ಜನ್ನತ್: ಅಶ್ಫಾಕ್ ಪೀರಜಾದೆ
ಶಬ್-ಏ-ಮೆಹರಾಜ ! ಮುಹ್ಮದ ಪೈಗಂಬರರನ್ನು ಸರ್ವಶ್ರೇಷ್ಠ ಅಲ್ಲಾಹ ತನ್ನ ಆಸ್ಥಾನಕ್ಕೆ ಸ್ವಾಗತಿಸಿ ಆದರಾತಿಥ್ಯ ನೀಡಿದ ಮಹತ್ವದ ರಾತ್ರಿ. . . ಅಲ್ಲಾಹ ಮತ್ತು ಪೈಗಂಬರರ ಈ ಅಪೂರ್ವ ಸಮ್ಮಿಲನದ ಸವಿನೆನಪಿಗಾಗಿ ಇಡೀ ಮುಸ್ಲಿಂ ಸಮುದಾಯದವರು ಆ ಇಡೀ ರಾತ್ರಿಯನ್ನು ಅಲ್ಲಾಹನ ನಾಮಸ್ಮರಣೆ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ವಿಶೇಷ ಪ್ರಾರ್ಥನೆ, ಪ್ರವಚನಗಳ ಮುಖಾಂತರ ತಮಗೂ ‘ಜನ್ನತ್’ ಅಂದರೆ ಸ್ವರ್ಗ ಲಭ್ಯವಾಗಲೆಂದು ಕೋರುತ್ತಾರೆ. ಸಾದೀಕ ಕೂಡ ಈ ಸಾಮೂಹಿಕ ಪ್ರಾರ್ಥನೆ, ಪ್ರವಚನಗಳಲ್ಲಿ ಭಾಗಿಯಾಗಲು ತನ್ನ ಮೊಹಲ್ಲಾದ ಮಸೀದಿಗೆ ತಲಪುತ್ತಾನೆ. ಇಶಾ ನಮಾಜಿನ … Read more