ಮೂವರ ಕವಿತೆಗಳು: ಹನುಮಂತ ಹಾಲಿಗೇರಿ, ನಾಗರಾಜ್ ಹರಪನಹಳ್ಳಿ, ಅಕ್ಷತಾ ಕೃಷ್ಣಮೂರ್ತಿ

ಮತ್ತೊಂದು ಗೋಮುಖ ಓ ಜನರೆ ನನಗೂ ಬಯಕೆಗಳಿವೆ, ಬಯಕೆ ಬೆಂಕಿಯ ಬೇಗೆ ತಾಳಲಾರೆ,  ಒಮ್ಮೆ ಅನುಭವಿಸಲು ಬಿಡಿ ನಿಮಗೆ ದಮ್ಮಯ್ಯ ಅಂತಿನಿ   ಅನ್ನದೆ ವಿಧಿಯಿಲ್ಲ, ಪ್ರತಿಭಟನೆಯ ದಾರಿ ಕಾಣದ, ಮತಿ ಇರದ ಮಾತು ಬಾರದ, ದನ ನಾನು ಹುಟ್ಟಿದಾಗ ತಾಯಿ ಕೆಚ್ಚಲಿಗೆ ಬಾಯಿ ಹಾಕಿದರೆ ಜಗ್ಗಿ ಕಟ್ಟಿದಿರಿ ತೊರೆ ಬಿಟ್ಟ  ತಾಯ ಕೆಚ್ಚಲ ಬಕೇಟಿಗೆ ಬಸಿದಿರಿ ಮುಸು ಮುಸು ಮುಸುಗುಟ್ಟಿ ಮೌನವಾದಳು ನನ್ನ ಮೂಕ ತಾಯಿ ನನ್ನ ಪಾಲದು ನನಗೆ ಕೊಡಿ ಎಂದು ಹಕ್ಕಿನ ಮಾತಾಡಿಲಿಲ್ಲ … Read more

ಮೂವರ ಕವಿತೆಗಳು

  ಅಮ್ಮ ಲಾಲಿ ಜೋ  ಅಮ್ಮ ನೀನೆ ಬಂದು ನೋಡು  ಬರೆದ ನಾನು ನಿನ್ನ ಮೊಗವ  ನಾ ನಿನಗೆ ತೋರುವ ಮುನ್ನಾ  ಯಾಕೆ ಅಮ್ಮ ದೂರವಾದೆ ಇನ್ನಾ  ಪುಟ್ಟ ಕಂಗಳು ಸುತ್ತ ನೋಡಿ  ಕೇಳುತಿಹವು ನನ್ನಾ … ನೀ ಬಂದು ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ  ಲಾಲಿ ಲಾಲಿ ಜೋ ಲಾಲಿ ಹಾಡೆ  ಅಮ್ಮ    ಕಣ್ಣೆ ಇರದ ಶಿವನೆ ನೋಡು  ಕರುಳ ಬಳ್ಳಿ ಕತ್ತರಿಸಿ ಕೊಟ್ಟ ಅವಳ  ಎದೆಯ … Read more

ನಾಲ್ವರ ಕವಿತೆಗಳು

  ಬಣ್ಣದ ಬದುಕು ಕಣ್ಣ ಕನ್ನಡಿಯಲ್ಲಿ ಇಂದು ಕಾಣುತಿಹುದು ನಿನ್ನ ಬಿಂಬ ಏರಬೇಕು ಮಲ್ಲಗಂಬ ಸಲ್ಲದೆಂದೂ ನಾನು ನನ್ನದೆಂಬ ಜಂಬ.   ಅವನೇ ಜಗದ ಸೂತ್ರಧಾರಿ ನೀನು ಇಲ್ಲಿ ಪಾತ್ರಧಾರಿ ಪ್ರಾಯ ಹೋಗೋ ಮುನ್ನ ಜಾರಿ ಬೆಳೆಯಬೇಕು ಎಲ್ಲ ಮೀರಿ ..!!   ಇದ್ದರೇನು ಪ್ರಾಯ ಸಣ್ಣ ಎಲ್ಲ ಹಚ್ಚ ಬೇಕು ಬಣ್ಣ ನಾವು ಹೆಜ್ಜೆ ಹಾಕಬೇಕು ತುತ್ತ ಚೀಲ ತುಂಬಬೇಕು.   ಕೆಂಪಾದರೇನು ಕಪ್ಪಾದರೇನು? ಹೆಚ್ಚಬೇಕು ಪಾತ್ರದಂದ ಬಣ್ಣಕಿಂತ ನಗುವೇ ಚಂದ ನಗುವು ಮಾಸದಿರಲಿ ಕಂದ … Read more

