ಟೀನೇಜೆಂದರೆ ಬರೀ ಮೋಜಲ್ಲ. . . . : ಸವಿತಾ ಗುರುಪ್ರಸಾದ್

  ಟೀನೇಜಿನಲ್ಲಿ ಲವ್ ಮಾಡದಿದ್ದರೆ ಆತ ಅಂಜುಬುರುಕ, ಸಿಗರೇಟು ಸೇದದಿದ್ದರೆ ಈ ಶತಮಾನದಲ್ಲಿ ಆತ ಬದುಕುವುದಕ್ಕೇ ನಾಲಾಯಕ್ಕು, ಗುಂಡು ಹಾಕಿ ಗಲಾಟೆ ಎಬ್ಬಿಸಿ ಹೊಡೆದಾಟ ಮಾಡದಿದ್ದರೆ ಆತ ಗಂಡಸೇ ಅಲ್ಲ, ರಸ್ತೆಯಲ್ಲಿ ಹುಡುಗಿಯರಿಗೆ ಕಾಮೆಂಟ್ ಪಾಸ್ ಮಾಡಿ ಚುಡಾಯಿಸದಿದ್ದರೆ ಅವ ದಂಡ ! ಇದು ನಮ್ಮ ಟೀನೇಜ್ ಹುಡುಗರ ಮನದಿಂಗಿತ. ಕಾರಣ ಇವೆಲ್ಲಾ ಪೌರುಷದ ಸಂಕೇತ.  ಇನ್ನು ಹುಡುಗಿಯರೂ ಇದಕ್ಕೆ ಹೊರತಾಗಿಲ್ಲ ಬಿಡಿ. ತನ್ನ ಹಿಂದೆ ಒಬ್ಬ ಹುಡುಗನಾದರೂ ಓಡಾಡದಿದ್ದರೆ ಆಕೆ ಕಾಲೇಜು ಹಂತಕ್ಕೆ ತಲುಪಿದ್ದೇ ವೇಸ್ಟ್, … Read more

ನಾಡು, ನುಡಿಯ ಮೇಲಿನ ಅಭಿಮಾನ: ಕೃಷ್ಣವೇಣಿ ಕಿದೂರ್

ಛತ್ತೀಸ್ ಘಡದಲ್ಲಿ ಒಂದು  ಅಖಿಲ ಭಾರತ ಮಹಿಳಾ ಕಾನ್ ಫರೆನ್ಸಿಗೆ   ನಾವು ಬಂದಿದ್ದೆವು. ಭಾರತದ ಎಲ್ಲೆಡೆಯಿಂದ ಬಂದ ಮಹಿಳೆಯರು ಅಲ್ಲಿದ್ದರು. ವಿವಿಧ ಉಡುಗೆ ತೊಡುಗೆ, ವೈವಿಧ್ಯಮಯ ಆಹಾರ, ವಿವಿಧ ಭಾಷೆ ಎಲ್ಲವನ್ನೂ ಗಮನಿಸುತ್ತಿದ್ದೆವು. ನಾವು ಕೇರಳದವರು ನಾಲ್ಕು ಮಂದಿ ಒಟ್ಟಾಗಿದ್ದೆವು. ಕಾನ್ ಫರೆನ್ಸ್ ನ ಎರಡನೆಯ ದಿನ. ನಾವುಈ ಮೊದಲೇ ಮಾತಾಡಿಕೊಂಡ ಹಾಗೆ ಕೇರಳದ ಮಲಯಾಳಿ ಸೀರೆ ಉಟ್ಟಿದ್ದೆವು. ನಸು ಕ್ರೀಂ ಬಣ್ಣದ   ಖಾಲಿ(ಪ್ಲೈನ್)   ಸೀರೆಗೆ ಚಿನ್ನದ ಬಣ್ಣದ ಜರಿಯ ಅಂಚು, ಅದೇ ರೀತಿಯ ಜರಿಯ ಸೆರಗು. … Read more

