ಹೊಸ ಸ್ನೇಹ: ಅನಂತ ರಮೇಶ್
ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ, ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ. ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, " ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು" ಅನ್ನುತ್ತಾಳೆ ಅಮ್ಮ. ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ … Read more