ ಕ್ರೀಂ ನೆನಪುಗಳು.. ನೆನಪಾದಾಗೆಲ್ಲಾ ನಗಿಸೋ ಬಿಸಿ ಐಸ್ ಕ್ರೀಂ :-).. ಹೀಗೆ ಸುಡ್ತಿರೋ ಸೆಖೆಗೊಂಚೂರು ತಣ್ಣನೆ ನೆನಪುಗಳು ..    ಬಾಲ್ಯಕ್ಕೂ ಐಸಿಗೂ ಸಖತ್ ನಂಟಿದೆ 🙂 ಐಸ್ ಕ್ರೀಂ ಗಿಂತಲೂ ಮುಂಚೆ ನೆನಪಾಗೋದು ಐಸ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವ್ಯೂಹ:ಬೆಳ್ಳಾಲ ಗೋಪಿನಾಥ ರಾವ್

  ೧. ಸಂಶಯ ೧೦.೦೪.೨೦೧೨  "ಮಂಜೂ ನನ್ನ ಡೈರಿ ತೆಗೆದ್ಯಾ…….???" "ಇಲ್ಲ ಸರ್, ನಾನ್ಯಾಕೆ ನಿಮ್ ಡೈರಿ ತೆಗೀಲಿ ಸಾರ್.." "ಅಲ್ಲಪ್ಪಾ .. ಇಲ್ಲೇ ಮೇಜಿನ ಮೇಲೇ ಇಟ್ಟಿದ್ದೆ, ನೀನೇನಾದರೂ ನೋಡಿದ್ಯಾ ಅಂತ ಕೇಳಿದ್ದೆ ಅಷ್ಟೆ. ಅದು ಬೇಕೇ ಬೇಕು ಎಲ್ಲಾ ಡಿಟೈಲ್ಸ್ ಬೇರೆ ಅದರಲ್ಲೇ ಬರೆದಿಟ್ಟಿದ್ದೆ. ಇನ್ನು ಸೀನಿಯರ್ ಕಲ್ಲೂರಾಮ್ ಕರೆದ್ರೆ ಮುಗ್ದೇ ಹೋಯ್ತು ನನ್ನ ಕಥೆ. ಎಲ್ಲಾದರೂ ಸಿಕ್ಕಿದ್ರೆ ಹೇಳು ಆಯ್ತಾ." ಕರೆಕರೆ ವಾಣಿ ಗುರ್ರ್ರೆಂತು. ಹೋಮ್ ಮಿನಿಸ್ಟರ್.ಅರ್ಥಾತ್ ನನ್ನ ಧರ್ಮ ಪತ್ನಿ… "ಏನ್ರೀ..??" "ಆಯ್ತು…. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೋಗ ಯಾವುದೆಂದು ಕೇಳುವ ವ್ಯವಧಾನವಿಲ್ಲದಿದ್ದರೂ…:ಶರತ್ ಎಚ್ ಕೆ

ಮೊನ್ನೆ ಬೆಳಿಗ್ಗೆ ಆಗಷ್ಟೇ ತಿಂಡಿ ತಿಂದು ಮನೆಯವರೆಲ್ಲ ಟೀವಿ ನೋಡುತ್ತ, ಪೇಪರ್ ಓದುತ್ತಾ ಕುಳಿತಿದ್ದೆವು. ಗೇಟ್ ತೆರೆದ ಸದ್ದಾಯಿತು. ಯಾರೆಂದು ನೋಡಿದರೆ ಚರಂಡಿ ಶುಚಿಗೊಳಿಸುವ ಮತ್ತು ಹೂದೋಟದ ಕಳೆ ಕೀಳುವ ಕೆಲಸ ಮಾಡುವ ಹುಡುಗ. ಅವನು ಈ ಹಿಂದೆ ಒಂದೆರಡು ಬಾರಿ ನಮ್ಮ ಮನೆ ಹೂದೋಟದ ಕಳೆ ಕಿತ್ತಿದ್ದ. ’ಕೆಲಸ ಇದ್ಯ’ ಅಂತ ಕೇಳ್ದ. ಬಾಗಿಲು ತೆರೆದ ಅಮ್ಮ ’ಇಲ್ಲ ಹೋಗಪ್ಪ’ ಅಂತೇಳಿ ಒಂದೇ ಮಾತಲ್ಲಿ ಅವನನ್ನು ಸಾಗಾಕಲು ಮುಂದಾದರು. ತಕ್ಷಣವೇ ಬಾಗಿಲು ಹಾಕಿದರು. ’ಅಮ್ಮ ತಿಂಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹುಚ್ಚು ಪ್ರೀತಿ:ದಿವ್ಯ ಆಂಜನಪ್ಪ

  ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು ಮಾತು ಮಾತಿಗೇಕೋ ನಗು ಮರು ಘಳಿಗೆಯೇ ಮೌನ ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ… (ಹೆಚ್.ಎಸ್. ವೆಂಕಟೇಶ್ ಮೂರ್ತಿ)   ಹುಚ್ಚು ಪ್ರೀತಿ ಎಂದಾಕ್ಷಣ ಬಿ.ಆರ್.ಛಾಯಾರವರು ಹಾಡಿದ ಈ ಸಾಲುಗಳು ನೆನಪಾಗುತ್ತದೆ. ಎಷ್ಟು ಅರ್ಥಪೂರ್ಣ ಹಾಗೂ ಸತ್ಯ. ಮಾತು ಮಾತಿಗೂ ನಗು, ಸದಾ ಕಾಲ ಖುಷಿ, ಅದೇಕೋ ಮೌನ, ತನ್ನಂದವ ತಾನೇ ನೋಡಿ ನಲಿವ ಮನಸ್ಸು, ಹೇಗೆ ಕಾಣುವೆನೋ ತಿಳಿಯಲು ಕನ್ನಡಿ ಮುಂದಷ್ಟು ಹೊತ್ತು ಕಳೆವ, ಮನದಲ್ಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೩):ರುಕ್ಮಿಣಿ ಎನ್.

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ ಮನಸಿಗೆ ಹೌಸಿ ತರು ಮಲ್ನಾಡ್ ಸೀಮಿ ಅಲ್ಲ ಬಟ್ಟಾ ಬಯಲ್ ಸೀಮಿ ರೀ ನಮ್ದು. ದಾರಿ ಆಚಿಕ್-ಇಚಿಕ್ ಪೀಕ್ ಜಾಲಿ ಗಿಡಗೋಳ್, ಅಲ್ಲೆಟ್ ಇಲ್ಲೆಟ್ ಹಸಿ ಬಿಸಿ ಬೆಳದ್ ನಿಂತ ಬಂಬಲಕ್ಕಿ, ಹಂಗ ಬಂದಕ್ಯಾಸ್ ಸೊಡ್ಡನ್ ಮಕಕ್ಕ ಬಡದ್ ನೆತ್ತಿ ಸುಟ್ಟ ಹೋಗ್ತೈತೆನೋ ಅನ್ನು ಸುಡು-ಸುಡು ಬಿಸಲ್. ಕೆಂಡ್ ಉಡ್ಯಾಗಿಟ್ಕೊಂಡ್ ಬೀಸೂ ಬಿರುಗಾಳಿ, ಉರಿ ಉರಿ ಝಳ. ಗಾಳಿ ಪದರಿನ್ಯಾಗ್ ಕಟ್ಕೊಂಡ್ ಬರು ಹಾಳ್ ಮಣ್ಣ ಮಕದ ಮ್ಯಾಲ್ ಮನಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾವಕ್ಕೆ ಜೊತೆಯಾಗೋ ಭಾವ:ಭಾಗ್ಯ ಭಟ್

ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು … "ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆಗಳು:ನವೀನ್ ಮಧುಗಿರಿ ಹಾಗೂ ಎನ್.ಕೃಷ್ಣಮೂರ್ತಿ

