ನೀಲಿ: ತಿರುಪತಿ ಭಂಗಿ

                                     ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪಕ್ಷಿಗಳು ಇರುವುದೇ  ಹಾರಾಡುವುದಕ್ಕಾಗಿ ಒಂದು ದಿನ ಹಸ್ಸಿದ್‌ನ ಮುಮುಕ್ಷು ಜೂಸಿಯಾ ಎಂಬಾತ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ತನ್ನ ಮನೆಯ ಹೊರಗೆ ಪಂಜರದಲ್ಲಿ ಬಂಧಿಸಿ ಇಟ್ಟಿದ್ದ ಅನೇಕ ಪಕ್ಷಿಗಳನ್ನು ನೋಡಿದ. ಜೂಸಿಯಾ ಪಂಜರದ ಬಾಗಿಲು ತೆರೆದ — ಏಕೆಂದರೆ ಪಕ್ಷಿಗಳು ಇರುವುದೇ ಹಾರಾಡುವುದಕ್ಕಾಗಿ — ಎಲ್ಲ ಪಕ್ಷಿಗಳೂ ಹಾರಿಹೋದವು. ಪಂಜರದ ಮಾಲಿಕ ತನ್ನ ಮನೆಯಿಂದ ಹೊರಗೋಡಿಬಂದು ಕೇಳಿದ, “ಇದೇನು ಮಾಡಿದೆ ನೀನು?” ಜೂಸಿಯಾ ಹೇಳಿದ, “ಪಕ್ಷಿಗಳಿರುವುದೇ ಹಾರಾಡುವುದಕ್ಕಾಗಿ. ನೋಡು, ನೋಡು, ಹಾರಾಡುವಾಗ ಅವು ಎಷ್ಟು ಸುಂದರವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರ್ನಾಟಕ ಪರಿಶೆ (ಭಾಗ-3): ಎಸ್. ಜಿ. ಸೀತಾರಾಮ್, ಮೈಸೂರು

       ಕನ್ನಡ ಭಾಷೆಯನ್ನು ಅರಳಿಸುವ ಹೆಸರಿನಲ್ಲಿ, ಅದೇ ಖ್ಯಾತ ಸಾಹಿತಿಗಳನ್ನು ಉತ್ಸವಗಳಲ್ಲಿ ಮತ್ತೆಮತ್ತೆ ಮೆರೆಸಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮೊದಲಾದ ಪದವಿ-ಪ್ರಶಂಸೆಗಳ ಸುಂಟರಮಳೆಯನ್ನು ಅವರ ಮೇಲೆ ಚಳಿಜ್ವರಬರುವಮಟ್ಟಿಗೆ ಸುರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. (“ರಾಜ್ಯಕವಿ” ಬಿರುದು ಯಾವ “ದಾತಾರ” ನೇತಾರರಿಗೂ ಏಕೋ ಇನ್ನೂ ಹೊಳೆದಿಲ್ಲ! ನಿಜಾರ್ಥದಲ್ಲಿ “ರಾಷ್ಟ್ರಕವಿ” ಎಂಬುವುದೂ “ರಾಜ್ಯಕವಿ” ಅಷ್ಟೇ ಅಲ್ಲವೇ?) ಕನ್ನಡ “ಅಕ್ಕ-ಡುಮ್ಮಿ” (‘ಅಕ್ಯಾಡಮಿ’- ಡಿ.ವಿ.ಜಿ. ಕರೆದಂತೆ), ಪರಿಷತ್ತು, ಪ್ರಾಧಿಕಾರ, ಪೀಠ, ವಿಶ್ವವಿದ್ಯಾನಿಲಯ, ಇಲಾಖೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಂಡೊನೇಷ್ಯಾವನ್ನು ನುಂಗಿ ನೊಣೆಯುತ್ತಿರುವ ಕಾಡ್ಗಿಚ್ಚು: ಅಖಿಲೇಶ್ ಚಿಪ್ಪಳಿ

