ಮೈನಾ ಹಕ್ಕಿ, ಚಿತ್ರ ಕೃಪೆ: ಭಾರತ್ ವ್ಯಾಸ್
ನನಗೆ ನೆನಪಿರುವಂತೆ, ಒಂದು ಸಂಜೆ ಬಾಂಬೆನಲ್ಲಿ, ಹಲವು ಜನವರಿ ತಿಂಗಳ ಪೂರ್ವದಲ್ಲಿ, ನಾನು ಒಂದು ಮಾರುಕಟ್ಟೆಯ ಸಂದಣಿಯಲ್ಲಿ ಕೊಳ್ಳಲು ಅವಸರಿಸಿದೆ. ಮಿಕ್ಕ ಸುತ್ತಮುತ್ತಲಿನ ವಿಶ್ವವು ನನ್ನಂತೆ ಅವಸರದಲ್ಲಿದ ಹಾಗಿರುವಾಗ, ಕತ್ತಲು ಕವಿದಂತೆ ಉದ್ರೇಕಗೊಂಡು, ಗಡಿಬಿಡಿಯಲ್ಲಿ, ವಿಚಾರಿಸುತ್ತ ಮತ್ತು ತಳ್ಳಾಟದ ಸಂಗಮದ ಮಾರುಕಟ್ಟೆಯಲ್ಲಿ, ಕೊಳ್ಳುವವರು ಮತ್ತು ವಾಹನ ಚಲಿಸುತ್ತ ಓಡಾಡುವ ಗರ್ಜಿನೆಯಲ್ಲಿ ಹೋಗುವವರೆಲ್ಲರನ್ನು ಏನೋ ಮೀರಿಸಿದಂತಿತ್ತು. ಇದೆಲ್ಲದರ ಒಳಗಾಗಿಯೂ, ಗಲಿಬಿಲಿಯಲ್ಲಿ ಮನುಷ್ಯರ ಧ್ವನಿಗಳ ನಡುವೆ, ಮೋಟಾರುಗಳ ಹೀಕಾರಗಳ ನಡುವೆ, ನನಗೆ ಸಾವಿರಾರು ಮೈನಾ ಹಕ್ಕಿಗಳ ಚೀರಾಟವು ಅವುಗಳ ಗೂಡುಗಳಿಂದ, ಅಂದರೆ ಆ ಮಾರುಕಟ್ಟೆಯ ಮೇಲಿನ ಛಾವಣಿಗಳಲ್ಲಿ ಸಂಜೆವೇಳೆಗೆ ಅವುಗಳ ಗೂಡುಗಳಿಗೆ ವಾಪಸ್ಸು ಹಾರಿ ಮರಳಿ ತಿರುಗಿ, ಕುಳಿತು ಒಬ್ಬರೊಬ್ಬರಿಗೆ ಉತ್ತೇಜನದಲ್ಲಿ ಬೆಳಗಿನ ಆಚರಣೆಗಳನ್ನು ಹೇಳಿಕೊಂಡಂತಿತ್ತು.
ನಾನು ನೋಡಿದಂತೆ ಊರಿನ ಮಧ್ಯದಲ್ಲಿ ಮೈನಾ ಹಕ್ಕಿಗಳು ಗೂಡು ಕಟಿದ್ದವು. ಮೈಸೂರಿನಲ್ಲಿ ಅಥವಾ ಬೇರೆಲ್ಲೋ ಈ ಮೈನಾ ಹಕ್ಕಿಗಳು ಒಲವು ತೋರಿಸಿದ್ದು ಮುಖ್ಯ ಬಾಜಾರಿನಲ್ಲಿಯೇ. ಎಲ್ಲಿಯೂ ಈ ಹಕ್ಕಿಗಳ ಕೂಗಿನ ಕುರುಹು ಕೇಳಿದವೋ, ಅಲ್ಲಿಯ ಪ್ರಾಧಾನ್ಯತೆಯನ್ನು ಯಾವುದೇ ಮಾನವರು ಮೀರಿದಂತಿರಲಿಲ್ಲ.