ಮೂವರ ಕವಿತೆಗಳು: ಕಮಲ ಬೆಲಗೂರ್, ನರಸಿಂಹಮೂರ್ತಿ ಎಂ.ಎಲ್., ಮಾಧವ

  ಬಡವ ಸಿರಿಯು ಬರಿದಾದ  ಸಾಮ್ರಾಜ್ಯದಿ  ಗರಿಕೆದರಿದೆ ಬದುಕು ….    ಬೇಡಿಕೊಂಡಿದ್ದಲ್ಲ  ಅರಸೊತ್ತಿಗೆ  ವಂಶಪಾರಂಪರ್ಯವಾಗಿ  ಸಂದ ಬಳುವಳಿ  ಅವನ ಬದುಕಿಗೇ …..    ಮಾಡು ಗೋಡೆಗಳಿಲ್ಲದ  ಗೂಡೇ ಅವನರಮನೆಯು  ಕಡುಕೋಟಲೆಗಳ  ಹಾರತುರಾಯಿ  ತಾತ್ಸಾರ ಕುಹಕಗಳ  ಬಹು ಪರಾಕು….    ಹುಟ್ಟಿಗೆ ಸಂಭ್ರಮವಿಲ್ಲ  ಸಾವಿಗೆ ಶೋಕವಿಲ್ಲ  ಎಲ್ಲವೂ ಆಕಸ್ಮಿಕವಿಲ್ಲಿ  ನಿಟ್ಟುಸಿರು, ಹಸಿವು  ಆಕ್ರಂದನಗಳ  ಜೋಗುಳದೊಂದಿಗೆ  ಬದುಕಿನ ಸೋಪಾನ …..    ಹಾಸಿಗೆಯಿದ್ದಷ್ಟೇ  ಕಾಲು  ಚಾಚೆಂಬ ಪರಿಪಾಠ  ಪಟ್ಟು ಬಿಡದ ಹಠ  ಪ್ರಾಮಾಣಿಕತೆಯಾ ಶ್ರೀರಕ್ಷೆ ….   ಸಿರಿಯು … Read more

ಮೂವರ ಕವಿತೆಗಳು:ಸಚಿನ್ ನಾಯ್ಕ್, ಮಮತಾ ಕೀಲಾರ್, ಸಂದೀಪ್ ಫಡ್ಕೆ

  ಮುಸ್ಸಂಜೆಯ ಮರುಕ ಉಸಿರಲ್ಲಿನ ಹಸಿವು ನೀಗಿಸಲಾಗದು ಜೀವ ಜೈತ್ರ ಯಾತ್ರೆ ಮುಗಿಯುವ ತನಕ. ಆದರೆ, ಇಂದು-ನಿನ್ನೆಗಳು ತೋರಿದ ಅಸಹನೆಗೆ ಅಂಜಿ, ನಾಳೆಯೆನ್ನುವ ಕನಸು ಮುರಿದು ಬಿದ್ದಿದೆ. ಇಟ್ಟ ದಿಟ್ಟ ಹೆಜ್ಜೆಗಳೇ ಸಮೀಕರಿಸುತ್ತಿವೆ ರತ್ನಗಂಬಳಿಯ ರಹದಾರಿ, ನಾ ಬಲ್ಲದ ನಾಡಿಗೆ ! ಸೋತು ಸುಣ್ಣವಾದ ತನು-ಮನಗಳ ವಿನಂತಿಗೆ ನೆರವಾಗುವವರು ಕಾಣುತ್ತಿಲ್ಲ. ಇಳಿ ಹೊತ್ತು,ಇಳಿ ವಯಸ್ಸಿಗೆ ಲೇವಡಿ ಮಾಡುತ್ತಿದೆ, ಅಟ್ಟಹಾಸದ ನಗು ಬೀರುತ್ತಿದೆ, ನಾನಿಲ್ಲದ ತೇದಿಗೆ ಕಾತರಿಸುತ್ತಿರುವಂತಿದೆ.   ಸೂರ್ಯ ರಶ್ಮಿಗೆ ಮೈಯೊಡ್ಡುವ ನವಜಾತ ಶಿಶುಗಳ ಕಂಡಾಗ ಒಂದೇ … Read more

