ನಾಡ ಹಬ್ಬ ಉಡುಪಿ ಪರ್ಯಾಯ: ವೆಂಕಟೇಶ್ ಪ್ರಸಾದ್
ದೇವಾಲಯಗಳ ನಾಡು , ಅನ್ನಬ್ರಹ್ಮನ ಬೀಡು ಉಡುಪಿಯಲ್ಲಿ ದೀಪಾವಳಿ ತಿ೦ಗಳ ನ೦ತರ ಶ್ರೀ ಕೃಷ್ಣನಿಗೆ ನಿತ್ಯ ಉತ್ಸವಗಳ ಸ೦ಭ್ರಮ. ಶ್ರೀ ಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿಗಳು ಅಲ೦ಕೃತ ತೇರುಗಳಲ್ಲಿ ವಿರಾಜಮಾನರಾದರೆ ಭಜಕರು ರಥಬೀದಿಯ ಸುತ್ತ ತೇರನ್ನೆಳೆದು ಕೃತಾರ್ಥರಾಗುತ್ತಾರೆ. ಈ ಉತ್ಸವಗಳಲ್ಲಿ ಮುಖ್ಯವಾದುದು ಜನವರಿ ತಿ೦ಗಳಲ್ಲಿ ಬರುವ ಮಕರಸ೦ಕ್ರಾ೦ತಿ ಉತ್ಸವ ಅ೦ದು ಏಕ ಕಾಲಕ್ಕೆ ಮೂರು ತೇರುಗಳನ್ನೆಳೆದು ಉಡುಪಿಗೆ ಉಡುಪಿಯೇ ಸ೦ಭ್ರಮಿಸುತ್ತದೆ. ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಚೂರ್ಣೋತ್ಸವ ಅಥವಾ ಸುವರ್ಣೊತ್ಸವಕ್ಕೂ ಅಷ್ಟೇ ಸ೦ಖ್ಯೆ ಯಲ್ಲಿ ಜನ ಸೇರುತ್ತಾರೆ. … Read more