ಪ್ರೀತಿಯಾಚರಣೆಯ ಹಬ್ಬ: ಸಿಂಧುಚಂದ್ರ

ನಾನು ಪ್ರೀತಿಯಿಂದ ಕೊಂಡುತಂದಿದ್ದ ಜುಮಕಿ ಅದು. ಬಿಳಿ ಚೂಡಿದಾರಕ್ಕೆ ಒಳ್ಳೆಯ ಜೋಡಿಯಾಗುತ್ತಿತ್ತು. ಬಿಳಿಯ ಬಣ್ಣದ ಜುಮಕಿಗೆ ಹೊಳೆಯುವ ಹರಳುಗಳಿದ್ದವು. ತೂಗಾಡುವ ಬಿಳಿ ಬಣ್ಣದ ಮಣಿಗಳು ಅದರ ಅಂದವನ್ನು ಹೆಚ್ಚಸಿದ್ದವು. ಸಿಕ್ಕಾಪಟ್ಟೆ ಚಂದವಿದ್ದ ಆ ಜುಮಕಿಯನ್ನು ಹಾಕಿಕೊಳ್ಳಲು ಇನ್ನೂ ಮುಹೂರ್ತ ಬಂದಿರಲಿಲ್ಲ. ಅಂದೇಕೋ ಅವನು ಫೋನ್ ಮಾಡಿ ಎರಡುವರೆ ಎಕರೆ ವ್ಯಾಪಿಸಿರುವ ಪಿಳಲೆ ಮರವನ್ನು ನೋಡಲು ಹೋಗುತ್ತಿದ್ದೀನಿ, ಬರ್ತೀಯಾ ಎಂದು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ. ನಾನು ಹೊಸ ಬಿಳಿ ಚೂಡಿದಾರ ತೊಟ್ಟು  ಅದೇ ಬಿಳಿ ಜುಮಕಿಯನ್ನು ಕಿವಿಗೆ ನೇತು ಹಾಕಿದೆ. … Read more

ಪ್ರೇಮವೆಂಬ ಸರಿಗಮಪ…: ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ

‘ನಿನ್ನ ಕಣ್ಣ ಕಾಡಿಗೆಯಂತೆ ಕಾಪಿಟ್ಟುಕೊಂಡು ಬರುವೆ’ ಎಂದೆಯಲ್ಲ. ಆ  ನಿನ್ನ ಮಾತಿನಲ್ಲಿ ಎಷ್ಟು ಪ್ರೀತಿ ಇತ್ತು ಅನ್ನೋದು ಗೊತ್ತಾದಾಗ ಎಷ್ಟು ಖುಶಿ ಆಯ್ತು ಗೊತ್ತಾ? ಕ್ಷಮಿಸು.. ಒಂದು ಕ್ಷಣ ನಿನ್ನ ಮೇಲೆ ಸಂಶಯ ಪಟ್ಟಿದ್ದಂತೂ ನಿಜ. ಈಗ ನಾನು ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ಕ್ರಮೇಣ ನಿನ್ನ ಪ್ರೀತಿಯ ಆಳವನ್ನು ಕಂಡು ಪುಳಕಿತಳಾದೆ.. ನಿನಗೊತ್ತಾ… ನಿನ್ನ ಪ್ರೀತಿಯನ್ನು ಸ್ವೀಕರಿಸುವ ಧೈರ್ಯವೂ ನನ್ನಲ್ಲಿರಲಿಲ್ಲ…ನಿನ್ನಿಂದ ದೂರವಾಗುವ ಕಲ್ಪನೆಯನ್ನೂ ಮಾಡುವ ಸ್ಥಿತಿಯಲ್ಲೂ ನಾನಿರಲಿಲ್ಲ.. ಅರ್ಥೈಸಿಕೊಳ್ಳಬಲ್ಲೆ ಅಲ್ವಾ ನನ್ನ ಪರಿಸ್ಥಿತಿಯನ್ನು…ಆ ಕಾರಣಕ್ಕಾಗಿ … Read more

