ಪಂಜು ಹೋಳಿ ಕಾವ್ಯ ಧಾರೆ
ಹಿಗ್ಗಿನ ಹೋಳಿ ಶೋಭಿಸುತಿದ್ದವು ಮೊಗಗಳು ಬಣ್ಣಗಳ ಸಮ್ಮಿಲನದಿಂದ, ಬೆಳಗುತಿದ್ದವು ಕಣ್ಣುಗಳು ಅಂತರಾಳದಲ್ಲಿರುವ ಆನಂದದಿಂದ, ಥಳಿಥಳಿಸುತಿದ್ದವು ತೊಯ್ದ ಉಡುಪುಗಳು ರಂಗುರಂಗಿನ ಲೇಪನದಿಂದ. ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ, ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ, ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ, ವೃದ್ಧರಿಗೆ ಸಂಕೋಚವಿರಲಿಲ್ಲ, ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ, ಎರಚುತ್ತಾ ರಂಗುರಂಗಿನ ಓಕುಳಿಯ. ಭೇದವಿರಲಿಲ್ಲ ಜಾತಿ, ಮತ, ವರ್ಗಗಳ, ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ, ಎಲ್ಲರೂ ಭಾಗ್ಯವಂತರು ಅಲ್ಲಿ, ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ, ಹಂಚುತಿದ್ದರು ಸಿಹಿ ಸಂತೋಷಗಳ, ಹಚ್ಚುತ್ತಾ ರಂಗುರಂಗಿನ ಬಣ್ಣಗಳ. ಉರಿಸಲಾಗಿತ್ತು ಅಗ್ನಿ ಈಗಾಗಲೇ, ಚಂದಿರನ … Read more