ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಮೊಕಾಶಿ ಎಂ.ಎಚ್.
“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ. ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. … Read more