ಮೂವರ ಕವನಗಳು: ವಾಸುದೇವ ನಾಡಿಗ್, ಜ್ಯೋತಿ ಹೆಗಡೆ, ಗಿರಿಯ
ಶಕುಂತಲೆಯ ಪ್ರಾಯ ಕನ್ನಡಿಯಲಿಕಣ್ಣಿರುಕಿಸುವುದ ಬಿಟ್ಟಿದ್ದಾಳೆ ಮೇನಕೆ ಶಕುಂತಲೆಯ ತನುವಿಡಿ ಅವಳದೇ ಪರಿವಿಡಿ ಬಿಂಕಮರೆತ ಹೂಕಂಪುಗಳೆಲ್ಲ ಕಕ್ಕಾಬಿಕ್ಕಿ ಕೂತು ಒನಪಿನ ತೊರೆಗಳೆಲ್ಲಾ ಮೋರೆಕೆಳಗೆ ಮಾಡಿವೆ ತಾರೆಗಳ ಮಿನುಗು ಬರಿಸೋಗು ಕುಣಿಯದ ಮಂಕು ನವಿಲು ನಡೆ ಮರೆತ ಆಲಸಿ ಹಂಸ ಒಣಗಿದ ಗಿಣಿಯ ತುಟಿ ಕುಂದಿದ ಬೆಳದಿಂಗಳು ಜಡ ಹಿಡಿದ ಅಂದುಗೆ ತೊನೆದಾಡದತೆನೆ ತುಳುಕದಕೊಳ ಪ್ರಾಯ ಬಂದವಳ ಎದುರು ಉಳಿದವು ಮುಪ್ಪು ಅಳಿದವು ಉಪಮೆಗಳು ಕೊರಗಿದವು ರೂಪಕಗಳು ಧ್ವನಿಗಿನ್ನು ಬರಿ ದಣಿವು ಅನಾಥ ಅಲಂಕಾರ ಕಣ್ವರ ಕಣ್ಣೆದುರು ವಸಂತ ಕಟು … Read more