ಕಿವಿ ಕಚ್ಚುವುದು!: ಎಸ್.ಜಿ.ಶಿವಶಂಕರ್

ಅರೆ..ಹಾಗಂದರೇನು? ಎಂದು ಹುಬ್ಬೇರಿಸಿದ್ದೀರೇನು? ನೀವು ಈ ಮಾತು ಈವರೆಗೆ ಕೇಳಿಯೇ ಇಲ್ಲವೆ?  ‘ಇಲ್ಲ’ ಎಂಬ ನಿಮ್ಮ ಮಾತನ್ನು ನಾನು ಖಂಡಿತಾ ನಂಬುವುದಿಲ್ಲ! ಎಲ್ಲಿಯಾದರೂ ಅಪರೂಪಕ್ಕಾದರೂ ಈ ಮಾತು ನೀವು ಕೇಳಿಯೇ ಇರುತ್ತೀರಿ. ಕೇಳಿದಾಗ ಈ ಪದದ ಅರ್ಥವಾಗಿರಬಹುದು ಇಲ್ಲ ಅರ್ಥವಾಗದೆ ಮರೆತಿರಬಹುದು!  ಕಿವಿಕಚ್ಚುವುದು ಎಂದಾಕ್ಷಣ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕಿವಿಯನ್ನು ಕಚ್ಚುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಈ ಪದ ನನ್ನ ಕಿವಿಯ ಮೇಲೆ ಬಿದ್ದುದು ಕೇವಲ ವಾರದ ಹಿಂದೆ. ಆಗಿನಿಂದಲೂ ಇದರ ಅರ್ಥ, ವ್ಯಾಪ್ತಿಗಳ ಬಗೆಗೇ ಚಿಂತಿಸುತ್ತಿರುವೆ ಎಂದರೆ … Read more

ಬಿಂದಿಗಿ ಭೂತ: ಗುಂಡುರಾವ್ ದೇಸಾಯಿ

ಪದ್ದು ನಿತ್ಯದಂತೆ ವಾಕಿಂಗ್‍ಗೆ ಊರ ಹೊವಲಯದಲ್ಲಿ ಹೋಗಿದ್ದಾಗ ಕಾಲಿಗೆ ಕಲ್ಲುತಾಗಿ ಎಡವಿ ಬಿದ್ದ, ಎಡವಿದ ಸ್ಥಳದಲ್ಲಿ ನೋಡತಾನೆ ಹೊಳೆಯುವ ವಸ್ತುವೊಂದು ಕಾಣಿಸ್ತು.  ಪುರಾತನ ವಸ್ತು ಇರಬಹುದೆಂದು ತೆಗ್ಗು ತೊಡಿ ತೆಗೆದ ಪುಟ್ಟ ಬಿಂದಿಗಿ ತರಹ ಇತ್ತು. ಒಳಗೆ ಏನು ಇರಬಹುದೆಂದು ತೆಗೆದು  ನೋಡಿದ ಬಸ್ ಎಂದು ಹೊಗೆ ಹೊರಗೆ ಬಂದು ದೈತ್ಯಾಕಾರದ ವಿಚಿತ್ರ ಆಕೃತಿ ಕೈಕಟ್ಟಿಕೊಂಡು ದೈನ್ಯತೆಯಿಂದ ‘ಸ್ವಾಮಿ ತಾವು ನನ್ನನ್ನು ಬಂಧ ಮುಕ್ತರನ್ನಾಗಿ ಮಾಡಿದಿರಿ. ನಿಮಗೆ ಏನು ಸಹಾಯ ಬೇಕು ಕೇಳಿ’ ಎಂತು. ಅಲ್ಲಾವುದ್ದೀನನ ಅಧ್ಭುತ … Read more