[ಇಂಡೊನೇಷ್ಯಾದಿಂದ ಭಾರತಕ್ಕೆ ಭೂಗತ ಪಾತಕಿ ಛೋಟಾ ರಾಜನ್‍ನ್ನು ಹಸ್ತಾಂತರಿಸಿದ ಸಚಿತ್ರ ವರದಿಗಳು ಬಹುತೇಕ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖ್ಯಪುಟಗಳಲ್ಲಿ ರಾರಾಜಿಸುತ್ತಿದ್ದವು. ಅತ್ತ ಖುದ್ದು ಇಂಡೊನೇಷಿಯಾವು ಇತಿಹಾಸ ಕಂಡರಿಯದ ಕಾಡ್ಗಿಚ್ಚಿನಿಂದ ನಲುಗುತ್ತಿತ್ತು. ಆ ದೇಶದ ಲಕ್ಷಾಂತರ ಜನ ಈ ಕಾಡ್ಗಿಚ್ಚಿನ ಸಂತ್ರಸ್ಥರಾಗಿ ಬಳಲುತ್ತಿರುವುದನ್ನು ಪ್ರಪಂಚದ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್‍ನಂತಹ ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಬಹುಷ: ಛೋಟಾ ರಾಜನ್ ಕೂಡ ಅಲ್ಲಿನ ಭೀಕರವಾದ ಕಾಡ್ಗಿಚ್ಚಿಗೆ ಬೆದರಿ ಶರಣಾದನೇ ಎಂಬುದು ಕುಹಕವೇ ತಾನೆ] ಸಿಂಗಾಪುರ ಮತ್ತು ಮಲೇಷಿಯಾಗಳ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಕಿನ ಹಬ್ಬ ದೀಪಾವಳಿ..: ಸವಿತಾ ಗುರುಪ್ರಸಾದ್

     ''ಇವತ್ತು ಹಬ್ಬ ಎಷ್ಟ್ ಕೆಲಸ ಇರ್ತು ಇವತ್ತಾದ್ರೂ ಸ್ವಲ್ಪ ಬೇಗ ಬೇಗ ಮಾಡನಹೇಳಿಲ್ಲೆ, ಇವತ್ತೂ ತೋಟಕ್ಕ್ ಹೋಗಿ ಕೂತ್ಕೈನ್ದ ಎಲ್ಲರ ಮನೆಲೂ ಪೂಜೆ ಮುಗಿದರೆನಮ್ಮನೇಲಿ ಇನ್ನೂ ಸ್ನಾನವೇ ಆಗಲ್ಲೆ, ಎಲ್ಲ ನಾ ಒಬ್ಬಳೇ ಮಾಡಿ ಸಾಯಕ್ಕು ''ಹಬ್ಬದ ತಯಾರಿ ಮಾಡ್ತಾ ಅಜ್ಜಿಯ  ಸುಪ್ರಭಾತ ಸಾಗ್ತಾ ಇತ್ತು, ನಿಧಾನಕ್ಕೆ ಒಳಗಡೆಬಂದ ತಾತ, ಪೂಜೆ ಆತನೇ ಮಂತ್ರ ಕೇಳ್ತಾ ಇತ್ತು ಅಂತ ಕೇಳಿದ್ರು ನನ್ನ ಮುಖನೋಡಿ ನಗ್ತಾ, ಹು ಈಗ ಬಂದ್ರ, ಬೇಗ್ ಬೇಗ್ ಸ್ನಾನ ಮಾಡಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 80): ಮಹಾಂತೇಶ್ ಯರಗಟ್ಟಿ

