ಪ್ರಥಮ ಆಂಗ್ಲೋ ಇಂಡಿಯನ್ ಕವಯತ್ರಿ-ತೋರು ದತ್ತ: ನಾಗರೇಖಾ ಗಾಂವಕರ

ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇಹಲೋಕ ತ್ಯಜಿಸಿದ ತೋರು ದತ್ತ ಅವಿಸ್ಮರಣೀಯವೆನಿಸುವ ಕೃತಿಗಳನ್ನು ರಚಿಸಿ ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಒತ್ತಿದ್ದಾಳೆ. ರಾಮ ಬಾಗನ್ ದತ್ತ ಕುಟುಂಬದಲ್ಲಿ 1856 ಮಾರ್ಚ 4ರಂದು ಜನಿಸಿದ ತೋರು ದತ್ತರ ತಂದೆ ಗೋವಿನ್ ಚಂದರ ದತ್ತ. 1862ರಲ್ಲಿ ಕುಟುಂಬ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿತು. ತೋರುವಿನ ಸಹೋದರ ಅಬ್ಜು,ಅಕ್ಕ … Read more

ತೆರೆಯ ಮರೆಗೆ ಸರಿದ ಧೋನಿಯ ಮರೆಯುವ ಮುನ್ನ: ಸತೀಶ್ ಶೆಟ್ಟಿ ವಕ್ವಾಡಿ

ಪ್ರತಿಯೊಂದಕ್ಕೂ ಅಂತ್ಯವಿರಲೆ ಬೇಕು ಮತ್ತು ಆ ಅಂತ್ಯದ ಆರಂಭದ ಮೊದಲೆ ಅಂತ್ಯವಾದರೆ ಆ ಅಂತ್ಯಕ್ಕೊಂದು ಅಂತ್ಯವಿಲ್ಲದ ಇತಿಹಾಸವಿರುತ್ತದೆ. ಹೌದು ಸ್ವಲ್ಪ ಕಷ್ಟವಾದರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುವ ಸಾಲಿದು ಮತ್ತು ಕ್ರೀಡಾಪಟುಗಳಿಗೆ ಅನಂತ ಸಂತೃಪ್ತಿ ನೀಡುವ ಸಾಲಿದು. ಪ್ರತಿಯೊಬ್ಬ ಕ್ರೀಡಾಪಟುವಿಗೂ ತನ್ನ ವೃತ್ತಿ ಜೀವನದ ಅಂತ್ಯದ ಆರಂಭ ಜಗತ್ತಿಗೆ ತಿಳಿಯುವ ಮೊದಲೆ ಗೋಚರಿಸುತ್ತೆ . ಆದರೆ ಅದನ್ನು ಅವನು ಯಾವ ರೀತಿ ನಿರ್ವಹಿಸುತ್ತಾನೆ ಅನ್ನೊದರ ಮೇಲೆ ಅವನ ವೃತ್ತಿಯೋತ್ತರ ಜೀವನ ರೂಪಿತವಾಗುತ್ತೆ. ಎಷ್ಟೋ ಕ್ರೀಡಾಳುಗಳು ಜಗತ್ತು ನಿಬ್ಬೆರಗಾಗುವಂತೆ ತಮ್ಮ ವೃತ್ತಿ … Read more

ಹುಲಿ ಬಂತು ಹುಲಿ: ನಂದಾದೀಪ, ಮಂಡ್ಯ

ಹುಲಿ ಬಂತು ಹುಲಿ ಎಂದು ಅಜ್ಜಿ ಕತೆ ಶುರು ಮಾಡಿ ಹುಲಿ ಜಿಂಕೆನಾ ತಿಂದು ಬಿಡ್ತು ಎಂದು ಕತೆ ಮುಗಿಸುವಾಗ ನಮ್ಮೆಲ್ಲರ ಮನಸಲ್ಲಿ ಹುಲಿ ಎಂದರೆ ಏನೋ ಒಂದು ಅವ್ಯಕ್ತ ಭಯ ಆವರಿಸುತ್ತದೆ..! ಭಯದ ಜೊತೆಗೆ ಹುಲಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ..! ಮೃಗಾಲಯದಲ್ಲಿ ದೂರದಿಂದಲೇ ಹುಲಿಯನ್ನು ಬೆರಗುಗಣ್ಣಿಂದಲೇ ತುಂಬಿಕೊಂಡಿದ್ದು ಉಂಟು..! ಹುಲಿಯ ಮೇಲಿನ ಕುತೂಹಲ ಹೆಚ್ಚಿದಂತೆ ಅದರ ಬಗ್ಗೆ ತಿಳಿಯಲು ಒಂದಷ್ಟು ವಿಷಯಗಳನ್ನು ತಿಳಿಯಲು ಹೊರಟಾಗ ಅದು ಭಯ ಹುಟ್ಟಿಸುವ ಜೀವಿ ಅನ್ನೋದಕ್ಕಿಂತ ಸ್ವಾಭಿಮಾನಿ ಜೀವಿ ಎನ್ನುವುದು … Read more

ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. … Read more

Online Hydroponics ತರಬೇತಿ (ಕನ್ನಡದಲ್ಲಿ)

ಮಣ್ಣನ್ನು ಬಳಸದೆ, ಅವಶ್ಯಕ ಲವಣಾಂಶ ಭರಿತ ನೀರಿನಲ್ಲಿ ನಿಮ್ಮ ಮನೆಯಲ್ಲಿಯೇ ಹಣ್ಣು ತರಕಾರಿ ಬೆಳೆಯುವ ವಿಧಾನದ ಬಗ್ಗೆ ಕೇಳಿದ್ದೀರಾ? ಅದಕ್ಕೆ hydroponics ಅನ್ನುತ್ತಾರೆ. ಅದನ್ನು ನೀವೂ ಕಲಿಯಬೇಕೆ? ಇಲ್ಲಿದೆ ಅವಕಾಶ! ಬೆಳೆಸಿರಿ ಸಂಸ್ಥೆ ಕನ್ನಡಿಗರಿಗಾಗಿ, ಕನ್ನಡದಲ್ಲಿಯೇ ವಿಶೇಷವಾಗಿ ತಯಾರಿಸಿದ ತರಬೇತಿ ಶಿಬಿರ, online ನಲ್ಲಿ… ಅದೂ ವಿಶೇಷ ರಿಯಾಯಿತಿಯೊಂದಿಗೆ !! ಒಬ್ಬರಿಗೆ ಕೇವಲ 999 ಮಾತ್ರ (ಮೂಲ ಬೆಲೆ 1999)! *ಕೆಲವೇ ಸೀಟುಗಳು ಲಭ್ಯ. ಮೊದಲು ಬಂದವರಿಗೆ ಆದ್ಯತೆ. ದಿನಾಂಕ: ಜೂನ್ 21, 2020 – ಭಾನುವಾರ … Read more

ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ: ಪ್ರೀತಿ ಕಾಮತ್

ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ … Read more

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ … Read more

ಅಹಮಿಲ್ಲದ ಮಹಮದರ ಬದುಕೇ ಕವಿತಾಸಾರ: ಡಾ. ಹೆಚ್ಚೆನ್ ಮಂಜುರಾಜ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್‌ ಪ್ರಸನ್ನ

ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ … Read more

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ … Read more

ಬೇಸಿಗೆಯ ಸಂಡಿಗೆ ಹಪ್ಪಳವೆಂಬ ಮತ್ತೊಂದು ಸಂಭ್ರಮ..!!: ರಾಜೇಶ್ವರಿ ಲಕ್ಕಣ್ಣವರ

ಬೇಸಿಗೆಯ ಬಿಸಿಲು ನೆತ್ತಿಯನ್ನು ಕಾವಲಿಯಂತೆ ಕಾಯಿಸುತ್ತಿದೆ ನಿಜ. ಆದರೆ ಬೇಸಿಗೆಯ ಬಿಸಿಲು ಬಂದರೆ ಮಾತ್ರ ಅಜ್ಜಿಗೆ ಹಾಗೂ ಅಮ್ಮನಿಗೆ ಸಂಭ್ರಮ. ತರೇವಹಾರಿ ತಿಂಡಿಗಳನ್ನು ಬೇಸಿಗೆಯಲ್ಲಿ ತಯಾರಿಸಿ ವರ್ಷಪೂರ್ತಿ ಕಾಪಿಟ್ಟುಕೊಳ್ಳಬಹುದಲ್ಲ ಎಂಬ ಸಂತೋಷವೇ ಅವರ ಮೊಗದಲ್ಲಿ ಮನೆ ಮಾಡಿರುತ್ತದೆ. ಮಳೆಗಾಲದಲ್ಲಿ ಜೋರು ಮಳೆಗೆ, ಬೀಸುವ ಚಳಿಗೆ, ಹಬ್ಬದೂಟಗಳಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಮುಂತಾದವುಗಳು ಬೇಕೆ ಬೇಕೆಂಬುದು ಅವರಿಗಲ್ಲದೆ ಮತ್ಯಾರೂ ತಾನೇ ಅಷ್ಟೊಂದು ಚೆನ್ನಾಗಿ ಅರಿಯಲು ಸಾಧ್ಯ. ಇಂತಹ ತಿಂಡಿಗಳನ್ನು ತಯಾರಿಸಲು ಮಳೆಗಾಲ ಹಾಗೂ ಚಳಿಗಾಲ ಪ್ರಾಶಸ್ತ್ಯವಾದ ಸಮಯವಲ್ಲವೆಂದು ಗೊತ್ತಿರುವದರಿಂದ … Read more