ಇಂದಿನ ಫಲಿತಾಂಶವೇ ಕೊನೆಯಲ್ಲಾ: ಮಲ್ಲೇಶ ಮುಕ್ಕಣ್ಣವರ

ಅವತ್ತು ನನ್ನ ಹತ್ತನೇ ತರಗತಿಯ ಫಲಿತಾಂಶ  ಬಂದ ದಿನ. ಒಂದು ಕಡೆ ಬರುವ ಫಲಿತಾಂಶದ ಕುರಿತು ಇನ್ನಿಲ್ಲದ ಆತಂಕ. ಮತ್ತೊಂದೆಡೆ ಸ್ಕೂಲ್ ಲೈಪ್‍ಗೆ ಬೈ ಹೇಳಿ ಕಾಲೇಜ ಮೆಟ್ಟಿಲು ಏರುವ ಸಂತಸ. ಈ ಯಾವ ಭಾವಕ್ಕೂ ಸ್ಪಂದಿಸಿದೆ ಕೈ ಕಾಲುಗಳು ಅತ್ತಿಂದಿತ್ತ ತೂರಾಡುತ್ತಿದ್ದರೆ. ಮನದ ತುಂಬಾ ಅದ್ಯಾವದು ಭಯ ಆವರಿಸಿತ್ತು.  ಅದೇ ಹೆದರಿಕೆಯಲ್ಲಿ ಫಲಿತಾಂಶವನ್ನು ನೋಡಿದೆ. ಅಷ್ಟೊಂದು ಹೇಳಿಕೊಳ್ಳುವ ಮಾಕ್ರ್ಸ ಪಡಿಯದೆಯಿದ್ದರು. ನನ್ನ ಪ್ರಯತ್ನಕ್ಕೆ ತಕ್ಕದಾದದ ಅಂಕಗಳು ಸಿಕ್ಕಿದ್ದವು. ಇದರ ಜೊತೆ ಫಸ್ಟ್ ಕ್ಲಾಸ್ ಎನ್ನುವ  ಸಮಾಧಾನ … Read more

ಕಿರು ಲೇಖನಗಳು: ಹೆಚ್ ಎಸ್ ಅರುಣ್ ಕುಮಾರ್, ಅಭಿಷೇಕ್ ಪೈ

ಅವನು ಮತ್ತು ಅವಳು (ಸಣ್ಣ ಕಥೆ) ಸುಂದರ ಸಂಜೆಯಲ್ಲಿ ಸಮುದ್ರದ ತೀರದಲ್ಲಿ ಅವನು ಕುಳಿತಿದ್ದ. ಸುತ್ತಲೂ ಆಡುತ್ತಿದ್ದ ಮಕ್ಕಳು. ಕೈ ಕೈ ಹಿಡಿದು ನಡೆದಾಡುವ ಜೋಡಿಗಳು.ಅವನು ನೋಡುತ್ತಿದಂತೆ ಅವಳು ಸ್ವಲ್ಪ ದೂರದಲ್ಲಿ ಮರಳ ಮೇಲೆ ಬಟ್ಟೆ ಹಾಸಿ ಕುಳಿತಳು.ಮೊಬೈಲಿನಲ್ಲಿ ಏನೋನೋಡುತ್ತಿರುವಂತೆ ಅನಿಸುತ್ತಿತ್ತು.ತಟ್ಟನೆ ತಲೆ ಎತ್ತಿ ನೋಡಿದಳು.ಅವನು ಅವಳನ್ನೇ ನೋಡುತ್ತಿದ್ದ.ಇಬ್ಬರ ಮಖದಲ್ಲೂ ಮಂದಹಾಸ ಮೂಡಿತು.ಅವಳು ಮೆಲ್ಲನೆ ಹತ್ತಿರ ಬಂದು ಕುಳಿತಳು. "ಒಬ್ಬರೇ ಬಂದಿದ್ದೀರಾ ?" ಅವಳ ಪ್ರಶ್ನೆಗೆ ತಲೆಯಾಡಿಸಿದ. ಇಬ್ಬರ ಮಾತಿಗೂ ಕೊಂಡಿ ಸಿಕ್ಕಿತು. "ನೀವು ಕಥೆ ಕವನ … Read more

ಕಾದಿದೆ ಈ ಮನ ಪ್ರಮೋಷನ್ ಗಾಗಿ: ಚೈತ್ರ ಎಸ್.ಪಿ.