1.    2015ರ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ||ಆರ್.ಕೆ.ಸರೋಜಅವರಿಗೆ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ನೀಡಲಾಯಿತು? 2.    ಬಿ.ಎಚ್.ಯು(BHU) ನ ವಿಸ್ತೃತರೂಪವೇನು? 3.    ಜೀಶಂಪಇದುಯಾರಕಾವ್ಯನಾಮವಾಗಿದೆ? 4.    ಸ್ಥಾಯಿ ಸೈನ್ಯ ಸ್ಥಾಪಿಸಿದ ಮೊದಲ ದೆಹಲಿ ಸುಲ್ತಾನ ಯಾರು? 5.    ‘ಗಿಡ್ಡಾ’ ಇದುಯಾವರಾಜ್ಯದ ಮಹಿಳೆಯರ ನೃತ್ಯಕಲೆಯಾಗಿದೆ? 6.    ಭರತ್‍ಪುರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? 7.    ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆಯಾದ ವರ್ಷಯಾವುದು? 8.    ಉಸ್ತಾದ್ ಬಿಸ್ಮಿಲ್ಲಾ ಖಾನ್‍ಯುವ ಪುರಸ್ಕಾರವನ್ನು ನೀಡುವ ಸಂಸ್ಥೆ ಯಾವುದು? 9.    ಲಿಟಲ್‍ಕಾರ್ಪೊರಲ್‍ ಎಂದು ಯಾರನ್ನು ಕರೆಯುತ್ತಾರೆ? 10.    ಇಂಡಿಯನ್ ಇನ್‍ಸ್ಟಿಟ್ಯೂಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್

ಲಾಂಡ್ರಿ, ಡ್ರೈಕ್ಲೀನಿಂಗ್ ಈಗ ನಿಮ್ಮ ಬೆರಳ ತುದಿಯಲ್ಲಿ  ಭಾರತದ ಮೊಟ್ಟ ಮೊದಲ ಆನ್‍ಲೈನ್ ಲಾಂಡ್ರಿ ಬುಕಿಂಗ್ ವ್ಯವಸ್ಥೆಯನ್ನು ಬೆಂಗಳೂರು ಮೂಲದ ಕನ್ನಡಿಗ, ಜರಗನಹಳ್ಳಿ ಕಾಂತರಾಜುರವರು “ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್” ಎಂಬ ಲಾಂಡ್ರಿ ಸರ್ವಿಸಸ್ ಸಂಸ್ಥೆಯನ್ನು ಪ್ರಾರಂಭಿಸಿ ಅಭಿವೃದ್ದಿಪಡಿಸಿದ್ದಾರೆ. ಇದರ ಮೂಲಕ ಗ್ರಾಹಕರು ತಮ್ಮ ದಿನನಿತ್ಯ ಬಳಕೆಯ ಎಲ್ಲಾ ತರಹದ ಬಟ್ಟೆಗಳನ್ನು ಕುಳಿತಲ್ಲಿಯೇ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಬಳಸಿ ಲಾಂಡ್ರಿ ಬುಕ್ ಮಾಡಿ ಸೇವೆಯನ್ನು ತಮಗೆ ಬೇಕಾದ ದಿನ ಮತ್ತು ಸಮಯಕ್ಕೆ ಪಡೆಯಬಹುದಾಗಿದೆ.  ಇಂದಿನ ಯಾಂತ್ರಿಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುರಂದರ ಮಂಟಪದತ್ತಣ ಪಯಣ: ಪ್ರಶಸ್ತಿ

