ಡಾ.ದೊಡ್ಡರಂಗೇಗೌಡರ ಕಾವ್ಯ: ಸಂತೋಷ್ ಟಿ.
ಮಾನವೀಯತೆಯ ಮಹೋನ್ನತ ಭಾವಗಳ ಆಧುನಿಕ ಕಾವ್ಯ ಪುನರುತ್ಥಾನ ಪರ್ವದ ಮಹಾಮೇರು ಕವಿ ಪದ್ಮಶ್ರೀ ಡಾ ದೊಡ್ಡರಂಗೇಗೌಡರು ಎಂದು ಬಹು ಹೆಮ್ಮೆಯಿಂದ ಹೇಳಬಹುದು. ಕನ್ನಡ ಕಾವ್ಯ ನದಿಯು ಹರಿದು ಹರಿದು ಸವಕಲಾಗಿ ಹಳೆಯದಾದರೂ ಉಕ್ಕಿ ಹರಿಯುವ ನೂತನ ತವನಿಧಿಯಂತೆ ತನ್ನ ನಿರಂತರ ಚಲನಶೀಲತೆ ಮತ್ತು ಮತ್ತು ಅದು ತೆಗೆದುಕೊಂಡು ತಿರುವು ಪಾತ್ರ ಆಕಾರ ಗುಣ ಸಂಪನ್ಮೂಲಗಳಲ್ಲಿ ಭಾಷೆಯ ಸ್ವರೂಪ ಬದಲಾಗಿದೆ. ಛಂದಸ್ಸಿನಲ್ಲಿ ಸುಧಾರಣೆಯಾಗಿದೆ. ಜನಪದ ಸಾಹಿತ್ಯದ ಮೂಲ ಧಾತುಗಳಿಂದ ಕೂಡಿ ಇಲ್ಲಿಯವರಗಿನ ಅದರ ಸ್ಫೂರ್ತಿಯ ಚಿಲುಮೆ ಎಂದಿಗೂ ಬತ್ತಿಲ್ಲ. … Read more