ಎಂದಿಗೂ ವೈವಾಹಿಕ ಜೀವನದ ಕನಸು ಕಂಡವಳಲ್ಲ. ಇಂದು ಕಂಡೆ. ಒಬ್ಬ ಪರಿಪೂರ್ಣ ಮಹಿಳೆಯಾಗಿ ನಾನು ನನ್ನ ಪೂರ್ಣ ಪೂರ್ಣವಾಗಿ ತನ್ನ ಜೀವನವನ್ನು ಸಂತೊಷದಿಂದ ಕಳೆಯುವ ಕನಸ ಕಂಡೆ. ಸಣ್ಣ ಸಣ್ಣ ಕನಸುಗಳು. ಅದು ನಸುಕಿನ ಮಂಜಿನಲ್ಲಿ ಅವನ ಬಿಟ್ಟೇಳಲು ಮನಸ್ಸಿಲ್ಲದಿದ್ದರೂ ತಬ್ಬಿದ ಅವನ ಕೈಯನ್ನು ಬಿಡಿಸಿ ಅವನ ಕಾಲುಗಳಿಗೊಂದು ಸಿಹಿ ಮುತ್ತಿಟ್ಟು ದಿನದ ಕೆಲಸ ಪ್ರಾರಂಭ ಮಾಡುವುದೇ ಅಗಿರಬಹುದು. ಮಾತೃ ಸಮಾನವಾಗಿ ನೋಡುವ ನನ್ನ ಪ್ರೀತಿಯ ಗೋವುಗಳ ಸೇವೆಗೆ ಅವನು ಕೊಟ್ಟ ಪ್ರೋತ್ಸಾಹಕ್ಕೆ ಪ್ರತಿಯಾಗಿ ನಾ ಅವುಗಳೊಂದಿಗೆ … Read more

ಸಾಲಿ ಪಡಸಾಲಿ: ತಿರುಪತಿ ಭಂಗಿ

ನಾನು ಕೆಲಸವಿಲ್ಲದೆ ಅಲೆದಾಡುತ್ತಿದ್ದೆ. ಆದ್ರೆ ಯಾರೂ ನನಗೆ ನಿರುದ್ಯೋಗಿ ಅಂದಿರಲಿಲ್ಲ.ಪಾಪ..! ನಮ್ಮೂರ ಜನರು ನನ್ನ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ನಮ್ಮ ಅಪ್ಪನಿಗಂತೂ  ಒಬ್ಬನೆ ಮಗಾ. ಹಿಂಗಾಗಿ ನಾ ಮಾಡಿದ್ದೆ ಮಾರ್ಗ ಎಂದು ನನ್ನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನಾನು ನಾಲ್ಕು ಸಾರಿ ಹತ್ತನೇ ತರಗತಿ ಪೇಲಾದರೂ ನನ್ನ ಅಪ್ಪ ಮಗಾ ಮನಸಿಗೆ ಬೇಜಾರ ಮಾಡ್ಕೊಂಡಿತು ಎಂದು ತಿಳಿದು “ಮಗನೇ ನಿನ್ನ ಪಾಸ ಮಾಡಿದ್ರೆ ಎಲ್ಲಿ ನೀ ಡಿ.ಸಿ ಅಕ್ಕಿ ಅನ್ನೋ ಹೊಟ್ಟೆ ಕಿಚ್ಚು ಆ ಮಾಸ್ತರ … Read more