ಕೋಲಾಪಾನಕ ಉಪಾಖ್ಯಾನ ಸಹಿತ ರಘುವರಚರಿತ ಲಘುವ್ಯಾಖ್ಯಾನವು: ಎಸ್. ಜಿ. ಸೀತಾರಾಮ್

ವಿಧವಿಧ ರಾಮಾಯಣಗಳಿಂದ ಹೆಚ್ಚುತ್ತಿರುವ ಹೊರೆಯಿಂದಾಗಿ, ಭೂಭಾರವನ್ನು ಹೊತ್ತ ಆದಿಶೇಷನು ನುಲಿದಾಡುತ್ತಿದ್ದಾನೆ; ರಾಮಾಯಣ ಸಾಹಿತ್ಯ ಪ್ರದೇಶ ಕಾಲಿಡಲಾಗದಷ್ಟು ನಿಬಿಡವಾಗಿಹೋಗಿದೆ ಎಂಬಂತೆ ಕುಮಾರವ್ಯಾಸನು ಸುಮಾರು ೬೦೦ ವರ್ಷಗಳ ಹಿಂದೆಯೇ ಹೇಳಿದ್ದನೆಂದಮೇಲೆ, ಇಂದು ಆ ಹೊರೆ ಇನ್ನೆಷ್ಟು ಹೆಚ್ಚಿರಬಹುದೆಂದು ಊಹಿಸಬಹುದು. ಆದ್ದರಿಂದಾಗಿ, ಮತ್ತೆ ಅದೇ ಕಥೆಯನ್ನೇ ಇರುಳುದ್ದ ಹೇಳಿ, ಹಗಲು ಹರಿಯುತ್ತಿದ್ದಂತೆ, ರಾಮಣ್ಣ-ರಾವಣ್ಣ ಯೇನ್ ಅಣ್ಣ-ತಮ್ಮಂದ್ರಾ? ಎಂಬ ಆಕಳಿಕೆಯ ಆಲಾಪವನ್ನು ಆಲಿಸುವ ಬದಲು, ಈಗಿನ ರಾಮಜನ್ಮದಿನಾಚರಣೆಗಾಗಿ ಅದೇ ರಘುವರಕಥೆಯ ಕೆಲವೇ ವಿಚಾರಗಳ ಲಘುನೋಟವೊಂದನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಆ ಕಥೆಯ ಕೆಲವು ಪ್ರಮುಖ … Read more

ಶನಿ-ಮನ್ಮಥ ಯೋಗ: ಎಸ್.ಜಿ. ಸೀತಾರಾಮ್

ಮನ್ಮಥ ಮತ್ತು ಶನಿ ಎಂಬ ಎರಡು ಅತ್ಯುಜ್ವಲ ಶಕ್ತಿಗಳು ಡಿಕ್ಕಿ ಹೊಡೆದಿರುವುದರಿಂದಾಗಿ, ಪ್ರಸಕ್ತ ಶಾಲೀವಾಹನ ಶಕೆ ೧೯೩೮ರಲ್ಲಿ, ಅತಿವಿರಳ ಶನಿ-ಮನ್ಮಥಯೋಗ ಒದಗಿಬಂದಿದೆ. ಇದರಿಂದಾಗಿ ಕೆಲವು ವಿಲಕ್ಷಣ ಬೆಳವಣಿಗೆಗಳಾಗಲಿದ್ದು, ಅತ್ಯಾಶಾವಾದಿಗಳಿಂದಾಗಿ ಉಗಾದಿಯು ’ಉಗ್ರಾದಿ’ಯೇ ಆಗಿ ಬಿಡಬಹುದು ಎಂದು ಕೆಲವು ಆಶಂಕವಾದಿಗಳು ನುಡಿಯತೊಡಗಿದ್ದಾರೆ. ಇದನ್ನು ಕೇಳಿ, ಮೊದಲೇ ಬೇಸಿಗೆಯ ಬೇಗೆಯಿಂದ ಬೇಸತ್ತು ಬೆವರುತ್ತಿರುವ ಪ್ರಜೆಗಳ ಬೇನೆಬೇಗುದಿಗಳು ಮತ್ತಷ್ಟು ಹೆಚ್ಚಾಗಿವೆ. ಹಾಗಾಗಿ, ಇಂದಿನ ಉಷ್ಣಾವರಣದಿಂದ ಪ್ರಜೆಗಳಿಗೆ ಒಂದಿನಿತು ಇನಿದಂಪು ನೀಡಬೇಕೆಂದು, ಶನಿ-ಮನ್ಮಥಯೋಗ ಕುರಿತಂತೆ ಇಲ್ಲೊಂದು  ಕಾಕದೃಷ್ಟಿಯನ್ನೀಯಲಾಗಿದೆ. ಈ ಸಂವತ್ಸರದ ಸ್ವಾರಸ್ಯಗಳಲ್ಲಿ, ಮನ್ಮಥ … Read more

ಅಜ್ಜಿ ಲಿಪ್ಟ್ ಪಡೆದದ್ದು …!: ಪಾ.ಮು.ಸುಬ್ರಮಣ್ಯ, ಬ.ಹಳ್ಳಿ.

   ಹೀಗೇ ಸುಮ್ಮನೆ ಏನನ್ನಾದರೂ ಹೇಳುತ್ತಿರಬೇಕೆಂಬ ಮನಸ್ಸಿನ ವಾಂಛೆಯನ್ನು ಅದುಮಿಟ್ಟುಕೊಳ್ಳಲು ಸಾಧ್ಯವಾಗದೆ ವಸ್ತುವಿಗಾಗಿ ಹುಡುಕಾಟ ಶುರುಮಾಡಿದೆ.  ರಸ್ತೆಯಲ್ಲಿ ಅನೇಕ ವಸ್ತುಗಳು ಸಿಗುತ್ತವೆಂಬ ನಂಬಿಕೆ ಅನೇಕ ಬರಹಗಾರರದು.  ವಸ್ತುಗಳೇನೋ ಸಿಗುತ್ತವೆ, ಆದರೆ ನೋಡುವ ಕಣ್ಣಿರಬೇಕು.  ಆಘ್ರಾಣಿಸುವ ಮನಸ್ಸಿರಬೇಕು.  ಅನುಭವಿಸುವ ಆಸೆ ಇರಬೇಕು. ಹೇಳಬೇಕೆಂಬ ಇಚ್ಚೆ ಇರಬೇಕು.  ಒಮ್ಮೆ ಹೀಗೆ ನಡೆದು ಬರುತ್ತಿರುವಾಗ ಸುಮಾರು ಎಂಬತ್ತು ವರ್ಷ ವಯಸ್ಸಿನ ಹೆಂಗಸು ಕೈಯಲ್ಲಿ ಕೆಂಪು ಬಣ್ಣದ ಸಣ್ಣ ಚೀಲವೊಂದನ್ನು ಹಿಡಿದು ನಡೆದು ಬರುತ್ತಿದ್ದಳು.  ತನ್ನ ದೀರ್ಘಕಾಲದ ಬದುಕಿನಲ್ಲಿ ಸಾಕಷ್ಟು ಹಿತ-ಅಹಿತ ಅನುಭವಗಳನ್ನು … Read more