ಮೈತ್ರಿ ಪ್ರಕಾಶನದ ಕಥಾಸಂಕಲನಕ್ಕಾಗಿ ಕತೆಗಳ ಆಹ್ವಾನ

ಹೊಸದಾಗಿ ಪ್ರಾರಂಭವಾಗಿರುವ 'ಮೈತ್ರಿ ಪ್ರಕಾಶನ' ಕನ್ನಡ ಕಥಾಪ್ರಪಂಚಕ್ಕೆ "ಧ್ವನಿಗಳು" ಎಂಬ ಕಥಾಸಂಕಲನವನ್ನು ಅರ್ಪಿಸಲು ಉದ್ದೇಶಿಸಿದೆ.  ಈ ಹಿಂದೆ ಪ್ರಕಟಿಸಿದಂತೆ "ಮಹಿಳೆಯರು  ಬರೆದ ಕಥೆಗಳು" ಎಂಬ ನಿರ್ಭಂದ ತೆಗೆದುಹಾಕಲಾಗಿದ್ದು , ಈಗ ಈ ಸಂಕಲನದಲ್ಲಿ ಕೆಳಗಿನ  ನಿಯಮಗಳಿಗೆ ಒಳಪಟ್ಟು ಯಾರು ಬೇಕಾದವರೂ ಕತೆ ಕಳಿಸಬಹುದಾಗಿದೆ. ಮೇಲಾಗಿ ಮೊದಲ ಮೂರು ಕತೆಗಳಿಗೆ ಬಹುಮಾನ ಘೋಶಿಸಲಾಗಿದ್ದು ಮೊದಲ ಬಹುಮಾನ ೫೦೦೦, ಎರಡನೇ ಬಹುಮಾನ ೩೦೦೦ ಮತ್ತು ಮೂರನೆಯ ಬಹುಮಾನವಾಗಿ ೨೦೦೦ ನಗದು ರೂಪದಲ್ಲಿ ಕೊಡಲು ನಿರ್ಧಾರಮಾಡಿರುವುದನ್ನು ತಿಳಿಸಲು ಅತ್ಯಂತ ಖುಶಿಯಾಗುತ್ತದೆ. ಒಟ್ತು … Read more

ಪರೀಕ್ಷೆಯ ದೀಕ್ಷೆ ದಾಟಿ…..: ಸಂಗೀತ ರವಿರಾಜ್

ದಿಗಿಲು ನೀಡುವಂತಹ ಸನ್ನಿವೇಶವನ್ನು  ನಾವಾಗಿಯೇ ಸೃಷ್ಟಸಿ, ಅನಾವಶ್ಯಕ ಆತಂಕ ಬಯಲುಪಡಿಸಿ ನಾವು ನಾವಾಗಿರದಂತೆ ದಿನಗಳ ಕಾಲ ತಲ್ಲಣಗೊಳಿಸಿಬಿಡುತ್ತದೆ ಈ ಪರೀಕ್ಷೆಯೆಂಬ ಮಾಯಕ. ಬದುಕು ಕ್ರಮಿಸುವ ಹಾದಿಯಲ್ಲಿ ಪರೀಕ್ಷೆಯೆ ಅತ್ಯಮೂಲ್ಯ. ಎಂಬುದು ಪ್ರತಿಯೊಬ್ಬರ ತಲೆಯಲ್ಲಿ ತುಂಬಿದ ನಂತರ ಇದು ಸುಲಭದಲ್ಲಿ ಬಿಟ್ಟು ಹೋಗುವಂತದ್ದಲ್ಲ. ಬದುಕು ಪಾಠ ಕಲಿಸಿ ಏಳು ಬೀಳುಗಳ ಸಮರ ಸಾರಿದ ನಂತರ ನಮಗಾಗಿಯೆ ಅರ್ಥವಾಗುವ ಮುನ್ನ ಪರೀಕ್ಷೆಯೆಂಬ ಚಿಂತೆ ಎಲ್ಲರಲ್ಲಿಯು ಇದ್ದೇ ಇರುತ್ತದೆ. ಈ ಅರ್ಥವಾಗುವ ಕಾಲ ಬಂದಾಗ ನಮ್ಮ ಅಂಕ ಗಳಿಕೆಯ ಪರೀಕ್ಷೆಗಳೆಲ್ಲವು ಮುಗಿದಿರುತ್ತದೆ! … Read more