​ಲಡಾಯಿ ಪ್ರಕಾಶನದಿಂದ ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ

ಲಡಾಯಿ ಪ್ರಕಾಶನದಿಂದ ಶೂದ್ರ ಶ್ರೀನಿವಾಸ್ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 3 ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10.15 ಗಂಟೆಗೆ ನಡೆಯುವುದು. ಆಸಕ್ತರು ಭಾಗವಹಿಸಬಹುದು…

ನಿನ್ನ ಹೆಸರಲ್ಲೆ ರೂಪ ಅಡಗಿದೆ: ಬಂದೇಸಾಬ ಮೇಗೇರಿ

ಪ್ರೀತಿಯ ಕ್ಯಾಂಪಸ್ಸಿನ ಕನ್ಯೆ, ಕ್ಯಾಂಪಸ್ಸಿನಲ್ಲಿನ ಹೂವುಗಳ ಘಮಲು ಮನಸ್ಸಿಗೆ ತಾಕುತ್ತಿದೆ. ಆ ನೆನಪುಗಳು ಇನ್ನೂ ಇಲ್ಲೇ ಎಲ್ಲೋ ಸುಳಿದಾಡುತ್ತಿವೆ. ಇಬ್ಬರೂ ಕೈ ಕೈ ಹಿಡಿದು ಸುತ್ತಾಡಿದ ಜಾಗಗಳಲ್ಲೆಲ್ಲ ಉಳಿದ ನಮ್ಮ ಬಿಸಿ ಉಸಿರನ್ನು ಹುಡುಕುತ್ತಿದ್ದೇನೆ ನೀನಿಲ್ಲದ ಜಾಗದಲ್ಲಿ. ನನಗಿನ್ನೂ ನೆನಪಿದೆ ನನ್ನನ್ನು ಹುಡುಕುತ್ತಿದ್ದ ನಿನ್ನ ಕಣ್ಣುಗಳ ಹೊಳಪು ಹಾಸುಹೊಕ್ಕಾಗಿದೆ ಈ ಮನದಲ್ಲಿ. ಮೊದಲ ಆಕಸ್ಮಿಕ ಭೇಟಿ ಜಗಳದಿಂದಲೇ ಶುರುವಾದದ್ದು, ಮತ್ತೆ ಕೆಲವು ದಿನ ಓರೆಗಣ್ಣಲ್ಲಿ ನೋಡುವ ಅದೇ ಲುಕ್. ವೈರತ್ವ ಕ್ರಮೇಣ ಸ್ನೇಹವಾಗಿ ರೂಪುಗೊಂಡಿತು. ನೀನು ಎಲ್ಲಿ … Read more

ನಾವಿಕನಿಲ್ಲದ ದೋಣಿಯಲ್ಲಿ……: ಮಲ್ಲೇಶ ಮುಕ್ಕಣ್ಣವರ

ಕೆಲವೊಂದು ಸಂಧರ್ಭದಲ್ಲಿ ಅಪ್ಪ ಅಂದರೆ ನಮಗೆಲ್ಲಾ ಯಾವುದೋ ಮಿಲಟರಿ ದಂಡಿನ ಮಹಾದಂಡನಾಯಕನಂತೆಯೂ ಮತ್ತೊಮ್ಮೆ  ಜಮದಗ್ನಿ ಮುನಿಯಂತೆ ಭಾಸವಾಗಿ ಬಿಡುತ್ತಾನೆ.ಅಷ್ಟೇ ಏಕೆ ನಮ್ಮಪ್ಪ ಕೋಪಿಷ್ಟ, ಗರ್ವಿಷ್ಟ ಅವನ ಮೂಗಿನ ತುದಿಯಲ್ಲೇ ಕೋಪ ಎಂದೆಲ್ಲಾ ಗೊಣಗುತ್ತೇವೆ. ಆದರೆ ಅಪ್ಪನ ಮನಸ್ಥಿತಿಯೇ ಬೇರೆ ಮನದಲ್ಲಿ ಬೆಟ್ಟದಷ್ಟು ಪ್ರೀತಿಯನ್ನು ತುಂಬಿಕೊಂಡಿದ್ದರು ವ್ಯಕ್ತಪಡಿಸುವಲ್ಲಿ ಹಿಂದೆಟು ಹಾಕುತ್ತಾನೆ. ತನ್ನವರನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಾನೆ. ಅಂತಹ ಅಪ್ಪನಿಗೆ ಅಪ್ಪನೇ ಸಾಟಿ. ಅವನ ಶ್ರಮದ ಬೆವರಹನಿಯ ಹಿಂದೆ ತನ್ನವರನ್ನು ಸಂರಕ್ಷಿಸುವ ಸ್ವಾರ್ಥತೆಯಿದೆ. ಕ್ಷಣಕ್ಷಣಕ್ಕೂ ಕೋಪಸಿಕೊಳ್ಳುವ ಕೋಪದ ಹಿಂದೆ ಮಕ್ಕಳಿಗೆ … Read more

