ಜೀವನವೊಂದು ಮುರಳಿ- ಸುಖ ಸಂತೋಷ ತರಲಿ: ಎಂ.ಎನ್.ಸುಂದರ ರಾಜ್

ದೀಪಾವಳಿ ಅಂದರೆ ಸಾಕು, ಮಕ್ಕಳು ಪುಳಕಿತಗೊಳ್ಳುತ್ತಾರೆ, ಹಿರಿಯರು ಸಂಭ್ರಮಿಸುತ್ತಾರೆ. ಏಕೆಂದರೆ, ಇದೊಂದು ಬೆಳಕಿನ ಹಬ್ಬ, ಅಜ್ಞಾನವೆಂಬ ಕತ್ತಲನ್ನು ಪರಿಹರಿಸಿ, ಜ್ಞಾನದ ಬೆಳಕನ್ನು ನೀಡುವ ದಿವ್ಯ ಸಂದೇಶವೇ ದೀಪಾವಳಿ. ಈ ಹಬ್ಬದ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಅವಶ್ಯಕ. ಶ್ರೀ ರಾಂಜಿ ಜೈನ್ ಎಂಬ ಆಧ್ಯಾತ್ಮಿಕ ಗುರುಗಳು ದೀಪಾವಲಿಯ ಸಂದರ್ಭದಲ್ಲಿ ಒಂದೆಡೆ ಮಾತನಾಡುತ್ತಾ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಿದ್ದಾರೆ. ಜೀವನ ಹೂವಿನ ಹಾಸಿಗೆಯಲ್ಲ, ಅದೊಂದು ಸಮಸ್ಯೆಯ ಗೂಡು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಜೀವನದ ಎಲ್ಲ … Read more

ನಮ್ಮೆಲ್ಲರ ಸಿಪಿಕೆ- ಎಂಬತ್ತರ ಮೊಹಬತ್ತು!: ಡಾ. ಹೆಚ್ ಎನ್ ಮಂಜುರಾಜ್

ಸಿಪಿಕೆ ಮತ್ತು ಅವರ ಕಾವ್ಯ ಕುರಿತ ಬರಹ ಅಪ್ರತಿಮ ವಿದ್ವತ್ತು; ಮಾತೋ ವಿದ್ಯುತ್ತು ! ಸಿಪಿಕೆಯವರನ್ನು ಬಲ್ಲ ಯಾರಿಗೂ ಅನಿಸುವ ಸತ್ಯವಿದು. ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ ಪಿ ಕೃಷ್ಣಕುಮಾರ್ ಅವರು ಕನ್ನಡ ಸಾಹಿತ್ಯದ ಹೆಮ್ಮೆಯ ಆಸ್ತಿ. ಹಳೆಯ ಮೈಸೂರು ಪ್ರಾಂತ್ಯದ ಸತ್ತ್ವ ಮತ್ತು ಸ್ವತ್ವ. ಇವರು ತಮ್ಮೆಲ್ಲ ಚೈತನ್ಯವನ್ನು ಸಾಹಿತ್ಯ ಕೃಷಿಗೆ ಮುಡಿಪಿಟ್ಟವರು. ಕನ್ನಡ ಸಾಹಿತ್ಯ ಸೇವೆಯೇ ಅವರ ಮತ್ತೊಂದು ಹೆಸರು; ಬರೆವಣಿಗೆ ಅವರ ಉಸಿರು. ಕನ್ನಡ, ಇಂಗ್ಲಿಷ್ … Read more

ಕನ್ನಡದ ಕಣ್ಮಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಂದೆ ತಾಯಿಗೆ ತಮ್ಮ ಮಗ ಇಂಗ್ಲೀಷ್ ಮಾಧ್ಯಮದಲ್ಲಿ ಓದಿ ಇಂಗ್ಲೀಷ್ ಮಾತನಾಡುತ್ತಾ ದೊಡ್ಡ ಅಧಿಕಾರಿಯಾಗಿ ದೊಡ್ಡ ಪಟ್ಟಣದಲ್ಲಿ ದೊಡ್ಡ ಭಂಗಲೆಯಲ್ಲಿದ್ದು ಎಲ್ಲರ ಹತ್ತಿರ ಸೆಲ್ಯೂಟ್ ಹೊಡೆಸಿಕೊಳ್ಳುತ್ತಾ ಕಾರಲ್ಲಿ ಓಡಾಡಬೇಕಂತ ಕನಸು. ನನಸು ಮಾಡಿಕೊಳ್ಳಲು ಹಳ್ಳಿಯ ಕನ್ನಡ ಶಾಲೆ ಬಿಡಿಸಿ ಪೇಟೆ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಅವನಿಗೂ ಪೇಟೆ ಬಣ್ಣಬಣ್ಣದ ತಳುಕುಬಳುಕಿನ ಬದುಕು ಖುಷಿ! ಹೊಸ ಶಾಲೆ, ದೊಡ್ಡ ಸುಂದರ ಆಕರ್ಷಕ ಕಟ್ಟಡ , ಮನಸ್ಸೆಳೆಯುವ ವಾತಾವರಣ, ಶಿಸ್ತಾಗಿ ಬೆಳೆಸಿದ ಕೈತೋಟ, ಸ್ಮಾರ್ಟ್ ಕ್ಲಾಸ್ ಗಳು, ಸೈನ್ಸ್ ಲ್ಯಾಬು, … Read more

