ನ್ಯಾನೊ ದ್ರವ; ವಿಜ್ಞಾನಿಗಳಲ್ಲಿ ಹುಟ್ಟಿಸಿರುವ ಕೌತುಕತೆಯ ಮಾಯದ್ರವ: ಪ್ರಸನ್ನ ಗೌಡ
ನೀವು ನ್ಯಾನೊ ಕಾರ್ ಬಗ್ಗೆ ಕೇಳಿದ್ದೀರಿ, ನ್ಯಾನೊ ಸಿಮ್ ಬಗ್ಗೆ ಕೇಳಿರಬಹುದು ಆದರೆ ನ್ಯಾನೊ ದ್ರವದ ಬಗ್ಗೆ ಕೇಳಿದ್ದೀರಾ?. ಏನಿದು ನ್ಯಾನೊ ದ್ರವ (Nanofluid) ಎಂದು ನಿಮ್ಮಲ್ಲಿ ಕೌತುಕತೆ ಹುಟ್ಟುವುದು ಸಹಜ. ನಾವು ಬಳಸುವ ದಿನನಿತ್ಯದ ಹಲವಾರು ಉಪಕರಣಗಳಾದಂತಹ ರೆಫ್ರೀಜಿರೇಟರ್, ಎಸಿ/ಏರ್ಕಂಡಿಷನ್, ಲ್ಯಾಪ್ಟಾಪ್/ಕಂಪ್ಯೂಟರ್ ಹಾಗೂ ಕಾರ್ ರೇಡಿಯೇಟರ್ಗಳಲ್ಲಿ ಶಾಖವರ್ಗಾವಣೆಯಾಗುವುದನ್ನು ಗಮನಿಸಿದ್ದಿರಾ?. ಕಂಪ್ಯೂಟರ್/ಲ್ಯಾಪ್ಟಾಪ್ಗಳಲ್ಲಿ ಕೂಲಿಂಗ್ ಪ್ಯಾನ್ ಬಳಸುವುದರಿಂದ ಗಾಳಿಯಿಂದ ಶಾಖವರ್ಗಾವಣೆಯಾಗುತ್ತದೆ. ರೆಫ್ರೀಜಿರೇಟರ್ನಲ್ಲಿ ಸಿ.ಎಫ್.ಸಿ(ಕ್ಲೋರೊ ಪ್ಲೋರೊ ಕಾರ್ಬನ್) ಎಂಬ ರಾಸಯನಿಕ ದ್ರವವನ್ನು ಮತ್ತು ಕಾರ್ ರೇಡಿಯೇಟರ್ನಲ್ಲಿ ನೀರನ್ನು ಬಳಸಿ ಶಾಖವರ್ಗಾವಣೆ … Read more