ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ … Read more

‘ಮಾತೆಂಬುದು ಜ್ಯೋತಿರ್ಲಿಂಗ’: ವಸುಂಧರಾ ಕದಲೂರು.

ನನ್ನ ಸ್ನೇಹಿತೆಯ ಸ್ನೇಹಿತೆ ಆಕೆ. ನನಗೂ ಒಂದೆರಡು ಬಾರಿಯ ಒಡನಾಟದಿಂದ ಪರಿಚಿತಳಾಗಿದ್ದಳು. ಕೆಲವು ದಿನಗಳ ಹಿಂದೆ ಒಂದು ಸಂಜೆ ನಾನು ಆಫೀಸು ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ‘ಕಾಫಿ ಕುಡಿಯೋಣ ಎಲ್ಲಾದರೂ ಸಿಗಲು ಸಾಧ್ಯವಾ?’ ಎಂಬ ಮೆಸೇಜು ಮಾಡಿದ್ದಳು. ನಾನು ವರ್ಷಾರಂಭದಿಂದಲೇ ಚಹಾ- ಕಾಫಿ ಸೇವನೆ ಬಿಟ್ಟಿರುವುದಾಗಿ ಆಕೆಗೆ ಗೊತ್ತಿತ್ತು. ಆದರೂ ಬೇರೆ ಏನನ್ನೋ ಫೋನಿನಲ್ಲಿ ಹೇಳಿಕೊಳ್ಳಲಾರದ್ದಕ್ಕೆ ಕಾಫಿಯ ನೆವ ತೆಗೆದು ಮಾತನಾಡಲು ಕರೆದದ್ದಿರಬಹುದೆ? ಎಂಬುದು ನನಗೆ ಅರ್ಥವಾಗಿ, ’ಸರಿ, ಬರುವೆ. ಆದರೆ ‘ಕಾಫಿ ಡೇ‘ಗೆ ಹೋಗೋಣ. … Read more

ನಮ್ಮ ಜಿಲ್ಲೆಯ ಗಜಲ್ ಕಾರರು…(ಕೊನೆಯ ಭಾಗ): ವೇಣು ಜಾಲಿಬೆಂಚಿ

ಮತ್ತೋರ್ವ ಭರವಸೆಯ ಗಜಲ್ ಬರಹಗಾರರು ಶ್ರೀ ಪ್ರಕಾಶ ಬುದ್ದಿನ್ನಿಯವರು… ಅವರು ಬರೆದ ಗಜಲ್ ನ ಸಾಲು ಹೀಗಿದೆ… ” ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ “ ಎಂತಹ ಮನೋಜ್ಞವಾದ ಸಾಲು… ರಾತ್ರಿ ಎಂಬುದೇ ಪ್ರೀತಿಯ ಸಲ್ಲಾಪಕ್ಕೆ ಕರೆಯುವ ವೇದಿಕೆ. . . ಅದರಲ್ಲೂ ದೀಪ ಹಚ್ಚಿಟ್ಟುಕೊಂಡು ಪ್ರಿಯತಮೆಯ ಬರುವಿಕೆಗಾಗಿ ಕಾಯುತ್ತಿರುವ ಪ್ರಿಯಕರ. ಆದರೆ ಎಷ್ಟು ಕಾದರೂ ಅವಳು ಬಂದಳಾ? ನಿರಾಶೆಯನ್ನೇ ಉಳಿಸಿತೆಂದು ಮುಂದಿನ … Read more

ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.

ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. … Read more

ಬದಲಾವಣೆಯೊಂದಿಗೆ ಬದುಕು: ವೇದಾವತಿ. ಹೆಚ್. ಎಸ್.

