ಎರಡು ಕನಸುಗಳು: ಚೈತ್ರಾ ವಿ.ಮಾಲವಿ

ಕನಸು-ಒಂದು (೧೫-೧೧-೨೦೧೭)ಶುಕ್ರವಾರ      ಅವತ್ತು ಮುಂಜಾನೆ ಚಹಾ ಮಾಡಲು ಅಡುಗೆ ಮನೆಗೆ ಹೋದ ಗಂಗಾ, ಗ್ಯಾಸ್ ಸ್ಟವ್ ಹಚ್ಚಲು ಪರಿತಪಿಸುತ್ತಿದ್ದಳು, ಮೂರು, ನಾಲ್ಕು ಬಾರಿ ಲೈಟರಿನಿಂದ ಟಕ್, ಟಕ್ ಅಂತ ಅಂದರೂ ಸ್ಟವ್ ಹತ್ತಲಿಲ್ಲ. ಟಕ್ ಟಕ್ ಸದ್ದು ಕೇಳಿದ ಕೂಡಲೇ, ಪಡಸಾಲೆಯಲ್ಲಿ ಟೀವಿ ನೋಡುತ್ತಿದ್ದ ಅವಳ ಮಾವ ಕಿರಣ್ ಅಡುಗೆ ಮನೆಗೆ ಹೋದ. ಕಿರಣ್ ನ ದೊಡ್ಡಕ್ಕನ ಮಗಳು ಈ ಗಂಗಾ.  ಅವಳನ್ನು ನೋಡಿ, “ಹೇ..ಮಬ್ಬು, ಈ ಕಡೆ ಬಾ..ಇಲ್ಲಿ. ಇಷ್ಟು.. ಗ್ಯಾಸ್ ಹಚ್ಚೋಕೆ … Read more

ಎಲ್ಲಿ ಹೋದವು ಆ ದಿನಗಳು?: ಗೌರಿ. ಚಂದ್ರಕೇಸರಿ

ಗುರುವಿಗೊಬ್ಬ ಯೋಗ್ಯ ಶಿಷ್ಯ, ಶಿಷ್ಯನಿಗೊಬ್ಬ ಜ್ಞಾನಿಯಾದ ಗುರು ಇವೆರಡೂ ಲಭ್ಯವಾಗುವುದು ಅವರಿಬ್ಬರ ಅದೃಷ್ಟವೆಂದೇ ಹೇಳಬೇಕು. ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ಗುರು ನಿರ್ಧಿಷ್ಟ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಂಡಿರಬೇಕಾಗುತ್ತದೆ. ಸತತ ಪರಿಶ್ರಮಿಯಾಗಿರಬೇಕಾಗುತ್ತದೆ. ತಾವು ಬೋಧಿಸುವ ವಿಷಯದ ಕುರಿತು ತುಡಿತವನ್ನು ಹೊಂದಿರಬೇಕಾಗುತ್ತದೆ. ಅಂದಾಗಲೇ ಅದನ್ನು ಮತ್ತೊಬ್ಬರೊಂದಿಗೆ ಪ್ರಸ್ತುತಪಡಿಸಬಹುದು ಹಾಗೂ ಚರ್ಚಿಸಬಹುದು.‘ಗುರು’ ಎಂಬ ಶಬ್ದವೇ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರ್ಥವನ್ನು ಹೊಂದಿದೆ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದಿದ ನಾನು ಪ್ರಸಿದ್ಧ ಸಾಹಿತಿಗಳು, ವಿಮರ್ಶಕರು, ವಾಗ್ಮಿಗಳು, ಭಾಷಾ ಪಾರಂಗತರನ್ನು ಗುರುಗಳನ್ನಾಗಿ ಪಡೆದದ್ದು ನನ್ನ … Read more

ದಾಸೋಹವೆಂಬುದು ಕಾಯಕವೆಂಬ ನಾಣ್ಯದ ಇನ್ನೊಂದು ಮುಖ: ಜಯಶ್ರೀ ಭ. ಭಂಡಾರಿ.

ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ. ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು. ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ. ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು. ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ. . . . “. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ. ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ. … Read more

ಶಿಕ್ಷಣವು ಕನಸಿನ ಕುದುರೆಯಾಗದಿರಲಿ!: ಆರ್.ಬಿ.ಗುರುಬಸವರಾಜ ಹೊಳಗುಂದಿ     

ಜಾಗತೀಕರಣದ ಪರಿಣಾಮವಾಗಿ ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಬೆಳೆಯುತ್ತಿದೆ. ಆರ್ಥಿಕತೆ, ನವೀನ ತಂತ್ರಜ್ಞಾನ ಹಾಗೂ ಉತ್ತಮ ಮೂಲಭೂತ ವ್ಯವಸ್ಥೆಗಳ ಅಭಿವೃದ್ದಿಗಳು ದೇಶದ ಹೆಮ್ಮೆಯಾಗಿವೆ. ದೇಶವು ಎಲ್ಲಾ ಕ್ಷೇತ್ರಗಳ ಆಧುನಿಕತೆಯಲ್ಲಿ ಸಕ್ರಿಯವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಆಮೆ ವೇಗದ ಪ್ರಗತಿ ಆಗುತ್ತಿರುವುದು ದೇಶದ ಏಳಿಗೆಗೆ ಕಂಟಕವಾಗಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಸ್ಥಾನ ಇದ್ದರೂ ಪ್ರಗತಿಗೆ ಬೇಕಾದಷ್ಟು ಮಾನವ ಸಂಪನ್ಮೂಲವನ್ನು ಸೃಷ್ಠಿಸುವಲ್ಲಿ ದೇಶದ ಶಿಕ್ಷಣ ವಿಫಲವಾಗಿದೆ. ಒಂದೆಡೆ ಪ್ರತಿಭೆಗಳು ವಿದೇಶಗಳಿಗೆ ಪಲಾಯನವಾಗುತ್ತಿವೆ. ಮತ್ತೊಂದೆಡೆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು … Read more

ತಂದೆ ತಾಯಿ ದೇವರ ಮುಂದೆ, ಮತ್ತಾವ ದೇವರುಂಟು !: ರವಿ ರಾ ಕಂಗಳ

ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುತ್ತಿರುವ ಶಿಕ್ಷಣವು ವಿಶಾಲವಾದ ಜಗತ್ತನ್ನು ಸಂಕುಚಿಸುತ್ತ ಸಾಗಿದೆ. ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವ ಏನೆಲ್ಲ ಸಾಧಿಸಿದ್ದಾನೆ. ಅಂಗೈಯೊಳಗೆ ವಿಶ್ವವನ್ನು ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಸ್ವಾರ್ಥತೆಯಿಂದ ಬದುಕಿ ತನ್ನ ಕುಟುಂಬವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಸಹಾಯಕನಾಗಿದ್ದಾನೆ. ಕುಟುಂಬದ ಆಧಾರ ಸ್ತಂಭಗಳಂತಿರುವ ತಂದೆ ತಾಯಿಯರನ್ನು ಹೊರಹಾಕಿ ಇಲ್ಲವೇ ತಾನೆ ಹೊರಹೋಗಿ ಬದುಕುತ್ತಿದ್ದಾನೆ. ಇದರ ಮಧ್ಯೆ ತಂದೆ ತಾಯಿಯರನ್ನು ಶ್ರವಣಕುಮಾರನ ಪಿತೃಭಕ್ತಿಯಂತೆ ಪ್ರೀತಿ ವಾತ್ಸಲ್ಯದಿಂದ ಸಲುಹುತ್ತಿರುವವರು ಕಾಣಸಿಗುತ್ತಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಷ್ಟಕ್ಕೂ ತಂದೆ ತಾಯಿಯರನ್ನು ಬಿಟ್ಟು ಬದುಕುವ ಧಾವಂತ ಹೇಗೆ ಬರುತ್ತದೆ? … Read more

ಮುತ್ತಿನ(0ಥ)ಸರ: ಎಂ.ಎಚ್.ಮೊಕಾಶಿ

ನನ್ನ ಮಿತ್ರರು, ಆತ್ಮೀಯರು ನನ್ನ ಲೇಖನಗಳನ್ನು ಓದಿ ಯಾವಾಗಲೂ ಬೇರೆ ಬೇರೆ ವಿಷಯದ ಬಗ್ಗೆ ಬರಿತಾ ಇದೀರಲ್ಲ ಯಾಕೆ ನೀವು ನಿಮ್ಮ ಜೀವನದಲ್ಲಿ ನಡೆದ ಯಾವುದಾದರೊಂದು ವಿಶೇಷ ಘಟನೆಯ ಬಗ್ಗೆ ಬರೆಯಬಾರದೇಕೆ? ಎಂದಾಗ ನಾನು ಒಂದು ಘಟನೆಯನ್ನು ಇಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನಷ್ಟೆ. ಗಂಡುಮೆಟ್ಟಿದ ನಾಡು ಉತ್ತರ ಕರ್ನಾಟಕ. ಇಲ್ಲಿ ಪಂಜಾಬ (ಪಂಚ ನದಿಗಳ ಬೀಡು) ಎಂದೇ ಖ್ಯಾತಿಯಾದ ಬಿಜಾಪೂರ (ಇಂದು ವಿಜಯಪುರ ಆಗಿದೆ) ಜಿಲ್ಲೆಯ ಒಂದು ಗ್ರಾಮದಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಹಲವು ವರ್ಷಗಳ ಹಿಂದೆ … Read more