ನಾನು ಕವಿಯಲ್ಲ ಪ್ರೇಮಿ..!   ನಿನ್ನಷ್ಟಕ್ಕೆ ನೀನು ಹೊಸೆ  ನನ್ನಿಷ್ಟಕ್ಕೆ ನಾನು ಬರೆವೆ!  ನಿನ್ನದು ಚಿಂತನ ಕಾವ್ಯ  ನನ್ನದು ಒಲವಿನ ಪದ್ಯ    ಮುಂದಿನ ಚರಣಗಳಿಗೆ ನಿನ್ನದು  ಪದಗಳ ಹುಡುಕಾಟದ ಪರದಾಟ  ನನ್ನದೇನಿಲ್ಲ ಪೂರಾ ಪದ್ಯವೂ  ಎದೆಯಾಳದಿಂದ ಬಂದ ಖುಷಿ-ಕಣ್ಣೀರುಗಳ ಸಮ್ಮಿಲನ    ನೀನು ಬರೆಯುವುದೆಲ್ಲ ನಿನಗೋ? ಕೃತಿಗಳ ಸಂಖ್ಯೆಗೋ? ಜನರಿಗೋ? ಜನಪ್ರಿಯತೆಗೋ? ಗೊತ್ತಿಲ್ಲ! ನಾನು ಬರೆಯುವುದು ಮಾತ್ರ ಬರೀ ನನಗೆ  ನನ್ನ ಕಣ್ಣೀರು-ಖುಷಿಗೆ.. ಅವಳ ಮರೆಯಬಾರದೆಂಬ ಕಾಳಜಿಗೆ!   ನಿನ್ನ ಕವಿತೆಗಳನ್ನೋದಿ ಮೆಚ್ಚಿಕೊಂಡದ್ದು  ಬೆನ್ನುತಟ್ಟಿದ್ದು ಬರೀ ಸಾಹಿತ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಂಕಿನ್ ಝಳಕಿ ರವರ ಚುಟುಕಗಳು

ರೋಷ   ಗಾಂಧಿಯಬುರುಡೆಯ ಮೇಲೆ   ಕೂತು ಕಾಗೆಯೊಂದು   ಕುಕ್ಕುತ್ತಿತ್ತು ರೋಷದಲಿ   ಬಳಿಸಾರಿ ಕೇಳಿದೆ ಏತಕ್ಕೆಂದು.   “ಮೂರ್ಖನಿವನು, ಗುಡಿಸಿಬಿಟ್ಟ   ಕೊಳಚೆ ಪ್ರದೇಶವನು   ಸಾಯಬೇಕಾಗಿದೆ ಹಸಿವಿನಿಂದ ನಾವಿನ್ನು”,   ಎಂದಿತು ನೊಂದು.   ಯಾರಿಗೆ?   ದುಂಬಿಗಳೆಲ್ಲಾ   ಮಲಗಿದ ಮೇಲೆ   ರಾತ್ರಿರಾಣಿ ಮೆಲ್ಲಗೆ   ವದ್ದೆ ಕನಸುಗಳ   ಕಂಪ ಚೆಲ್ಲಿ   ಕರೆವುದಾದರೂ   ಯಾರಿಗೆ? ದೃಷ್ಟಿ   ಬೈಬಲ್ ಪ್ರಾರ್ಥನೆ ನಡೆಯುತ್ತಿತ್ತು…   “ಒಂದು ಹಣ್ಣಿಗಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

10k ಓಟ: ಪ್ರಶಸ್ತಿ ಅಂಕಣ

  ಹಿಂದಿನ ವರ್ಷ ಇದೇ ಸಮಯ. ಬೆಂಗಳೂರಿಗೆ ಕಾಲಿಟ್ಟ ಹೊಸತು. ಗೆಳೆಯರ ಬಾಯಲ್ಲಿ  10k 10k 10k.. ಎಂಬ ಝೇಂಕಾರ.. ಯಾರಾದ್ರೂ ಓಡ್ರಪ್ಪ, ಇದು ನನ್ನಿಂದೆಂತೂ ಆಗದ ಕೆಲಸ ಅಂತ ನನ್ನ ಭಾವನೆ. ಹಾಗಾಗಿ ಯಾರೇ ಈ ಬಗ್ಗೆ ಮಾತಾಡಕ್ಕೆ ಬಂದ್ರೂ ನಾನು ಇದ್ದ ಬುದ್ದಿಯನ್ನೆಲ್ಲಾ ಉಪಯೋಗಿಸಬೇಕಾಗಿ ಬಂದ್ರೂ ಉಪಯೋಗಿಸಿ ಅಲ್ಲಿಂದ ಎಸ್ಕೇಪ್ 🙂 ದಿನಾ ಬೆಳಬೆಳಗ್ಗೆ ಎದ್ದು ಓಡೋದಂದ್ರೆ ಏನು ಹುಡುಗಾಟನ ? ಬೆಂಗ್ಳೂರಿಗೆ ಬಂದ ಮೇಲೆ ಆಲಸ್ಯವೇ ನಾನು ಅಂತಾಗಿದ್ದೋನು ಮತ್ತೆ ಎದ್ದು ಓಡೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್