ರೀಮೇಕ್ ಸಿನಿಮಾಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಿ ಅವಾರ್ಡ್ ಗಳು: ಮುಕುಂದ್ ಎಸ್.

ಬೃಂದಾ(ನ್ಯೂಸ್ ನಿರೂಪಕಿ):  ಕನ್ನಡ ಚಿತ್ರರಂಗದ ಉದ್ಧಾರಕ್ಕಾಗಿ  ನಮ್ಮ ಸರ್ಕಾರಕ್ಕೂ  ಚಿತ್ರರಂಗದವರಿಗೂ  ನಡೆದ  ಚರ್ಚೆ  ಸಫಲವಾಗಿದೆ. ಚಲನ ಚಿತ್ರ ವಾಣಿಜ್ಯ ಮಂಡಲಿ ಅಧ್ಯಕ್ಷರು ಗೋವಿಂದೋ ಗೋವಿಂದರವರು ಇದು ಚಿತ್ರೋದ್ಯಮದ ಹೊಸ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ರೀಮೇಕ್ ಸಿನಿಮಾಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರಿ ಅವಾರ್ಡ್ ಗಳು ಘೋಷಣೆಯಾಗಿದೆ ! ನಮ್ಮ ವರದಿಗಾರ ಸತ್ಯನಾಥ ಇದರ ಬಗ್ಗೆ ಹೇಳ್ತಾರೆ. ಹೇಳಿ ಸತ್ಯನಾಥ! ಸತ್ಯನಾಥ !  (ಸಿಟ್ಟಲ್ಲಿ)  : ರೀ ಸತ್ಯನಾಥ!  ಸತ್ಯನಾಥ ಬರುತ್ತಾನೆ!  ಬೃಂದಾ(ನ್ಯೂಸ್ ನಿರೂಪಕಿ): ಎಲ್ಲಿ ಹಾಳಾಗಿ ಹೋಗಿದ್ದ್ರೀ.. ಥೂ … Read more

ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ? (ಅಳಿದುಳಿದ ಭಾಗ): ಸೂರಿ ಹಾರ್ದಳ್ಳಿ

ಇಲ್ಲಿಯವರೆಗೆ ಇದು ಮುಗಿದ ನಂತರ ಸಿಹಿ ತಿಂಡಿಯ ಸರದಿ. ಸುಮಾರಾಗಿ ಒಬ್ಬಟ್ಟು ಇದ್ದೇ ಇರುತ್ತದೆ. ಒಬ್ಬಟ್ಟು ಎಂದರೆ ಹೋಳಿಗೆ, ಇಂಗ್ಲಿಷಿನವರು ಕುಲಗೆಡಿಸಿ ಹೇಳಿದ ಸ್ವೀಟ್ ಚಪಾತಿ. ಎಷ್ಟೋ ಕನ್ನಡ ಪದಗಳಿಗೆ ಇಂಗ್ಲಿಷಿನ ಪದಕೋಶದಲ್ಲಿ ಶಬ್ದಗಳೇ ಇಲ್ಲ. ಅವುಗಳಲ್ಲಿ ಮುಖ್ಯವಾಗಿ ಮಡಿ, ಮೈಲಿಗೆ, ಸೂತಕ, ಮುಸುರೆ ಇತ್ಯಾದಿ. ಇವು ಏನೆಂದು ಕೇಳಬೇಡಿ, ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ! ಸಿಹಿ ತಿಂಡಿಗಳಲ್ಲಿ ಒಬ್ಬಟ್ಟು ಮಾತ್ರವೇ ಮೇಲೆ ಒಂದಿಷ್ಟು ಸಕ್ಕರೆ ಹಾಕಿಸಿಕೊಳ್ಳುತ್ತದೆ. ಕಾಯಿ, ಸಕ್ಕರೆ, ಬೇಳೆ ಒಬ್ಬಟ್ಟು ಮಾಡಿದರೆ ಅದರ ಮೇಲೆ … Read more

ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ?: ಸೂರಿ ಹಾರ್ದಳ್ಳಿ

ಲೇಖನ ಬರೆದರೆ ರುಚಿಕಟ್ಟಾಗಿರಬೇಕು, ಓದುಗರಿಗೆ ರುಚಿಸಬೇಕು. ಸಾಹಿತ್ಯದಲ್ಲಿ ರಸಕವಳ ಇರಬೇಕು, ಅದರಲ್ಲಿ ಮಸಾಲೆಯೂ ಇರಬೇಕು ಎಂತೆಲ್ಲಾ ನಮ್ಮ ಹಿರಿಯ ಸಾಹಿತಿಯೊಬ್ಬರು ಉಪದೇಶಿಸಿದ್ದರಿಂದ ಈ ನನ್ನ ಲೇಖನವು ಊಟದ ಬಗ್ಗೆ, ಅದರಲ್ಲಿಯೂ ವಿಶೇಷ ಭೂರಿಭೋಜನದ ವಿಷಯವನ್ನೊಳಗೊಂಡಿದೆ. ನೀವೆಲ್ಲಾ ಬಾಯಿಯಲ್ಲಿ ನೀರು ಬರಿಸಿಕೊಳ್ಳುತ್ತಾ ಇದನ್ನು ಓದುತ್ತೀರಿ, ಖಾದ್ಯಾದಿಗಳ ರುಚಿಯನ್ನು ಕಲ್ಪಿಸಿಕೊಳ್ಳುತ್ತಾ ಒಣ ತೇಗಿಗೆ ಪಕ್ಕಾಗುತ್ತೀರಿ ಎಂದುಕೊಂಡಿದ್ದೇನೆ. ಬನ್ನಿ, ಉಡುಪಿಯ ಬ್ರಾಹ್ಮಣರ ವಿವಾಹದ ಸಮಾರಂಭಕ್ಕೆ ನುಗ್ಗೋಣ. ಓ.. ಆಗಲೇ ಎಲೆ ಹಾಕಿಬಿಟ್ಟಿದ್ದಾರೆ. ಬನ್ನಿ, ಕುಳಿತುಕೊಳ್ಳೋಣ. ನೋಡಿ, ಓ ಅಲ್ಲಿ, ನೆಲದ ಮೇಲೆ ಎಲೆ … Read more

ಗಂಡಾ ..ಅಲ್ಲಲ್ಲಾ…ಗುಂಡ-ಗುಂಡಿ: ಡಾ. ಆಜಾದ್ ಐ.ಎಸ್.

  ಗುಂಡ ಗರಂ….. “ಯಾಕೋ?!!”  ಅಂತ ಕೇಳಿದ್ದಕ್ಕೆ ಏನ್ ಹೇಳ್ದ ಗೊತ್ತಾ..?? “ಅಲ್ಲಾ ಸಾ… ಯಾವೋನು ಕಳ್ ನನ್ ಮಗ – ಎಂಡ, ಸಾರಾಯಿ ಬ್ರಾಂದಿ, ಬೀರು, ರಮ್ಮು, ಜಿನ್ನು, ಫೆನ್ನಿ, ಓಡ್ಕಾ ಎಲ್ಲಾದ್ಕೂ ಒಂದೇ ಕಲೆಕ್ಟಿವ್ ನೌನ್ “ಗುಂಡು” ಅಂತ ನಾಮಕರಣ ಮಾಡಿದ್ದು…??” ಅಬ್ಬಬಬಾ… ವ್ಯಾಕರಣದಲ್ಲಿ ತನಗೆ ಗೊತ್ತಿರೋ ಒಂದೇ ಒಂದು ಪಾರ್ಟ್ಸ್ ಅಫ್ ಸ್ಪೀಚ್ ನ ಎಷ್ಟು ಚನ್ನಾಗಿ ಉಪಯೋಗಿಸ್ದ..ಗುಂಡ…ವಾ.. ಎಂದುಕೊಂಡು… “ಅದ್ಸರಿ ..ಅದಕ್ಕೂ ನೀನು ಗರಂ ಆಗೋಕೂ ಏನಪ್ಪಾ ಸಂಬಂಧ?” ಅಂದೆ “ನಾಳೆ … Read more