ಅದೊಂದು ದಿನ ರಾಶಿ ಹಳೆಯ ಪುಸ್ತಕಗಳ ನಡುವೆ ಒಂದು ನೆನೆಪಿನ ಬುತ್ತಿಯಂತಿದ್ದ ಡೈರಿಯೊಂದು ನನ್ನ ಕೈಗೆ ಸಿಕ್ಕಿತ್ತು. ಆ ಡೈರಿಯು ೨೫ಸಂವಸ್ಸರವನ್ನು ಕಂಡು ಸಿಲ್ವರ್ದ ಜ್ಯೂಬಿಲಿಯ ಗಡಿಯನ್ನು ದಾಟಿತ್ತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಆ ಪುಟಗಳಲ್ಲಿ ನನ್ನ ಸ್ನೇಹಿತೆಯರ ಸುಂದರವಾದ ಒಂದೊಂದು ರೀತಿಯಲ್ಲಿರುವ ಹಸ್ತಾಕ್ಷರಗಳಿದ್ದವು. ಅದರಲ್ಲಿರುವ ಬರಹಗಳನ್ನು ಓದುತ್ತಾ ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಡೈರಿಯ ಒಂದೊಂದು ಪುಟಗಳಲ್ಲೂ ವೈವಿಧ್ಯಮಯ ರೀತಿಯಲ್ಲಿ ನನ್ನ ಗುಣಗಾನವನ್ನು ಹೊಗಳಿ ಬರೆದ ಬರಹಗಳನ್ನು ನೋಡಿ ಒಮ್ಮೆ ಕಣ್ಣು ಮಂಜಾದರೆ, ಇನ್ನೊಮ್ಮೆ … Read more

ದಂತ ಪುರಾಣ: ಸಂಗೀತ ರವಿರಾಜ್

ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ … Read more

ಕಷ್ಟವೇ ದೇವರು………?: ದೀಪಾ ಜಿ.ಎಸ್

ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ … Read more

ಬೆರಗೊಂದು ಕೊರಗಾಗಿ ಕಾಡಿದಾಗ…. : ಸುಂದರಿ ಡಿ.

ತನ್ನ ಪಾಡಿಗೆ ತಾನು ಹಾಡಿಕೊಂಡು, ಹನಿಗಳ ಚುಮುಕಿಸಿ, ಬಳುಕುತ ಬಿಸಿಲ ನೇರ ಕೋಲುಗಳ ಸ್ಪರ್ಶದಿಂದಲೇ ಮತ್ತಷ್ಟು ಹೊಳಪಿನಿಂದ ತನ್ನಾಳದ ಮರಳನೂ ಚಿನ್ನದಂತೆ ಹೊಳೆಯಿಸುತ, ಜುಳು-ಜುಳು ನಾದದೊಂದಿಗೇ ಹರಿಯುತಿದ್ದ ನೀರ ಬದಿಯಲಿ ತನ್ನ ಸೊಬಗತೋರುತ, ನೀರ ಸೊಬಗನೂ ಹೆಚ್ಚಿಸಲೆಂಬಂತೆ ಅದರ ಸತ್ವವನೇ ಹೀರಿ ನಿಜವಾದ ಹಸಿರೆಂದರೆ ಇದೇ ಎಂಬಂತೆ ಬೆಳೆದು ನಿಂತಿದ್ದ ಗಿಡಗೆಂಟೆಗಳು, ಅವುಗಳಲ್ಲಿ ಬೆಟ್ಟದ ಹೂವಿನಂತೆ ಇತರರನು ತಮ್ಮತ್ತ ಸೆಳೆವ ಯಾವ ಗೋಜಿಗೂ ಹೋಗದೆ ಬೇಲಿಯ ಹೂವೆಂದೇ ಕರೆಸಿಕೊಂಡರೂ ಸಹಜ ಸೌಂದರ್ಯದ ಕಾರಣವೊಂದರಿಂದಲೇ ತಮ್ಮತ್ತ ತಿರುಗಿ ನೋಡುವಂತೆ … Read more

ಮಾಸಗಳ ವೈಶಿಷ್ಟ್ಯ: ಗೀತಾ ಜಿ ಹೆಗಡೆ ಕಲ್ಮನೆ.

ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರಿವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಹರೆಯದ ವಸಂತ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ.  ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು.  ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸ್ತಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ.  ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ.  ಬಣ್ಣ ಬಣ್ಣದ ಓಕುಳಿಯ ಸಿಂಪಡಿಕೆ.  ಹರೆಯದ ಕನಸುಗಳು ನೂರೆಂಟು.  ಅದು ಮಾತಿನಲ್ಲಿ ಅಥವಾ … Read more

ಹೆಣ್ಣೇ ನಿನ್ನ ಅಂತರಾಳದಲ್ಲಿ ನಿತ್ಯವೂ ಸತ್ಯದ ಹುಡುಕಾಟ…..!?: ದೀಪಾ ಜಿ.ಎಸ್.‌

 ಈಗಿನ ಸ್ವತಂತ್ರದ ಬದುಕಿನಲ್ಲಿ ಒಂದು ಹೆಣ್ಣನ್ನ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಅವಳಿಗೆ ಕಾನೂನಿನ ಚೌಕಟ್ಟನ್ನ ನಿರ್ಮಿಸಿ ಅವಳ ಜೀವನವನ್ನ ಕತ್ತಲಿನ ಕೋಣೆಗೆ ತಳ್ಳಿ. ಅವಳಿಗೆ ಜೀವನ ಅಂದರೆ ಏನು ಅನ್ನೋದು ಅವಳಿಗೆ ತಿಳಿಯದ ಹಾಗೆ ಅವಳ ಭಾವನೆಗಳನ್ನ ಹೊಸಕಿ ಹಾಕಿ ಸಂಸಾರದ ಸಾಗರದಲ್ಲಿ ಜವಾಬ್ದಾರಿ ಅನ್ನುವ ಗುಂಡಿಗೆ ತಳ್ಳಿ, ಅಲ್ಲೂ ಅವಳನ್ನ ಎಲ್ಲಾ ತರದಲ್ಲು ಮೂರ್ಖಳನ್ನಾಗಿ ಮಾಡಿ ಅವಳ ಕನಸುಗಳನ್ನ ನುಚ್ಚು ನೂರು ಮಾಡಿ ವ್ಯಂಗ್ಯ ಮಾಡುವ ಈ ಸಮಾಜದಲ್ಲಿ ದೈರ್ಯದಿಂದ ಬದುಕಿ ಬಾಳಿ ತೋರಿಸುವಂತ … Read more

ಪ್ರಯಾಗದಲ್ಲೊಂದು ಸಂಜೆ: ಕೃಷ್ಣವೇಣಿ ಕಿದೂರ್.

ಪ್ರವಾಸದ ನಿಮಿತ್ತ ಅಲಹಾಬಾದಿಗೆ ಬಂದಿದ್ದೆವು. ಇಲ್ಲಿನ ಸುಪ್ರಸಿದ್ಧ ಪ್ರಯಾಗಕ್ಕೆ ಭೇಟಿ ಕೊಟ್ಟಾಗ ನದಿಯಲ್ಲಿ ತ್ರಿವೇಣಿ ಸಂಗಮ , ಪ್ರಯಾಗ ನೋಡಲು ಉತ್ಸುಕರಾಗಿದ್ದೆವು. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದ ಪವಿತ್ರ ಸ್ಥಳ ಅದು. ಸಂಜೆಯ ಆರೂವರೆಯ ಸುಮಾರಿಗೆ ತಲುಪಿದೆವು. ಅಲ್ಲಿದ್ದದ್ದು ಒಂದೋ, ಎರಡೋ ದೋಣಿಗಳು. ಅವರಲ್ಲಿ ವಿಚಾರಿಸಿದಾಗ ಒಬ್ಬರು ಬರಲು ಒಪ್ಪಿದರು. ನದೀ ದಡ ನಿರ್ಜನ. ನಾವಿದ್ದ ದೋಣಿ ನೀರಿನಲ್ಲಿ ಸಾಗುವಾಗ ಬಿಳಿಯ ಸೈಬೀರಿಯನ್ ಹಕ್ಕಿಗಳು ಜೊತೆ ಜೊತೆಗೆ ಬರತೊಡಗಿದವು. ಅವಕ್ಕೆ ಬಿಸ್ಕತ್ತು, ಹಣ್ಣು ಕೊಡುವ ಅಭ್ಯಾಸವಾಗಿತ್ತು … Read more

