ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ, ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ, ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ ಅವಳೆದುರಿಗೆ, ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ, ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ,  ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ ನೆನಪಾಗದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಜಿಯೆಂಬ ಕುರುಡಾನೆಯ ಬಿಡುಗಡೆ!: ಅಖಿಲೇಶ್ ಚಿಪ್ಪಳಿ

[ಮಾನವನ ಮನೋವಿಕಾರಗಳಿಗೆ ಎಣೆಯಿಲ್ಲ. ಮನುಷ್ಯರನ್ನೇ ಗುಲಾಮರನ್ನಾಗಿಸಿ, ಚಿತ್ರಹಿಂಸೆ ನೀಡಿ ದುಡಿಸಿಕೊಂಡಿರುವ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅನೇಕ ತರಹದ ರಕ್ತಪಾತ, ಹೋರಾಟ, ಪ್ರತಿರೋಧಗಳಿಂದಾಗಿ ಜಗತ್ತಿನ ಹಲವು ಭಾಗಗಳಲ್ಲಿ ಮಾನವ ಗುಲಾಮಗಿರಿ ಎಂಬ ಅಮಾನುಷ ಕೃತ್ಯ ಹೆಚ್ಚು ಕಡಿಮೆ ಅಳಿದುಹೋಗಿದ್ದರೂ, ನಾಗರೀಕ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ ಈ ಹೇಯ ಕೃತ್ಯ ಇನ್ನೂ ಉಳಿದುಕೊಂಡಿದೆ. ಜೀತ ಪದ್ಧತಿಯೆಂದು ನಮ್ಮಲ್ಲಿ ಕರೆಯಲಾಗುವ ಕೆಲವು ಘಟನೆಗಳನ್ನು ದಿನಪತ್ರಿಕೆಗಳಲ್ಲಿ ನಾವಿನ್ನೂ ಓದುತ್ತಿದ್ದೇವೆ. ಇದೇ ನಾಗರೀಕ ಸಮಾಜ ತನ್ನ ಮನರಂಜನೆಗಾಗಿ ಪ್ರಾಣಿಗಳನ್ನು ಪಳಗಿಸಿ ಗುಲಾಮಿತನಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಖಾಲಿ: ಪ್ರಶಸ್ತಿ