ಆಚೆ ದಡದ ಸಾಲು ದೇಗುಲಗಳ ಬಗ್ಗೆ ಅಚ್ಚರಿಪಡುತ್ತಾ, ಎತ್ತ ಸಾಗಿದರೂ ಅದೇ ಸರಿಯಾದ ದಾರಿಯೇನೋ ಎಂಬತ್ತಿದ್ದ ದೇಗುಲಗಳ, ಅವುಗಳಿಗೆ ಕರೆದೊಯ್ಯುತ್ತಿದ್ದ ಕಾಲು ಹಾದಿಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಬೋರ್ಡ್ ಹಾಕಿ ಮುಗಿಯೋ ಬಾಬತ್ತಲ್ಲ ಎಂದು ಆಲೋಚಿಸುತ್ತಾ ಎದುರಿಗೆ ಕಂಡ ಧ್ವಜಸ್ಥಂಭದ ದೇಗುಲದತ್ತ ದಾಪುಗಾಲಿಟ್ಟೆವು. ಧ್ವಜಸ್ಥಂಭವಿದೆ, ಕೆಳಗಿಳಿಯೋ ಮೆಟ್ಟಿಲುಗಳೂ ಇವೆ. ಆದರೆ ಅದ್ಯಾವ ದೇಗುಲವೆಂಬ ಮಾಹಿತಿಯೇ ಇರಲಿಲ್ಲ ಅಲ್ಲೆಲ್ಲೋ. ದಾಳಿಗೆ ತುತ್ತಾಗಿ ಗರ್ಭಗೃಹದಲ್ಲಿ ಪೂಜಾ ಮೂರ್ತಿಯಿಲ್ಲದ ಆ ದೇಗುಲ ಬಿಕೋ ಅನ್ನುತ್ತಿತ್ತು. ಅಲ್ಲಿಂದ ಮುಂದೆ ಸಾಗಿದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್

ಸುಡುವ ಕನ್ನಡಮ್ಮನ ಪಾದಗಳು ಸುಡುಬಿಸಿಲ ನಡುಮಧ್ಯಾಹ್ನ ನನ್ನವ್ವಳ ಅಂಗಾಲುಗಳು ಚುರ್ರುಗುಟ್ಟಿ ಬೊಬ್ಬೆ ಎದ್ದಿವೆ ಮೈಲಿದೂರಗಳ ಕ್ರಮಿಸಿ ಛತ್ರಿಯಿಲ್ಲ ಚಪ್ಪಲಿಯಿಲ್ಲ ಹೆಗಲ ಮೇಲೆ ಕೂರಿಸಿಕೊಳ್ಳುವವರು ಮೊದಲೇ ಬಚ್ಚಿಕ್ಕಿಕೊಳ್ಳುತ್ತಿದ್ದಾರೆ ಕಣ್ತಪ್ಪಿ ಕೂರಿಸಿಕೊಂಡವವನನ್ನು ಹುಚ್ಚ ದಡ್ಡನೆಂದು ಜರಿಯುತ್ತಿದ್ದಾರೆ 'ಅಮ್ಮ' ಎನ್ನುವ ನಾಲಗೆಗಳು  'ಮಮ್ಮಿ' ಅನ್ನುತ್ತಿದ್ದಾವೆ ಬರಿಗಾಲಲಿ ನಡೆದೋಗುತಿರುವ ತಾಯಿಗೆ ನೀರಡಿಕೆಯಾದರು ಗುಟುಕು ನೀರು ಕೊಡುವವರಿಲ್ಲ ಮರದಡಿಯ ಮರಳ ಚಿಲುಮೆ ಉಕ್ಕುತ್ತಿಲ್ಲ ! ಬೆವರ ಹನಿಗಳು ತಂಬಿಗೆ ಲೆಕ್ಕದಲ್ಲಿ ಸೋರುತ್ತಿವೆ ಒರೆಸುವ ಕೈಗಳು ಗಾಯವಿಲ್ಲದೆಯೂ ಬ್ಯಾಂಡೀಜ್ ಕಟ್ಟಿಕೊಂಡಿದ್ದಾರೆ ! ಉಸಿರೆತ್ತಿದರೆ ಕನ್ನಡಮ್ಮನ ಮಡಿಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ ಸೂಫಿ ಮುಮುಕ್ಷು ಜುನ್ನೈದ್‌ನ ಹತ್ತಿರ ಅವನ ಶಿಷ್ಯನಾಗಲೋಸುಗ ಒಬ್ಬ ವ್ಯಕ್ತಿ ಬಂದನು. ಜುನ್ನೈದ್‌ ಬಹಳ ಹೊತ್ತು ಅವನನ್ನೇ ದಿಟ್ಟಿಸಿ ನೋಡಿದ. ಪರಿಣಾಮವಾಗಿ ಆ ವ್ಯಕ್ತಿ ತುಸು ಅಸ್ಥಿರಮನಸ್ಕನಾದ, ಜುನ್ನೈದ್‌ ಏಕೆ ಇಷ್ಟು ಹೊತ್ತು ಮೌನವಾಗಿ ತನ್ನನ್ನು ದಿಟ್ಟಿಸಿ ನೋಡುತ್ತಿದ್ದಾನೆ ಎಂಬುದು ಅರ್ಥವಾಗದೆ.  ಕೊನೆಗೊಮ್ಮ ಜುನ್ನೈದ್‌ ಹೇಳಿದ, “ಶಿಷ್ಯನಾಗಿರುವುದು ಬಲು ಕಷ್ಟದ ಕೆಲಸ.” ಆ ವ್ಯಕ್ತಿ ಹೇಳಿದ, “ಅಂತಾದರೆ ನಾನು ಹಿಂಬಾಲಕನಾಗಿರಲೂ ಸಿದ್ಧನಿದ್ದೇನೆ.” ಜುನ್ನೈದ್‌ ಹೇಳಿದ, “ಅದು ಇನ್ನೂ ಕಷ್ಟದ ಕೆಲಸ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಸರಗೋಡಿನ ಅಮ್ಮ ತೊಟ್ಟಿಲು: ಕೃಷ್ಣವೇಣಿ ಕಿದೂರ್