“ಒಂದು ಸಾಂತ್ವನಪರ ನುಡಿ ಚಳಿಗಾಲದ ಮೂರು ತಿಂಗಳನ್ನು ಬೆಚ್ಚಗಿಡಬಲ್ಲದು”: ಜಯಶ್ರೀ ಭ.ಭಂಡಾರಿ.

ಇಂದಿನ ಆಧುನಿಕ ಜೀವನದ ಧಾವಂತದ ಬದುಕಿನಲ್ಲಿ ಮಾನವೀಯ ಹಾಗೂ ಸಂವೇದನಾಶೀಲ ಗುಣಗಳ ಕೊರತೆ ಎದ್ದುಕಾಣುತ್ತಿದೆ.ಪರಸ್ಪರ ಕಾಲೇಳದಾಟದಲ್ಲಿ ಮೌಲ್ಯಯುತ ಜೀವನ ಕಾಣದಂತಾಗಿದೆ.ನಮ್ಮ ಪೂರ್ವಜರ ಬದುಕನ್ನು ಕಂಡಾಗ ಮನಸ್ಸು ಹಳಹಳಿಸುತ್ತದೆ.ಇಂದು ದಯಾಪರ ಜೀವನ ಎಂದಿಗಿಂತ ತುಂಬ ಆವಶ್ಯಕವೆನಿಸುತ್ತಿದೆ. ಮನುಷ್ಯ ಮನುಷ್ಯರ ಮಧ್ಯ ಪರಸ್ಪರ ಕೊಡಮಾಡಲು ಸಾಧ್ಯವಿರುವ ಉಡುಗೊರೆಗಳೆಲ್ಲ ಮೌಲ್ಯಯುತವಾದುದು ಎಂದರೆ ದಯೆ. ಅದು ಕಾರುಣ್ಯ,ಸಹಾನುಭೂತಿ,ಅನುಕಂಪ ಎಂಬ ಇತರ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.ಮನುಷ್ಯ ತೋರ್ಪಡಿಸುವ ದಯೆ ಹುಟ್ಟುಗುಣವಾಗಿದ್ದರೂ ಅದು ಆತನಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಅದನ್ನು ಮಾದರಿಯಾದ ಗುಣವಿಶೇಷಗಳಿಂದ ಬೆಳೆಸಬೇಕಾಗುತ್ತದೆ. ಮನುಷ್ಯ ಸ್ವತಂತ್ರ ಜೀವನವನ್ನು … Read more

ಹುಚ್ಚು ಖೋಡಿ ವಯಸ್ಸು: -ಗೌರಿ.ಚಂದ್ರಕೇಸರಿ, ಶಿವಮೊಗ್ಗ.

  ವಿದ್ಯಾರ್ಥಿ ಜೀವನವೇ ಹಾಗೆ. ನಿತ್ಯ ಸಂತೋಷ, ಸಂಭ್ರಮ, ತಮಾಷೆಗಳಿಂದ ಕೂಡಿರುತ್ತದೆ. ಒಬ್ಬರಿನ್ನೊಬ್ಬರ ಕಾಲೆಳೆಯುವುದು, ಚುಡಾಯಿಸುವುದು, ಮೂರ್ಖರನ್ನಾಗಿಸುವುದು ನಡೆದೇ ಇರುತ್ತದೆ. ಆಗ ತಾನೆ ಹೈಸ್ಕೂಲನ್ನು ಹಿಂದೆ ಬಿಟ್ಟು ಕಾಲೇಜಿಗೆ ಅಡಿ ಇಡುವ ವಿದ್ಯಾರ್ಥಿಗಳಂತೂ ಅಪ್ಪಟ ಮದ್ಯ ಹೀರಿದ ಮಂಗಗಳಂತಾಡುತ್ತವೆ. ನಾವು ಏನೇ ಮಾಡಿದರೂ ಅದು ಕೇವಲ ತಮಾಷೆಗಾಗಿ ಎಂದು ಇವರು ತಮ್ಮಷ್ಟಕ್ಕೆ ತಾವೇ ದೃಢೀಕರಿಸಿಕೊಂಡು ಬಿಟ್ಟಿರುತ್ತಾರೆ. ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು ಎಂಬ ಮಾತನ್ನು ಅಕ್ಷರಷ: ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಾರೆ. ಮಾಡುವ ತಮಾಷೆಗಳು … Read more