ಕನಸ ಕಲ್ಪನೆಗಳೆಲ್ಲಾ ಕರಗಿಹೋಗಿ, ಮನದ ಭಾವಗಳೆಲ್ಲಾ ಬತ್ತಿಹೋಗಿ ಖಾಲಿತನ ಕಾಡುತ್ತಿತ್ತು. ಬರೆಯೋಣವೆಂದರೆ ಬರೆಯಲೇನನ್ನ, ಹಾಡೋಣವೆಂದರೆ ಹಾಡಲೇನನ್ನ ಅನ್ನೋ ದ್ವಂದ್ವ. ಸಖತ್ ಚೆನ್ನಾಗಿ ಬರೆದು ಅದಕ್ಕೇನಾದ್ರೂ ಪುರಸ್ಕಾರಗಳ ಸುರಿಮಳೆಯಾಗಿ ಕೊನೆಗೊಂದು ದಿನ ಅದನ್ನು ವಾಪಾಸ್ ಮಾಡಬೇಕಾಗಬಹುದೆನ್ನೋ ಭಯ ಬರೆಯಲೇ ಬಿಡುತ್ತಿರಲಿಲ್ಲ! ಹೊಸದೇನನ್ನಾದ್ರೂ ಬರೆಯೋ ಬದಲು ಬರೆದುದರ ಬಗ್ಗೆಯೇ ಮತ್ತಿನ್ನೇನ್ನಾದ್ರೂ ಬರೆಯೋಣವಾ ಅನ್ನಿಸಿತು. ವಿಶ್ವವಿದ್ಯಾಲಯಗಳಲ್ಲಿರುವ ಕೃತಿಚೌರ್ಯ ತಂತ್ರಜ್ಜಾನ ಎಲ್ಲಾ ಲೇಖಕರ, ಓದುಗರ ಬಳಿಯೂ ಸದ್ಯಕ್ಕಿಲ್ಲದೇ ನಾ ಕದ್ದಿದ್ದು ಗೊತ್ತಾಗದಿಲ್ಲದಿದ್ದರೂ ಮುಂದೊಂದು ದಿನ ಜನರ ಬಾಯಲ್ಲಿ ಛೀ, ಥೂ ಅನ್ನಿಸಿಕೊಳ್ಳೋ ಬದಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳನ್ನು ಹಿಡಿಯುವುದು ಹೇಗೆ? ಒಂದಾನೊಂದು ಕಾಲದಲ್ಲಿ ಚೆರಿ ಹಣ್ಣುಗಳನ್ನು ಬಲು ಇಷ್ಟಪಡುತ್ತಿದ್ದ ಮಂಗವೊಂದಿತ್ತು. ಒಂದು ದಿನ ಅದಕ್ಕೆ ರಸಭರಿತ ಚೆರಿ ಹಣ್ಣೊಂದು ಗೋಚರಿಸಿತು. ಆ ಹಣ್ಣನ್ನು ಪಡೆಯಲೋಸುಗ ಮಂಗ ಮರದಿಂದ ಇಳಿದು ಬಂದಿತು. ಆ ಹಣ್ಣು ಒಂದು ಶುಭ್ರವಾದ ಗಾಜಿನ ಸೀಸೆಯೊಳಗಿತ್ತು. ವಿವಿಧ ರೀತಿಯಲ್ಲಿ ಪ್ರಯತ್ನಿಸಿದ ನಂತರ ಸೀಸೆಯ ಕತ್ತಿನೊಳಕ್ಕೆ ಕೈತೂರಿಸಿ ಹಣ್ಣನ್ನು ಹಿಡಿಯಬಹುದು ಎಂಬುದನ್ನು ಅದು ಪತ್ತೆಹಚ್ಚಿತು. ಅಂತೆಯೇ ಕೈತೂರಿಸಿ ಹಣ್ಣನ್ನು ಹಿಡಿದುಕೊಂಡಿತಾದರೂ ಮುಷ್ಟಿಯಲ್ಲಿ ಹಣ್ಣನ್ನು ಹಿಡಿದುಕೊಂಡಾಗ ಅದರ ಗಾತ್ರ ಸೀಸೆಯ ಕತ್ತಿನ ಗಾತ್ರಕ್ಕಿಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸತ್ಯಶೋಧಕನಿಗೊಂದು ರಂಗನಮನ ಸಲ್ಲಿಸಿದ ‘ಖರೇ-ಖರೇ ಸಂಗ್ಯಾ-ಬಾಳ್ಯಾ’ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 78): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    2015ರ ಮೈಸೂರು ದಸರಾ ಉದ್ಘಾಟಕರು ಯಾರು? 2.    SUNFED ನ ವಿಸ್ತೃತ ರೂಪವೇನು? 3.    ಗೋವಿಂದ ವಲ್ಲಬ್ ಪಂತ್ ಜಲಾಶಯ ಯಾವ ರಾಜ್ಯದಲ್ಲಿದೆ? 4.    ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸವ ಶಾಸ್ತ್ರಕ್ಕೆ ಏನೆನ್ನುತ್ತಾರೆ? 5.    ಸದಾಶಿವಗುರು ಇದು ಯಾರ ಅಂಕಿತನಾಮವಾಗಿದೆ? 6.    ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿದ ಮುಖ್ಯಮಂತ್ರಿ ಯಾರು? 7.    ಬೋರಾಕ್ಸ್‍ನ ರಾಸಾಯನಿಕ ಹೆಸರೇನು? 8.    ಬಹುಮನಿ ಸುಲ್ತಾನರ ಅತ್ಯಂತ ಪ್ರಾಚೀನ ಸ್ಮಾರಕ ಯಾವುದು? 9.    “ಮೇರಾ ನಾಮ್ ಜೋಕರ್” ಕಾದಂಬರಿಯ ಕರ್ತೃ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಾಣಿಗಳೇ ಗುಣದಲಿ ಮೇಲು..: ಅನಿತಾ ನರೇಶ್ ಮಂಚಿ