  ಜಾಗಗಳೂ ಕೂಡ ಪಾತ್ರಗಳಾದಾಗ ಚಿತ್ರಗಳಿಗೆ ಇನ್ನೊಂದು ಆಯಾಮ ಸೇರಿಕೊಳ್ಳುತ್ತದೆ. “ನಾಗರಹಾವು” ಚಿತ್ರದ ಚಿತ್ರದುರ್ಗ, “ಕಹಾನಿ” ಚಿತ್ರದ ಕೋಲ್ಕೊತ, “ಸತ್ಯ”ದ ಮುಂಬೈ, “ಗಾಡ್ ಫಾದರ” ನ ಸಿಸಿಲಿ – ಈ ಎಲ್ಲಾ ಚಿತ್ರಗಳಲ್ಲೂ ಆ ಜಾಗಗಳೇ ಒಂದು ಪಾತ್ರವಾಗಿವೆ.  ಇದಕ್ಕೆ ಹೋಲಿಸಿದರೆ, ಜಾಗವನ್ನೇ ಪ್ರಮುಖ ಪಾತ್ರವಾಗಿ ಇಟ್ಟುಕೊಂಡು ತೆಗೆದಿರುವ ಚಿತ್ರಗಳು ಕಡಿಮೆ. ಕಿರಣ್ ರಾವ್ ನಿರ್ದೇಶನದ “ಧೋಬಿ ಘಾಟ್” ಅಂತಹ ಒಂದು ಅಪರೂಪದ ಚಿತ್ರ. ಇದು ಮುಂಬೈಗೆ ಆಕೆ ಬರೆದಿರುವ ಪ್ರೇಮಪತ್ರ! ಚಿತ್ರದಲ್ಲಿ ನಾಲ್ಕು ಎಳೆಗಳಿವೆ.  ಅರುಣ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-4):ಹಿಪ್ಪರಗಿ ಸಿದ್ದರಾಮ್

  ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ. ಈ ಮೊದಲಿನ ದೃಶ್ಯಗಳಲ್ಲಿ ಕೌರವಕುಲೇಂದ್ರನ್, ಕುರುಪತಿ, ಕೌರವೇಂದ್ರ, ಕುರುಚಕ್ರವರ್ತಿ, ದುರ್ಯೋಧನನೆಂದು ಪಾತ್ರಗಳ ಸಂಭಾಷಣೆಗಳಲ್ಲಿ ಉಲ್ಲೇಖವಾಗುತ್ತಿದ್ದ ಪಾತ್ರವು ರಂಗದಲ್ಲಿ ಬರುವುದರೊಂದಿಗೆ ನಾಟಕವು ಉತ್ತುಂಗಸ್ಥಿತಿಗೇರಿ ಕಳೆಕಟ್ಟಲಾರಂಭಿಸುವುದು ಆರನೇಯ ದೃಶ್ಯದಿಂದ, ರಣಭೂಮಿಯ ಕರಾಳತೆಯು ತುಂಬಿಕೊಂಡಿರುವ ವೈಶಂಪಾಯನ ಸರೋವರದ ದಡದಲ್ಲಿ ಕತ್ತಲೆ ಕವಿದಿರುವಾಗ ಗದಾಯುದ್ಧದಲ್ಲಿ ಕೃಷ್ಣನ ಕುತಂತ್ರದ ಫಲವಾಗಿ ಭೀಮನಿಂದ ತೊಡೆಮುರಿದುಕೊಂಡು ವಿಷಾದದ ನೋವಿನೊಂದಿಗೆ ನೆಲಕ್ಕುರುಳಿರುವ ಅಷ್ಟಾದಶಾಕ್ಷೋಹಿಣೀ ಒಡೆಯನಾಗಿ ಮೆರೆದಾಡಿದ್ದ ಚಕ್ರವರ್ತಿ ದುರ್ಯೋಧನ ಮಹಾರಾಜರು ದೇಸಿಗನಂತೆ ಹೊರಳಾಡುತ್ತಿದ್ದಾರೆ. ‘ಎಲವೋ ಅಗಸ್ತ್ಯ ನಕ್ಷತ್ರವೇ…’ಎಂಬರ್ಥದಲ್ಲಿ ಇದ್ದರೂ ಇಲ್ಲದವನಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