ನಿರ್ಮೋಹಿ: ಲಕ್ಷ್ಮೀಶ.ಜೆ.ಹೆಗಡೆ
"ತೋಡಾರ್,ಮಿಜಾರ್, ಎಡಪದವು, ಗಂಜಿಮಠ, ಕೈಕಂಬ, … Read more
"ತೋಡಾರ್,ಮಿಜಾರ್, ಎಡಪದವು, ಗಂಜಿಮಠ, ಕೈಕಂಬ, … Read more
ಎರಡು ವರ್ಷದ ಎಳೆಗೂಸು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಅವನನ್ನು ಅಲುಗಾಡಿಸುತ್ತಿದ್ದಳು. ಆತ ತೆರೆದ ಕಣ್ಣುಗಳಿಂದ ಛಾವಣಿಯನ್ನು ದಿಟ್ಟಿಸುತ್ತಾ ಮರದ ಕೊರಡಿನಂತೆ ಬಿದ್ದಿದ್ದ . ತನ್ನನ್ನು ಎಬ್ಬಿಸಲು ಹೆಣಗಾಡುತ್ತಿದ್ದ ಮುದ್ದಿನ ಮಗಳಿಗೆ ಒಂಚೂರೂ ಸ್ಪಂದಿಸದೇ ನಿತ್ರಾಣನಾಗಿ ಹಾಸಿಗೆಗೆ ಅಂಟಿಕೊಂಡಿದ್ದ. ಮೂರ್ನಾಲ್ಕು ಬಾರಿ ಅಪ್ಪನನ್ನು ಜಗ್ಗಾಡಿ ಸುಸ್ತಾದ ಕಂದನ ಕಣ್ಣುಗಳಲ್ಲಿ ಹತಾಶೆ ಮಡುಗಟ್ಟಿತು. ತನ್ನನ್ನು ಮೊರದಗಲದ ಅಂಗೈ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ ಅಪ್ಪ.. ಗೊಂಬೆಯಂತೆ ಎಸೆದು ಆತುಕೊಳ್ಳುತ್ತಿದ್ದ ಅಪ್ಪ ಈಗ ಸ್ಪಂದಿಸದೇ ಮರದ ಕೊಂಟಿನಂತೆ ಮಲಗಿರುವುದನ್ನು ನೋಡಿ ಪುಟ್ಟ ಕಣ್ಣುಗಳಲ್ಲಿ … Read more
ಮೂಲ ಕತೆ: ‘The Ant and the Grasshopper’ ಲೇಖಕರು: ಡಬ್ಲ್ಯು.ಸಾಮರ್‌ಸೆಟ್ ಮ್ಹಾಮ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ನಾನು ಸಣ್ಣವನಿದ್ದಾಗ ಫ್ರೆಂಚ್ ಲೇಖಕ ಫೊಂಟೇಯ್ನಾನ ಕೆಲವು ನೀತಿ ಕತೆಗಳನ್ನು ಉರು ಹಚ್ಚಿಕೊಳ್ಳುವುದು ಕಡ್ಡಾಯವೆಂಬಂತ್ತಿತ್ತು. ಈ ಕತೆಗಳಲ್ಲಿ ಅಡಗಿರುವ ನೀತಿಯನ್ನು ನಮ್ಮ ಮನದಟ್ಟಾಗುವಂತೆ ನಮ್ಮ ಹಿರಿಯರೂ ವಿವರಿಸುತ್ತಿದ್ದರು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದ ಕತೆ ’ಇರುವೆ ಮತ್ತು ಮಿಡತೆ’ಯದು. ಈ ಅಸಮಾನತೆಯ ಜಗತ್ತಿನಲ್ಲಿ ಕ್ರಿಯಾಶಾಲಿಗಳಿಗೆ ಜಯ, ಸೋಮಾರಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತುಂಬಾ ಸೊಗಸಾಗಿ ಈ ಕತೆಯಲ್ಲಿ ಚಿತ್ರಿಸಲಾಗಿದೆ. ವಸಂತ … Read more
ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ … Read more
ದೇಶದ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆವರಣವದು. ದಟ್ಟ ಅರಣ್ಯವನ್ನು ನೆನಪಿಸುವ ದೇಶೀಯ ಮರಗಿಡಗಳಷ್ಟೇ ಅಲ್ಲದೆ ವಿವಿಧ ದೇಶಗಳ ಸಸ್ಯಸಂಪತ್ತನ್ನು ಹೊಂದಿದ್ದು, ಎಂಥಹ ಕಡುಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತಾ ನಳನಳಿಸುವ ಆವರಣವದು. ನೂರಾರು ಎಕರೆಯಷ್ಟು ಹರಡಿರುವ ಆವರಣದಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಕ್ಲಾಸ್ ರೂಮುಗಳು, ವಿದ್ಯಾರ್ಥಿ ನಿಲಯಗಳು, ಕ್ಯಾಂಟೀನ್‌ಗಳು, ವಿಜ್ಞಾನಿಗಳ ವಸತಿ ನಿಲಯಗಳು ಯೋಜಿತ ರೀತಿಯಲ್ಲಿ ವಿಶ್ವದರ್ಜೆಗೆ ಸರಿಸiನಾಗಿ ಅರಣ್ಯದಂಥಹ ಆವರಣದಲ್ಲಿ ಅಡಗಿ ಕುಳಿತಂತಿವೆ. ಅದೊಂದು ದಿನ ಮಧ್ಯಾಹ್ನದ ಹೊತ್ತು ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಸಾಗುತ್ತಿದ್ದಾರೆ. … Read more
ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ. ಮನೆಯಲ್ಲಿ ಅಪ್ಪ ಅಮ್ಮ ಮಲಗಿರುತ್ತಾರೆ,ತಂಗಿ ಓದುತ್ತ ಕುಳಿತಿರಬಹುದು. ಆದಿನದ ಮಟ್ಟಿಗೆ ಕೆಲಸವೇನು ಬಾಕಿ ಇರಲಿಲ್ಲ. ಸರಿ ಹೊರಡೋಣವೆಂದು ಎದ್ದು ನಿಂತ. ಅವನ ಸ್ನೇಹಿತ ಶ್ರೀನಾಥ ಇವನತ್ತ ನೋಡಿದ, ಏನು ಹೊರಟೆ ಅನ್ನುವಂತೆ. ಇಬ್ಬರೂ ಸೇರಿ ದೂರದ ಆ ನಾಡಿನಲ್ಲಿ ಮನೆ ಮಾಡಿದ್ದರು. "ನಾನು ಹೊರಟಿರುತ್ತೇನೆ" ಗುರು ನುಡಿದ, ಶ್ರೀನಾಥನತ್ತ ನೋಡುತ್ತ. ಶ್ರೀನಾಥ … Read more