                ಗೆಳೆತನ ಅಂದ್ರೆ ಯಾರಿಗಿಷ್ಟ ಇಲ್ಲ..! ಪ್ರಪಂಚದಲ್ಲಿ ಪ್ರತಿಯೊಬ್ಬರು ಗೆಳೆತನದ ನೆರಳಿನ ತಂಪಿನಲ್ಲಿ ಪವಡಿಸುತ್ತಾ ಇರುವ ಕನಸು ಕಾಣುವವರೇ. ಇದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಲ್ಲೂ ಇಂತಹ ಬಯಕೆ ಸಹಜವಾಗಿಯೇ ಮೂಡುತ್ತದೆ.  ನಮ್ಮನೆಯ ನಾಯಿ ಟೈಗರ್. ಅದು ಪುಟ್ಟ ಮರಿಯಾಗಿದ್ದಾಗ ಅದರ ಜೊತೆಗಾರ ಜ್ಯಾಕ್ ನೊಂದಿಗೆ ಆಟವಾಡುತ್ತಲೇ ಬೆಳೆದದ್ದು. ಎರಡೂ ಮರಿಗಳು ಮಾಡದ ತುಂಟತನವಿಲ್ಲ. ದಿನಾ ಈ ಎರಡು ನಾಯಿ ಮರಿಗಳು   ಮುಚ್ಚಿದ್ದ ಗೇಟಿನ ಗ್ರಿಲ್ಲುಗಳೆಡೆಯಲ್ಲಿ ತೂರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 7

ಪತ್ರಕರ್ತೆಯೊಂದಿಗೆ ಲಗೋರಿಬಾಬಾ ಫ್ಲಾಪಿಬಾಯ್ ಮತ್ತು ಲಗೋರಿಬಾಬಾನೊಂದಿಗೆ ಸಂದರ್ಶನ ಮಾಡಲು ಬಂದಿದ್ದ ಪತ್ರಕರ್ತೆ ವರದಾ ಫ್ಲಾಪಿಬಾಯ್‍ನೊಂದಿಗೆ ಮಾತುಕತೆ ನಡೆಸಿ ನಂತರ ಲಗೋರಿಬಾಬಾನೊಮದಿಗೆ ಚಿಟ್ ಚಾಟ್ ಮಾಡಲು ಭಲೇ ಉತ್ಸುಕಳಾಗಿದ್ದಳು. ತರುಣ ಯುವಕ ಲಗೋರಿಬಾಬಾ ನೊಡಲು ಹ್ಯಾಂಡ್‍ಸಮ್ ಆಗಿದ್ರೂ ಅಘೋರಿಯಾಗಿ ವಿಕಾರಿತರ ಇದ್ದ. ಮೊದಲ ನೋಟಕ್ಕೇ ಭಯಪಡಿಸುವಂತಿದ್ದ ಆತನ ಚಹರೆಯ ಜೊತೆಗೇ.., ಮೊದಮೊದಲಿಗೆ ಆತನ ಮಾತೂ ಹೆದರಿಕೆ ಹುಟ್ಟಿಸುವಂತಿತ್ತು. ಆದರೆ ಅಪರಿಮಿತ ಜ್ಞಾನಿಯಾದ ಲಗೋರಿಬಾಬಾನನ್ನು ಮಾತನಾಡಿಸಲೇಬೇಕೆಂದು ವರದಾ ಹಠ ಹಿಡಿದು ಅವನ ಬಳಿ ಬಂದಳು.. ಮುಂದೆ..?? ಇನ್ನೇನು..?? ಓದಿ ಗೊತ್ತಾಗತ್ತೆ..! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಠಲನ ನಾಡಿನಲ್ಲಿ: ಪ್ರಶಸ್ತಿ