ಪ್ರೀತಿ ಜಗದ ರೀತಿ: ದಿವ್ಯಾಧರ ಶೆಟ್ಟಿ ಕೆರಾಡಿ

ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು  ಎನ್ನುವ ಹುಡುಗ ಮತ್ತು ಹಂಬಲಿಸೊ ನಿನ್ನ ಕಂಗಳಲಿ ಬೇರೇನೂ ಕಾಣದು ಹುಡುಗ ನನ್ನ ದೊರೆಯು ನೀನೆ ಆಸರೆಯು ನೀನೆ ಎನ್ನುವ ಹುಡುಗಿಯ ಎದೆ ಬಗೆದು ನೋಡಿದರೂ ಕಾಣುವುದು ನಿರ್ಮಲವಾದ  ಹಚ್ಚ ಹಸಿರಿನ ಸ್ವಚ್ಛ ಪ್ರೀತಿ ಮಾತ್ರ ಇದು ಈ ಜಗದ ನೀತಿ ಪ್ರೀತಿಯ ರೀತಿ. ಹೌದು 'ಪ್ರೀತಿ' ಎಂಬ ಎರಡಕ್ಷರ ಪದಗಳಲ್ಲಿ ಹಿಡಿದಿಡಲಾಗದ ಭಾವ ನೌಕೆ.. ಪ್ರಪಂಚದ ಯಾವಜೀವಿಯನ್ನು ಬಿಡದೆ ಕಾಡುವ ಮಾಯಾಜಿಂಕೆ. ಅಲ್ಲೆಲ್ಲೋ ಬಸ್ … Read more

ಭೂಸ್ವಾದೀನ ಕಾಯ್ದೆ: ಎನ್. ಗುರುರಾಜ್ ತೂಲಹಳ್ಳಿ

          ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು ಶೇಕಡ 70 ರಷ್ಠು ಜನತೆ ಕೃಷಿಯನ್ನೆ ಅವಲಂಬಿಸಿ ಬದುಕುತ್ತಿದ್ದಾರೆ ಎಂದು ನಮ್ಮ ಸರಕಾರಗಳು ಮತ್ತು ರಾಜಕೀಯ ಪಕ್ಷಗಳು ರೂಪಿಸುವ ಎಲ್ಲಾ ನೀತಿ ಯೋಜನೆಗಳ ಹಿಂದೆಯು ರೈತರ ಮತ್ತು ದಲಿತರ ಏಳಿಗೆಯ ಘನ ಉದ್ದೇಶವಿದೆ ಎಂದು ಮಾತ್ರ ಹೇಳಿಕೊಳ್ಳುತ್ತವೆ ಹೊರತು ಅಂತಹ ಯಾವ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳು ತಮ್ಮ ಎಲ್ಲಾ ಸಭೆ-ಸಮಾರಂಭಗಳಲ್ಲಿ ರೈತರ ಪರ, ಬಡವರ ಪರ, … Read more