“ನಿನ್ನೆ ನಾಳೆಯ ನಡುವೆ” ಪಾಂಡುರಂಗ ಯಲಿಗಾರ: ವೈ. ಬಿ. ಕಡಕೋಳ

2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಮುನವಳ್ಳಿಯ ನಾಟಕವೊಂದು ಮೈಸೂರು ದಸರಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಬಗ್ಗೆ ಮಾಹಿತಿ ಬೇಕಾಗಿತ್ತು. ಗೆಳೆಯ ಜಯದೇವ ಅಷ್ಠಗಿಮಠ ಈ ವಿಚಾರ ಪಾಂಡುರಂಗ ಯಲಿಗಾರ ಅವರನ್ನು ಕೇಳಬೇಕು. ಅವರು ಬೆಳಗಾವಿಯಲ್ಲಿ ಇರುವರು. ರವಿವಾರ ಮುನವಳ್ಳಿಗೆ ಬರುತ್ತಾರೆ ನೀನು ಅವರನ್ನು ಭೇಟಿಯಾಗಬೇಕು. ನಾನು ಹೇಳಿ … Read more

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ … Read more

ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ. ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; … Read more

ಈ ಪಟ್ಟಣಗಳಿಗೆ ಏನಾಗಿದೆ?: ಗೌರಿ ಚಂದ್ರಕೇಸರಿ.

ಬಾಲ್ಯದಲ್ಲಿ ನಾವು ಕಂಡುಂಡ ಪಟ್ಟಣಗಳು ಈಗಿನಂತಿರಲಿಲ್ಲ. ಥೇಟ್ ಆದಿ ಕವಿ ಪಂಪ ಬನವಾಸಿಯನ್ನು ಬಣ್ಣಸಿದ ರೀತಿಯಲ್ಲಿ ಕಾಣಿಸುತ್ತಿದ್ದವು. ಹಸಿರುಡುಗೆ ತೊಟ್ಟ ಪ್ರಕೃತಿ, ಕೀ ಕೀ ಎನ್ನುವ ಹಕ್ಕಿಗಳ ಕಲರವದೊಂದಿಗೆ ತೆರೆದುಕೊಳ್ಳುತ್ತಿದ್ದ ಬೆಳಗು, ಮನೆ ಮನೆಯ ಮುಂದೆಯೂ ಬೃಂದಾವನ, ಅಲ್ಲಿ ಚುಕ್ಕೆ ಇಟ್ಟು ರಂಗೋಲಿ ಎಳೆಯುತ್ತಿರುವ ಹೆಂಗಳೆಯರು, ರೇಡಿಯೋದಿಂದ ಹೊರ ಹೊಮ್ಮುತ್ತಿದ್ದ “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು, ಕಲಕಲನೆ ಹರಿಯುತಿಹ ನೀರು ನಮ್ಮದು” ಎಂಬಂತಹ ಹಾಡುಗಳು, ಬೀದಿ ನಲ್ಲಿಗಳಲ್ಲಿ ನೀರು ಹಿಡಿಯುತ್ತ ನಿಂತ ಗಂಡಸರು, ಹೆಂಗಸರು, … Read more

ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ … Read more

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ … Read more

ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ. ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ … Read more

ಸೂಲಂಗಿಯ ಕತೆ-ವ್ಯಥೆ: ಸುಂದರಿ. ಡಿ

ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ … Read more