ಹಂಪಿ ಬಜಾರ್: ಹಂಪಿ ವಿರೂಪಾಕ್ಷನ ದರ್ಶನ ಪಡೆದ ನಾವು ಪಕ್ಕದಲ್ಲಿದ್ದ ತುಂಗಭದ್ರೆಗೊಂದು ನಮನವೆನ್ನುತ್ತಾ ಹಂಪೆ ಬಜಾರುಗಳನ್ನಾಸಿ ವಿಠಲ ದೇಗುಲದತ್ತ ಸಾಗಿದೆವು. ಹಂಪೆ ಬಜಾರೆಂದರೆ ಜನರಿಗೆ ಅದರಲ್ಲೇನಿದೆ ? ಎಲ್ಲಾ ಊರಿನಂತೆ, ಹಂಪಿಯಲ್ಲೊಂದು ಮಾರುಕಟ್ಟೆ, ವಿಶೇಷವೇನಪ್ಪ ಅನಿಸಬಹುದು. ಶ್ರೀ ಕೃಷ್ಣ ದೇವರಾಯನ ಕಾಲದ ಮಾರುಕಟ್ಟೆ, ಮುತ್ತು ರತ್ನಗಳನ್ನಳೆದು ತೂಗುತ್ತಿದ್ದ ಬೀದಿ ಅಂದರೆ ಆಗ ಓಹ್ ಅನ್ನಬಹುದು. ಹಂಪಿಯಲ್ಲಿ  ಶ್ರೀ ಕೃಷ್ಣ ದೇಗುಲದ ಎದುರಿಗಿನ ಕೃಷ್ಣ ಬಜಾರ್, ಮಹಾನವಮಿ ದಿಬ್ಬದಿಂದ ಬ್ಯಾಂಡ್ ಟವರಿನತ್ತ ಸಾಗುವಾಗ ಸಿಗುವ ಪಾನ್ ಸುಪಾರಿ ಬಜಾರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅರಬ್ಬನ ಅಶ್ಲೀಲ ಬಯ್ಗುಳವೂ ದೇವರ ಸಂದೇಶವೂ ಒಂದು ದಿನ ಪ್ರವಾದಿ ಮೊಹಮ್ಮದ್‌ರು ಮಸೀದಿಯೊಂದರಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವರೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ ಇಸ್ಲಾಂನಲ್ಲಿ ಮೇಲೇರಬಯಸುತ್ತಿದ್ದ ಅರಬ್ಬನೊಬ್ಬನಿದ್ದ. ಆ ದಿನ ಕೊರಾನ್‌ನಲ್ಲಿ “ನಾನೇ ನಿಮ್ಮ ನಿಜವಾದ ದೇವರು” ಎಂಬ ಅರ್ಥವಿರುವ ಫೆರೋನ ಹೇಳಿಕೆ ಉಳ್ಳ ಶ್ಲೋಕವನ್ನು ಮಹಮ್ಮದ್‌ರು ಪಠಿಸುತ್ತಿದ್ದಾಗ ಅದನ್ನು ಕೇಳಿದ ಅರಬ್ಬನು ಕೋಪೋದ್ರಿಕ್ತನಾಗಿ ಪ್ರಾರ್ಥನೆಯನ್ನು ನಿಲ್ಲಿಸಿ ಬೊಬ್ಬೆ ಹೊಡೆದ: “ಸೂಳೆಮಗ*, ಬಡಾಯಿಕೋರ!” ಪ್ರವಾದಿಗಳು ತಮ್ಮ ಪ್ರಾರ್ಥನೆ ಮುಗಿಸಿದ ಕೂಡಲೆ ಅವರ ಸಹಚರರು ಅರಬ್ಬನಿಗೆ ಛೀಮಾರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಫಸ್ಟ್ ಟ್ರೈ: ಸಿ೦ಧು ಭಾರ್ಗವ್

ಹೊಸ ಖಾದ್ಯ ತಯಾರಿಸುವಾಗ ಆದ ಅನುಭವ. ಗಾ೦ಧಿ ಜಯ೦ತಿ ಪ್ರಯುಕ್ತ ರಜೆ ಇದ್ದ ಕಾರಣ ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ಅಪರೂಪಕ್ಕೆ ಕರೆ ಮಾಡುವ ಮಾವನಿಗೆ ನನ್ನ ನೆನಪಾಗಿ ಮಾತನಾಡುವ ಮನಸಾಯಿತು. ಕರೆ ಸ್ವೀಕರಿಸಿ ಮಾತನಾಡಿಡಲು ಶುರು ಮಾಡಿದೆ. ಯೋಗ ಕ್ಷೇಮವನ್ನೆಲ್ಲಾ ವಿಚಾರಿಸಿದ ಮೇಲೆ , ಇ೦ದು ಎಲ್ಲಿಗೂ ಹೊರಗಡೆ ಹೋಗಲಿಲ್ಲವೇ..? ಎ೦ದು ಕೇಳಿದೆ. ಇಲ್ಲ ಇವತ್ತು ಅಡುಗೆ ಮನೆಯಲ್ಲೇ ಬಿಸಿ ಎ೦ದರು. ನಳಮಹಾರಾಜರು ಸೌಟು ಹಿಡಿದು ಏನು ಮಾಡುತ್ತಿದ್ದೀರಿ..? ಹಾಗಾದರೆ ಇ೦ದು ಅತ್ತೆಗೆ ಆರಾಮವಾಯ್ತು ಬಿಡಿ ಎ೦ದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ನಿರ್ಧಾರ’: ರಮೇಶ್ ನೆಲ್ಲಿಸರ

'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ' ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು. ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು. ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು. ““““““““` ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯಧಾರೆ: ಜಯಶ್ರೀ ದೇಶಪಾಂಡೆ, ವಲ್ಲಿ ಕ್ವಾಡ್ರಸ್, ಸಂತೆಬೆನ್ನೂರು ಫೈಜ್ನಟ್ರಾಜ್

