ಇಳಿ ಸಂಜೆಯ ಮೌನ… ಮಂಜುಗಣ್ಣಿನ ಮಾತು:ಶ್ರೀವತ್ಸ ಕಂಚೀಮನೆ

  ಏಳು ದಶಕಗಳ ಹಣ್ ಹಣ್ಣು ಬದುಕು…ಹೆಸರು ಆನಂದರಾವ್… ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ… ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ "ಎಷ್ಟುಕಾಲ ಬದುಕಿದ್ದೊಡೇನು – ಜೀವಿಸಲಾಗದಿದ್ದೊಡೆ ನನ್ನಂತೆ ನಾನು…" ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ…ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ… ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ…ಸೊಗಸಾದದ್ದು, ಆಹ್ಲಾದವನೀಯುವಂಥದ್ದು…ಪುಟ್ಟ ಪುಟ್ಟದು…ಆಸ್ವಾದಿಸಿದರೆ … Read more

ಭ್ರಮೆ:ಪ್ರವೀಣ್ ಕೆ

  ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ.  ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ.  ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.   ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು.  ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ.  ಅದಕ್ಕೇನ್ ತಲಿ … Read more

ಕಾಮಾತುರಾಣಾಂ: ಉಪೇಂದ್ರ ಪ್ರಭು

'ಏ ಚೆನ್ನಾಗಿ ಥಳಿಸು. ಜೀವಮಾನವಿಡೀ ಮರೀಬಾರ್ದು. ಮಾನಗೇಡಿ, ಏನಂದ್ಕೊಂಡಿದ್ದಾನೆ?' 'ಹಾಡುಹಗಲಲ್ಲೇ ಈ ಥರ ವರ್ತಿಸೋರು ಇನ್ನು ರಾತ್ರೆ ಏನೆಲ್ಲಾ ಮಾಡಿಯಾರೋ?' 'ಎಷ್ಟು ಕೊಬ್ಬು. ಅವಳ ಅಪ್ಪನ ವಯಸ್ಸಾಗಿರಬಹುದು!' 'ಕಾಮಾತುರನಿಗೆ ಎಲ್ಲಿಯ ಭಯ , ಎಲ್ಲಿಯ ಲಜ್ಜೆ !' 'ಎಲ್ಲಾ ಈ ಕುಡಿತದಿಂದ.  ದಿನಾ ನೋಡ್ತಿದ್ದೀವಿ. ಮಧ್ಯಾಹ್ನ, ಸಂಜೆ, ರಾತ್ರೆ, ಹೊತ್ತಿಲ್ಲ ಗೊತ್ತಿಲ್ಲ, ತೂರಾಡುತ್ತಲೇ ಇರುತ್ತಾನೆ.  ಈ ಗೌರ್‍ಮೆಂಟ್ನವ್ರೂ ಅಷ್ಟೆ. ತಮ್ಮ ಲಾಭಕ್ಕೆ ಎಲ್ಲಾರ್ಗೂ ಲೈಸನ್ಸ್ ಕೊಟ್ಟ್‍ಬಿಟ್ಟಿದ್ದಾರೆ. ಹೆಜ್ಜೆಗೊಂದೊಂದು ಬಾರ್, ಸಾರಾಯಿ ಅಂಗಡಿ!'  'ಚಪ್ಲಿಯಿಂದ ಬಾರಿಸ್ರೋ, ಸತ್ರೂ ಸಾಯ್ಲಿ. … Read more