ಅನೈತಿಕ ಸಂಬಂಧ, ದೈಹಿಕ ದೌರ್ಜನ್ಯ, ಅವಿವಾಹಿತ ತಾಯಿ, ಇಂತಹ ಸನ್ನಿವೇಶಗಳಲ್ಲಿ ಜನಿಸುವ ಕಂದ ಯಾರಿಗೂ ಬೇಡ. ತಾಯ್ತಂದೆಗೆ ಹೊರೆಯಾದ, ಮನೆಮಂದಿಗೆ ಶಾಪವಾದ ಈ ಮಕ್ಕಳನ್ನು     ಉಪೇಕ್ಶಿಸುವುದೇ  ಜಾಸ್ತಿ. ರಾತ್ರೆಯ ಕಗ್ಗತ್ತಲಲ್ಲಿ ರಸ್ತೆ ಬದಿಗೆ, ಕಾಡುದಾರಿಯಲ್ಲಿ, ಪೊದೆಗಳಲ್ಲಿ, ಹೊಳೆನೀರಿನಲ್ಲಿ ಎಸೆಯುವವರಿಗೆ ಶಿಶುವಿನ  ಉಳಿವು ಬೇಡ. ಈ ಶಿಶುಗಳು ನೀರಿನಲ್ಲಿ ಉಸಿರುಗಟ್ಟಿದರೆ, ರಸ್ತೆಗೆಸೆದ ಕಂದ ನರಿ, ನಾಯಿ, ತೋಳಗಳ ಬಾಯಿಗೆ ತುತ್ತಾಗುತ್ತದೆ. ಕಾಗೆ, ಹದ್ದುಗಳು ಕುಕ್ಕಿ ಕೊಲ್ಲುತ್ತವೆ. ತೀವ್ರ ಚಳಿ, ಬಿರುಬಿಸಿಲು ತಡೆಯದೆ ಪ್ರಾಣ ಬಿಡುವ ಹಸುಳೆಗಳೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರ್ನಾಟಕ ಪರಿಶೆ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು

  ಇಲ್ಲಿಯವರೆಗೆ ಇಂಗ್ಲಿಷ್ ಭಾಷೆಯು ಭಾರತೀಯರಿಗೆ ದತ್ತವಾಗಿರುವ ಒಂದು ಅಮೂಲ್ಯ-ಪಾರಂಪರಿಕ ಸಂಪತ್ತು. ಭೌಗೋಳೀಕರಣವು ಭರದಿಂದ ಸಾಗುತ್ತಿರುವ ಈ ಯುಗದಲ್ಲಿ, ಇಂಗ್ಲಿಷ್ ಭಾಷೆಯನ್ನು ಬಿಸಾಡುವುದು ಕೇವಲ ತಿಳಿಗೇಡಿತನವಷ್ಟೇ ಅಲ್ಲ, ವಿದ್ಯೆ- ಮತ್ತು ಪ್ರಗತಿ-ವಿರೋಧಿ ಕೃತ್ಯವೂ ಹೌದು.  ವಿಶೇಷವಾಗಿ, ನೆರೆ‘ಹೊರೆ’ಯ ತಮಿಳರು ಮತ್ತು ಮರಾಠಿಗಳಲ್ಲಿರುವ ಪ್ರಾಂತಾಭಿಮಾನದ ಅತಿರೇಕಾಚಾರಗಳಿಗೆ ಪ್ರತಿಯಾಗಿ, ಭಾಷಾನಿರಪೇಕ್ಷತೆ ಹಾಗೂ ಸರ್ವಜನಾಂಗಶಾಂತಿಯ ತೋಟವಾದ ಕರ್ನಾಟಕದಲ್ಲೂ ಈಗ ಅದೇ ಭಾಷಾದುರಾಗ್ರಹದ ತೀಕ್ಷ್ಣವಿಷಾಣು ಹರಡುತ್ತಿದೆ; ವಿಶಾಲಕರ್ನಾಟಕದ ವಿಶಾಲಹೃದಯದಲ್ಲೊಂದು ಕಂದರ ಏಳುತ್ತಿದೆ; ಕನ್ನಡದ ಹರಿವಿನೆದುರು ಕನ್ನಂಬಾಡಿಕಟ್ಟೆ ಕಟ್ಟುವ ದುಸ್ಸಾಹಸ ನಡೆಯುತ್ತಿದೆ; “ಕನ್ನಡವನ್ನಷ್ಟೇ ನುಡಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ ಕಲಿಯುವುದು ಬೆಣ್ಣೆಯನ್ನು ತಿಂದಷ್ಟೇ ಸುಲಭ: ಬಂದೇಸಾಬ ಮೇಗೇರಿ

(ಕನ್ನಡ ರಾಜ್ಯೋತ್ಸವ ಕುರಿತು ಒಂದು ಲೇಖನ) ಕನ್ನಡ ಗಂಧದ ಗುಡಿ. ಕನ್ನಡ ಭಾಷೆಯು ನಿಂತ ನೀರಲ್ಲ. ಅದು ಸರೋವರ ಭಾಷೆ ಸತ್ಯ ಸುಂದರ. ನಿತ್ಯ ನಿರಂತರ. ಕಾಲ ಸರಿದಂತೆ ಭಾಷೆ ತನ್ನ ನೈಜತೆಯನ್ನು ಬದಲಿಸುತ್ತಾ ಸಾಗುತ್ತಿದೆ. ಇದು ಆಶ್ಚರ್ಯವೇನಲ್ಲ. ಬದಲಾವಣೆ ಜಗದ ನಿಯಮ. ನಮ್ಮ ಮಾತೃ ಭಾಷೆ ಕನ್ನಡಕ್ಕೆ ಸುಮಾರು 2000 ವರ್ಷಗಳ ಇತಿಹಾಸ ಇದೆ. ಇಂಗ್ಲೀಷ್, ಹಿಂದಿ, ಪರ್ಷಿಯನ್ ಭಾಷೆಯ ಪದಗಳು ಸಾಮಾನ್ಯವಾಗಿ ಕನ್ನಡ ಭಾಷಾ ಪದಗಳಲ್ಲಿ ಸರಾಗವಾಗಿ ಸೇರಿವೆ. ಇಂದಿನ ಯುವ ಜನತೆ ಹಲವಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜನ ಸೇರಿ ಕೊಂದ ಗಜಪುತ್ರಿಯ ಕಥೆ!: ಅಖಿಲೇಶ್ ಚಿಪ್ಪಳಿ