ನೈಟೀ ಪುರಾಣ: ಕ್ರಾಕ್ ಬಾಯ್

          ಹಿಂಗೇ ಮೊನ್ನೆ ಮಾಡಕ್ ಕ್ಯಾಮೆ ಇಲ್ದೆ ಭಟ್ರಂಗಡಿ ಕಟ್ಟೆ ಮೇಲ್ ಕುಂತ್ಕಂಡ್ ಓತ್ಲಾ ವಡೀತಿದ್ದೆ, ನನ್ನಂಗೆ ಮಾಡಕ್ ಕ್ಯಾಮೆ ಇಲ್ದಿರೋ ಐಕ್ಳೆಲ್ಲಾ, ಅಣ್ ತಮ್ಮಂದ್ರೆಲ್ಲಾ ನನ್ ಜೊತೆ ಸೇರ್ಕಂಡಿದ್ರು, ಅದೂ, ಇದೂ, ಆಳೂ, ಮೂಳೂ, ಮಣ್ಣೂ, ಮಸಿ, ಹಿಂಗೇ ಮಾತಾಡ್ಕಂಡ್ ಕುಂತಿದ್ವಿ, ಅಸ್ಟೊತ್ತಿಗೆ ಮೂಲೆ ಮನೆ ಆಂಟಿ ಕೊತ್ಮೆರಿ ಸಪ್ ತಗಳಕ್ಕೆ ಭಟ್ರಂಗ್ಡಿಗೆ ಬಂದ್ರು, ಅವ್ರ್ ಬಂದ್ ತಗಂಡ್ ವೋಗಿದ್ರಲ್ ಏನೂ ಇಸೇಸ ಇರ್ಲಿಲ್ಲಾ ಆದ್ರೆ ಅವ್ರು ನೈಟೀ ಹಾಕಂಡ್ … Read more

ನಾನು ಮತ್ತು ಗ್ವಾಡು: ಸಚಿನ್ ಎಂ. ಆರ್.

“ಥೂ.. ಯಾಕಪ್ಪಾ ನನ್ ಜೀವನ ಹಿಂಗೇ??? ಓ ಮೈ ಗ್ವಾಡ್ ಯಾಕೆ ನೀ ನನ್ನ ಹಿಂಗೆ ಮಾಡಿದೆ? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು ಏಳ್ತಾ ಇರ್ತವೆ? ಉತ್ತರ ಮಾತ್ರ ಯಾಕೆ ಸಿಗುತಿಲ್ಲ?? ಎಕೆ ಎಲ್ಲವೂ ಹೀಗೆ ಅಯೋಮಯ?” ಅಂತ ತಲೆಯಲ್ಲಿ ಒಂದೇ ಸಮನೆ ಪ್ರಶ್ನೆಗಳೆಲ್ಲ ಗಿರಕಿ ಹೊಡೆಯುತ್ತಾ ಕುಂತಿದ್ದವು.ಏನಾದರಾಗಲಿ ದೇವರನ್ನೇ ಕೇಳೋಣ ಅಂದುಕೊಂಡೆ!! ಆದರೆ ಕೇಳೋದು ಹೆಂಗೆ? ವೈಫೈ, ಬ್ಲೂಟೂಥ್ ಯೂಸ್ ಮಾಡೋದು ನಮ್ ಗಾಡ್‍ಗೆ ಗೊತ್ತಿಲ್ಲ. ಆದರೂ ಕನೆಕ್ಟಿವಿಟಿ ಮಾಡಿ ನನ್ನ ಪ್ರಶ್ನೆಗೆ ಉತ್ತರ ಪಡೆಯಲೇ … Read more

ಯಮಾಲಯದಲ್ಲಿ ಗಿಜಿ ಗಿಜಿ: ಶ್ರೀಕಾಂತ್ ಮಂಜುನಾಥ್

ಕೊರವಂಗಲ ವಂಶವೃಕ್ಷದಲ್ಲಿ ನವಗ್ರಹಗಳಾದ ಚಿಕ್ಕಪ್ಪ ದೊಡ್ಡಪ್ಪಂದಿರ ಗಂಡು ಮಕ್ಕಳಲ್ಲಿ ನಡೆಯುವ ತಮಾಷೆ ಮಾತುಗಳಿಗೆ ಮಿತಿಯಿಲ್ಲ. ಅಂಥಹ ಸಾಗರದಷ್ಟು ನಡೆದ, ನೆಡೆಯುವ ಚರ್ಚೆಗಳನ್ನು, ವಿಷಯಗಳನ್ನು ಹೆಕ್ಕಿ ಹೆಕ್ಕಿ ಮೆಲುಕು ಹಾಕುತ್ತ ನಮ್ಮ ಭೇಟಿಗಳನ್ನು ಇನ್ನಷ್ಟು ಸುಮಧುರ ಕ್ಷಣಗಳನ್ನಾಗಿ ಮಾಡಿಕೊಳ್ಳುತ್ತೇವೆ. ಒಂಭತ್ತು ಗ್ರಹಗಳು ಪ್ರಚಂಡ ಪ್ರತಿಭೆಗಳು ಒಬ್ಬರಿಗೊಬ್ಬರು, ಒಬ್ಬರಿಂದ ಒಬ್ಬರು, ಒಬ್ಬರಿಗಾಗಿ ಒಬ್ಬರು ಜೊತೆ ನಿಲ್ಲುತ್ತೇವೆ. ನಮ್ಮ  ಹಿಂದಿನ ಹಾಗು ಮುಂದಿನ ಪೀಳಿಗೆಗೆ ಸೇತುವಾಗಿ ನಿಲ್ಲುವ ನಾವುಗಳು ನಮ್ಮ ಮಕ್ಕಳಿಗೆ ಒಂದು  ಸಂಸ್ಕಾರದ ಹಾದಿಯನ್ನು ತೋರಬೇಕು ಅನ್ನುವುದಷ್ಟೇ ನಮ್ಮ ಕಳಕಳಿ. ಇಂತಹ ಒಂದು … Read more