ಹೀಗೊಂದು ಕಥೆ: ಸುನಿಲ್ ಗೌಡ

  "ಎಲ್ಲಾ ಕೆಲ್ಸ ಮುಗ್ಸಿ ತಿಂಡಿ ಮಾಡಿದ್ರು ಇನ್ನೂ ಬಿದ್ದಿದ್ದೀಯಲ್ಲಾ, ಚಿಂತೆ ಇಲ್ದೋನ್ಗೆ ಚಿತೆ ಮೇಲೆ ಮಲ್ಗಿಸಿದ್ರು ನಿದ್ದೆ ಬರ್ತವಂತೆ. ಎದ್ದು ತೋಟ ನೋಡೋಗೊ ಸೋಮಾರಿ, ಈಗೀನ್ ಕಾಲದ್ ಹುಡುಗ್ರು ಮಲ್ಗದು ಏಳದು ಯಾವ್ದು ಸರಿ ಮಾಡಲ್ಲ". ಅಡುಗೆಯ ಮನೆಯಿಂದ ವಗ್ಗರಣೆಯ ತುಪ್ಪದ ವಾಸನೆ ಜೊತೆ ಸರ್ರನೆ ಬಂದ ಅಮ್ಮನ ಧ್ವನಿಗೆ ಕಿವಿ ಮುಚ್ಚಿ ವಗ್ಗರಣೆಯ ವಾಸನೆಯನ್ನು ಆಸ್ವಾದಿಸಲು ಮುಂದಾದೆ, "ಏಳ್ತೇನೆ ತಡಿಯಮ್ಮ, ಯಾಕೆ ಈ ತರಹಾ ಕಿರುಚ್ತೀಯ, ಆ ವಾಯ್ಸ್ ನನ್ ಕಿವೀಲಿ ಕೇಳೋಕೆ ಆಗಲ್ಲಾ.." … Read more

ತಂತ್ರ: ರಾಘವೇಂದ್ರ ತೆಕ್ಕಾರ್

  ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ. ಏನು? ಎಂದಿದ್ದೆ. ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ. ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ. ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ. ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು … Read more

ವಿಪರ್ಯಾಸ: ಬದರಿನಾಥ ಪಲವಳ್ಳಿ

  ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ. ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ. ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು … Read more

ಕನಸು: ಗಣೇಶ್ ಖರೆ

ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು  ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ … Read more

ಮರೀಚಿಕೆ: ಶಶಿಕಿರಣ್ ಎ.

ರಾಹುಲ್ ಎಂದಿನಂತೆ ಆಫೀಸ್ ಪ್ರವೇಶ ಮಾಡುತ್ತಲೇ ಟೈಮ್ ನೋಡಿಕೊಂಡ, ಗಡಿಯಾರದ ಮುಳ್ಳು ಘಂಟೆ ೧೦ರಲ್ಲಿ ತೋರಿಸುತ್ತಿತ್ತು."ಛೆ ಅರ್ಧ ಘಂಟೆ ತಡವಾಯಿತು, ಬಾಸ್ ಏನೆನ್ನುತ್ತಾರೋ.." ಗೊಣಗುತ್ತಲೇ ಚೇಂಬರ್ ಸೇರಿಕೊಂಡು ನಿನ್ನೆ ಬಾಕಿ ಇದ್ದ ಫೈಲ್ ಗಳನ್ನು ಬಿಡಿಸಿ ನೋಡಲಾರಂಭಿಸಿದ. ಪ್ರೈವೇಟ್ ಕಂಪೆನಿಯೊಂದರ ಆಫೀಸಿನಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್. ಪಕ್ಕಾ ಬ್ರಾಹ್ಮಣ ಮನೆತನದ ಅಳುಕು ಸ್ವಭಾವದ ಭಾವನಾತ್ಮಕ ಹುಡುಗ.  ಹೀರೋನಂತಿಲ್ಲದಿದ್ದರೂ. ನೋಡುವಂತಹಾ ಸುಂದರ. ಅದೆಲ್ಲ ಇರಲಿ, ನಿನ್ನೆ ಬಾಕಿ ಮಾಡಿ ಹೋದ ಕೆಲಸಗಳನ್ನು ತುರಾತುರಿಯಲ್ಲಿ ಮುಗಿಸುತ್ತಿದ್ದಾಗ … Read more

ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು! : ಶೈಲಜ

‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’ ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ… ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai… aaaaa… :)”  ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು.  ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ … Read more

ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ … Read more

ನಂಜು ನುಂಗಿ ನಕ್ಕಾತ : ರಮೇಶ್ ಕುಲಕರ್ಣಿ

ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ … Read more

ನೈತಿ(ಕತೆ)

  'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ. 'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…' 'ಈ ಬಸ್ ಕಂಡಕ್ಟರ ನೀವು?'    ' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ'  ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ.  … Read more