"ಅವ್ವಾ.. ಅವ್ವಾರ ತಿನ್ನಾಕ ಒಸಿ ನೀಡ್ರೀ.. ಹೂಟ್ಟಿ ಹಸಿದೈತಿ ಎನಾರ ಕೊಡ್ರಿ ಮನಿಗೆ ಒಳ್ಳೆದಾಕೈತಿ…" ಬೆಳಿಗ್ಗೆ ಮುಂಚಾ ಅಂಗಳದಾಗ ಅನಾಮಧೇಯ ಧ್ವನಿ ಕೇಳಾಕತ್ತಿತ್ತು. "ಬೆಳಿಗ್ಗೆ ಆಗೋ ಪುರುಸೊತ್ತಿಲ್ಲ ಮನಿ ಬಾಗಿಲನಾಗ ಬಂದು ಬೇಡಾಕ್ ಸುರು ಆತು" ಅಂತ ಬಯ್ಕೋತ ಸೀತವ್ವ ಸಿಟ್ನಾಗ ಹೊರಗಡೆ ಮುಖಾನೂ ಹಾಕ್ದೆ ಹಿತ್ತಲಮನಿ ಕಡಿಗೆ ಹೋದ್ಲು.. "ಉಳದಿದ್ದು ಬಳದಿದ್ದು ಎನಾರ ನಡಿತೈತಿ, ಒಸಿ ನೀಡ್ರಿ ಹೊಟ್ಟಿ ಹಸದೈತಿ ಕೊಡೋರಿಗೆಲ್ಲಾ ಸಿಕ್ಕಪಟ್ಟೆ ಕೊಟ್ಟೀರಿ, ದೇವ ಧರ್ಮಾ ಎಲ್ಲಾ ಮಾಡೀರಿ ನನಗೂ ತುಸಾ ನೀಡ್ರಿ, ಕೂಸಿಲ್ಲದ … Read more
“ಇಲ್ರೀ, ಇದೊಂದ್ ವಿಷ್ಯದಾಗ ತಲಿ ಹಾಕಬ್ಯಾಡ್ರೀ..” “ಸರಿಯವ್ವಾ, ನಿನ್ನ ಬಂಧುಬಳಗ, ಕುಲಸ್ಥರು, ದೈವಸ್ಥರು ಹೇಳಿದ್ದಕ್ಕೇ ನೀ ಒಪ್ಪಿಲ್ಲ. ಇನ್ನು ನನ್ನ ಮಾತಿಗೆ ಒಪ್ಪಿಕ್ಯಂತೀ ಅಂತ ನಾ ಏನೂ ಅನ್ಕಂಡಿಲ್ಲ. ಆದ್ರ ದುರ್ಗಾಶಕ್ತಿ ಅಂತ ಒಬ್ಬಾಕಿ ಅದಾಳ ನೋಡು, ಆಕೀದು ಅಭಿಪ್ರಾಯ ಕೇಳಬೇಕಲ್ಲಾ..” “ಅಂದ್ರ, ದುರುಗಮ್ಮನ ಗುಡೀಮುಂದ, ಪೂಜಾರಪ್ಪನೆದುರಿಗೆ ಹಾರ ಹಿಡ್ಕೊಂಡು ನಿಂದ್ರು ಅಂತ ಹೇಳಾಕ್ಹತ್ತೀರಿ ಹೌದಿಲ್ಲೋ..? ಆತು ಬಿಡ್ರೀ..ನಂಗೇನ್ ಅಭ್ಯಂತರ ಇಲ್ಲ. ನೋಡು ಪೂಜಾರಣ್ಣ, ಇದಾ ಮಂಗಳವಾರ ಹೂವಿನಹಾರ ತಗೊಂಡು ಗುಡಿ ಮುಂದ ಶರಣಾಗ್ತೀನಿ. ಅದೇನ್ ಮಾತು … Read more
ಪಂಚಾಯ್ತಿ ಮೆಂಬರು ದಾಮು ಹೇಳಿದ ಸುದ್ದಿಯನ್ನ ಗೋಳಿಬೈಲಿನ ವೆಂಕಟರಮಣ ಸ್ಟೋರ್ಸಿನ ಕಿಣಿ ಮಾಮ್ ಯಾತಕ್ಕೂ ನಂಬಲಿಲ್ಲ. ಅವರು ದಾಮು ಕೇಳಿದ ಜಾಫಾ ಕೋಲಾ ತೆಗೆದು ಕೊಟ್ಟು, ಅಂಗಡಿಯ ಗಾಜಿನ ಬಾಟಲುಗಳನ್ನ ಸರಿಯಾಗಿ ಜೋಡಿಸಿ, ಧೂಳು ಹೊಡೆದು, ಊದುಬತ್ತಿ ಹಚ್ಚಿ ಅದನ್ನು ಬಾಲಾಜಿಯ ಫೋಟೋಕ್ಕೆ ಮೂರು ಸುತ್ತು ಸುತ್ತಿಸಿ. ನಿಧಾನ ತಮ್ಮ ಕುರ್ಚಿಯ ಮೇಲೆ ಕುಳಿತು, “ಅದೆಂತ ಸಮಾ ಹೇಳು ಮಾರಾಯಾ” ಅಂದರು. ದಾಮು ಜಾಫಾ ಕುಡಿಯುತ್ತಿದ್ದವನು, ಇದಕ್ಕಾಗೇ ಕಾದಿದ್ದವನ ಹಾಗೆ, ಗಂಟಲು ಸರಿ ಮಾಡಿಕೊಂಡ. “ನೋಡಿ … Read more
:೧: ಕಮಲಾಬಾಯಿ ನಿರಾಳವಾದರು ಎರಡು ದಿನಗಳಿಂದ ಬಹಳ ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು. ಅವರ ನೀರನ ಪ್ರತಿಕ್ರಿಯೆ ಅವರನ್ನು ನಿರುತ್ಸಾಹಗೊಳಿಸಿದರಲಿಲ್ಲ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ. ಇದರ ಬಗ್ಗೆ ಮಂಗಲಾಳಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು. ಆಗಿದ್ದಿಷ್ಟೆ… ಎರಡು ದಿನದ ಹಿಂದಿನ ಮಧ್ಯಾಹ್ನ ಕಮಲಾಬಾಯಿ ಅಪಾರ್ಟಮೆಂಟಿನ ಮುಂದಿನ ಲಾನ್‌ನಲ್ಲಿ ಕುಳಿತಾಗ, ಮುಖ್ಯ ರಸ್ತೆಯ ತಿರುವಿಗೆ ಬೈಕ್ … Read more
ಬೆಂಗಳೂರಿನ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಹೆಲ್ಪರ್ ಆಗಿದ್ದ ಇಪ್ಪತ್ತರ ವಯಸ್ಸಿನ ಸ್ವಾಮಿ ತನ್ನ ತಾತ ನಿಂಗಣ್ಣನ ಸಾವಿನ ಸುದ್ದಿ ತಿಳಿದು ಊರಿಗೆ ತಲುಪುವಷ್ಟರಲ್ಲಿ ಮಧ್ಯಾಹ್ನ ಮೂರು ಘಂಟೆಯಾಗಿತ್ತು. ನೆತ್ತಿಯ ಮೇಲೆ ಕಾರ್ಮೋಡಗಳು ಕವಿಯುತ್ತಿದ್ದವು. ಮೂರು ಮಂದಿ ತುರಾತುರಿಯಲ್ಲಿ ನಿಂಗಣ್ಣನನ್ನು ಎತ್ತಿ ತಂದು ಬಿಳಿಪಲ್ಲಕ್ಕಿಯ ಒಳಗೆ ಕೂರಿಸಿದರು. ಅತ್ತಿತ್ತ ವಾಲಾಡುತ್ತಿದ್ದ ಕುತ್ತಿಗೆಗೆ ಮೆಟರೆಕಡ್ಡಿ ಕೊಟ್ಟು ಸರಿ ಮಾಡಿದರು. ಸ್ವಾಮಿ ಒಮ್ಮೆ ಕೆಳಗೆ ಬಾಗಿ ತಾತನನ್ನು ಕಣ್ತುಂಬಿಕೊಂಡ. ತಾತನ ಒಟ್ಟು ಆಕಾರದಲ್ಲಿ ಏನೋ ಒಂದು ಕೊರತೆಯಿದೆ ಅನ್ನಿಸಿತು . ಯೆಸ್. ತಾತನ … Read more