ಪ್ರೊ. ಪ್ರಫುಲ್ಲ ಚಂದ್ರ ರೇ: ಗುರುರಾಜ್ ಜಯಪ್ರಕಾಶ್

ಪ್ರಫುಲ್ಲ ಚಂದ್ರರು ಆಗಸ್ಟ್ 2 1861, ಅವಿಭಜಿತ ಭಾರತದ ಬಂಗಾಳದ ಸುಶಿಕ್ಷಿತ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರೀಶ್ ಚಂದ್ರರು ಜಮೀನುದಾರರಾಗಿದ್ದರು ಗಳಿಕೆಯನ್ನೆಲ್ಲಾ ಒಂದು ಗ್ರಂಥಾಲಯ ಕಟ್ಟಲು ಬಳಸಿದರು. ಒಂಭತ್ತನೇ ವರ್ಷದ ವರೆಗೆ ಅವರು ತನ್ನ ತಂದೆಯ ಶಾಲೆಯಲ್ಲೇ ಕಲಿತರು, ಮುಂದಿನ ಅಭ್ಯಾಸಕ್ಕಾಗಿ ತಂದೆಯ ಪ್ರೋತ್ಸಾಹದೊಂದಿಗೆ ಕೋಲ್ಕತ್ತಾಗೆ ತೆರಳಬೇಕಾಯಿತು. ಅವರು ಶೇಕ್ಸ್‌ಪಿಯರ್‌ ಸಾಹಿತ್ಯ, ಇತಿಹಾಸ, ಭೂಗೋಳ, ಮತ್ತು ಪ್ರಸಿದ್ದ ಪುರುಷರಾ ಜೀವನಚರಿತ್ರೆಯನ್ನು ಪ್ರೀತಿಯಿಂದ ಓದಿದರು. ನಾಲ್ಕನೆಯ ತರಗತಿಯಲ್ಲಿ ತೀವ್ರ ಜೀರ್ಣಕಾರಿ ಅಸ್ವಸ್ಥತೆಯ ಕಾರಣದಿಂದ  ತಮ್ಮ … Read more

ಡಾ.ಖಾದರ ಎನ್ನುವ ಆರೋಗ್ಯ ವಿಜ್ಞಾನದ ಸಂತ: ಗುಂಡುರಾವ್ ದೇಸಾಯಿ

•    ನೀವು ಕಕ್ಕಸಕ್ಕೆ ಹೋದಾಗ ನೀರು ಹಾಕಿದ ಕೂಡಲೆ ಕಕ್ಕಸು ಸ್ವಚ್ಛವಾದರೆ ನೀವು ಆರೋಗ್ಯವಂತರು, ಅದು ಅಲ್ಲೆ ಹಿಡಿದುಕೊಂಡರೆ ನಿಮಗೆ ಏನೋ ತೊಂದರೆ ಇದೆ ಎಂದೆ ಅರ್ಥ •    ನಿಮ್ಮ ಮಕ್ಕಳಿಗೆ 15-20 ವರ್ಷಕ್ಕೆ ಶುಗರ್ ಗೆ ಬಲಿಯಾಗಿಸಬೇಕೆಂದಿದ್ದರೆ ನೂಡಲ್ಸ್ ತಿನ್ನಿಸಿ •    ನಿಮ್ಮ ಮುಂದಿನ ಪೀಳಿಗೆ ಬೊಕ್ಕತಲೆಯವರಾಗಬೇಕಾದರೆ ನೀವು ಪ್ಲಾಸ್ಟಿಕ್ ಬಾಟಲ್ ನೀರನ್ನೆ ಕುಡಿಯಿರಿ •    ನೂರು ಗ್ರಾಂ ಚಾಕಲೇಟ್ ನಲ್ಲಿ  4% ಜಿರಲೆ, 6% ಇಲಿ ಪಿಚ್ಚಿಕೆ ಇದ್ದೆ ಇರುತ್ತವೆ. ಹಾಗಾಗಿ ಆರಾಮಾಗಿ ನಿಮ್ಮ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ ೧. ದೈವೇಚ್ಛೆ ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ … Read more