[ಶಿರಸಿ-ಹಾನಗಲ್-ಸೊರಬ ಗಡಿಭಾಗದಲ್ಲಿ ಮಾನವ ಚಟುವಟಿಕೆಗಳಿಂದಾಗಿ ದಿಕ್ಕುತಪ್ಪಿದ ಆನೆಮರಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ತನಿಖಾ ಮಾದರಿಯಲ್ಲಿ ಸತ್ಯವನ್ನು ಕಂಡು ಹಿಡಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ದಿನಾಂಕ:27/10/2015ರಿಂದ 31/10/2015ರ ವರೆಗೆ ಮಾಮೂಲಿ ದಿನಪತ್ರಿಕೆಗಳಲ್ಲಿ ಅರಣ್ಯ ಇಲಾಖೆ ಹೇಳಿದ ವಿಷಯಗಳನ್ನು ಮಾತ್ರ ಸತ್ಯವೆಂದು ಪರಿಗಣಿಸಿ ವರದಿ ತಯಾರಿಸಿ ಎಲ್ಲಾ ಪತ್ರಿಕೆಗಳು ಪ್ರಕಟಿಸಿದ್ದವು. ಇಲಾಖೆಯ ವೈಫಲ್ಯವನ್ನಾಗಲೀ ಅಥವಾ ಸ್ಥಳೀಯರ ಮೌಢ್ಯದಿಂದಾದ ಅವಘಡವನ್ನಾಗಲಿ ಯಾವುದೇ ಪತ್ರಿಕೆ ವರದಿ ಮಾಡಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ]. ಗಾಂಧಿಜಯಂತಿಯನ್ನು ಆಚರಿಸಿ, ದೇಶಕ್ಕೆಲ್ಲಾ ಅಹಿಂಸೆಯ ಪಾಠ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆ ಲಾಜಿನ ಸುತ್ತಮುತ್ತ!: ಗುರುಪ್ರಸಾದ ಕುರ್ತಕೋಟಿ

ಎರಡು ದಶಕಗಳ ಹಿಂದಿನ ಮಾತು… ಆಗ ಇಂಜಿನಿಯರಿಂಗ್ ಮಾಡಿದರೇನೇ ಏನೋ ಸಾಧನೆ ಮಾಡಿದಂಗೆ ಅಂದುಕೊಂಡು ಬಾಗಲಕೋಟೆಯ ಕಾಲೇಜಿನಲ್ಲಿ ಸೀಟನ್ನು ಬಗಲಲ್ಲಿರಿಕೊಂಡು, ಆ ಊರಿನಲ್ಲಿ ನನ್ನ ಮೊದಲನೆಯ ವರ್ಷದ ವ್ಯಾಸಂಗಕ್ಕೆ ವಾಸ್ತವ್ಯ ಹೂಡಿದ್ದ  ದಿನಗಳವು. ಆಗಿನ್ನೂ ಹಳೆಯ ಬಾಗಲಕೋಟೆಯು ಮುಳುಗಡೆಯಾಗಿರಲಿಲ್ಲ. ನನ್ನ ವಿದ್ಯಾಭ್ಯಾಸ ಮುಗಿದಮೇಲೆ ಮುಳುಗಿತು! ಅಪ್ಪನಿಗೆ ಪರಿಚಯದವರ ಸಂಬಂಧಿಕರ ಮನೆಯೊಂದು ಅಲ್ಲಿತ್ತು, ಅವರ ಮನೆಯ ಆವರಣದಲ್ಲಿನ್ನೊಂದು ಒಂಟಿ ಮನೆಯೂ ಇದ್ದು, ನನ್ನ ಅದೃಷ್ಟಕ್ಕೊ ದುರದೃಷ್ಟಕ್ಕೋ ಅದು ಲಭ್ಯ ಇತ್ತಾದ್ದರಿಂದ ನನಗೆ ಅಲ್ಲಿ ವಾಸಿಸಲು ಅವರು ಅವಕಾಶ ನೀಡಿದ್ದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆನ್‍ಲೈನ್ ಖರೀದಿ!: ಎಸ್.ಜಿ.ಶಿವಶಂಕರ್

