ಮರ ಗಿಡು ಬಳ್ಳಿ – ಬಸವಣ್ಣನ ದೃಷ್ಟಿಯಲ್ಲಿ ಜೀವಜಾಲದ ಮಹತ್ವ: ರೋಹಿತ್ ಜಿರೋಬೆ

ಇಂದು ಮಾನವನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಮಾಡುತ್ತಾ ಹೋಗುತ್ತಿರುವುದು ಹೊಸದೇನಲ್ಲ. ಮರ ಕಡಿತ, ಗಿಡಗಳ ತುಳಿವು, ಧಾನ್ಯಗಳ ಹತೋಟಿ – ಇವೆಲ್ಲವೂ ನಾವು ಸಾಧಾರಣವಾಗಿ ಗಮನಿಸದ ಪ್ರಪಂಚದ ದೈನಂದಿನ ಕ್ರಿಯೆಗಳು. ಆದರೆ, ಸಾವಿರ ವರ್ಷಗಳ ಹಿಂದೆಯೇ ಬಸವಣ್ಣನವರು ಸಸ್ಯಜಗತ್ತಿಗೆ ಜೀವವಿದೆ ಎಂಬುದನ್ನು ತಮ್ಮ ತತ್ತ್ವದಿಂದಲೇ ಸಾರಿದ್ದರು. ಅವರು ತಮ್ಮ ಈ ವಿಖ್ಯಾತ ವಚನದಲ್ಲಿ ಹೇಳುತ್ತಾರೆ:

“ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.”

ಈ ವಚನವು ತಾವು ನಿತ್ಯ ಇಣುಕಿ ನೋಡುವ ಸಸ್ಯಗಳೂ ಒಂದು ಜೀವಜಾಲದ ಭಾಗವಾಗಿವೆ ಎಂಬುದನ್ನು ಘೋಷಿಸುತ್ತದೆ. ಇಲ್ಲಿ ‘ಒಂದಿಂದ್ರಿಯ’ ಎಂದು ಸಸ್ಯಗಳ ಜಾಗತಿಕ ಸ್ವರೂಪವನ್ನು ಸೂಚಿಸಿದರೆ, ‘ಐದಿಂದ್ರಿಯ’ ಎಂದರೆ ಮಾನವ – ಇವು ಎಲ್ಲವೂ ಒಂದೇ ಜೀವಜಾಲದ ಅಂಗಗಳು ಎಂಬ ತತ್ತ್ವವನ್ನು ಸ್ಪಷ್ಟಗೊಳಿಸುತ್ತದೆ.

ಬಸವಣ್ಣನವರ ಪರಿಸರದ ತತ್ತ್ವ – ಕಾಲಾತೀತ
ಈ ವಚನದಲ್ಲಿ ಬಸವಣ್ಣನವರು ಬಹುಪಾಲು ಜನರಿಗೆ ನಿಗೂಢವಾದ ಒಂದು ವಿಚಾರವನ್ನು ಬಹಿರಂಗಗೊಳಿಸುತ್ತಾರೆ – ಅದು ಸಸ್ಯಜಗತ್ತಿಗೆ ಪ್ರಾಣವಿದೆ ಎಂಬ ತತ್ತ್ವ. ನಾವು ದಿನನಿತ್ಯ ಬೆಳೆ ಬಿತ್ತುವುದು, ಧಾನ್ಯಗಳನ್ನು ಕೊಯ್ದು ಸೇವಿಸುವುದು, ಮರಗಳನ್ನು ಬಳಕೆ ಮಾಡುವುದು all these involve taking life. ಆದರೆ ಈ ಕರ್ಮದ “ದೋಷ”ವನ್ನು ನಿವಾರಣ ಮಾಡುವುದು ಹೇಗೆ?

ಬಸವಣ್ಣನವರು ಉತ್ತರಿಸುತ್ತಾರೆ –
“ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು”
ಅಂದರೆ ಈ ಜೀವಿಯ World -ನಲ್ಲಿ ಬದುಕು ಕಟ್ಟಿಕೊಳ್ಳಬೇಕಾದರೆ, ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಆಧ್ಯಾತ್ಮಿಕ ಶುದ್ಧತೆಗೆ ಅರ್ಪಿಸಬೇಕು – ಇದುವರೆಗೂ ವಿಜ್ಞಾನ ಹೇಳದ ecological ethics!

ಜಗದೀಶ್ ಚಂದ್ರ ಬೋಸ್ ಮತ್ತು ಬಸವಣ್ಣ – ತಂತ್ರಜ್ಞಾನ ಮತ್ತು ತತ್ತ್ವದ ಸೇತು
1901 ರಲ್ಲಿ ಮಹಾನ್ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರು ಗಿಡಗಳಲ್ಲಿ ಸ್ಪಂದನೆ ಇದೆ, ನೋವಿಗೆ ಪ್ರತಿಕ್ರಿಯೆ ಇದೆ ಎಂದು ‘Crescograph’ ಎಂಬ ಸಾಧನದಿಂದ ಸಾಬೀತುಪಡಿಸಿದರು. ಅವರು ವಿಜ್ಞಾನದಲ್ಲಿ “Plants have life” ಎಂಬ ಸತ್ಯವನ್ನು ವಿಶ್ವದ ಮುಂದಿಟ್ಟರು.