ಎಲ್ಲಿ ಹೋದವು ಆ ದಿನಗಳು…!: ಅಕ್ಷಯಕುಮಾರ ಜೋಶಿ

ಹಿಂದಿನ ಕಾಲದಲ್ಲಿ ಸಂಬಂಧಗಳು, ಆತ್ಮೀಯರ ಸ್ನೇಹಪರ ಬಾಂದವ್ಯಗಳು ಗಟ್ಟಿಯಾಗಿರುತ್ತಿದ್ದವು. ಇಂದಿನ ಆಧುನಿಕ ದಿನಮಾನಗಳಲ್ಲಿ ಆರೋಗ್ಯಕರ, ಪ್ರೀತಿಯ ಸಂಬಂಧಗಳು ನಶಿಸುತ್ತ ಅನಾರೋಗ್ಯಕರ ಚಿಂತನೆಗಳತ್ತ ಸಾಗುತ್ತಿರುವುದು ವಿಷಾಧನೀಯ, ದೇಶಸುತ್ತು – ಕೋಶಓದು ಎಂಬ ವಾಣಿಯೂ ಪೂರ್ವಿಕರು ಹೇಳಿದವಾಣಿ ನೂರಕ್ಕೆ-ನೂರು ಸತ್ಯ ಹಿಂದಿನ ಕಾಲದಲ್ಲಿ ಪ್ರೇಕ್ಷಣೀಯ ಸ್ಥಳಗಳ ಚಿತ್ರಣವನ್ನು ಕೆಲವರು ಬಲ್ಲವರಿದ ತಿಳಿದು ಇನ್ನು ಕೆಲವರು ಸ್ವತಃ ಅಲ್ಲಿಗೆ ಭೇಟಿನೀಡಿ ಅಲ್ಲಿಯ ಶಿಲ್ಪಕಲೆಗಳ ಸೌಂದರ್ಯದ ಸೊಬಗನ್ನು ಸವಿಯುವ ದಿನಗಳಿದ್ದವು. ಆಧುನಿಕತೆ, ತಂತ್ರಜ್ಞಾನ ಬೆಳೆಯುತ್ತ ಸಾಗಿದಂತೆ ಅಂಗೈಯಲ್ಲೇ ಆಗಸ ವೆಂಬಂತೆ ಮೋಬೈಲ್‍ನಲ್ಲಿಯೇ ಸ್ಥಳಗಳ … Read more

ಅವಕಾಶಗಳು ಬಾಗಿಲು ಬಡಿದಾಗ: ಎಸ್, ಎಸ್, ಭರಮನಾಯ್ಕರ

ಯಾರು ಬದುಕೆಂಬ ಫಲವತ್ತಾದ ನೆಲದಲ್ಲಿ, ಸಾಮರ್ಥ್ಯ ಎಂಬ ಪೈರನ್ನು ನೆಟ್ಟು, ಅದನ್ನು ಆಸಕ್ತಿಯೆಂಬ ಗೊಬ್ಬರ ಮತ್ತು ಶ್ರದ್ಧೆ ಎಂಬ ನೀರನ್ನು ಹಾಕಿ ಬೆಳೆಸುತ್ತಾರೋ ಅವರು ಸಂಪತ್ತು, ಸೌಭಾಗ್ಯ, ಸುಖ, ಸಂತೋಷ ಎಂಬ ಇಳುವರಿಗಳನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದಾಗಿರುತ್ತದೆ. ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಹುದುಗಿರುವ ಶಕ್ತಿ ಸಾಮಥ್ರ್ಯಗಳನ್ನು ಗೊತ್ತು ಮಾಡಿಕೊಂಡು ಭಾಷಾಕಲಿಕೆ ಹಾಗೂ ಅಭಿವ್ಯಕ್ತಿಯಲ್ಲಿ ಅಗತ್ಯವಾದ ಶಿಕ್ಷಣ ತರಬೇತಿ ಹಾಗೂ ಸತತ ಅಭ್ಯಾಸದ ಮೂಲಕ ತಾನು ಅದನ್ನು ಗರಿಷ್ಟ ಪ್ರಮಾಣದಲ್ಲಿ ಅಭಿವ್ಯಕ್ತಿಪಡಿಸಲು ಸಮರ್ಥನಾಗಿ/ಳಾಗಿ ಸಾಧನೆ ಮಾಡಬೇಕು. ತನ್ನಲ್ಲಿಯೇ ಅಗಾಧ … Read more

ಬಿಟ್ಟೇನೆಂದರೂ ಬಿಡದೀ ಮಾಯೆ: ಗೌರಿ. ಚಂದ್ರಕೇಸರಿ, ಶಿವಮೊಗ್ಗ.