ಸಾಲದ ವಿಷಯ (ಕೊನೆಯ ಭಾಗ): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈ ಘಟನೆಯ ನಂತರ ನಿಮಗೆ ನನ್ನ ರೂಪ ಅಸಹ್ಯವಾಗಿ ಕಾಣಿಸುತ್ತದೆ. ನಾನು ಎಲ್ಲಾ ದುರ್ಗುಣಗಳ ಘನೀಕೃತ ರೂಪವಾಗಿ, ಕೀಚಕನಾಗಿ, ವೀರಪ್ಪನ್ ಆಗಿ ಕಾಣುತ್ತೇನೆ. ಆದರೆ ಏನೂ ಮಾಡಲಾಗದ ಪರಿಸ್ಥಿತಿ ನಿಮ್ಮದು. ನನ್ನದು ಮೃದು ಹೃದಯ. ಇಲ್ಲ ಎಂದು ಹೇಳಿ ನಿಮ್ಮನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಅದಕ್ಕಾಗಿ ನಾನು, ’ರೀ, ಗೆಳೆಯನೊಬ್ಬನಿಗೆ ಎರಡು ಲಕ್ಷ ಕೊಟ್ಟಿದ್ದೆ. ಎರಡು ವಾರ ಬಿಟ್ಟು ಕೊಡ್ತೀನಿ ಎಂದು ಹೇಳಿದ್ದಾನೆ. ನೀವು ಎರಡು ವಾರ ಬಿಟ್ಟು ಬನ್ನಿ, ಕೊಟ್ಟರೆ ನಿಮಗೆ ಖಂಡಿತಾ ಹತ್ತು ಸಾವಿರ … Read more

ಸಾಲದ ವಿಷಯ (ಭಾಗ 2): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈಗಿನ ಕಾಲದಲ್ಲಿ ಕ್ರೆಡಿಟ್ ಕಾರ್ಡಿಲ್ಲದವನು, ಮೊಬೈಲ್ ಫೋನಿರದವನು ಶ್ವಾನಕಿಂತ ಕಡೆಯೆಂದ ಸರ್ವಜ್ಞ! ದೂರವಾಣಿ ಮಾಡಿ ತಲೆ ತಿನ್ನುವ ಕ್ರೆಡಿರ್ಟ್ ಕಾರ್ಡು ಕಂಪನಿಯವರನ್ನು ನಾನು ಒಮ್ಮೆ ಸತಾಯಿಸಿದ್ದು ಹೀಗೆ. ’ಸರ್, ದಯವಿಟ್ಟು ನಿಮ್ಮ ಕೆಲ ನಿಮಿಷಗಳನ್ನು ಬಳಸಿಕೊಳ್ಳಲೇ?’ ಕರ್ಣಾನಂದಕರ ದನಿ, ಆಂಗ್ಲ ಭಾಷೆಯಲ್ಲಿತ್ತು. ’ಸರಿ, ಹೇಳಿ,’ ’ನಾವು… ಬ್ಯಾಂಕಿನವರು. ನಿಮಗೆ ಕ್ರೆಡಿಟ್ ಕಾರ್ಡನ್ನು ಫ್ರೀಯಾಗಿ ಕೊಡುತ್ತೇವೆ.’ ನಾನು ಅವಳ ಮಾತು ಮುಂದುವರಿಸುವ ಮೊದಲೇ ಹೇಳಿದೆ, ’ಹೌದಾ? ನನಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅವಶ್ಯಕತೆ ಇದೆ. ನಾನು ಈಗಾಗಲೇ … Read more

ಮೇರಾ ಲವ್ಲೀ ಕನ್ನಡ…!!: ಸಚಿನ್ ಎಂ. ಆರ್.

 ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)…!! ಪಕ್ಕದಲ್ಲಿ ಮೂವರು ಬುದ್ಧಿಜೀವಿಗಳು (ಬಿಳಿ ಗಡ್ಡ ಇದ್ದಿದ್ರಿಂದ ಹಂಗಂದುಕೊಂಡೆ) ಮಾತಾಡ್ತಾ ನಿಂತಿದ್ರು…!! ಅಷ್ಟರಲ್ಲಿ ಅಲ್ಲೇ ಇದ್ದ ಬಸ್ಸಿನಿಂದ ಇಳಿದುಬಂದ  ಸುಂದರ ಯುವತಿಯೊಬ್ಬಳು ನನ್ನತ್ರ ಅಡ್ರೆಸ್ಸ್ ತೆಲುಗಲ್ಲಿ ಕೇಳಿದ್ಳು..! ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು ಕೂಡಾ.. ನಾನೂ ಒಬ್ಬ ಕನ್ನಡಿಗನಾದ್ದರಿಂದ ಅವಳ ವಿಳಾಸಾನ ತೆಲುಗಲ್ಲೇ ಹೇಳಿದೆ..!! ಇದು ನಮ್ಮ ಕನ್ನಡ ಬುದ್ಧಿಜೀವಿಗಳಿಗೆ ಸ್ವಲ್ಪ ರೇಗಿಸಿತು ಅನ್ಸತ್ತೆ..! “ತಮ್ಮಾ ಬಾ” ಅಂದ್ರು. ಹತ್ತಿರ ಹೋದೆ. “ನೀನ್ ಯಾವೂರು? ನಿನ್ ಭಾಷೆ … Read more

ಕಾಗೆ ಪಕ್ಷ! ಕೋಗಿಲೆ ಪಕ್ಷ!! : ಎಸ್.ಜಿ.ಶಿವಶಂಕರ್

ಅಲೆಅಲೆಯಾಗಿ ತೇಲಿ ಬಂತು ಕೋಗಿಲೆಯ ಮಧುರ ಸ್ವರ. ಕೇಳುತ್ತಲೇ ವಿಶಾಲೂ ಮುಖ ಅರಳಿತು, ಮಂದಹಾಸ ಮಿನುಗಿತು. ಉಲ್ಲಸಿತಗೊಂಡಳು! ಪೇಪರಿನಿಂದ ತಲೆ ಎತ್ತಿ ಸ್ವರ ಬಂದ ದಿಕ್ಕನ್ನು ಗುರುತಿಸಲು ಪ್ರಯತ್ನಿಸಿದಳು. ’ದರಿದ್ರ, ಮತ್ತೆ ಬಂದು ವಕ್ಕರಿಸಿತು’ ವಿಶ್ವ ಶಪಿಸಿದ! ವಿಶಾಲೂ ಬೆಚ್ಚಿದಳು! ಇಂತವರೂ ಇರ್ತಾರ? ಅಚ್ಚರಿಪಟ್ಟಳು! ಕೋಗಿಲೆಯ ಇಂಪಾದ ರಾಗವನ್ನು ದರಿದ್ರ ಎಂದು ಭಾವಿಸ್ತಾರಾ..? ಬೆಳ್ಳಂಬೆಳಿಗ್ಗೆ ಗಡ್ಡ ಮೀಸೆಗಳಿರುವ ಜಾಗದಲ್ಲಿ ಚೂರುಚೂರೇ ಬೆಳೆದು ’ನೀನು ಮುದುಕನಾಗುತ್ತಿರುವೆ’ ಎಂಬುದನ್ನು ಜಗಜ್ಜಾಹೀರು ಮಾಡಲು ಹವಣಿಸುತ್ತಿದ್ದ ಬಿಳಿಕೂದಲುಗಳನ್ನು ನಿರ್ದಯದಿಂದ ಬೋಳಿಸುವ, ನವನಾಗರೀಕ ಭಾಷೆಯಲ್ಲಿ … Read more

ಪದ್ದಿಯ ಪತ್ರ: ಅಣ್ಣಪ್ಪ ಆಚಾರ್ಯ, ಹೊನ್ನಾವರ

ಪ್ರೀತಿಯ ಪತಿದೇವರಿಗೆ.., ನಿಮ್ಮ ಪ್ರಾಣಕಾಂತೆ ಪದ್ದಿಯ ‘ಸಕ್ಕರೆಗಿಂತ ಸಿಹಿ’ಯಾದ ಮುತ್ತುಗಳು..! ಏನ್ರೀ.., ನಾನು ಪ್ರೀತಿಯಿಂದ ನಾಲ್ಕು ಮಾತು ಬೈಯ್ದೆ ಅಂತ ಮನೆ ಬಿಟ್ಟು, ಆ ಸತ್ಯಾನಂದ ಸ್ವಾಮಿ ಆಶ್ರಮ ಸೇರುವುದಾ..? ಗಣೇಶನ ಹಬ್ಬಕ್ಕೆ ಬಿಗ್‍ಬಜಾರ್‍ನಲ್ಲಿ ಡಿಸ್ಕೌಂಟ್‍ನಿಂದ ನಾಲ್ಕು ಸೀರೆಯನ್ನು 2000 ರೂಪಾಯಿಗೆ ತಂದು 5000 ರೂಪಾಯಿ ಬಿಲ್ ತೊರಿಸಿದ್ದಕ್ಕೆ ಬೇಜಾರಾ..? ಅಥವಾ ಹಬ್ಬದ ದಿನ ನಾನು ಅಡುಗೆ ಮಾಡಿದ್ದಕ್ಕಾ..?! ರೀ.., ಇನ್ಮುಂದೆ ಹಬ್ಬದ ದಿನವೂ ನೀವೇ ಅಡುಗೆಮಾಡಿ. ಗಣೇಶನ ಹಬ್ಬದ ದಿನ ನಾನು ಮಾಡಿದ ಅಡುಗೆ ಎಷ್ಟು … Read more