ಹೇಗಾದರೂ ಇರಲಿ, ನಿಮಗೆ ಈ ಹಕ್ಕಿಗಳ ತಾರಕಸ್ವರ ಒಡನಾಟದಲ್ಲಿ ಹೇಗೆ ಕೇಳುವುದೋ ಈ ಹಕ್ಕಿಗಳ ಗೂಡು ಹಳ್ಳಿ ತೋಟದಲ್ಲಿ ಕೇಳಿದಾಗ, ಬಹಳ ದೊಡ್ಡ ಹಿಂಡುಗಳಲ್ಲಿ ಕೂಡಿ ಬಂದು ಊರಿನ ಮಾನವರ ಚೀರಾಟದಲ್ಲಿ ಈ ಹಕ್ಕಿಗಳ ಯುಕ್ತಿಯು ಹಾಗು ನಿಭಾಯಿಸುವ ಹುರುಪು ಹಳ್ಳಿಯ ಕೊಳ್ಳಗಳ ಬಳಿ ಸಂಜೆವೇಳೆ ತಿಳಿಯುವುದು. ಇಂತಹ ಹೊತ್ತಿನಲ್ಲಿ, ಮೈನಾಗಳು ಗೂಡಿಡುತ್ತ, ಅದುವೆ ಹಳ್ಳಿ ತೋಟಗಳಲ್ಲಿ ಗುಂಪುಗೊಂಡು ಎಲ್ಲ ದಿಕ್ಕುಗಳಿಂದಲೂ ಕತ್ತಲು ಏರಿದಂತೆ ಇವು ಬರುವುವು ಎಂದು. ನಮ್ಮ ಈ ಹಕ್ಕಿಗಳ ಗೋಷ್ಠಿ, ಚಳಿಗಾಲದಲ್ಲಿ ಹೆಚ್ಚು ಇದ್ದು, ವಿಧವಿಧವಾದ ಸಂಭವನೀಯ ಕಾರಣಗಳಿಂದ ಕೂಡಿರ ಬಹುದು. ನಾನು ಇವೆಲ್ಲ ಶಾಶ್ವತ ನಿವಾಸಿ ಹಕ್ಕಿಗಳ ಬಗ್ಗೆ ಹೇಳುತ್ತಿದ್ದೇನೆ. ಸ್ಥಾನಾಂತರ ಬರುವ ಹಕ್ಕಿಗಳಲ್ಲದೆ ನಾನು ಬರೆದಿರುವುದು ಗೊರವಂತೆರ ಹಕ್ಕಿಗಳು, ಮೈನಾಗಳ ಕುಟುಂಬದಲ್ಲಿಯೇ ಅತಿ ಹೆಚ್ಚು ಚೀರುವುದರಲ್ಲಿ, ತಾರಕಸ್ವರದಲ್ಲಿ ಅದೂ ದೀರ್ಘವಾಗಿ ಬೊಬ್ಬೆಯಿಡುತ್ತಲಿರುವ ಮೈನಾಗಳೆಂದರೆ “ಗೊರವಂತರ” ಹಕ್ಕಿಗಳು, ಇವು ಯಾವಾಗಲೂ ಮುಂದಿರುತ್ತವೆ.
ಈ ಹಕ್ಕಿಗಳು ತಮ್ಮ ಗೂಡು ಕಟ್ಟುವ ಒಂದು ಚಿಕ್ಕ ಕೊಳವಿದ್ದರೂ, ನೀರಿರುವ ಬಳಿ ಯಾವುದೇ ಮರಗಳಿದ್ದರು ಆಯ್ಕೆ ಮಾಡದಿದ್ದರೂ ಒಮ್ಮೊಮ್ಮೆ ಬಬೂಲು ಮರವನ್ನು ಹೆಚ್ಚು ಆಯ್ಕೆ ಮಾಡಿ ಬಚ್ಚಿಟ್ಟು ಗೂಡು ಮಾಡುವವು. ಅದೃಷ್ಟದಂತೆ ಈ ಮರಗಳು ಮನುಷ್ಯರಿರುವ ತಾಣಗಳ ಅಥವಾ ವಾಸಸ್ಥಳದಿಂದ ದೂರವಿದ್ದರೂ, ಅವುಗಳನ್ನು ಗುರುತಿಸಲು ಹೆಚ್ಚು ಶ್ರಮ ಬೇಕಾಗುವುದಿಲ್ಲ. ಮನೆಯಿಂದ ಹೊರಗೆ ಹೋಗಿ ಹೊರಗಿನ ತಾರಕಸ್ವರಗಳನ್ನು ಕೇಳಿದರೆ ಸಾಕು, ಅದುವೇ ಸ್ಥಳದರ್ಶಕ. ಕೇಳಿಬರುವ ಕೂಗಾಟ ನಿಮ್ಮೊಳಗೆ ಹೊಕ್ಕಿ ಮುಂದುವರಿದಂತೆ ಮುಖ್ಯ ಪ್ರಮಾಣದಲ್ಲಿ ನೇರವಾಗಿ ಆ ಹಕ್ಕಿಗೂಡಿನ ಬಳಿಗೆ ಕರೆದೊಯ್ಯುತ್ತದೆ.
