ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..: ಮಾಂತು

ಅಷ್ಟು ಸುಲಭವಲ್ಲ ಪ್ರೇಮದ ಪರಿಯ ಅರಿಯುವುದು ಪ್ರೇಮ ಒಂದು ಮೈದಳೆಯಬೇಕಾದರೇ ಅದಕ್ಕೊಂದು ಜೀವ ಬೇಕು ಅಷ್ಟೇ ಸತ್ಯ ಏನೆಂದರೆ ಪ್ರತಿ ಜೀವನದ ಬೆನ್ನ ಮೇಲೆಯೂ ನಿನ್ನೆಯ ಅಗೋಚರ ಹೊರೆ ಇದ್ದೇ ಇರುತ್ತದೆ, ಆ ಹೊರೆ ಮತ್ತು ಜೀವನದ ನಾಳಿನ ನೀರೀಕ್ಷೆಗಳು. ಪ್ರೇಮಕ್ಕೆ ಕಣ್ಣು, ಮೂಗು, ಕಿವಿಗಳನ್ನು ರೂಪಿಸುತ್ತದೆ . ಅಲ್ಲಿ ಕಳೆದ ವರ್ಷಗಳ ಲೆಕ್ಕ ಮಾತ್ರವಲ್ಲ ವಸಂತ, ಗ್ರೀಷ್ಮ, ಋತುವಿನ ಒದ್ದೆ ಒಣಗು ಬೆರಗುಗಳು ಇರುತ್ತವೆ.

ಪ್ರೀತಿಯನ್ನು ಬಿಗಿ ಹಿಡಿ ಎಂದು ಒಂದು ಜೀವ ಎಂದರೆ, ಬೇಡಾ ಮುಕ್ತವಾಗಿ ಬಿಡು ಎಂದು ಇನ್ನೊಂದು ಜೀವ ಉಸುರುತ್ತದೆ. ಅನ್ನಿಸಿದ್ದೆಲ್ಲವ ಹೇಳಿಬಿಡು ಪ್ರೀತಿಯನ್ನು ಸುರಿದು ಬಿಡು ಎಂದು ಒಂದು ಹಸ್ತ ಬೆನ್ನಮೇಲೆ ಕೈ ಇಟ್ಟರೆ , ತಾಳು ತಾಳು ನಿನ್ನನ್ನು ಬಯಲಾಗಿಸಬೇಡ ಎಂದು ಇನ್ನೊಂದು ಕೈ ತಡೆಯುತ್ತದೆ. ಹಾಗೆ ಮನಸ್ಸು ಕಲಿಸುವ ಇನ್ನೊಂದು ಸತ್ಯ ಏನೆಂದರೆ ಎಲ್ಲ ಪ್ರೀತಿಗಳು ಕೇವಲ ಐ ಲವ್ ಯು ಮೂಲಕವೇ ಅಭಿವ್ಯಕ್ತಗೊಳ್ಳಬೇಕಿಲ್ಲ , ಕೆಲವು ಮಾತ್ರ ಗೌರವ,ಕಾಳಜಿ, ದಯೆ ತೋರುವುದರ ಮೂಲಕ ವ್ಯೆಕ್ತಗೊಳಿಸಬಹುದು. ಫೆಬ್ರವರಿ ತಿಂಗಳಲ್ಲಿ ಪ್ರೀತಿಯ ಬಗ್ಗೆ ಬರೆಯುವ ಮನಸು ಮಾಸಿಲ್ಲವೇ ಎಂದೊಮ್ಮೆ ಅನ್ನಿಸಿದರೂ ಅದನ್ನು ಬರೆಯುವ ಮನಸು ಈಗ ಮೂಡಿದೆ ಎಂದೆನಿಸುತ್ತಿದೆ. ಏಕೆಂದರೆ ಚಿಟ್ಟೆಯನ್ನು ಉಸಿರುಗಟ್ಟಿಸದೆ ಅಂಗೈಯಲ್ಲಿ ಹಿಡಿಯುವ ತಾಳ್ಮೆ , ಚಿಟ್ಟೆಯನ್ನು ಹಾರಿ ಹೋಗದಂತೆ ಹಿಡಿಯುವ ಜಾಣ್ಮೆ ಎರಡನ್ನೂ ಮನಸು ಈಗ ಅರಿತೀರಬಹುದು. ನಿಜವಾದ ಪ್ರೀತಿಯ ನಂಬಿ ಬಂದವರಿಗೆ ಗೌರವಿಸೋಣ, ಒಂಚುರು ಸ್ಪೇಸ್ ಕೊಡೋಣ ಎಂಬ ಮಾತುಗಳು ಹುಸಿ ಅನಿಸ್ಯಾವು ಮುನಿಸು ತಂದಾವು ಆದರೆ ನೀವು ನನ್ನ ಸಂಗಾತಿ ಆಗುವ ಮೊದಲು ಈ ಸಂಬಂಧದ ಹೊರತಾಗಿಯೂ ನಿಮಗೆ ಒಂದು ವ್ಯೇಕ್ತಿತ್ವ ಇತ್ತು ಎಂದು ನಾವು ಮರೆಯಬಾರದು.