ಇಬ್ಬರ ಕವಿತೆಗಳು: ನರಹರಿ ಭಟ್ಟ, ವೈ.ಬಿ. ಹಾಲಬಾವಿ

  ದೂರದೂರಿನ ಚಿಂತೆ…. ಏನಂತರಾಳಗಳು ಏನಗ್ನಿಜ್ವಾಲೆಗಳು ದಾಹಗಳ ಗಾಳಗಳ ನರ್ತನೋನ್ಮಾದಗಳು ಅರ್ಧಸತ್ಯದ ಮೆಲಕು ವಿಶ್ರಾಂತಿ ಬೇಡದೆಯೆ ಪೂರ್ಣಸತ್ಯದ ತಾಣ ಹುಡುಕುತಿಹುದು||೧||   ದೇಹಪಂಜರ ತೊರೆವ ಪ್ರಾಣಪಕ್ಷಿಯ ತವಕ ಹುಟ್ಟುಸಾವಿನಗುಟ್ಟ ಹೊರಗೆಳೆವಯತ್ನ ಒರೆಯಿಂದ ಹೊರಗೆಳೆದ ಕತ್ತಿಯಲಗಿನ ತೆರದಿ ಚರ್ಮಚೀಲದ ಹಂಗು ತೊರೆದು ಹೊರಟಂತೆ||೨||   ಬದುಕು ಭಾವನೆಯೆಲ್ಲ ಕರಗಿ ಸೋರಿದೆ ಹೃದಯ ಕಣ್ಪನಿಯು ಕಾರಣವ ಹುಡುಕ ಹೊರಟಿದೆ ಚೆಲುವ ಸುಪ್ತ ಮನಸಿನಭಾವ ಮುಪ್ಪಾಗಿ ಹಿಂಜುತಿದೆ ಉಪ್ಪೆಲ್ಲ ಕರಗಿ ಗಡಸು ನೀರಾದಂತೆ||೩||   ಅನುಭವದ ಜಾಳೆಲ್ಲ ಕುಸಿದು ಜಾರಿದೆ ಧರೆಗೆ … Read more

ಎರೆಡು ಕವಿತೆಗಳು:ಅನುರಾಧ ಸಾಮಗ ಹಾಗೂ ಪ್ರೇಮಾಶ್ರೀ

  ಕಣ್ಣೀರಿಗೂ, ಎದೆಯ ಆರ್ದ್ರತೆಗೂ ಒಪ್ಪಿಗೆ ಮುದ್ರೆಯ ಪ್ರಮಾಣ ಪತ್ರವೇ?! ಅವು ತಮ್ಮ ಸಾಬೀತು ಪಡಿಸಬೇಕೇ?.. ಸ್ಪಂದನಕಿಲ್ಲಿ ಜಾತಿಯಗ್ನಿಪರೀಕ್ಷೆಯ ಪಾಡು ನಿಜಭಾವಕೆ ಬಂಜೆಯ ಹೆರಿಗೆಬೇನೆಯ ಪಟ್ಟ   ರಕ್ತಮಾಂಸಗಳೊಂದೇ, ದೇಹಗೂಡೊಂದೇ ವಾಸವಲ್ಲಿ ನೂರಾರು ಹಕ್ಕಿಯಂಥ ಭಾವಗಳಿಗೆ. ಬಣ್ಣ, ಗಾತ್ರ, ಕೂಗಷ್ಟೇ ಬೇರೆಬೇರೆ, ಹಾರಾಟ ಜನ್ಮಸಿದ್ಧಹಕ್ಕು ಹಕ್ಕಿ ಜನ್ಮಕೆ. ನೀ-ನಾನೆಂಬ ನಿರ್ಬಂಧವಿಲ್ಲದ ಸ್ವಚ್ಛಂದ ಚಲನೆ.   ಶೋಷಣೆಗೆದುರು ನಿಂತವರೇ, ಘೋಷಣೆ, ಬಾವುಟದಾಸರೆಯಿರದಲ್ಲೂ, ಯಾವ ಜೀವ-ಬಂಧುವಿನದಾದರೂ, ಹಸಿವೆ-ದಾರಿದ್ರ್ಯಕೆ, ದಮನ-ಅಸಮಾನತೆಗೆ ಸಾವು-ನೋವಿಗೆ ಒಳಗಿಲ್ಲೆಡೆ ಕರಗುತದೆ.. ಅನ್ಯಾಯಕೆ ಒಳಗೆಲ್ಲೆಡೆ ಮರುಗುತದೆ, ದಬ್ಬಾಳಿಕೆಗೆ ಒಳಗೆಲ್ಲೆಡೆ … Read more