ರಾಮಕುಂಜದಿಂದ ರಾಷ್ಟ್ರ ಪ್ರಶಸ್ತಿಯವರೆಗೆ: ಹೊರಾ.ಪರಮೇಶ್ ಹೊಡೇನೂರು

(ನಾರಾಯಣ ಭಟ್ ಶಿಕ್ಷಕರ ಯಶೋಗಾಥೆ) ************************* ಪ್ರತಿಯೊಬ್ಬರ ಬದುಕಿನಲ್ಲಿ ಪ್ರಭಾವ ಬೀರುವ ವ್ಯಕ್ತಿಗಳಲ್ಲಿ ತಾಯಿ ತಂದೆಯರದ್ದು ಒಂದು ರೀತಿಯದಾದರೆ, ಗುರುವಿನದ್ದು ಮತ್ತೊಂದು ಬಗೆಯದ್ದಾಗಿರುತ್ತದೆ. ಹೆತ್ತವರು ದೈಹಿಕ ಮತಾತು ಮಾನಸಿಕ ಸದೃಢತೆ ಸುರಕ್ಷತೆ ಮತ್ತು ಪೋಷಣೆಯ ಹೊಣೆ ನಿರ್ವಹಿಸಿದರೆ ಗುರುವು ಬೌದ್ಧಿಕ ಜ್ಞಾನ, ಅಕ್ಷರಾಭ್ಯಾಸದ ಜೊತೆಗೆ ಬದುಕಿಗೆ ಬೇಖಾದ ಮಾರ್ಗದರ್ಶನವನ್ನು ಒದಗಿಸುತ್ತಾರೆ. ಹಾಗಾಗಿಯೇ ಗುರುವಿನ ಸ್ಥಾನವು ಸಹಜವಾಗಿ ಸಮಾಜದಿಂದ ಗೌರವಕ್ಕೆ ಪಾತ್ರವಾಗುತ್ತದೆ. ಸ್ಥಾನ ಮಾತ್ರದಿಂದಲೇ ಗೌರವ ಪಡೆಯುವುದು ಒಂದು ರೀತಿಯದಾದರೆ, ವೃತ್ತಿ ನಿರ್ವಹಣಿಯ ವೈಖರಿಯಿಂದಲೂ ನಿಸ್ಪೃಹ ನಡತೆಯಿಂದಲೂ ಗುರುವಿಗೆ … Read more

’ಮಂಗಳಮುಖಿ’ಯರಿಗೆ ಮರೀಚಿಕೆಯಾದ ಸಮಾನತೆಯ ಬದುಕು: ಗುರುರಾಜ್ ಎನ್

ಪ್ರಿಯಾಂಕ, ಮಮತ, ಚೆಲುವೆ, ಅಪ್ಸರ, ಜಯಶ್ರೀ, ವಿಧ್ಯಾ, ಹೀಗೆ  ಎಷ್ಟೋಂದು ಸುಂದರ ಹೆಸರುಗಳು, ಇವು ಒಂದು ವಿಭಿನ್ನ ಸಾಮಜಿಕ ಗುಂಪಿಗೆ ಸೇರಿದ ಹಿಜ್ರಾ, ಕೋಥಿ, ಮಂಗಳಮುಖಿ, ಜೋಗಪ್ಪ, ಡಬಲ್ ಡೆಕ್ಕರ್,  ದ್ವಿಲಿಂಗ ಕಾಮಿ, ಟ್ರಾನ್ಸ್‌ಜೆಂಡರ್, ಅಂತರ್‌ಲಿಂಗಿ, ಇಕ್ವಿಯರ್, ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹೆಸರುಗಳು. ಗಂಡು ದೇಹದಲ್ಲಿ ಬಂದಿಯಾಗಿರುವ ಹೆಣ್ಣುಗಳ ಹೆಸರುಗಳಿವು ಹಾಗೇನೆ ಹೆಣ್ಣು ದೇಹದಲ್ಲಿ ಗಂಡುಗಳ ಹೆಸರುಗಳು ಬಂದಿಯಾಗಿರುವವರು ಇದ್ದಾರೆ. ಸಮಾಜದ ಕಣ್ಣಿಗೆ ಅವರು ಯಾರು? ಅವರ ನೋವು ಸಂಕಟಗಳೇನು? ಅವರ ತೊಂದರೆಗಳೇನು? ಎಂದು ಊಹಿಸಲು ಸಾದ್ಯಾವಾಗುವುದಿಲ್ಲ, … Read more

ದೇವದಾಸಿಯರನ್ನು ರಕ್ಷಿಸುವುದೆಂದು?: ಜಯಶ್ರೀ ಎಸ್. ಎಚ್.

ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ  ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ  ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು … Read more

ಗೌರ್ಮೆಂಟ್ ಇಸ್ಕೂಲು..!: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪಾರಿ  ಶಾಲೆ ಕಡೆಯಿಂದ ಯಾರನ್ನೋ  ಬೈಯ್ದುಕೊಳ್ಳುತ್ತಾ  ಬರ್ತಿರೋದು ನೋಡಿ ಅವಳನ್ನ ತಡೆದು ನಿಲ್ಲಿಸಿದ ಸಿದ್ಧ ಕೇಳಿದ, ‘ಯಾಕಮ್ಮೀ, ಎತ್ತಕಡೆಯಿಂದ ಬರ್ತಿದ್ದೀ ?’ ಅದಕ್ಕೆ ಏದುಸಿರು ಬಿಡುತ್ತಿದ್ದ ಪಾರಿ, ‘ಏ.. ಕಾಣಕಿಲ್ವಾ.. ಇಸ್ಕೂಲ್ತಾಕೆ ಹೋಗಿದ್ದೆ.’ ಅಂದಳು. ಅವರೀರ್ವರ ಮಾತುಕತೆ ಹೀಗೇ ಮುಂದುವರೆಯುತ್ತದೆ. ‘ ಇಸ್ಕೂಲ್ತಾಗೆ ಏನಿತ್ತವೀ ನಿಂದು ಅಂತಾ ಕೆಲ್ಸಾ..?’  ‘ ಏ..ನಂದೇನಿದ್ದತು ಬಿಡು. ಆ ನಮ್ಮ  ಮೂದೇವಿ ಐತಲ್ಲಾ. ವೆಂಕಟೇಸ ಅಂತಾ..ಅದುನ್ನ ಒಳಿಕ್ಕೆ ಕೂಡಿ ಬರೋಕೆ ಹೋಗಿದ್ದೆ.’ ‘ ಯಾಕಂತೆ ಪಾರವ್ವ, ಅವುನ್ಗೆ ಇಸ್ಕೂಲು ಬ್ಯಾಡಂತೇನು ?’ … Read more

ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ‘ಬಾಲ ಕಾರ್ಮಿಕ’ ಪದ್ಧತಿ…: ಹುಸೇನಮ್ಮ ಪಿ.ಕೆ. ಹಳ್ಳಿ

  ಮಕ್ಕಳನ್ನು ‘ನಂದವನದ ಹೂಗಳು’ ಎನ್ನುತ್ತಾರೆ. ಮಕ್ಕಳು ಅಷ್ಟು ಮೃದು, ಅಮೂಲ್ಯ ಮತ್ತು  ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಮಕ್ಕಳು, ಪ್ರೀತಿಯ ಲಾಲನೆ-ಪಾಲನೆಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಇಂತಹ ವಾತ್ಸಲ್ಯ ದೊರಕದೆ ಹೋದರೆ, ಆರೋಗ್ಯ ಬೆಳವಣಿಗೆಯ ಜೊತೆಗೆ ಅವರ ಎಳೆಯ ಮನಸ್ಸಿನ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ. ಆಡಿ ನಲಿಯಬೇಕಾದ ಸುಂದರ ಬಾಲ್ಯವನ್ನು ಅವರಿಂದ ಕಸಿದುಕೊಂಡಂತಾಗುತ್ತಿದೆ.  ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ … Read more