ನಮ್ಮ ಮಕ್ಕಳು ವಿದೇಶಗಳಲ್ಲಿದ್ದಾರೆ. ಅವರಲ್ಲಿಗೆ ಅಗಾಗ್ಗೆ ಹೋಗಿ ಬರುತ್ತಿರುತ್ತೇವೆ. ಬರೆಯುವ ಹವ್ಯಾಸ ನನ್ನದು. ಜೊತೆಗೆ ಸ್ನೇಹಿತರೊಂದಿಗೆ, ಇ-ಮೈಲಿನಲ್ಲಿ ವಿಷಯಗಳನ್ನು ವಿನಿಮಯ ಮಾಡಿಕ್ಕೊಳ್ಳುವ ಅಭ್ಯಾಸವಿದೆ. ವಿದೇಶದಲ್ಲಿರುವಾಗ ಉಪಯೋಗಿಸಲು ಒಂದು ಪುಟ್ಟ ಲ್ಯಾಪ್ಟಾಪು ಇದ್ದರೆ ಅನುಕೂಲವೆನ್ನಿಸುತ್ತಿತ್ತು. ಆದರೆ ಹೆಚ್ಚು ಖರ್ಚು ಮಾಡಲು ಮನಸ್ಸಿರಲಿಲ್ಲ. ಮನೆಯಲ್ಲಾಗಲೇ ಒಂದು ಡೆಸ್ಕ್‍ಟಾಪು ಇತ್ತು. ಸರಿ ಆನ್‍ಲೈನಿನಲ್ಲಿ ಹುಡುಕಿದೆ. ಕಂಪ್ಯೂಟರಿನ ಸ್ಕ್ರೀನಿನ ಮೇಲೆ ಲ್ಯಾಪ್ಟಾಪು ನೋಡಿದೆ. ನಾಲಕ್ಕು ಸಾವಿರಕ್ಕೆ ಲ್ಯಾಪ್ಟಾಪು ಜೊತೆಗೊಂದು ಬ್ಯಾಕ್‍ಪ್ಯಾಕಿನ ವಿಶೇಷ ರಿಯಾಯತಿಯ ಕೊಡುಗೆ ಆಕರ್ಷಕವಾಗಿತ್ತು. ಹನ್ನೊಂದು ಇಂಚಿನ ಸ್ಕ್ರೀನು, ಪೂರ್ಣವಾದ ಕೀಬೋರ್ಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನುಡಿಸೇವಕ: ಮಹಾಂತೇಶ್ ಯರಗಟ್ಟಿ

 “ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು  ಕನ್ನಡವೇ ಸತ್ಯ ಕನ್ನಡವೇ ನಿತ್ಯ” ರಾಷ್ಟ್ರಕವಿ ಕುವೆಂಪುರವರ ಈ ಮೇಲಿನ ಸಾಲುಗಳಂತೆ ತಾವಿದ್ದ ಸ್ಥಳದಲ್ಲೆ ಅದೆಷ್ಟೊ ಸಾಧಕರು ಕನ್ನಡ ಸೇವೆಗಾಗಿ ಶ್ರಮಿಸುವರ ಸಾಲಿನಲ್ಲಿ ನಟರಾಜಕುಂದೂರ ರವರು ಕೂಡ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹೋನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಬಡಕುಟುಂಬದಲ್ಲಿ ಜನಿಸಿದವರು, ತಮ್ಮ ಬಾಲ್ಯದ ಶಿಕ್ಷಣದಲ್ಲೆ ಕನ್ನಡದ ನೆಲ-ಜಲದ ಬಗ್ಗೆ ಅಪಾರ ಪ್ರೀತಿಯನ್ನೇ ಮೈಗೂಡಿಸಿಕೊಂಡವರು. ನಟರಾಜ ಕುಂದೂರು ರವರು ಈಗ ಕರ್ನಾಟಕ ರಾಜ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