  ಮೂರ್ಖ ಪೆಟ್ಟಿಗೆ, ಮಾಯಾ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ದೂರದರ್ಶನ ಎಂಥವರ ಮೇಲೂ ಸಮ್ಮೋಹನವನ್ನು ಮಾಡಿ ಬಿಡುತ್ತದೆ. ಇದು ರೂಪದಲ್ಲಿ ಹೊಸ ಹೊಸ ಬಿನ್ನಾಣಗಳನ್ನು ಬದಲಿಸುತ್ತ ಅಬಾಲವೃದ್ಧರಾದಿಯಾಗಿ ತನ್ನತ್ತ ಸೆಳೆದುಕೊಂಡು ಬಿಟ್ಟಿದೆ. ಮೊದ ಮೊದಲು ಕಪ್ಪು-ಬಿಳುಪು ಸುಂದರಿಯಾಗಿ ಅವತರಿಸಿ ಈಗ ರಂಗು ರಂಗಿನ ಮಿಂಚುಳ್ಳಿಯಂತೆ ಬಣ್ಣಮಯವಾಗಿದೆ. ಹಿಂದೆ ಧಡೂತಿ ದೇಹವನ್ನು ಹೊಂದಿದ ಈ ಮಾಯೆ ಇತ್ತೀಚೆಗೆ ಸ್ಲಿಮ್ ಆಗಿ, ಗೋಡೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಸಾವಿಲ್ಲದ ಮನೆಯ ಸಾಸುವೆ ದಕ್ಕುವುದು ಎಷ್ಟು ದುಸ್ತರವೋ ಟಿ.ವಿ.ಇಲ್ಲದ ಮನೆ ಸಿಕ್ಕುವುದೂ ಅಷ್ಟೇ ದುಸ್ತರ. … Read more

ಹುದುಗಲಾರದ ದುಃಖ: ಜಯಶ್ರೀ.ಜೆ.ಅಬ್ಬಿಗೇರಿ

ಸಾಯಂಕಾಲ ಆಯಿತೆಂದರೆ ಗಾರ್ಡನ್ನಿನಲ್ಲಿ ಮಕ್ಕಳ ಚೆಲ್ಲಾಟದ ಸದ್ದು, ಜೋಕಾಲಿ ಜೀಕುವ ಸಪ್ಪಳ, ಮಹಿಳೆಯರ ಮಾತಿನ ಕಾವು ಏರುತ್ತಲೇ ಇರುತ್ತದೆ. ಆದರೆ ಅಂದು ಸಂಜೆ ಹೊತ್ತು ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದರಿಂದ ಗಾರ್ಡನ್ ಯಾವುದೇ ಸದ್ದು ಗದ್ದಲವಿಲ್ಲದೇ ಬಿಕೋ ಎನ್ನುತ್ತಿತ್ತು. ಬೆಂಚುಗಳು ಸೀನಿಯರ್ ಸಿಟಿಜನ್ಸ್ ಮತ್ತು ಮಾತು ಹೇಳುವ ಮಾತೆಯರಿಲ್ಲದೇ ಬಣಗುಡುತ್ತಿದ್ದವು. ಜೋರಾಗಿ ಬೀಸಿದ ಗಾಳಿಗೆ ಉದುರಿ ಬಿದ್ದ ಗಿಡದ ಎಲೆ-ಹೂಗಳು ಬೆರಳಣಿಕೆಯಲ್ಲಿ ವಾಕಿಂಗ್ ಮಾಡುತ್ತಿದ್ದ ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು.ಮಳೆಯಾದುದರಿಂದ ತಂಗಾಳಿ ಮೈಗೆ ತಂಪೆರೆಯುತ್ತಿತ್ತು. ಅದೇ ಸಮಯದಲ್ಲಿ ವಯಸ್ಸಾದವರೊಬ್ಬರು … Read more