ಕೊಠಡಿ ಪುರಾಣ: ಶ್ರೀವಲ್ಲಭ

ಮ್ಯಾಲಿನ ಈ ಶೀರ್ಷಿಕೆಯನ್ನು ನೋಡಿದಾಗ ನಿಮಗ ಗೊತ್ತಾಗಿರಬೇಕು ನಾ ಏನು ಹೇಳಲಿಕ್ಕೆ ಹೊ೦ಟೇನಿ ಅ೦ತ. ನೀವು ಅನ್ಕೊ೦ಡ ಹ೦ಗ ನಾನು ನನ್ನ ಮಾಸ್ತರಕಿ ವೇಳ್ಯಾದಾಗ ಕ್ಲಾಸ (ಕೊಠಡಿ) ಒಳಗ ಏನೇನು ಮಜಾ ಮಜಾ ಸುದ್ದಿ ಇರತಾವು ಅನ್ನೋದನ್ನ ಹೇಳತೆನಿ ಕೇಳ್ರಿ… ಈ ಹುಡುಗರು (ಹುಡುಗಿಯರು ಕೂಡ) ಒ೦ದು ಭಾಳ ವಿಚಿತ್ರ ಜನಾ೦ಗ ರೀ. ಮು೦ಜಾನೆ ಎದ್ದು ಠಾಕು ಠೀಕು ಅ೦ತ ತಯ್ಯಾರ ಆಗಿ ಅಗದಿ ಸೀರಿಯಸ್ ಮೂಡ್ ನ್ಯಾಗ ಕಾಲೇಜಿಗೆ ಬರತಾರ, ಇವತ್ತ ನಾ ಕ್ಲಾಸಿಗೆ ಚಕ್ಕರ ಹಾಕ೦ಗಿಲ್ಲಾ … Read more

ಲಗೂನ ಕಲ್ಲ್ ತುಗೋಳ್ರೀ: ಗುಂಡೇನಟ್ಟಿ ಮಧುಕರ

ನಾನೀಗ ಭಾಷಣ ಮಾಡಲು ನಿಮ್ಮ ಮುಂದೆ ನಿಂತಿದ್ದೇನೆ. ಸಂಘಟಕರು ಕೇವಲ ಐದೇ ನಿಮಿಷದಲ್ಲಿ ಮಾತುಗಳನ್ನು ಮುಗಿಸಬೇಕೆಂಬ ಅತ್ಯಂತ ಕಠಿಣ ನಿಬಂಧನೆಯೊಂದನ್ನು ನನ್ನ ಮುಂದೆ ಇಟ್ಟಿದ್ದಾರೆ. ಆದರೂ ನಾನು ಒಪ್ಪಿಕೊಂಡು ವೇದಿಕೆ ಮೇಲೆ, ಮೈಕ್ ಮುಂದೆ ನಿಂತು ಮಾತನಾಡುವ  ಧೈರ್ಯ ಮಾಡುತ್ತಿರುವೆ. ಈಗ ನಾನು ನನ್ನ ಮನದಲ್ಲಿ ನನ್ನ ಮಡದಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ಏಕೆಂದರೆ ನಾನು ಐದೇ ನಿಮಿಷದಲ್ಲಿ ತಯಾರಾಗಬೇಕೆಂದು  ಮಡದಿಗೆ ಹೇಳಿದಾಗ, ಯಾವದೇ ಉದ್ವೇಗಕ್ಕೊಳಗಾಗದೆ, ಮುಖದ ಮೇಲೆ ಯಾವುದೇ ಭಾವ ತೋರಿಸದೆ, ಸಹಜವಾಗಿಯೇ ಒಪ್ಪಿಕೊಂಡು ಒಳಗೆ … Read more

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ: ಉಪೇಂದ್ರ ಪ್ರಭು

’ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಅನ್ನೋ ರಾಜರತ್ನಂ ಅವರ ಸಾಲು ಭಾಗಶಃ ನನಗೂ ಅನ್ವಯಿಸುತ್ತದೆ. ಯಾಕೆ ಭಾಗಶಃ ಅಂತೀರಾ? ಆ ಸಾಲಿನ ’ಹೆಂಡ್ತಿ’ ಅನ್ನೋ ಪದ ರತ್ನಂ ಅವರಿಗೆ ಪ್ರಾಣ ಆಗಿರಬಹುದು ಆದ್ರೆ ನನಗಲ್ಲ. ಇರಲಿ ಬಿಡಿ. ಅವಕಾಶ ಸಿಕ್ಕಾಗೆಲ್ಲ (ಹೆಂಡತಿಯ ಗೈರು ಹಾಜರಿಯಲ್ಲಿ) ವಿದೇಶಿ ಹೆಂಡದ ಜತೆ ಕನ್ನಡ ಪದಗಳು ನನ್ನ ಸಂಗಾತಿಗಳಾಗುತ್ತವೆ. ಇಂದೂ ಆಗಿದ್ದು ಅದೇ. ಹೆಂಡತಿ ಮುಖ ಉಬ್ಬಿಸಿಕೊಂಡು ತವರುಮನೆ ಸೇರಿದ್ದ ಕಾರಣ ವ್ಹಿಸ್ಕಿ ಜತೆ ಮೈಸೂರು ಅನಂತಸ್ವಾಮಿಯವರ … Read more