ಕವನಗಳು:ಪೂರ್ಣಿಮಾ ಹಾಗೂ ಹಿಪ್ಪರಗಿ ಸಿದ್ದರಾಮ್

  ಆಸ್ಪತ್ರೆಯಲ್ಲಿ ಅಮ್ಮ ಖಾಯಿಲೆಯಾದಾಗ ತುತ್ತು ತಿನ್ನಿಸಿದ್ದವಳಿಗೆ ಏಕೋ ತೃಪ್ತಿಯಾಗಲಿಲ್ಲ, ತನ್ನ ಅಮ್ಮ ಚಂದ್ರನ ತೋರಿಸಿ ತಿನಿಸಿದ್ದ ತುತ್ತುಗಳ ನೆನಪಾಗಿ …   ಹತ್ತು ಕಥೆ ಹೇಳು ಎಂದು ಅಜ್ಜನ ಕೈ ಜಗ್ಗಿದಾಗ, ಕೈ ಹಿಡಿದು ಹಳ್ಳಿಯೆಲ್ಲ ಹೆಜ್ಜೆ ಹಾಕಿಸಿದ ಕಣ್ಣ ಮುಂದೆ ನೂರು ಕಥೆಗಳು ಸರಿದಾಡಿದವು…   ಪುಟ್ಟ ಮನೆಯನ್ನು ಹಿಗ್ಗಿಸಲು ತಾನೆ ಬೆಳೆಸಿದ ಅಂಗಳದಲ್ಲಿನ ಮರಗಳನ್ನು ಕೆಡವಿದ, ಅದೊಂದು ದಿನ ತಣ್ಣನೆಯ ವಾತಾವರಣ ಹುಡುಕುತ್ತ ಹೊರಟವನು ಬೇರೆಯವರು ಬೆಳಸಿದ್ದ ಮರಗಿಡಗಳ ಪಾರ್ಕಿನಲ್ಲಿ ಕುಳಿತ…   … Read more

ಮೂವರ ಕವನಗಳು:ಈಶ್ವರ ಭಟ್,ಎಂ.ಎಸ್.ಕೃಷ್ಣಮೂರ್ತಿ,ಅಶೋಕ್ ಕುಮಾರ್ ವಳದೂರು

  ಆವರ್ತಿತ ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು ಕಿರಣಗಳು ಹೊಳಪಿಸಿದ ಬಣ್ಣಗಳನು ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು? ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.  ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ ಮೂಡಿ ಕಾಮನಬಿಲ್ಲು ಹನಿಗಳೊಳಗೆ ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ ಮೀರಿ ಸಾಗುವ ಮನಕೆ ಎಷ್ಟು ಘಳಿಗೆ? ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ? ಆರಿಹೋಗುವುದೇನು ಖಚಿತ ಸಾವೆ? ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು ರಾತ್ರಿ ಬೆಳಗಿನ ವರೆಗೆ ಸುಖದ ನಾವೆ ನಾಳೆ ನಾ ಕಾಯುವೆನು … Read more

ಹೇಳಿ-ಕೇಳಿ…: ಗೋಪಾಲ ವಾಜಪೇಯಿ

  ನಾಲ್ಕು ಮಾತ ನೀನು ಹೇಳು, ನಾಲ್ಕು ನನ್ನ ಮಾತ ಕೇಳು…  ನಾಲ್ಕು ದಿನದ ಬಾಳು ಅಲ್ಲಾ, ನಾಲ್ಕು ಹೆಜ್ಜಿ ನಡೆಯಿದಲ್ಲಾ… ಹೇಳಿ-ಕೇಳಿ, ಕೇಳಿ-ಹೇಳಿ ಬಾಳಿ ಬದುಕುವಾ…  ಗೆಳತಿ, ಬಾಳಿ ಬದುಕುವಾ… ಬಾರೆ, ಬಾಳಿ ಬದುಕುವಾ…                                          ನಾಲ್ಕು ಜನರ ಓಣಿಯೊಳಗ, ನಾಲ್ಕು ಜನರು ಬಂಧು ಬಳಗ…  ನಾಲ್ಕು ಹೆಜ್ಜಿ ತಪ್ಪದಾಂಗ, ನಾಲ್ಕು … Read more