ಕಾಡು(ವ) ಕಟ್ಟುವ ಕತೆ!! ಭಾಗ-೨: ಅಖಿಲೇಶ್ ಚಿಪ್ಪಳಿ

ಮಲೆನಾಡಿನ ಮಣ್ಣಿನ ಗುಣ ವಿಶಿಷ್ಠವಾದದು. ಒಂದು ಮಳೆಗಾಲ ಮುಗಿಯುವಷ್ಟರಲ್ಲೇ ನೈಸರ್ಗಿಕವಾಗಿ ಸಳ್ಳೆ, ಮತ್ತಿ, ಹುಣಾಲು ಗಿಡಗಳು ಚಿಗುರಿ ಮೇಲೆದ್ದು ಬರುತ್ತಿದ್ದವು. ಜೊತೆಗೆ ಮುಳ್ಳಿನಿಂದ ಕೂಡಿದ ಪರಿಗೆ ಕಂಟಿಗಳು ಹೇರಳವಾಗಿ ಎದ್ದು ಬಂದವು. ಹಸಿರು ಮರಳುಗಾಡಾಗಿದ್ದ ಜಾಗ ನಿಧಾನಕ್ಕೆ ವೈವಿಧ್ಯಮಯ ಹಸಿರಾಗಿ ಕಂಗೊಳಿಸಿತು. ಒಂದಷ್ಟು ಬಿದಿರು ಮೆಳ್ಳೆಗಳಿದ್ದವು. ಹೂ ಬಂದಾದ ಮೇಲೆ ಸತ್ತು ಹೋದವು. ನೈಸರ್ಗಿಕವಾಗಿ ಬಿದಿರು ಮೇಲೆದ್ದು ಬರಲು ಇನ್ನೂ ಸಮಯ ಬೇಕು. ಅಗಳದ ಪಕ್ಕದಲ್ಲಿ ಸುತ್ತಲೂ ರಸ್ತೆಯನ್ನು ನಿರ್ಮಾಣ ಮಾಡಲಾಯಿತು. ಈ ರಸ್ತೆಯಲ್ಲಿ ಒಂದು ಸುತ್ತು … Read more

’ಕಪ್ಪು ಹಣ’ವೆಂಬ ಮಾಯಾಮೃಗದ ದರ್ಬಾರು…?: ವಿಜಯಕುಮಾರ ಎಮ್. ಕುಟಕನಕೇರಿ

ನಮ್ಮ ದೇಶದ ಆಡಳಿತ ವ್ಯವಸ್ಥೆಯು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ. ದೇಶದ ಪ್ರಜೆಗಳು ರಾಜಕೀಯ ಅಥವಾ ಯಾವುದೇ ಮೇಲ್ದರ್ಜೆಯ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ತಕ್ಷಣ ಅಧಿಕಾರದ ಚುಕ್ಕಾಣಿ ಹಿಡಿದು, ಇಡಿ ಆಡಳಿತ ವ್ಯವಸ್ಥೆಯನ್ನೆ ತಮ್ಮ ಕಪಿ ಮುಷ್ಟಿಯಲ್ಲಿರಿಸಿಕೊಳ್ಳುವ ಸ್ವಾರ್ಥತೆ ಬೆಳೆಯುತ್ತಿದೆ. ಇದರ ಬೆನ್ನಲ್ಲೆ ಅಧಿಕಾರವನ್ನು ಹಿಡಿಯಲು ಕಾರಣೀಕರ್ತರಾದ ಜನತೆಗೆ ಕಡೆಗಣನೆಯ ಶಾಪ ತಟ್ಟುತ್ತಿದೆ. ಸಮಾಜದಲ್ಲಿ, ಭ್ರಷ್ಟ ಅಧಿಕಾರದ ದಬ್ಬಾಳಿಕೆಯಲ್ಲಿ ಭ್ರಷ್ಟಾಚಾರದ ಪರಮಾಧಿಕಾರ ತಲೆಯೆತ್ತಿ, ಅಭಿವೃದ್ಧಿಯ ಹೆಸರಿನಲ್ಲಿ ಪ್ರಜೆಗಳ ಹಿತಾಸಕ್ತಿಗೆ ಮುಸುಕು ಮೆತ್ತಿಕೊಳ್ಳುತ್ತಿದೆ. ದೇಶದ ಪ್ರಜೆಗಳಿಂದ ಅಕ್ರಮವಾಗಿ … Read more

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 2): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಅರಣ್ಯಹಕ್ಕು ಮಾನ್ಯತೆ ಕಾಯ್ದೆ ಜಾರಿ ಪ್ರಯತ್ನ ಹವಾಮಾನದ ಬದಲಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ. ಸಾಗರ ತಾಲ್ಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಹಾಗೂ ನೈಸರ್ಗಿಕ ಕಾಡನ್ನು ಸವರಿ ಎಂ.ಪಿ.ಎಂ.ನವತಿಯಿಂದ ಬೆಳೆಸಿದ 7100 ಹೆಕ್ಟರ್ ಅಕೇಶಿಯಾವೆಂಬ ಹಸಿರು ಮರಳುಗಾಡೂ ಇದೆ. ಕರ್ನಾಟಕ ಪವರ್ ಕಾರ್ಪೊರೇಷನ್‍ವತಿಯಿಂದ 653 ಹೆಕ್ಟೆರ್ ಅರಣ್ಯ ಪ್ರದೇಶವನ್ನು ಎಂ.ಪಿ.ಎಂ.ನವರಿಗೆ ಅಕೇಶಿಯಾ ಬೆಳೆದುಕೊಳ್ಳಲು ನೀಡಲಾಗಿದೆ. 1989-90ರಲ್ಲಿ ಜಾರಿಯಾದ ಬಗರ್‍ಹುಕುಂ ಕಾಯ್ದೆಯಡಿಯಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಜಮೀನುಗಳ … Read more

ಅಂತರ್ಜಾಲ ಸಮಾನತೆ ಬುಡಮೇಲು ಮಾಡಲು ಫೇಸ್‍ಬುಕ್ ಕಂಪನಿ ಹುನ್ನಾರ: ಜೈಕುಮಾರ್ ಹೆಚ್.ಎಸ್.

 ‘ಫ್ರೀಬೇಸಿಕ್’ ಯೋಜನೆ ವಿರುದ್ದ ನೆಟ್ ಬಳಕೆದಾರರ ಹೋರಾಟ –    ಜೈಕುಮಾರ್.ಹೆಚ್.ಎಸ್ ದಿಕ್ಕುತಪ್ಪಿಸುವ ಜಾಹೀರಾತುಗಳು: ‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಉತ್ತಮ ಸಂಶೋಧಕನಾಗುತ್ತಿದ್ದಾನೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’ ಇಂತಹ ಫೇಸ್‍ಬುಕ್ ಕಂಪನಿಯ ಹತ್ತಲವು ಜಾಹೀರಾತುಗಳು ಜನತೆಯ ಕಣ್ಣು ಕಿವಿಗಳ … Read more

ಅಪ್ಪಾ ಬಾಂಬು ……..! (ನಗೆ ಬರಹ): ಗುಂಡುರಾವ್ ದೇಸಾಯಿ

‘ಅಪ್ಪಾ… ಬಾಂಬು ಅಪ್ಪಾ, ಬಾಂಬು’ ಅಂತ ಮಗ ಅಳುತ್ತಾ ಎಬ್ಬಿಸಿದಾಗ ಗರಬಡಿದವನಂತೆ ‘ಹ್ಞಾ! ಎಲ್ಲಿ…ಎಲಿ?್ಲ’ ಅಂತ ತಡಕಾಡಕತಿದೆ. ಹಾಸಿಗೆಯಲ್ಲ ಅಸ್ತವ್ಯಸ್ತವಾಗಿ ಲುಂಗಿ ಇಲ್ಲದೆ ಹಾಗೆ ಓಡಾಡುತ್ತಿದ್ದನ್ನು ನೋಡಿ ಎಲ್ಲರೂ ಏನಾಯ್ತು ಅಂತ ಓಡಿ ಬಂದ್ರು ‘ಬಾಂಬು!ಬಾಂಬೂ…..! ಎಲ್ಲಿ ಬಾಂಬು?’ ಅಂದೆ ‘ಅಯ್ಯೋ ಸವಾರಾತಿವರಗೂ  ಸುಡಗಾಡೂ ಏನೇನೊ ನೋಡತಿರಿ, ಹಿಂಗ ಎದ್ದು ಕಣವರಸ್ತಿರಿ’ ಎಂದ್ಲು ಈಕಿ ಅಷ್ಟರಾಗ ಮಗ ‘ಅಪ್ಪಾ ಬಾಂಬು ಬೇಕು ಅಪ್ಪಾ ಬಾಂಬು ಬೇಕು’ ಎಂದು ಅಳಕೊಂತ ಕುತಿದ್ದ. ನನಗ ಹುಚ್ಚು ಮಬ್ಬು ಕೂಡೆ ಹಿಡಿತು. … Read more

ಮೂವರ ಕವನಗಳು: ದಿವ್ಯ ಆಂಜನಪ್ಪ, ಪುನೀತ್, ದುರ್ಯೋಧನ (ರವೀಂದ್ರ ಕತ್ತಿ)