ಭಾರತ ಭಾಗ್ಯವಿಧಾತನಿಗೊಂದು ಸಲಾಂ: ನಾಗರಾಜನಾಯಕ ಡಿ.ಡೊಳ್ಳಿನ

ಇತ್ತ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಭಾರತ ಭಾಗ್ಯವಿಧಾತ ಕಾರ್ಯಕ್ರಮ ಧ್ವನಿ ಬೆಳಕು ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತಿತ್ತು. ಆ ಅದ್ಧೂರಿ ಸೆಟ್, ಝಗಮಗಿಸುವ ಬೆಳಕು, ಹಿನ್ನೆಲೆ ಧ್ವನಿ, ಗೊರವರ ಕುಣಿತ, ಪುರವಂತಿಕೆ, ಯಕ್ಷಗಾನ, ಗೀಗಿ ,ತಮಾಷಾ ,ಡೊಳ್ಳು ಇನ್ನಿತರ ಕಲಾಪ್ರಕಾರಗಳ ಕಾರ್ಯಕ್ರಮ ಅದ್ಭುತವಾಗಿದ್ದ ಈ ಕಾರ್ಯಕ್ರಮ ನೋಡುತ್ತಿದ್ದಂತೆಯೇ ನನ್ನ ಮನಸ್ಸು 2008 ರಲ್ಲಿ ಬುದ್ಧವಿಹಾರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಮಹಾವಿದ್ಯಾಲಯದ ಶಿಬಿರದ ಘಟನೆಗಳತ್ತ ಮನಸ್ಸು … Read more

ಕೊನೆಗೂ ದುಷ್ಟ ಸಂಹಾರಕ್ಕೆ ಮುನ್ನುಡಿ: ಭಾರ್ಗವಿ ಜೋಶಿ.

ಬರಿ ಈ ಕೊರೊನ, ಕೊರೊನ ಅಂತ ಆ ಕೀಟದ ಹಾವಳಿಯ ಮಧ್ಯ ಬೇರೆ ಬದುಕನ್ನೆಲ್ಲ ಮರೆತು ಬಿಟ್ಟಿದ್ದೇವೆ. ಹೋದ ತಿಂಗಳು ಭಾರತದಲ್ಲಿ ನಡೆದ ಒಂದು ಘಟನೆ ಇಂದು ಇತಿಹಾಸವೇ ಸರಿ. ನಿರ್ಭಯ ಅನ್ನುವ ಹೆಣ್ಣುಮಗಳನ್ನು ಅಷ್ಟು ಅಮಾನುಷವಾಗಿ ಹಿಂಸಿಸಿ ಕೊಂದ ಪಾತಕಿಗಳನ್ನು ಗಲ್ಲಿಗೆ ಬಲಿಕೊಡಲಾಯಿತು. ಅಂದು ಗಲ್ಲಿನ ಕುಣಿಕೆಗೆ ಕತ್ತು ನೀಡುವಾಗ ಅವರ ಮನಸುಗಳು ಎಷ್ಟು ಒದ್ದಾಡಿರಬಹುದು. ಅಯ್ಯೋ ಸಾವು ಕಣ್ಣಮುಂದೆ ಇದೆ ಎಂದಾಗ ಎಷ್ಟು ಭಯಾನಕ. ನಮ್ಮನ್ನು ಬದುಕಿಸಿ, ಒಂದು ಅವಕಾಶ ಕೊಡಿ ಎಂದು ಕೊನೇ … Read more

ಅವ್ವಣ್ಣಿ: ಗಿರಿಜಾ ಜ್ಞಾನಸುಂದರ್

“ಮಗಾ ಸ್ಕೋರ್ ಎಷ್ಟು?” ಗೇಟ್ ಇಂದ ಹುಡುಗರ ಜೋರಾದ ದನಿ.. “ಯಾರು? ಸ್ಲಿಪ್ಪರ್ ಆ? ನಮ್ ಹುಡ್ಗ ಇಲ್ಲ ಕಣಪ್ಪ” ಅಜ್ಜಿಯ ದನಿ. “ಅಜ್ಜಿ, ಸ್ಕೋರ್ ಎಷ್ಟಾಗಿದೆ?” ” ಚೆನ್ನಾಗಾಡ್ತಿದಾರೆ ನಮ್ಮವರು, ೨೩೮ ಆಗಿದೆ ಬರಿ ೩ ಜನ ಔಟ್… ತಂಡೂಲ್ಕರ್ ಇನ್ನು ಆಡ್ತಿದಾನೆ, ತುಂಬ ಚೆನ್ನಾಗಿದೆ ಆಟ.. ಬಾ ನೀನು ನೋಡಿವಂತೆ” “ಇಲ್ಲ ಅಜ್ಜಿ.. ಟ್ಯೂಷನ್ ಗೆ ಹೋಗ್ಬೇಕು. ಅಮ್ಮ ಬೈತಾರೆ, ಇಂಡಿಯಾ ವಿನ್ ಆಗುತ್ತೆ ಬಿಡಿ… ಖುಷಿ ಆಯಿತು” ಅಂತ ಹೇಳಿ ಸ್ಟೀಫೆನ್ ಹೊರಟ. … Read more

“ಯುಗಾದಿ: ನಿನ್ನೆ-ನಾಳೆಗಳೆಂಬ ಬೇವು-ಬೆಲ್ಲಗಳು”: ಪೂಜಾ ಗುಜರನ್, ಮಂಗಳೂರು

ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. … Read more

ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ : ನಿಯಾಜ್ ಪಡೀಲ್

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ … Read more

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… … Read more

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. … Read more