ಆದರೆ ಇನ್ನು ಹೆಚ್ಚಿನ ಶಕ್ತಿಯ ವಿಷಯವೆಂದರೆ – ಈ ಸತ್ಯವನ್ನು ಸಾವಿರ ವರ್ಷಗಳ ಹಿಂದೆಯೇ ಬಸವಣ್ಣನವರು ವಚನದ ಮೂಲಕ ಹೇಳಿದರು! ಅವರಲ್ಲಿ Microscope ಇರಲಿಲ್ಲ, Lab ಇರಲಿಲ್ಲ. ಆದರೆ ಅಂತಃಸಾಕ್ಷಿಯಿಂದ ಹೊರಬಂದ ಜ್ಞಾನ ಇತ್ತು.

ಜಗದೀಶ್ ಚಂದ್ರ ಬೋಸ್ ಹೇಳಿದ್ದು: “Plants react to stimuli.”
ಬಸವಣ್ಣನವರು ಹೇಳಿದ್ದು: “ ಮರ ಗಿಡು ಬಳ್ಳಿಗಳಲ್ಲೂ ಪ್ರಾಣವಿದೆ.”
ಇಬ್ಬರೂ ವಿಭಿನ್ನ ದಾರಿಯಲ್ಲಿ ನಡೆದು, ಒಂದು ಸತ್ಯವನ್ನು ತಲುಪಿದರು – ಸಸ್ಯಗಳು ಕೇವಲ ಜೀವಿಗಳ ಆಧಾರವಲ್ಲ, ಅವು ಸ್ವತಃ ಜೀವಿಗಳೇ!
ಪರಿಸರದ ಪಾಠ – ತತ್ತ್ವದ ದಾರಿ
ಇಂದು ನಾವು ವಿಜ್ಞಾನಪಾಠಗಳಲ್ಲಿ ecological balance, plant physiology, plant sentience ಓದುತ್ತೇವೆ. ಆದರೆ ಈ ಎಲ್ಲಾ ವಿಚಾರಗಳನ್ನು ಬಸವಣ್ಣನವರು ಏಕವಾಕ್ಯದಲ್ಲಿ ಹೇಳುತ್ತಾರೆ :
“ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.”
ಇದು ನಮಗೆಲ್ಲಾ ಬೋಧಿಸುವುದು ಏನೆಂದರೆ:
ನೀವು ಮಾಡುವ ಪ್ರತಿಯೊಂದು ಪರಿಸರ ಸಂಬಂಧಿತ ಕ್ರಿಯೆಗೆ ತತ್ತ್ವದ ಹೊಣೆಗಾರಿಕೆ ಇರಬೇಕು.

ಉಪಸಂಹಾರ : ಈಗ ನಾವು environment day, tree plantation day ಆಚರಿಸುತ್ತೇವೆ. ಆದರೆ ಬಸವಣ್ಣನವರು ನಿತ್ಯ ಪರಿಸರದ ಆಚರಣೆ ಮಾಡಿದವರು. ಅವರು ತತ್ವವನ್ನು ಜೀವಕ್ಕೆ ತಂದವರು, ಜೀವವನ್ನು ತತ್ವಕ್ಕೆ ಅರ್ಪಿಸಿದವರು.
ಈ ವಚನವನ್ನು ಅನುಸರಿಸುವುದು ಎಂದರೆ, ಪರಿಸರ ಸ್ನೇಹಿಯಾಗಿ ಬದುಕುವುದು. ನಾನು ಬೋಟನಿ ವಿದ್ಯಾರ್ಥಿಯಾಗಿ ಇದು ನನ್ನ ಮೊದಲ ಲೇಖನ. ನಾನು ಕಲಿತ ವಿಜ್ಞಾನವನ್ನೂ, ಬದುಕಿನಲ್ಲಿ ಅನುಭವಿಸಿದ ತತ್ತ್ವವನ್ನೂ ಒಟ್ಟುಗೂಡಿಸಿ ಈ ಲೇಖನವನ್ನು ಬರೆದಿದ್ದೇನೆ. ನಿಜಕ್ಕೂ, ಮರ, ಗಿಡ, ಬಳ್ಳಿ all are not just plants, they are expressions of life.

ರೋಹಿತ್ ಜಿರೋಬೆ

ರೋಹಿತ್ ಜಿರೋಬೆ ಬೀದರ್ ಜಿಲ್ಲೆಯವರಾಗಿದ್ದು, ಎಂ.ಎಸ್‌.ಸಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಸಾಹಿತ್ಯ, ಪರಿಸರ ಮತ್ತು ವಚನ ಪರಂಪರೆಯ ಸಂಯೋಜನೆಗೆ ಆಸಕ್ತಿ ಹೊಂದಿದ್ದಾರೆ. ವೈಜ್ಞಾನಿಕ ವಿಷಯಗಳನ್ನು ಸಹಜ ಕನ್ನಡದ ಮೂಲಕ ಸಾರ್ವಜನಿಕರಲ್ಲಿ ಹಂಚಿಕೊಳ್ಳುವುದು ಇವರ ಉದ್ದೇಶ.


ಕನ್ನಡದ ಬರಹಗಳನ್ನು ಹಂಚಿ ಹರಡಿ
4.5 2 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x