ರಸ್ತೆ ರಾಗ: ಅಖಿಲೇಶ್ ಚಿಪ್ಪಳಿ
ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ … Read more