ಜ್ಯೋತಿಯೆದುರು ನತಮಸ್ತಕ. 'ಸತ್ಯಮೇವ ಜಯತೇ' ಪರ೦ಪರೆಗಳಿ೦ದ ಬಿ೦ಬಿತ… ಅಲ್ಲಗಳೆದು ನಕ್ಕಿದೆ ವಾಸ್ತವ , ಹುಚ್ಚು ಅದಕ್ಕೆ?!  ನೂರು ಅಪರಾಧಿಗಳಳಿದರೂ  ಒಬ್ಬ ನಿರಪರಾಧಿ  ಅಳಿವುದು ಬೇಡ .. ವರ್ತಮಾನದ ಸತ್ಯವೇ ಮಿಥ್ಯವೇ ? ಉರಿಬಿಸಿಲ ಸೂರ್ಯನ ಕಣ್ಣೆದುರು   ಜೀವಜಾಲದ ಕಡುಗೊಲೆ, ಸಾಕ್ಷಿಗಳಿಲ್ಲ..ನೋಡಿದವರಿಲ್ಲ, ಆರೋಪಿಗಿದೆ  ಅನುಮಾನದ ಭಾಗ್ಯ..ಬೆನೆಫಿಟ್ ಆಫ್ ಡೌಟ್! ಸಿರಿವ೦ತರಿಗೆ ಮಾತ್ರ-ಯಾರಿಗೂ ಹೇಳಬೇಡಿ! ಅಪ್ಪಿತಪ್ಪಿ ಗಲ್ಲೇ? ಅದಕೂ ದಾರಿ ನೂರೆ೦ಟು. ಕಪ್ಪುಕೋಟಿನ ಅಸ್ಖಲಿತ ಮೊಳಕೆಯ ಮಿದುಳುಗಳಿರುವುವುದೇಕೆ?  ಸರ್ವೇ ಗುಣ: ಕಾ೦ಚನಮಾಶ್ರಯ೦ತಿ.  ಅವನ ಶಿಕ್ಷೆ ಇವನ ಪ್ರಸಾದ! ಮಕ್ಕಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಕಟ ವಿನಾಯಕ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು.

ಚೆಲುಗನ್ನಡದಲ್ಲಿ ಚೆನ್‍ಗಣೇಶ ಕೆಳಕಾಣುವ “ಕನ್ನಡಗಣೇಶ ಏಕವಿಂಶತಿ ನಾಮಾವಳಿ” ಪಾಠದಲ್ಲಿ “ಓ” ಮತ್ತು “ಕೈಮುಗಿದೆ” ಎಂದು ಪ್ರತಿ ಹೆಸರಿಗೂ ಹಿಂದೆ-ಮುಂದೆ (ಓ ಬೆನಕ! ಕೈಮುಗಿದೆ…ಓ ಆನೆಮೊಗ! ಕೈಮುಗಿದೆ ಎಂಬಂತೆ) ಸೇರಿಸಿಕೊಂಡು ಜಪಿಸಿದವರಿಗೆ ವಿಘ್ನಪತಿಯು ಅಪವಿಘ್ನದ ಅಭಯವನ್ನೀವನು. ಕನ್ನಡರಕ್ತವನ್ನು ಉಕ್ಕೇರಿಸಿ, ಅಂಥವರನ್ನು “ಕನ್ನಡ ಚೆನ್ನೈದಿಲು” ಮಾಡುವನು ಎಂದು “ಬೆನಕ ಬಲ್ಮೆ” ಎಂಬ ಹವಳಗನ್ನಡ ಕೃತಿಯು ವಿಶಿಷ್ಟವಾಗಿ ವಿಶದಪಡಿಸಿದೆ. ಬೆನಕ= ವಿನಾಯಕ ಪಿಳ್ಳಾರಿ (ಪಿಳ್ಳೆ)= ಬಾಲಗಣಪತಿ  ಆನೆಮೊಗ= ಆನೆಯ ಮುಖದವನು  ಸುಂಡಿಲಮೊಗ= ಸೊಂಡಿಲ ಮುಖದವನು ಇಲಿದೇರ= ಇಲಿಯನ್ನು ತೇರಾಗಿ ಚಲಿಸುವನು ಬಿಂಕಣಗಿವಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಸ್ಮೈ ಶ್ರೀ ಗುರು ಏನ್ ಮಹಾ?: ಅನಿರುದ್ಧ ಕುಲಕರ್ಣಿ