ಯಾವುದೇ ಘಳಿಗೆಯ್ಲಲೂ ಈ ಗೊರವಂತರ ಹಕ್ಕಿಗಳು ಮೆಲು ದನಿಯನ್ನು ಬಿಟ್ಟು ಕೊಡದೆ ಅಂಗಳದ ತೋಟದಲ್ಲಿರುವ ಮಿಡತೆ ಅಥವಾ ಇತರೆ ಕೀಟಗಳನ್ನು ಹೆಕ್ಕಿ ತಿನ್ನುತ್ತವೆ. ಈ ಹಕ್ಕಿಯು ತನ್ನ ಪ್ರಕೃತಿಯನ್ನು ಸಧೃಡಗೊಳಿಸಿಕೊಂಡು, ಒಬ್ಬಂಟಿಯಾಗಿಯೂ, ಒರಟಾದಲ್ಲಿಯೂ ತನ್ನ ದನಿಯನ್ನು ತಾನೇ ಕೇಳುತ್ತ ಸಂತಸಗೊಳ್ಳುತ್ತದೆ. ಕೆಲವೊಮ್ಮೆ ಗೊರವಂತರ ಹಕ್ಕಿಗಳಲ್ಲಿ ಒಂದು ಹಕ್ಕಿಯು ತನ್ನಲ್ಲೇ ತಲ್ಲೀನವಾಗಿ, ಶಿಕಾರಿಯಾಡುವಾಗಲಿ ಅಥವಾ ಹಕ್ಕಿಯ ಜೋಡಿ ಜೊತೆಗಿದ್ದಾಗ ತುಲನಾತ್ಮಕವಾಗಿ ನಿಶಬ್ದವಾದ ಹಕ್ಕಿ ಆಗಿರುತ್ತದೆ. ಒಂದು ದಿನವೂ ಕಳೆದಂತೆ ಹಾಗೆಯೇ ಅಟ್ಟಿಕೊಂಡು ಹೋಗುವ ಮುಂದಾಲೋಚನೆ ಕಳೆದಂತೆ, ರಾತ್ರಿಯ ಸೀಮೆಯಲ್ಲಿ ಮಾತುಕತೆ ಸಂಕ್ಷಿಪ್ತವಾಗಿದ್ದಂತೆ ಇರುತ್ತದೆ. ಆ ಸಮಯದಲ್ಲಿ ಮೈನಾ ಹಕ್ಕಿಯು ಉದ್ರೇಕಗೊಂಡು ತನ್ನ ಮಿತ್ರರೊಂದಿಗೆ ಮುಂಜಾವಿನಿಂದ ರಾತ್ರಿಯ ವೇಳೆ ತನಕ ನಡೆದ ಎಲ್ಲ ವಾರ್ತೆಗಳನ್ನು ತಾನೇ ಮೊತ್ತ ಮೊದಲು ಇಂತಹ ಅಂತೆಕಂತೆಗಳನ್ನು ಮಾತುಗಳಲ್ಲಿ ಬಿಡಿಸಿ ಹೇಳುತ್ತಿದೆಯೋ ಎಂಬಂತೆ, ಎಲ್ಲ ಒಳ್ಳೆಯ ಮಾತುಗಾರರ ಸಹವಾಸವೂ ಉತ್ತೇಜನೆ ನೀಡುವಂತಿರುತ್ತದೆ. ಮೈನಾಗಳ ಹಳ್ಳಿಯ ಗುಂಪಿನ ಗದ್ದಲವು ಶ್ಲಾಘನೀಯ.
ಹೇಗಾದರೂ ಈ ಹಕ್ಕಿಗಳ ಗುಣವು ನನಗೆ ಇಷ್ಟವಾದುದು, ಅದರ ಗದ್ದಲದ ದನಿಯಿಲ್ಲದೆ ಅವುಗಳ ಯೋಚನೆ ಯಾಚನೆಯು ಎಲ್ಲ ಧೃಡವಾಗಿರುವ, ಒಳ್ಳೆಯ ಕಾರ್ಯಗಳನ್ನು ಮೈನಾ ಹಕ್ಕಿಗಳು ಮಾಡುವವು. ಇವುಗಳು ಯಾವುದೇ ಕೀಟಗಳಾಗಲಿ ಅಥವಾ ಹುಳುಗಳಾಗಲಿ ತಿನ್ನುವುದಲ್ಲದೆ ಅಸಾಮಾನ್ಯವಾದ ಅಪ್ರಾಕೃತಿಕ ದನಿಗಳ ಜೋಡಣೆಗಳಿಲ್ಲದೆ ನನಗೆ ಗೋಚರಿಸುತ್ತ ಈ ಮೈನಾ ಹಕ್ಕಿಗಳ ಗೂಡಿನ ಒದರಾಟವು ಎಂದಿಗೂ ಕಮ್ಮಿಯಾಗುವುದು ಅಸಂಗತ ಅವಸ್ಥೆ, ಯಾಕೆಂದರೆ ಈ ಮೈನಾ ಹಕ್ಕಿಗಳು ಅಸಂಖ್ಯಾತ ಹಾನಿಕಾರಕ ಕೀಟ ಹಾಗು ಹುಳುಗಳನ್ನು ತಮ್ಮ ಬಾಯಿಯಲ್ಲಿ ತುಂಬಿಕೊಂಡು ತಮ್ಮ ಹೊಟ್ಟೆಗೆ ಸೇರಿಸಿ ನಮಗೆ ಉಪಕಾರ ಮಾಡುತ್ತವೆ.
–ಅನಘ ಜಹಗೀರದಾರ್