ನಿನ್ನ ಪ್ರೀತಿಯಲ್ಲಿ ರಾಧೆಯಾಗುವ ಇರಾದೆ ನನಗಿಲ್ಲ ಗೆಳೆಯ: ಜಯಶ್ರೀ.ಜೆ. ಅಬ್ಬಿಗೇರಿ

ಸಿಕ್ಕ ಸಿಕ್ಕವರೊಂದಿಗೆ ನಾನೇ ಮುಂದಾಗಿ ಕೈ ಚಾಚಿ ಗೆಳೆತನ ಮಾಡಿಕೊಳ್ಳೋದು ಅಂದ್ರೆ ಮೊದಲಿನಿಂದಲೂ ಅದೇಕೋ ಇಷ್ಟ ನಂಗೆ. ಈ ಗೆಳೆತನದ ವಿದ್ಯೆಗೆ ನಾನೇ ಗುರುವಾಗಿ ತುಂಬಾ ಕಲಿತಿದಿನಿ. ತೊಚಿದ್ದೆನ್ನೆಲ್ಲಾ ಗೀಚಬೇಕೆನ್ನುವ ಹುಚ್ಚು ಅದ್ಯಾವಾಗ ಹಿಡಿತೋ ಎಷ್ಟು ತಲೆ ಕೆರೆದುಕೊಂಡರೂ ನೆನಪಾಗ್ತಿಲ್ಲ. ಪುಸ್ತಕಗಳ ರಾಶಿಯ ಮಧ್ಯೆ ನನ್ನನ್ನೇ ಮರೆತು ಹೋಗುವ ಖಯಾಲಿಯಂತೂ ಖಾಸಾ ಗೆಳತಿಯರಿಂದ ಹಿಡಿದು ನಿನ್ನೆ ಮೊನ್ನೆ ಕೈಕುಲುಕಿದವರಿಗೂ ಗೊತ್ತಿದೆ.ಹಟ ತೊಟ್ಟ ಹಟವಾದಿ ಹಂಗ ಓದೋದು ಬರೆಯೋದು ಅಂದ್ರ ಪಂಚಪ್ರಾಣ.ಹಂಗಂತ ಮಾತಿಗೇನೂ ಕಮ್ಮಿಯಿಲ್ಲ. ಆದರೂ ಯಾರೂ ನನಗ … Read more

ಕಿರುಲೇಖನಗಳು: ವೆಂಕಟೇಶ್ ಚಾಗಿ, ಪ್ರವೀಣ ಶೆಟ್ಟಿ, ಕುಪ್ಕೊಡು, ಕೆಂದೆಲೆ ವನಜ

ತಪ್ಪು ಮಾಡದವ್ರು ಯಾರವ್ರೆ ? ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳುವವರು ಯಾರಾದರೂ ಇದ್ದಾರೆಯೇ ? ಇಲ್ಲ . ತಪ್ಪು ಮಾಡುವುದು ಮಾಡುವುದು ಮನುಷ್ಯನ ಸಹಜಧರ್ಮ . ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅವು ತಪ್ಪುಗಳಲ್ಲ. ಸ್ವ ಕಲಿಕೆಯ ಹಂತಗಳು. ತಪ್ಪುಗಳು ಒಂದೊಂದೇ ಕಲಿಕೆಯನ್ನು ತಿಳಿಸುತ್ತಾ ಹೋಗುತ್ತವೆ. ಮಗು ಆಟವಾಡುವಾಗ, ಮಾತನಾಡುವಾಗ, ಬರೆಯುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ತನಗೆ ಅರಿವಿಲ್ಲದೆ … Read more

“ಅಡಚಣೆಗಾಗಿ ಕ್ಷಮಿಸಿ…ದ್ದರೂ ಏಟು ಬಿದ್ದಿತ್ತು ಅಂದು !!”: ಗಿರೀಶ್.ವಿ

ಅಂದು ಡಿಸೆಂಬರ್ 4, 2017 ರಾತ್ರಿ ಎಂಟಾಗಿತ್ತು. ನನ್ನವಳು ಕನ್ನಡ ಪತ್ರಿಕೆ ಯೊಂದರಲ್ಲಿನ ಪದಬಂಧ ಬಿಡಿಸುವುದರಲ್ಲಿ ನಿರತಳಾಗಿದ್ದಳು. ಸಾಮಾನ್ಯವಾಗಿ ಅತೀ ವೇಗದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದವಳಿಗೆ ಅಂದು ಒಂದು ಸಾಲು ಮಾತ್ರ ಕೈಕೊಟ್ಟಿತ್ತು. ‘ಈಗಂತೂ ಅರ್ಜೆಂಟಾಗಿ ಒಂದು ಕಾಫಿ ಬ್ರೇಕ್ ತಗೋಬೇಕು’ ಅನ್ನುತ್ತಾ ಎದ್ದವಳಿಗೆ ನಾನು ‘ವಿರಾಮ ಬೇಕಿದ್ದರೇ ಸ್ವಲ್ಪ ದೂರ ವಾಕಿಂಗ್‍ಗೆ ಹೋಗಬಹುದು, ಅದಿಲ್ಲದಿದ್ದರೆ ಸಂಗೀತ ಕೇಳಬಹುದು! ಆದ್ರೆ ಕಾಫಿ ಮಾತ್ರ ಬೇಡ ಅಂದೆ’. ಇನ್ನೂ ಮುಂದುವರಿದು, ತಮಾಷೆಗೆ ‘ನಿನ್ನ ಸಾಮಥ್ರ್ಯ ಮತ್ತು ಬುದ್ಧಿಮತ್ತೆ ಚುರುಕಾಗಲು ಕಾಫಿಯ … Read more