ಪ್ರೀತಿಗೆ ಒಲಿದ ಹುಡುಗಿಯೂ ಮದುವೆ ಮಾಡಿಕೊಂಡು ಬಂದ ಹೆಂಡತಿಯೂ ಆಕೆಯನ್ನು ಮುಟ್ಟುವುದು ನಮ್ಮ ಜನ್ಮಸಿದ್ಧ ಅಧಿಕಾರ ಎನ್ನುವುದು ನಮ್ಮ ಸ್ಪರ್ಷ ಹೀನ ಸಮಾಜದ ಧೋರಣೆ. ಮುಟ್ಟುವುದು ಎಂದರೆ ಅದೊಂದು ಜವಾಬ್ದಾರಿಯುತ ಒಪ್ಪಿತ ಒಲವಿನ ಅಭಿವ್ಯಕ್ತ. ಒಪ್ಪಿತ ಸಂಬಂಧದಲ್ಲಿ ಮನವನ್ನು, ತನು ವನ್ನು, ಜೀವನವನ್ನು ಹಂಚಿಕೊಳ್ಳುತ್ತೇವೆ ಎಂಬುದು ಜವಾಬ್ದಾರಿಯುತವಾಗಿ ಮಾಡಿದ ಪ್ರಮಾಣವೇ ಹೊರತು ಅದು ಹಕ್ಕು ಚಲಾಯಿಸುವ ಸ್ವತ್ತು ಅಲ್ಲ ಒಪ್ಪಂದವನ್ನು ಮೀರದಂತೆ ಪ್ರೀತಿಯಲ್ಲಿ ಸಲುಗೆ, ಆಪ್ತತೆ, ನನ್ನವರು ಎಂಬ ಖಾಸಾತನ ಆಪ್ತ ಭಾವವಾಗಿರಬೇಕೆ ಹೊರತು ಹಕ್ಕು ಚಲಾಯಿಸುವ ಪರವಾನಿಗೆ ಆಗಬಾರದು.

ನಾನು ಅಥವಾ ನೀವು ಒಬ್ಬ ಘನತೆಯುಳ್ಳ ವ್ಯಕ್ತಿ ಎಂಬ ಅರಿವು ಮರೆಯಾಗದಂತೆ ಇರುವುದು ಪ್ರೇಮ. ಆ ಘನತೆಯನ್ನು ಕಾಪಿಟ್ಟುಕೊಳ್ಳವ ಪ್ರತಿ ದಿನವೂ ಪ್ರೇಮಿಗಳ ದಿನ….
Happy valentine’s day dear….

Hopefully
ಮಾಂತು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
ಡಾ.ಅಭಿಲಾಷ ಹೆಚ್ ಕೆ
ಡಾ.ಅಭಿಲಾಷ ಹೆಚ್ ಕೆ
20 days ago

ಪ್ರೀತಿ, ಮದುವೆ ಬಹುಪಾಲು ಸಂಕುಚಿತ ಭಾವದಲ್ಲೇ ನಲುಗಿ ಹೋಗುತ್ತವೆ. ಅದರ ನಡುವೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಇಷ್ಟು ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ನಿಮ್ಮಂತೆಯೇ ನಿಮ್ಮ ಸಂಗಾತಿಗೂ ಈ ಪ್ರಬುದ್ಧತೆಯಿರಲಿ. ಪ್ರಬುದ್ಧತೆಯನ್ನು ಮೀರಿದ ಅಗಾಧವಾದ ಒಲವೂ ಇರಲಿ.ಬಾಳು ಬೆಳಗಲಿ.

1
0
Would love your thoughts, please comment.x
()
x