ಹೊಟ್ಟೆ ಹಸಿವೆಯಿಂದ ಗುರುಗುಡುತ್ತಿತ್ತು. ಯಾಕಿವತ್ತು ಇನ್ನೂ ತಟ್ಟೆಯ ಸಪ್ಪಳವೇ ಇಲ್ಲಾ? ನಾಲಿಗೆ ಹೊರ ಚಾಚಿ, ಮುಚ್ಚಿರುವ ತಲಬಾಗಿಲನ್ನೊಮ್ಮೆ ದಿಟ್ಟಿಸಿ ನೋಡುತ್ತಾ, ತಲೆಯ ಮೇಲೆ ಸುಡುತ್ತಿರುವ ಸೂರ್ಯನ ಶಾಖವನ್ನು ತಾಳಲಾರದೇ ತನ್ನ ಗೂಡಿನೆಡೆಗೆ ಕುಂಯ್ ಗುಡುತ್ತಾ ರಾಜಾ ವಾಪಸ್ಸಾದ. ಗೂಡಿನಲ್ಲಿ ತಾಪ ಇನ್ನೂ ಜಾಸ್ತಿಯಿತ್ತು. ತಾನು ಆ ಮನೆಯನ್ನು ಸೇರಿದ್ದು ಚಿಕ್ಕ ಕುನ್ನಿಯಾಗಿದ್ದಾಗ. ತನ್ನ ಅಮ್ಮ ಟ್ರಕ್ಕಿನಡಿಯಲ್ಲಿ ಸಿಕ್ಕಿ ಸತ್ತು ತಾನು ತಬ್ಬಲಿಯಾದಾಗ, ಮುದ್ದಾಗಿದ್ದೆನೆಂದೋ ಅಥವಾ ಮುಂದೆ ಮನೆ ಕಾಯುವೆನೆಂದೋ ತನ್ನನ್ನು ಮನೆಗೆ ತಂದು ಸಾಕಿದ್ದು ಈ ಮನೆಯ … Read more
ಇಂಟರ್ ಕಾಲೇಜ್ ಚೆಸ್ ಪಂದ್ಯಾವಳಿಯ ಅಂತಿಮ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗುವುದರಲ್ಲಿತ್ತು. ಆಗಲೇ ಆಸೀನನಾಗಿದ್ದ ಎದುರಾಳಿಯ ಕೈಕುಲುಕಿ ನನ್ನ ಛೇರಿನ ಮೇಲೆ ಕುಳಿತೆ. ಗಾಂಭೀರ್ಯದ ಉಳಿಯಿಂದ ಕೆತ್ತಿದಂತೆ ಕಾಣುತ್ತಿದ್ದ ಅವನ ಮುಖಚರ್ಯೆ ನನ್ನಲ್ಲಿ ದಿಗಿಲು ಹುಟ್ಟಿಸಿತು. ಸೋಲಿನ ಭಯ ಆವರಿಸಿತು. ನೀನು ಫೈನಲ್ಲಿಗೆ ತಲುಪಿರುವುದೇ ದೊಡ್ಡ ಸಾಧನೆ.. ಯುವ್ ಹ್ಯಾವ್ ನಥಿಂಗ್ ಟು ಲೂಸ್.. ಗೋ ಎಂಡ್ ಎಂಜಾಯ್ ಯುವರ್ ಗೇಮ್ ಎಂದು ನಮ್ಮ ಲೆಕ್ಚರರ್ ಹೇಳಿದ್ದು ಮನಸ್ಸಿನಲ್ಲಿತ್ತು. ಹೌದು.ನಾನು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಇತರರನ್ನು ಮೆಚ್ಚಿಸುವುದಕ್ಕಾಗಿ … Read more