ಅರೆ! ನಾವ್ಯಾಕೆ ಹೀಗಾಡ್ತಿವಿ??: ಜಯಶ್ರೀ.ಜೆ.ಅಬ್ಬಿಗೇರಿ.

ಮನಸ್ಸಿನಲ್ಲಿ ಮಂಡಿಗೆ ತಿನ್ನೋದು ಅಂತಾರಲ್ಲ ಹಾಗೆ ಮನೆ ಮಂದಿಗೆ ಗೆಳೆಯರಿಗೆ ಹೆತ್ತವರಿಗೆ ಹೇಳಲೇಬೇಕಾದುದನ್ನು ನಮ್ಮಲ್ಲಿ ಕೆಲವರು ತಾವು ಹೇಳುವುದು ಸರಿಯಿದ್ದರೂ ಹೇಗೆ ಹೇಳೋದು ಅಂತ ಇದ್ದ ಒಂದು ತಲೆ ಕೆಡಿಸಿಕೊಂಡು ಬೇಕಾಗಿದ್ದನ್ನು ಬೇಡವಾಗಿದ್ದನ್ನು ಯೋಚಿಸಿ ಇನ್ನೇನು ಪರಿಸ್ಥಿತಿ ಹದಗೆಡುತ್ತೆ ಅನ್ನೋವಾಗ ಅದೆಷ್ಟೋ ದಿನಗಳಿಂದ ತಲೆಯಲ್ಲಿಟ್ಟಕೊಂಡ ವಿಷಯವನ್ನು ಹೇಳಿದರೆ ಅವರೇನು ಅಂದುಕೊಳ್ತಾರೋ ಎಲ್ಲಿ ನೊಂದುಕೊಳ್ತಾರೋ ತನ್ನಿಂದಾಗಿ ಅವರಿಗೆ ಬೇಸರ ಆದರೆ ಸಿಟ್ಟು ಮಾಡಿಕೊಂಡರೆ ಅಂತ ತಾವೇ ಲೆಕ್ಕ ಹಾಕುತ್ತ ಕೂಡಿಸಿ ಕಳೆದು ಗುಣಿಸಿ ಇನ್ನೇನು ತಲೆ ಸಿಡಿಯುತ್ತೆ ಅನ್ನುವಾಗ … Read more

ಬದಲಾವಣೆ ಜಗ(ನ)ದ ನಿಯಮ: ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ

ಕಾಲ ಎಂದೆಂದೂ ಕಾಲ ಕಾಲವೇ.. ಮನುಷ್ಯನ ಗುಣಸ್ವರೂಪ ಮಾತ್ರ ಬದಲಾಗುವುದಲ್ಲವೇ.. !!!! ಹಿಂದಿನ ಕಾಲದಲ್ಲಿ ಬಾಂಧವ್ಯಗಳ ಬೆಸುಗೆ ಜಾಸ್ತಿಯಾಗಿತ್ತು.ಒಗ್ಗಟ್ಟಿತ್ತು.ಪರಸ್ಪರ ಸಹಬಾಳ್ವೆ ಜಾಸ್ತಿಯಾಗಿತ್ತು.ಆದರೆ ಇಂದಿನ ಕಾಲದಲ್ಲಿ ಅದ್ಯಾವುದೂ ಇಲ್ಲ.ಕೊಲೆ,ಸುಲಿಗೆ,ಅತ್ಯಾಚಾರಗಳು ತಾಂಡವವಾಡುತ್ತಿವೆ.ಸಂಬಂಧಗಳ ಬೆಲೆಯೇ ತಿಳಿಯದೇ ಅಣ್ಣ-ತಂಗಿ,ಅಪ್ಪ – ಮಗಳು,ಪುಟ್ಟ ಮಕ್ಕಳು ಎನ್ನುವ ಭಾವನೆಗಳಿಲ್ಲದೇ ಅತ್ಯಾಚಾರ ಮಾಡುವ ಮನಸ್ಥಿತಿ ಇಂದಿನವರದು ಎನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.ಮೊದಲಿನ ಕಾಲದ ಭಾರತೀಯ ಸಂಸ್ಕೃತಿ ಉನ್ನತವಾಗಿತ್ತು.ಈಗಿನ ಜನರು ಮಾನವೀಯತೆ ಮರೆಯುತ್ತಿದ್ದಾರೆ ಎಂಬ ನುಡಿಗಳು ಕರ್ಣಗಳ ಕೊರೆದು ಸಾಗುತ್ತಲೇ ಇರುತ್ತದೆ. ಹಾಗಾದರೆ ಹಿಂದಿನ ಕಾಲದಲ್ಲಿ ದುಷ್ಟರು,ದುರ್ಜನರು ಇರಲೇ … Read more