"ಇಂದು ನೆನ್ನೆಗೆ ನಾಳೆಯಾದವನು" ಮಿಣುಕು ಹುಳುಗಳು ಮಿನುಗಿ ಕರೆದಾವೊ ಅಗೋ, ಆಗೊಂದು ಈಗೊಂದು ಕತ್ತಲಿನೂರಿನೊಳು ಗುಡಿಸಲ ಅಂಚಿನೆದೆಯಲಿ ಇಣುಕಿ ಇಣುಕಿ ನೋಡಿವೆ ಪಿಳಿಪಿಳಿ ಕಣ್ಣುಗಳು ಅದೇನೋ ಹೊಳಪು,  ಅದೇನೋ ಹುರುಪು ಈ ಕಾಡಿನೂರಿನಲಿ  ಹೀಗೊಂದು ನಡುರಾತ್ರಿಯ  ಮಿಂಚಿನ ಬೆಳಕು ಕರೆದಿಹುದು  ಬಡವನ ನೆತ್ತಿಯ  ಕಣ್ಮಣಿಗಳ ಸೆಳೆಸೆಳೆದು ಅಂಧಕಾರವ ಮೆಟ್ಟಿ ನಿಂತಿದೆ ಅದೋ, ಆ ಮಣ್ಣಿನ ಹಣತೆ ಪಕ್ಕದೂರಿನ ಬೀದಿ ಬೀದಿಯ  ಕೊನೆಯ ತಿರುವುಗಳಲಿ ಸಾಲುಗಟ್ಟಿ ನಿಂತಿಹವು ಕೈಗಳು ಕೈಚಾಚಿ ಪಟ್ಟಣವೆಂಬೊ ಸಂತೆಯಲಿ ಜಾತಿಯ ಹಣೆಪಟ್ಟಿಗಳು ಕಾಲೆಳೆದು ಮೆರೆದಿದೆ … Read more

ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಆದಿವಾಸಿಗರು?!: ವಿಜಯಕುಮಾರ ಎಮ್. ಕುಟಕನಕೇರಿ

“ಜನಜೀವನವನ್ನು ಎಚ್ಚರಿಸುವ ದ್ವನಿ ಸಾಹಿತ್ಯದಿಂದ ಬರುತ್ತದೆ. ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ. ಕೃತವಿಧ್ಯರಾದ ಯುವಕರು ತಮ್ಮ ಆಕಾಂಕ್ಷೆಗಳನ್ನು ಬರೆದು ಓದಿ, ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು” ರಾಷ್ಟ್ರಕವಿ ಕುವೆಂಪು ಅವರ ಲೇಖನಗಳ ಸಾಲುಗಳು ಅಭಿವೃದ್ಧಿಯ ಕೆಚ್ಚೆದೆಯನ್ನು ಹುಟ್ಟಿ ಹಾಕುತ್ತದೆ. ಜ್ಞಾನ ಮತ್ತು ಸಹಕಾರದಿಂದ  ಯುವಕರು ಆಧುನಿಕ ಜಗತ್ತಿನಲ್ಲಿ ಪರದೆಯ ಹಿಂದುಳಿದಿರುವ ಜನರನ್ನು ಬೆಳಕಿಗೆ ತರಬೇಕು. ಆದರೆ, ಅಂತಹ ಕಾರ್ಯ ಸಾಧನೆಗೆ ಯುವಕರು ಮುಂದಾಗದೆ, ತಮ್ಮನ್ನು ತಾವು … Read more

ಸಹಜ ಕೃಷಿ-ಬದುಕು ಖುಷಿ: ಮಂಗಳ ಎನ್ ಅಗ್ರಹಾರ

ಕೃಷಿಯು ಆದಿಮ ಕಾಲದಿಂದಲೂ ಮನುಶ್ಯನ ಬದುಕಿನ ಭಾಗವಾಗಿ ಬಂದಿರುವ ವೃತ್ತಿ. ಇಂದಿಗೂ ಕೂಡ ದೇಶದ ಬಹುಪಾಲು ಜನರ ಮೂಲಕಸುಬು ಕೃಷಿಯಾಗಿದೆ. ಸರಳವಾದ ಜೀವನಕ್ರಮವನ್ನು ಪ್ರತಿಪಾದಿಸುತ್ತಾ ರೈತರು ತಾವು ಆಥ್ರ್ರಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಪ್ರೇರೇಪಿಸುತ್ತದೆ. ಇದರೊಟ್ಟಿಗೆ ಜನರ ಆಲೋಚನೆ, ನೆಲದ ಜೊತೆಗಿನ ಸಂಬಂದ, ಸಂಸ್ಕøತಿ ಮತ್ತು ಪರಿಸರದೊಟ್ಟಿಗಿನ ಭಾವನಾತ್ಮಕ ಒಡನಾಟವನ್ನು ಗಟ್ಟಿಗೊಳಿಸುತ್ತದೆ. ಪರಸ್ಪರ ಆಳು-ಕಾಳುಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಹಣದ ಅವಶ್ಯಕತೆಯೇ ಇಲ್ಲದೆ ಬದುಕುತ್ತಿದ್ದ ‘ಆ ದಿನಗಳು’ ಬರಲಾರವು ಎಂಬ ನೋವು ಇಂದಿನ ಪ್ರಗತಿಪರ ರೈತರಲ್ಲಿದೆ. ಸ್ಥಳೀಯವಾಗಿ … Read more

ಅಭಿವೃದ್ದಿ ಯಾರಿಗೆ?: ಕಿರಣ ಆರ್.