ಮೂವರ ಕವನಗಳು: ರಾಜಹಂಸ, ಸೋಮೇಶ್ ಎನ್ ಗೌಡ, ಕೆ.ಮುರಳಿ ಮೋಹನ್ ಕಾಟಿ

ಭೂಲೋಕದ ಸ್ವರ್ಗ ಭೂಲೋಕದ ಸ್ವರ್ಗ ಈ ಕರ್ನಾಟಕ ಯಾತ್ರಿಕರ ಹೃದಯಕ್ಕೊಂದು ಪುಳಕ ಕೈಮುಗಿದು ಬಿನ್ನಹಿಸಿ ಈ ನಾಡಿಗೆ ನಮ್ಮಮ್ಮ ಭುವನೇಶ್ವರಿ  ಮಾತೆಗೆ   ಹಗಲಿರುಳು ದುಡಿಯಿರಿ ವಾಙ್ಮಯದಭಿವೃದ್ಧಿಗೆ ಎಡಬಿಡದೆ ಶ್ರಮಿಸಿರಿ ಸಿರಿಗನ್ನಡದೇಳಿಗೆಗೆ ಎಂದೆಂದಿಗೂ ಕಡೆಗಣಿಸದಿರಿ ಸವಿಗನ್ನಡನುಡಿಗೆ ಸಿರಿಗನ್ನಡನಾಡಿಗೆ ಚಿನ್ನದ ಮಣ್ಣಿಗೆ ಪುಣ್ಯದ ಭೂಮಿಗೆ ಬೆಳದಿಂಗಳಬೀಡಿಗೆ   ಉಸಿರಿರುವರೆಗೂ ನುಡಿಯಲಿ ನಮ್ಮ ನಾಲಿಗೆ ಅಮೃತ ಸವಿಯ ಜೇನು ರುಚಿಯ ಕನ್ನಡ ನುಡಿಗೆ ಒಗ್ಗಟ್ಟಾಗಿ ಹೋರಾಡ ಬನ್ನಿರಿ ತಾಯಿನಾಡಿನರಕ್ಷಣೆಗೆ ಕನ್ನಡದ ಛಲವೊಂದೆ ಕನ್ನಡದ ನೆಲವೊಂದೆ ಕನ್ನಡದ ನುಡಿವೊಂದೆ ಕನ್ನಡದ ಮನವೊಂದೆ!  … Read more

ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ

    ಕ್ಲಬ್ಬಿನಲಿ ಕವಿದ ಮಬ್ಬು ಬೆಳಕಿನ ಮುಸುಕಿನಲ್ಲಿ ಉನ್ಮಾದದ ಝಲಕು ಮೂಲೆಯಲಿ ಒತ್ತಿ ನಿಂತವರ ಸುತ್ತ ಸೆಂಟಿನ ಘಾಟು ಬಣ್ಣ ಬಣ್ಣದ ಶೀಷೆಗಳಲ್ಲಿ ಕಣ್ಮುಚ್ಚಿ ತವಕಿಸಿದೆ ಜೀವೋನ್ಮಾದ ಇಲ್ಲಿ ಪರಿಮಳವೂ ಉಸಿರುಗಟ್ಟಿಸುತ್ತದೆ ಬೆಳಕೂ ಕಪ್ಪಿಟ್ಟಿದೆ…   ರಾತ್ರಿ ಪಾಳಿಯ ಬಡ ದೇಹಕ್ಕೂ ದುಬಾರಿ ಸಿಗರೇಟೇ ಬೇಕು ಸುಡಲು ನಗರ ವ್ಯಾಮೋಹದ ಕಿಡಿಯಲ್ಲಿ ಹಳ್ಳಿಗಳೆಲ್ಲ ವೃದ್ಧರ ಗೂಡು-ಸುಡುಗಾಡು ಇಲ್ಲ ಶಹರದಲಿ ತಾರೆಗಳ ಹೊಳಪು ಇರುಳೆಲ್ಲ ಕೃತಕ ದೀಪಗಳ ಬಿಳುಪು ನುಗ್ಗಿ ಬರುವ ಪತಂಗಗಳ ಜೀವ ಭಾವ – … Read more

ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು

  ನಾಲ್ಕು ಗೋಡೆಗಳು ನಾಲ್ಕು ಮೂಲೆಗಳು ಜೇಡರಬಲೆಯೊಳಗಿಂದ ನುಗ್ಗಿದ್ದ ಧೂಳು, ನನ್ನ ಮುಖದ ಮೇಲೊಷ್ಟು ನೋವ ಮುಚ್ಚುವ ಕತ್ತಲು, ಹಿಡಿ ಸುಣ್ಣದ ಪುಡಿ ತೂರಿದಂತೆ ಬೆಳಕು, ಸುತ್ತಲೂ   ನನ್ನನ್ನೇ ದುರುಗುಟ್ಟುತಿದ್ದ ನೆರಳುಗಳೇ ಮೆಲ್ಲಗೆ ಮೂರ್ನಾಲ್ಕು ಬಾರಿ ಪಿಸುನುಡಿದಂತೆ ಧೂಳ ಕಣಗಳ ನಡುವೆ "ಸತ್ತರೆ ಮಣ್ಣ ಸೇರುತ್ತಾನೆ ಕೊಳೆಯದಿದ್ದರೆ ಕೊಳ್ಳಿ ಇಡುವ ಬೂದಿಯಾಗಲಿ ಮೂಳೆ"   ಬಾಗಿಲ ಕಿಂಡಿಯಲ್ಲಿ ತೂರಿ ಬಂದ ತಂಡಿ ಗಾಳಿ ಎದೆಯ ಬೆವರ ಬೆನ್ನ ನೇವರಿಸಿದ ಸಾಂತ್ವಾನ, ಜೊಲ್ಲು ಇಳಿಸುತ್ತಾ ಅಡಗಿದ್ದ ಜೇಡರ … Read more

ಮೂವರ ಕವಿತೆಗಳು: ಪ್ರೀತೀಶ, ದಿಲೀಪ್ ರಾಥೋಡ್, ಸ್ವರ್ಣ ಎನ್.ಪಿ.

  ನೀ ಕೊಟ್ಟೆ ಪರೀಕ್ಷೆ ಸೀತೆ, ನೂರು ದುಗುಡಗಳ ತುಂಬಿಕೊಂಡು ಸುಮ್ಮನೆ ಕೂತುಬಿಟ್ಟೆಯಲ್ಲೇ ಶೋಕವನದೊಳಗೆ;   ಅಯ್ಯೋ ಪಾಪ ಸೀತೆ ಅಷ್ಟೈಶ್ವರ್ಯ ಬಿಟ್ಟು ಕಾಡಿಗೆ ಹೋದಳು ಎಂದು ನೊಂದ ಕವಿಯ ಕಂಡು ನೊಂದುಕೊಂಡೆವಲ್ಲೇ? ಹೊಳೆಯಲೇ ಇಲ್ಲ ನಮಗೆ ನಿನಗೆ, ನಿನ್ನ ಜೊತೆಗೆ ಕೈ ಹಿಡಿದು ನಡೆವ ಕಣ್ಣೀರು ತೊಡೆವ ಮುತ್ತುಗಳ ಮತ್ತಿನಲ್ಲಿ ಮೈಮರೆಸುವ, ಚಿಗುರುತ್ತಿಹ ಜವ್ವನದ ಸಂಭ್ರಮಗಳ ತಣಿಸುವ ನಲ್ಲನಿದ್ದಾನೆಂದು! ಉರ್ಮಿಳೆಯಂತೆ ಬರೀ ವೈಢೂರ್ಯಗಳು ಮಾತ್ರ ಇಲ್ಲವೆಂದು.   ಕೂತು ಬಿಟ್ಟೆ ನೆಪವಾಗಿ ಕೈಕಾಲು ಆಡಿಸದೆ ರಾವಣ … Read more

ಮೂವರ ಕವಿತೆಗಳು: ಜಮುನಾ ಪ್ರದೀಪ್, ವೀಣಾ ಭಟ್, ಶ್ರೀವತ್ಸ ಕಂಚೀಮನೆ

ನನ್ನವಳು ನನ್ನವಳು ಹೂರಾಣಿ ನಾನವಳ ಆರಾಧಕ ಆಸ್ವಾದಿಸುತ ಆಘ್ರಾಣಿಸುತ ಆಧರಿಸುತ ಸವಿಯಬೇಕು ಅವಳ ಸೌಂದರ್ಯದ ಸಿರಿಯ ಬಿಂಕ ಬೆಡಗಿನ ಒಯ್ಯಾರದ ಪರಿಯ ಹೇಳುವಾಸೆಯು ನನಗೆ ಬೆರಗುಕಂಗಳಲಿ- "ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!"   ನನ್ನವಳು ಭಾವುಕಳು ನಾನಾಗಲಾಸೆ ಅವಳು ಬಯಸುವ ಸ್ವಪ್ನ ನಾಚುತಲಿ  ನಗುನಗುತ ಕನವರಿಸಿ ಕರಗಿ ಮಿಡಿಯಲಿ ಮೌನವೀಣೆ ಝೇಂಕರಿಸಿ ಖುಷಿಯಲ್ಲಿ ಜಗವ ಮರೆತು..   ನನ್ನವಳು ಜಲಪಾತ ನಾನಾಗಬೇಕು ಜಾರಿಸಾಗುವ ನಡುವಿನ ಕಲ್ಲುಹಾಸಿನ ಧರೆಯು ನನ್ನ ಅಪ್ಪುತಲಿ ಹೊಸಕುತಲಿ ಬಳುಕುತಲಿ ಜಿಗಿಯಬೇಕು ರೌಧ್ರ ರಭಸದಿ … Read more