ಅಂತರ್ಜಾಲದ ಹುಡುಗ

ಭಾವನ ಊಟಮುಗಿಸಿ ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗೋಣ ಎಂದು ಸೋಫಾದಲ್ಲಿ ಇನ್ನೇನು ಮಲಗಬೇಕು ಅಷ್ಟರಲ್ಲಿ ಅವಳ ಮೊಬೈಲ್ ಗೆ ಟಿನ್ ಟಿನ್ ಎಂದು ಸಂದೇಶ ಬಂತು, ಎದ್ದು ನೋಡಿದಾಗ  ಹಾಯ್ ಅಕ್ಕಾ ಹೇಗಿದ್ದೀಯ,ಈ ಬದನಸೀಬ್ ತಮ್ಮನ ಮರೆತುಬಿಟ್ಟೆಯ ಎನ್ನುವ ಸಂದೇಶ ನೋಡಿ ಅವಳಲ್ಲಿ ಬೇಸರ, ಸಂತೋಷ, ಆತಂಕದ ಭಾವನೆಗಳು ಒಮ್ಮೆಲೆ ನುಗ್ಗಿ ಕರುಳಲ್ಲಿ ಚುಚ್ಚಿದ ಅನುಭವ. ನಿಧಾನವಾಗಿ ಕಣ್ಣಲ್ಲಿ ನೀರಿನ ಹನಿಗಳು ತೊಟ್ಟಿಕ್ಕಿದವು. ಒಮ್ಮೆ ನಿಟ್ಟುಸಿರಿಟ್ಟಳು. ಮನಸ್ಸು ನಿದ್ದೆ ಮರೆತು ನೆನಪಿನ ಕುದುರೆಯ ಬೆನ್ನೇರಿತ್ತು. ಆಗಿನ್ನು ಹೊಸತಾಗಿ … Read more

ಅಂತರಂಗದ ಗಂಗೆ

ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು  ನಿಂತಿರುವುದನ್ನು  ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ  ಧೂಳು ಸ್ವಲ್ಪ  ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ  ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು … Read more

ಊರು-ಕೇರಿ ನಡುವ ನಾಗರಾವು ಮಿಸುಕಾಡಿ…

ಶ್ರಾವಣ ತಿಂಗಳ ಕೊನಿ ಸೋಮವಾರ. ಊರ ಬಸನದೇವ್ರ ಗುಡಿಯೊಳಗ ತಿಂಗಳಾನುಗಟ್ಲೆ ನಡೆದ ಬಸವ ಪುರಾಣಕ್ಕೆ ಅಂದು ಮಂಗಳ ಹೇಳೋ ದಿವ್ಸ. ಹೇಳಿಕೇಳಿ ಅದು ಲಿಂಗಾಯತರು ಬಾಳ ಮಂದಿ ಇರೋ ಬಸವನೂರು. ಲಿಂಗಾಯತರಿಗೆ ಬಸವಪುರಾಣದ ಮಂಗಲೋತ್ಸವೆಂದರೆ ಕೇಳಬೇಕೆ. ಪ್ರತಿಯೊಂದು ಮನೆಗೆ ಸಾವಿರಾರು ರೂ.ಪಟ್ಟಿ ವಸೂಲು ಮಾಡಿದ್ರು. ಊರು ಜನರು ಬುಟ್ಟಿಗಟ್ಟಲೆ ರೊಟ್ಟಿ, ಚೀಲಗಟ್ಟಲೆ ಜ್ವಾಳ-ಗೋದಿ ಕೊಟ್ಟು ‘ಬಸಣ್ಣ ನಿನ್ನ ಜಾತ್ರಿ ಚಂದಂಗ ನಡಿಯುವಂಗ ನೋಡಕೋಳ್ಳಪೋ. ಎಲ್ಲಾ ನಿನ್ನ ಕೂಡೇತಿ’ ಎಂದು ಬೇಡಿಕೊಂಡಿದ್ದರು. ಬಸಣ್ಣದೇವ್ರ ಗುಡಿಮುಂದಿನ ದೊಡ್ಡ ಪೆಂಡಾಲದೊಳಗ ಊರ … Read more

ವಿಶ್ರಾಂತ

  ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ … Read more

ಕತೆಯಾದವಳು

  ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು. ರೇಣುಕನ ಎಂದಿನ … Read more