ಆದಿವಾಸಿ ಎಂದರೆ ನಮ್ಮಲ್ಲಿ ಅದೆಂತಹದ್ದೋ ಪ್ರೀತಿ ಮತ್ತು ಖುಷಿ. ನಾವು ಸಹ ಆ ಹಂತವನ್ನು ದಾಟಿ ಬಂದಿದ್ದೇವೆ ಎಂದರೆ ನಂಬಲಾಗದ ಸತ್ಯ. ಅವರ ಜೀವನ ಶೈಲಿಯನ್ನು ತಿಳಿಯಲು  ಕಾತರತೆಯಿಂದ ಕಾಯುತ್ತೇವೆ. ಅದೆಷ್ಟೋ ಅಂತಹ ಸಿನಿಮಾಗಳನ್ನು ನೋಡಿ ಆಶ್ಚರ್ಯಪಡುವುದುಂಟು. ಗಿಣಿಯ, ಮಾರ, ಸಿಕ್ಕ, ಕಾಸ್ಯಾಲ, ಸೋಲಿಗ, ಜೇನುಕುರುಬ ಎಂಬ ಸಮುದಾಯದ ಮುದ್ದಾದ ಹೆಸರುಗಳು, ಕಾಡಿನೊಂದಿಗಿನ ಅವರ  ನಂಟು, ಆಧುನಿಕತೆಯ ಬೂತದೊಂದಿಗೆ ಅವರು ತಮ್ಮನ್ನೊಳಗೊಳ್ಳದೇ, ತಮ್ಮದೇ ಒಂದು ಜೀವನ ಶೈಲಿಯನ್ನು ಗತಕಾಲದಿಂದಲೂ ಸಹ ಪಾಲಿಸಿಕೊಂಡು ಬಂದಿರುವುದು ಅದೆಷ್ಟೋ ಭಾರಿ ನನ್ನನ್ನು … Read more

ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ: ಮಂಜುಳ ಎಸ್.

ಬಂಡಾವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ ನಾವು ಸೇರಿದವರಲ್ಲ, ಪರಿಸರ ನಮಗೆ ಸೇರಿದ್ದು ಎಂದು ಅಲ್ಪಸಂಖ್ಯಾತರಾದ ಬಂಡವಾಳಶಾಹಿಗಳು ಪರಿಸರವನ್ನು ಮತ್ತು ಪರಿಸಕ್ಕೆ ಸೇರಿದ ಕೆಲವು ಜನ ಸಮುದಾಯಗಳನ್ನು ವಿಕೃತವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ದುಡಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವನ್ನು ಯಾಕೆ ಪರಿಸರವನ್ನೇ ನಂಬಿ, ಪರಿಸರದ ಜೊತೆಯಲ್ಲಿಯೇ ಬದುಕುತ್ತಿರುವವರು ಮತ್ತು ಬಹು ಸಂಖ್ಯಾತರಾದ ಜನ ಸಾಮಾನ್ಯರೇ ಅನುಭವಿಸುತ್ತಿರುವುದು…? ಇದು … Read more

ಮುಂದುವರೆದ ರೈತರ ಆತ್ಮಹತ್ಯೆಗಳು ಸಾವಿನ ಮನೆಯ ತಲ್ಲಣಗಳು: ಎನ್. ಕವಿತಾ

(ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಮಂಡ್ಯ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಅನ್ನದಾತನ ಸಾವಿಗೆ ಕಾರಣಗಳೇನು? ಸಾವಿನ ನಂತರ ರೈತನ ಕುಟುಂಬ ಸದಸ್ಯರು ಬದುಕಲು ಯಾವ ರೀತಿ ಪಾಡು ಪಡುತ್ತಿದ್ದಾರೆ? ಆ ಕುಟುಂಬಗಳಿಗೆ ಸರ್ಕಾರಗಳು ಮತ್ತು ಸಮಾಜ ಯಾವ ರೀತಿ ಸ್ಪಂದಿಸಿವೆ? ಮಾಧ್ಯಮಗಳ ಸ್ಪಂದನೆ ಯಾವ ರೀತಿಯಿದೆ? ಇತ್ಯಾದಿ ಕುರಿತಂತೆ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ).  ಒಕ್ಕಲಾ ಕೇರ್ಯಾಗ ಮಳೀರಾಯ ಮಕ್ಕಳ ಮಾರ್ಯಾರ ಮಳೀರಾಯ! ಒಕ್ಕಲಾ ಕೇರ್ಯಾಗ ಮಕ್ಕಳ ಮಾರಿ  … Read more