ಹೀಗೊಂದು ಕಥೆ : ಇಬ್ಬನಿಯ ಹುಡುಗ ರಾಮು

ಅವನು ಕಡುಬಡವ ಕುಟುಂಬದಿಂದ ಬಂದಿದ್ದ, ತಾಯಿಯ ಪ್ರೀತಿಯ ಬೆಲೆ ತಿಳಿದಿದ್ದ, ಕಷ್ಟ ಏನಂತ ಸ್ವತಃ ಅನುಭವಿಸಿದ್ದ ಕೂಡ, ಕಿತ್ತು ತಿನ್ನುವ ಬಡತನದ ಮಧ್ಯೆ ಬದುಕಿನಲ್ಲಿ.ಸಾಧಿಸಬೇಕೆಂಬ ಕನಸು ಕಂಡಿದ್ದ ಆ ಕನಸುಗಳನ್ನು ನನಸಾಗಿಸಲು ಹೊರಟ ಹಾದಿಯಲ್ಲಿ ಎದುರಾದ ಸವಾಲುಗಳೇ ಈ "ಹಿಗೋಂದು ಕಥೆ" ಎಂಬ ಲೇಖನ. ತಂದೆಯನ್ನು ಕಳೆದುಕೊಂಡಾಗ ಅವನ ವಯಸ್ಸು ೭ ವರ್ಷ, ಬೀದಿಪಾಲಾಗಿ ಒಂದು ಒಪ್ಪತ್ತು ಅನ್ನ ನೀರಿಗೂ ಕಷ್ಟ ಪಡುವ ಪರಿಸ್ಥಿತಿ ಎದುರಿಸಿದ್ದ, ಅವ್ವನ ತವರು ಮನೆಯಲ್ಲಿ ಆಶ್ರಯಿಸಿದ್ದ ಅಲ್ಲೆಯೆ ಅವನ ಕನಸಿಗೆ ಕಲ್ಪನೆಯೂ … Read more

‘ಬಿಲ್’ಕುಲ್ ಸಂಬಂಧ: ಎಚ್.ಕೆ.ಶರತ್

ಸ್ನೇಹಿತರೊಬ್ಬರ ಸ್ಟೇಷನರಿಯಲ್ಲಿ ಅವರೊಂದಿಗೆ ಹರಟುತ್ತ ಕುಳಿತಿದ್ದೆ. ಆಗಾಗ ಗ್ರಾಹಕರು ಬಂದು ತಮಗೆ ಬೇಕಾದ್ದನ್ನು ಖರೀದಿಸಿ ಹೋಗುತ್ತಿದ್ದರು. ಹೀಗೆ ನೋಟ್ ಬುಕ್ಕು, ಫೈಲು, ಪೆನ್ನು ಇತ್ಯಾದಿ ಕೊಳ್ಳಲು ಬಂದ ಬಾಲಕಿಯರಿಬ್ಬರು ತಮಗೆ ಬೇಕಾದ್ದನ್ನೆಲ್ಲ ಖರೀದಿಸಿದ ನಂತರ, ಎಷ್ಟಾಯ್ತು ಅಂತ ಕೇಳಿ ಹಣ ನೀಡುವ ಮುನ್ನ ಬಿಲ್ ಕೊಡಿ ಎಂದು ಕೇಳಿದರು. ಸಾಮಾನ್ಯವಾಗಿ ಅಲ್ಲಿಗೆ ಬರುವ ಗ್ರಾಹಕರು ಬಿಲ್ ಕೇಳುವುದಿಲ್ಲವಾದ್ದರಿಂದ ಫ್ರೆಂಡ್‍ಗೆ ಅಚ್ಚರಿಯಾಯಿತು. ಅವರು ಕಾರಣ ಕೇಳುವ ಗೋಜಿಗೆ ಹೋಗಲಿಲ್ಲವಾದರೂ ಆ ಬಾಲಕಿಯರೇ ತುಂಬು ಉತ್ಸಾಹದಿಂದ, ‘ಮನೆಯವ್ರಿಗೆ ಬಿಲ್ ತೋರುಸ್ಬೇಕು. … Read more