ಮಳ್ಳೋ ಮಬ್ಬೋ…: ಗೋಪಾಲ ವಾಜಪೇಯಿ

  ಬಟ್ಟ ಬಯಲ ನಟ್ಟ ನಡವ ಒಂದು ಬೇಲಿಯು… ಬೇಲಿ ಮ್ಯಾಲೆ ನಗುವ ಹೂವು ಬೇಲಿ ಒಳಗ ಚಿಣಿಗಿ ಹಾವು – ಬೇಲಿ ಆಚಿ ನನ್ನ ಕರೆಯೋ ಚೆಲುವಿ ಬಾಲಿಯು                           II೧II   ಬಾಲಿ ಹಿಂದ ಬಲಿತು ನಿಂತ ಕೆಟ್ಟ ರಾಕ್ಷಸ ಹಲ್ಲುಹಲ್ಲು ಮಸಿಯುತಾನ ಕಲ್ಲಿ ಮೀಸಿ ತಿರುವುತಾನ – ಕೊಲ್ಲತೀನಿ ಅಂತ ಅಟ್ಟಹಾಸ ಮೆರೆಯುತ     … Read more

ಅತ್ತು ಹಗುರಾಗುವ ಭಯ : ರಘುಚರಣ್

ಎದುರಾದ ಕಣ್ಣುಗಳೆಲ್ಲ ಬತ್ತಿದ ಕೊಳಗಳು.. ನೀರಿಲ್ಲವೆಂದಲ್ಲ.. ಪ್ರತಿ ಹನಿಯೂ ಅಂತರ್ಗಾಮಿ..   ನೋವು ದುಃಖದ ಹೊಳೆಗಳಬ್ಬರಿಸುತಿದ್ದರೂ ಅಹಮಿಕೆಯ ಪರದೆಯಡಿ ಮಡುಗಟ್ಟಿ ನಿಂತಿವೆ..   ಪರದೆ ಹರಿಯುವ ತವಕ ಪ್ರತಿಯೊಂದು ಹನಿಗೆ.. ಸೋತ ಭಾವದ ನಡುಕ ಗರ್ವಗಳ ದನಿಗೆ..   ಒಳಗೊಳಗೆ ಕುಸಿದಿಹುದು ಆಂತರ್ಯ ಸೌಧ ಮುಖದ ನಗುವಿಗೆ ತಪ್ತ  ಮನಸೇ ವಿರೋಧ   ಇನ್ನಾದರೂ ಕಳಚಿ ಬೀಳಲಿ ಬಿಗುಮಾನದ ಬೆರಗು ಕಣ್ಣ ಹನಿಯೇ ಹೊರಬಂದು ಕಪೋಲದಲಿ ಕರಗು….     -ರಘುಚರಣ್

ಇಬ್ಬರ ಕವಿತೆಗಳು : ಎಂ.ಎಂಸ್. ಕೃಷ್ಣಮೂರ್ತಿ, ಮೋಹನ್. ಡಿ.

ಇರಲಿರಲಿ ಈ ಗರ್ಭ ಪ್ರಸವಕ್ಕಿನ್ನೂ ಒಂಬತ್ತು ದಿನ ಒಂಬತ್ತು ನಿಮಿಷ ಒಂಬತ್ತು ಘಳಿಗೆಗಳಿವೆಯಂತೆ ಏದುಸಿರು ನಿಟ್ಟಿಸುರಿನೊಂದಿಗೆ ಮಿಳಿತವಾಗಿದೆ ಗರ್ಭ ಕಟ್ಟುವುದು ಒಂದು ಅಮೃತ ಘಳಿಗೆಯಂತೆ ಸತ್ತ ವೀರ್ಯದ ಜೋತೆಗೆ ಒಂದೇ ಒಂದು ಗೆದ್ದ ವೀರ್ಯ ಕಾದು ಕುಳಿತ ಅಂಡಾಣು ಕೂಡುವಿಕೆಗೆ ಮಹೂರ್ತವಿಟ್ಟುಕೊಂಡಿರಬೇಕಂತೆ ಮನಸ್ಸು ಮನಸ್ಸು ಒಂದಾಗಿ ಆದರೆ ನನ್ನದು ಕೊಳಕು ಮನಸ್ಸಿನ, ಅವನ ದೇಹ ಮುಗಿಬಿದ್ದು ತೆವಲು ತಿರಿಸಿಕೊಳ್ಳಲು ತೊಟ್ಟಿಯೊಳಗೆ ಸುರಿವ ಕೊಳಕಿನಂತೆ ಸ್ರವಿಸಿ ಬಿಟ್ಟ ವೀರ್ಯಧಾರೆ ಮನಸ್ಸು, ದೇಹವನ್ನು ಕಿತ್ತು ತಿಂದು ಅತ್ಯಾಚಾರ ಮಾಡಿಟ್ಟುಬಿಟ್ಟ ಆ … Read more