ರೈತರ ಸಾವಿಗೆ ಪೂರಕವಾಗಿವೆಯೇ ನಮ್ಮ ಅಭಿವೃದ್ಧಿ ಯೋಜನೆಗಳು….?: ಮಂಜುಳ ಎಸ್.

             ದೇಶದಲ್ಲಿ ನೀರಿಗೆ, ಅನ್ನಕ್ಕೆ ಬರವಿರುವಂತೆಯೇ, ಅನ್ನದಾತನ ಆತ್ಮಹತ್ಯೆಗಳು ಸಹ ಬರವಿಲ್ಲದಂತೆ ಪ್ರತಿ ರಾಜ್ಯ, ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕವಾಗಿ ನಡೆಯುತ್ತಿವೆ. ಕೃಷಿಯಲ್ಲಿ ಅವೈಜ್ಞಾನಿಕ ಪದ್ದತಿಯನ್ನು ಬಳಸುತ್ತಿರುವುದು, ಸಾಲ ಮಾಡುತ್ತಿರುವುದು, ಮದುವೆ ಸಮಾರಂಭಗಳಿಗೆ ಹೆಚ್ಚು ದುಂದು ವೆಚ್ಚ ಮಾಡುತ್ತಿರುವುದೇ ರೈತರ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಮ್ಮ ಸರ್ಕಾರಗಳು ಅಮಾನವೀಯವಾಗಿ ಉತ್ತರಿಸುತ್ತಾ ಒಂದಿಷ್ಟು ಪರಿಹಾರ ಧನವನ್ನು ನೀಡಿ, ಸಂತ್ರಸ್ತ ಕುಟುಂಬಗಳಿಗೆ ಆ ಕ್ಷಣಕ್ಕೆ ಸಮಾಧಾನ ಪಡಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳು ನೆನ್ನೆ ಮೊನ್ನೆಯದಲ್ಲ, … Read more

ಇಂಡೊನೇಷ್ಯಾವನ್ನು ನುಂಗಿ ನೊಣೆಯುತ್ತಿರುವ ಕಾಡ್ಗಿಚ್ಚು: ಅಖಿಲೇಶ್ ಚಿಪ್ಪಳಿ

[ಇಂಡೊನೇಷ್ಯಾದಿಂದ ಭಾರತಕ್ಕೆ ಭೂಗತ ಪಾತಕಿ ಛೋಟಾ ರಾಜನ್‍ನ್ನು ಹಸ್ತಾಂತರಿಸಿದ ಸಚಿತ್ರ ವರದಿಗಳು ಬಹುತೇಕ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖ್ಯಪುಟಗಳಲ್ಲಿ ರಾರಾಜಿಸುತ್ತಿದ್ದವು. ಅತ್ತ ಖುದ್ದು ಇಂಡೊನೇಷಿಯಾವು ಇತಿಹಾಸ ಕಂಡರಿಯದ ಕಾಡ್ಗಿಚ್ಚಿನಿಂದ ನಲುಗುತ್ತಿತ್ತು. ಆ ದೇಶದ ಲಕ್ಷಾಂತರ ಜನ ಈ ಕಾಡ್ಗಿಚ್ಚಿನ ಸಂತ್ರಸ್ಥರಾಗಿ ಬಳಲುತ್ತಿರುವುದನ್ನು ಪ್ರಪಂಚದ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್‍ನಂತಹ ಪ್ರಮುಖ ಪತ್ರಿಕೆಗಳು ವರದಿ ಮಾಡಿದ್ದವು. ಬಹುಷ: ಛೋಟಾ ರಾಜನ್ ಕೂಡ ಅಲ್ಲಿನ ಭೀಕರವಾದ ಕಾಡ್ಗಿಚ್ಚಿಗೆ ಬೆದರಿ ಶರಣಾದನೇ ಎಂಬುದು ಕುಹಕವೇ ತಾನೆ] ಸಿಂಗಾಪುರ ಮತ್ತು ಮಲೇಷಿಯಾಗಳ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. … Read more