ಮನುಕುಲಕ್ಕೊಂದು ವಿನಂತಿಯ ನುಡಿ: ಪಿ. ಕೆ. ಜೈನ್ ಚಪ್ಪರಿಕೆ

ಓ ಮಾನವ, ನಿನ್ನ ಹುಟ್ಟು ಸಾವು ನಿನ್ನ ಪರಿಮಿತಿಯೊಳಗೆ ಇಲ್ಲದೆ ಇರುವ ಇಂತ ಸಂದರ್ಭದಲ್ಲಿ ನಮಗೆಲ್ಲಾ ಜನ್ಮದಾತನಾದೆ. ಇದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ನಿನ್ನ ಸುಖ ಭೋಗಕ್ಕಾಗಿ ನಾವೇನು ನಮ್ಮ ಕೆಲಸವೇನು ನಮ್ಮ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ನಮ್ಮನ್ನು ಆವಿಸ್ಕರಿಸಿ ನಿನ್ನ ಪ್ರಪಂಚದಲ್ಲಿ ಒಂದು ಮಹಾನ್ ಸಾಧನೆಯನ್ನು ಮಾಡಿರುವೆಯಾ. ಸತ್ತ ಮೇಲೆ ಸ್ವರ್ಗ ಸೇರುತ್ತೇವೋ ಇಲ್ಲವೋ ಎಂಬ ಸಂದೇಹದಿಂದ ಭೂಮಿಯ ಮೇಲೆ ಸ್ವರ್ಗಕ್ಕೆ ಸಮನಾಗುವ ರೀತಿಯಲ್ಲಿ ನಿನ್ನ ನೆಲೆಯನ್ನು ರಚಿಸಿಕೊಂಡು ಇದಕ್ಕಾಗಿ ಒಂದೊಂದಾಗಿ ನಮ್ಮನ್ನು ಕಂಡು ಹಿಡಿಯಲು ಹೊರಟೆಯಲ್ಲಾ … Read more

ಸೋಲೇ ಗೆಲುವಿನ ಮೆಟ್ಟಿಲು: ವೆಂಕಟೇಶ ಚಾಗಿ

ಜೀವನದಲ್ಲಿ ನಾವು ಒಂದಲ್ಲಾ ಒಂದು ಸ್ಪರ್ಧೆಯನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಂದು ತುಂಬಾ ಮಹತ್ವದ್ದಾಗಿರುವ ಸ್ಪರ್ಧೆಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವೊಂದು ಸ್ಪರ್ಧೆಗಳಲ್ಲಿ ನಾವು ಸ್ಪರ್ಧಿಸಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ.ಮಹತ್ವ ಪಡೆದಂತಹ ಸ್ಪರ್ಧೆ ಗಳಲ್ಲಿ ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಮುಳುಗಿಬಿಡುತ್ತೇವೆ. ನಮ್ಮ ಎಲ್ಲಾ ಸ್ನೇಹಿತರು ಬಂಧು ಬಾಂಧವರೊಂದಿಗೆ ಆ ಖುಷಿ ಯನ್ನು ಹಂಚಿಕೊಂಡು ನಾವೂ ಸಂತೋಷ ಪಡುತ್ತೇವೆ. ಅದೇ ಸೋಲಾದರೆ ?! ನಮ್ಮವರ ಎದುರು ಅವಮಾನವಾಯಿತಲ್ಲಾ ಎಂದು ಕೊರಗುತ್ತೇವೆ. ದುಃಖದಲ್ಲಿ ಮುಳುಗಿಬಿಡುತ್ತೇವೆ. … Read more

ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಮೊಕಾಶಿ ಎಂ.ಎಚ್.

“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ. ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. … Read more