ಪ್ರೀತಿಯೆಂದರೆ…

ಪ್ರೀತಿ ಪ್ರೀತಿಯೆಂಬುದು ಬರಿಯ ಭಾವಗಳೆಂಬ ಅಪ್ಪಳಿಸುವ ಅಲೆಗಳ ಭೋರ್ಗರೆವ ಸಮುದ್ರವಲ್ಲ, ಎಂದೋ ಪೌರ್ಣಿಮೆ-ಅಮಾವಸ್ಯೆಗಳಲಿ ಮಾತ್ರವೇ ಚಂದಿರನಿಗಾಗಿ ಹಾತೊರೆವ ಮೋಹವಲ್ಲ, ಒಡಲಲಿ ಸಾವಿರ ಗುಟ್ಟುಗಳನಿಟ್ಟ, ಒಮ್ಮೆ ಈಜಲೇ ಬೇಕೆಂಬ ಕುತೂಹಲವಲ್ಲ, ಶಾಂತತೆಯ ತೋರಿಕೆಯಲಿ ಒತ್ತಡವ ತನ್ನೂಳಗೆ ಬಚ್ಚಿಟ್ಟು, ಕಡೆಗೆ ಸುನಾಮಿಯೆಬ್ಬಿಸುವ ಭಯಂಕರತೆಯಲ್ಲ, ಸಿಹಿನದಿಗಳ, ಕರಗುವ ಹಿಮವನೆಲ್ಲವ ಕಬಳಿಸಿ ವಿಸ್ತಾರವಾಗುತಲಿ, ತೀರವ ಕೊರೆವ ಸ್ವಾರ್ಥವಲ್ಲ, ಎಂದಿಗೂ ಉಪ್ಪೇ ಆಗಿರುವ, ಕುಡಿಯಲೇ ಆಗದ ಜಲವಲ್ಲ, ದಿನವೂ ರವಿಯೊಡನೆ ಸರಸವಾಡುತಲಿ, ರೂಪ-ನೋಟಗಳಲಿ ಕಣ್ಸೆಳೆಯುವ ಆಕರ್ಷಣೆಯಲ್ಲ, ದಡದ ಮರಳಿನ ಮೇಲೆ ಗಿಚಿ ಮರೆಯಾದ ಹೆಸರಲ್ಲ, … Read more

ಮೂರು ಕವನಗಳು

ಬತ್ತಿಹುದು ಕಾಲುವೆ- (ಕಂಬನಿ)   ಕಾಲುವೆಯ ಮೇಲೆ ಕುಳಿತು ಕಲ್ಚಾಚಿ ಒಂದೊಂದೇ ಕಲ್ಲು ಎಸೆದು ತಿಳಿ ನೀರಲ್ಲಿ ಸಣ್ಣ ಸಣ್ಣ ಅಲೆ ಎಬ್ಬಿಸಿ ಕಂಡ ಕನಸುಗಳು ಸವಿ ಅಂದು   ಯಾವುದೊ ದೂರದೂರ ಜನ ಸಾಗರವಿದು ಕಲ್ಮಶವಿಲ್ಲದ ಪುಟ್ಟ ಪುಟ್ಟ ಕಂಗಳು ತಿಳಿ ಮನದ ಸರೋವರ ಶಾಂತ ಚಿತ್ತ, ಬರಿ ಕನಸುಗಳ ನನಸಾಗಿಸೋ ಗುರಿ ಮಾತ್ರ   ಕಣ್ಣ ಅಳತೆಗೂ ಮೀರಿದ ಬೇಲಿ ಇತ್ತು  ಸುತ್ತ ಕಣ್ಣ ತಪ್ಪಿಸಿ ಅದಾರು ಬಂದವರು ತಿಳಿಗೊಳವ ಕಲಕಿ ಮೌನದ ಮುಸುಕೊದ್ದು … Read more