ನಮ್ಮ ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಒಂದು ವಿಶೇಷ ಸ್ಥಾನವಿದೆ, ಉಪನಿಷತ್ತಿನ ಪ್ರಕಾರ ಗುರು ಶಬ್ದಕ್ಕೆ ಗು ಎಂದರೆ ಅಂಧಕಾರ ಮತ್ತು ರು ಎಂದರೆ ದೂರ ಮಾಡುವವನು ಅಥವಾ ಅಜ್ಞಾನದ ಅಂಧಕಾರವನ್ನ ನಿವಾರಿಸಿ ಜ್ಞಾನ ಮಾರ್ಗವನ್ನು ತೋರಿಸುವವ,  ಸಂಸ್ಕೃತದಲ್ಲಿ ಗುರು ಎಂಬ ಶಬ್ದಕ್ಕೆ  ಭಾರವಾದ ಎನ್ನುವ ಅರ್ಥವೂ ಇದೆ, ಯಾರು ಜ್ಞಾನದಿಂದ ಭಾರವಾಗಿರುತ್ತಾರೋ ಅವನೇ ಗುರು , . ಈ ಗುರುವಿನ ಕುರಿತು ಪುರಂದರ ದಾಸರು ಗುರುವಿನ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೇಮಿನಾಥ ತಪಕೀರೆ ಫೋಟೋಗ್ರಾಫಿ

1)    ‘ಸಿಹಿಮುತ್ತು ಸಿಹಿಮುತ್ತು ಇನ್ನೊಂದು’ ಗಿಳಿಗಳೆರಡು ಮುತ್ತಿಕ್ಕುವ ದೃಶ್ಯ. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು. ದಿ: 19/06/2014ರಂದು   2)    ‘ನನ್ನಂಥ ಚೆಲುವ ಚೆನ್ನಿಗ ಇನ್ನಾರು?’ ಕನ್ನಡಿಯಲ್ಲಿ ತನ್ನ ಒರತಿಬಿಂಬ ನೋಡಿಕೊಳ್ಳುತ್ತಿರುವ ‘ಸನ್‍ಬರ್ಡ್’. ಚಿಕ್ಕೋಡಿ ತಾಲೂಕು ಬೆಳಕೂಡದಲ್ಲಿ ತೆಗೆದಿದ್ದು. ದಿ: 30/08/2014   3)    ‘ಚಂದ್ರ’ ಚಂದ್ರನ ಮೇಲಿರುವ ಕುಳಿಗಳು ಸ್ಪಷ್ಟವಾಗಿ ಗೋಚರವಾಗಿದೆ. ದಿ: 22/08/2015     4)    ‘ಆಹಾ ಭೂರಿ ಭೋಜನವಿದು’ ಜೋಳದ ದಂಟಿನ ತುದಿಯಲ್ಲಿರುವ ತೆನೆಯ ಕಾಳುಗಳನ್ನು ಮೆಲ್ಲುತ್ತಿರುವ ಅಳಿಲು. ಚಿಕ್ಕೋಡಿ ತಾಲೂಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 77): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ಇತ್ತೀಚಿಗೆ ವಿವಾದಕ್ಕೆ ಒಳಗಾದ ಮ್ಯಾಗಿ ನೂಡಲ್ಸ್ ಯಾವ ಕಂಪೆನಿಯದು? 2.    HUDCO(ಹುಡ್ಕೊ)ನ ವಿಸ್ತೃತ ರೂಪವೇನು? 3.    ಹಣ್ಣು ಮತ್ತು ಹಣ್ಣಿನ ತೋಟದ ಬಗೆಗಿನ ಅಧ್ಯಯನ ಶಾಸ್ತ್ರಕ್ಕೆ ಎನೆನ್ನುತ್ತಾರೆ? 4.    ಮೇಲ್ಗಾಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? 5.    ಯುವ ಜನರಲ್ಲಿ ಥೈರಾಕ್ಸಿನ್ ಕೊರತೆಯಿಂದ ಬರುವ ವ್ಯಾದಿ ಯಾವುದು? 6.    ಕನ್ನಡದ ಪ್ರಥಮ ಖಾಸಗಿ ಟಿ.ವಿ.ಚಾನಲ್ ಯಾವುದು? 7.    ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾದ ವರ್ಷ ಯಾವುದು? 8.    ಭಾರತದಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