ಇಲ್ಲಿಯವರೆಗೆ ಮಾರನೆ ದಿನ ಲ್ಯಾಂಡ್ ಲಾರ್ಡ್ಗೆ ಫೋನ್ ಮಾಡುವಾಗ ನೀವು ಬರೋಕೆ ರೆಡಿ ಆದ್ರೆ ಹೇಳಿ. ಇನ್ನು ಒಂದು ವಾರದಲ್ಲಿ ಎಲ್ಲ ದಾಖಲೆಗಳು ಸರಿ ಆಗುತ್ತೆ ಅಂದು ಹೇಳಿದರು. ಬರುವ ವಾರ ಬರೋದು ಕಷ್ಟ. ಬರುವ ತಿಂಗಳು ಬರುವೆವು ಅಂದು ಹೇಳಿದ ನಿಶಾಂತ್ . ಆದರೆ ಅದೇ ಸಮಯಕ್ಕೆ ನಿಶಾಂತ್ ನ ವೀಸಾ ವಿಷಯ ದುತ್ತನೆ ಎದುರು ಬಂದು ಸಧ್ಯಕ್ಕೆ ಊರು ಬಿಡುವ ಹಾಗೆ ಇರಲಿಲ್ಲ. ಹೀಗಾಗಿ ದೀಪಾವಳಿ ಕಳೆದು ಬರುವುದಾಗಿ ಹೇಳಿದರು. ಈ ನಡುವೆ ಜೈನ್ … Read more
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ. ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ ಆರಿಸಿ … Read more
ಇಲ್ಲಿಯವರೆಗೆ… ಅದೊಂದು ದಿನ ನಿಶಾಂತ್ ಫೋನ್ ಗೆ ಕರೆ ಮಾಡಿ ಮಾಡಿ ಸೋತು ಹೋಗಿ ನಿನಾದ ಫೋನ್ ಗೆ ಕರೆ ಮಾಡಿದ. ನಂಗೆ ತುರ್ತಾಗಿ ಕೆಲವು ವಿಷಯ ಕೇಳಬೇಕಿತ್ತು. ನಿಶಾಂತ್ ಎಲ್ಲಿ ?? ನಿನಾದ ಶಾಂತವಾಗಿ, ಬಹುಶಃ ನಿಶಾಂತ್ ಬ್ಯುಸಿ ಏನು ಕೇಳಬೇಕಿತ್ತು ? ಮನೆಗೆ ಬಂದ ಮೇಲೆ ವಾಪಾಸು ಕರೆ ಮಾಡಲು ಹೇಳುವೆ ಅಂದು ಉತ್ತರಿಸಿದಳು. ಏನೋ ಸುಮಾರು ಹೊತ್ತು ನಿಶಾಂತ್ & ಜೈನ್ ಮಾತನಾಡಿಕೊಂಡಿದ್ದರು. ದಿನಗಳು ಸಾಗಿ ಹೋಗುತ್ತಿದ್ದವು.. ಆಗೊಮ್ಮೆ ಈಗೊಮ್ಮೆ ನಿನಾದ ಕರೆ … Read more
ಅಂದು ಶನಿವಾರ ನಿನಾದಳಿಗೆ ಮನೆಯಲ್ಲಿ ಒಬ್ಬಳೆ ಕೂತು ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ನಿಶಾಂತ್ ಗೆ ಶುಕ್ರವಾರ, ಶನಿವಾರ ವಾರದ ರಜೆ. ಆದರೆ ಅವನ ಟೀಂ ಲೀಡರ್ ಒಂತರಾ ವಿಚಿತ್ರ ಮನುಷ್ಯ. ರಜೆ ಅಂದ್ರು ಮನೆಯಲ್ಲಿ ಇರೋಕೆ ಬಿಡುತ್ತಿರಲಿಲ್ಲ. ಹೀಗಾಗಿ ಎಲ್ಲ ಶನಿವಾರಗಳು ಆಫೀಸ್ ಗೆ ಹೋಗೋದು ಅನಿವಾರ್ಯ ಆಗಿತ್ತು. ಇತ್ತ ನಿನಾದ ಕಿರಿ ಕಿರಿ ಮಾಡಿದ್ದಕ್ಕೆ ಸರಿ ನೀನು ಬಾ ನನ್ನ ಜೊತೆಗೆ ಅಂದು ನಿಶಾಂತ್ ಆಫೀಸ್ ಗೆ ಹೊರಟ. ಹೀಗೆ ನಿನಾದ ನಿಶಾಂತ್ ಜೊತೆ ಆಫೀಸ್ … Read more
"ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದ್ದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ … Read more
'ಯೇನಪಾ…ತಮ್ಮಾ, ನಿನ್ನ ಹಂತ್ಯಾಕ ಮೊಬೈಲ್ ಐತೇನು?' ಆ ವಯಸ್ಸಾದ ಹಿರಿಯರು ಕೋರ್ಟ್ ಒಂದರ ಆವರಣದಲ್ಲಿ ನನಗೆ ಕೇಳಿದಾಗ, 'ಯಾಕ್ರಿ ಅಮ್ಮಾರ…ಈಗಿನ ಕಾಲದಾಗ ಮೊಬೈಲ್ ಇಲ್ಲದವರು ಯಾರರ ಇರ್ತಾರೇನ್ರೀ ನೀವ ಹೇಳ್ರೀ?' ಅಂತ ತಮಾಷೆಯೊಂದಿಗೆ ಗೌರವಪೂರ್ವಕವಾಗಿ ನಾನಂದೆ. 'ಹಂಗಲ್ಲೋ ನನ್ನ ಬಾಳಾ, ಮುಂಜಾಲಿಂದ ನಮ್ಮ ವಕೀಲರು ಬರ್ತಾರಂತ ಕಾಯಾಕತ್ತೀನಿ, ಪೋನ್ ಮಾಡಿದರ ರಿಸೀವ ಮಾಡಂಗಿಲ್ಲಾಗ್ಯಾರ…ನಿನ್ನ ಮೊಬೈಲ್ ಪೋನಿನಿಂದ ಅವರಿಗೆ ಹಚ್ಚಿ ಕೊಡು' ಎಂದು ಅರವತ್ತರ ವಯೋಮಾನದ ಆಸುಪಾಸಿನ ಆ ಹಣ್ಣು-ಹಣ್ಣು ಮುದಿಜೀವ ವಿನಂತಿಸಿಕೊಂಡಾಗ ಮನ ಕರಗಿತು. ಆದರೆ ಆ … Read more
ಇಡೀ ನಗರ ತಲ್ಲಣಿಸಿದಂತೆ ಕಂಡಿತು. ದೇಹಗಳನ್ನ ಬಾಡಿಗೆ ನೀಡಲು ಅವರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಒಂದು ಕಾಲದಲ್ಲಿ ನಗರದ ಯೌವ್ವನವನ್ನೇ ಆಳಿದವರು ಈಗ ಗಿರಾಕಿಗಳಿಲ್ಲದೇ ಅಂಡಲೆದು ಹೊಸಬರನ್ನ ದಂಧೆಗೆ ಇಳಿಸುತ್ತಿದ್ದರು. ದೇಹದ ಸೌಂದರ್ಯ, ಎಳಸುತನ ನೋಡಿ ದೇಹಗಳು ಗಂಟೆ ಲೆಕ್ಕದಲ್ಲಿ ಬಾಡಿಗೆ ನೀಡಲಾಗುತ್ತಿತ್ತು. ದೊಡ್ಡ ದೊಡ್ಡ ಕುಳಗಳು ತಿಂಗಳಿಗೊಮ್ಮೆ ಮೋಜಿಗಾಗಿ ಬಾಡಿಗೆ ಪಡೆದವರನ್ನು ಹೂವಿನಷ್ಟೆ ಮೃದುವಾಗಿ ಎತ್ತಿಕೊಂಡು ಹೋಗುತ್ತಿದ್ದರು. ಇದಕ್ಕಾಗಿ ನಗರದ ರಸ್ತೆಗಳು ಸಾಕ್ಷಿಯಾಗುತ್ತಿದ್ದವು. ಎಷ್ಟು ಸಲೀಸಾಗಿ ಈ ವ್ಯಾಪಾರ ನಡೆದುಹೋಗುತ್ತಿತ್ತು. … Read more