ಚುಟುಕಗಳು: ಹೇಮಲತಾ ಪುಟ್ಟನರಸಯ್ಯ
ಉಗುರುಗಳದು ನೆನಪಿನದು , ಕತ್ತರಿಸಿದಷ್ಟು ವೇಗದಲಿ ಮೂಡುವುದು , ಸಿಬಿರಾಗಿ ನಿಂತು ಚುಚುತ್ತಲೇ ಇರುವುದು ******************** ನೀ ಕೊಟ್ಟ ನೋವಿನ ವಿಷವನ್ನು ಗಟಗಟನೆ ಕುಡಿದೂ ಸಾಯದೆ ಉಳಿಯಲು ನಾನೇನು ನೀಲಕಂಠನಲ್ಲ ಒಳಗೆ ಸತ್ತಿರುವೆ ಆದರು ಇನ್ನು ಬದುಕೇ ಇರುವೆ *************** ಅವನ ಗಂಡಸುತನವ ದಿಕ್ಕರಿಸಿದ ನನ್ನ ಹೆಣ್ತನ ಕದವಿಕ್ಕಿ ಅಳುತ್ತಿತ್ತು ಒಳಗೆ ********** ಇಂಚಿಂಚು ಕೊಂದಿರುವೆ ಚುಚ್ಚಿ ಚುಚ್ಚಿ ಹುಡುಕಲು ನಿನ್ನ ಬಿಂಬವನ್ನು ಚೂರುಗಳಲ್ಲಿ ನಾನೇನು ಕನ್ನಡಿಯಲ್ಲ ********** ನವಿಲಿಗೆ ಕುಣಿವುದೇ ಧರ್ಮ ಕೆಂಬೂತದ ಸಹವಾಸಕ್ಕೆ ಕುಣಿವುದ … Read more