ಕಲೆಗೋಸ್ಕರ ಜೀವನವನ್ನೆ ಮುಡಿಪಾಗಿಟ್ಟ ಅಮಟೂರ ದಂಪತಿಗಳು: ಅಶ್ಫಾಕ್ ಪೀರಜಾದೆ, ಧಾರವಾಡ

ಧಾರವಾಡ ಜಿಲ್ಲೆ ಮತ್ತು ತಾಲೂಕೀನ ಹಾರೋಬೆಳಡಿ ಗ್ರಾಮದ ವಾಸಿಗಳಾದ ವೀರಬಸಪ್ಪ ಅಮಟೂರ ಇವರು ವೃತ್ತಿಯಿಂದ ರೈತರಾದರು ದೊಡ್ಡಾಟ ಕಲಾವಿದರು. ಸರಳ ಸಜ್ಜನಿಕೆಯ ವ್ಯಕ್ತಿಯಾದ ವೀರಬಸಪ್ಪನ್ನವರು ದೋಡ್ಡಾಟದಲ್ಲಿ ಸ್ತ್ರೀ ಪಾತ್ರ ಮಾಡುವದರಲ್ಲಿ ನಿಷ್ಣಾತರು. ಅವರ ಅಭಿನಯಕ್ಕೆ ಮನಸೋಲದ ಕಲಾಸಕ್ತರೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅವರು ಮುಖಕ್ಕೆ ಬಣ್ಣಬಳಿದುಕೊಂಡು ಸ್ತ್ರೀಪಾತ್ರದಲ್ಲಿ ಅಭಿನಯಸಲು ನಿಂತರೆಂದರೆ ಸಾಕು ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗುತ್ತದೆ. ಅವರ ಭಾವಾಭಿನಯವಂತೂ ಕಣ್ಣಲ್ಲಿ ನೀರು ಬರಿಸುವಂಥದ್ದು. ಸ್ಪುರದ್ರೂಪಿಯಾದ ವೀರಬಸಪ್ಪಗೆ ಅವರ ಶರೀರ ಮತ್ತು ಶಾರೀರಗಳೇ ಸಂಪತ್ತು. ತಮ್ಮ … Read more

ಬರೆಯುವುದು ಹೇಗೆ?: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ

ಮಹಾ ಶರಣ ಹರಳಯ್ಯ ಪಾರಪಯ್ಯ ಹೊನ್ನಮ್ಮ ದಂಪತಿಗೆ ದವಣದ ಹುಣ್ಣಿಮೆಯೆಂದು ಬಿಜಾಪೂರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಹರಳಯ್ಯನದಾಗಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ … Read more

ಮನುಷ್ಯನಿಗಿರಲಿ ಮಾನವೀಯತೆ: ತುಳಸಿ ನವೀನ್. ಬೆಂಗಳೂರು

ಮಾನವೀಯತೆಯು ಹುಟ್ಟಿನಿಂದಲೇ ಬರುವಂತದ ಗುಣ. ಆದರೆ ನಾವು ಬೆಳೆಯುವ ಪರಿಸರ,ವ್ಯವಹರಿಸುವ ಜನರು, ಅವರ ಮನಸ್ಥಿತಿಯಿಂದ ಬದಲಾಗುತ್ತಾ ಹೋಗುತ್ತದೆ. ಮುಗ್ಧತೆ ಮಾಯವಾಗಿ ಕುಕೃತ್ಯಕ್ಕೆ ತಿರುಗುತ್ತದೆ. ಮತ್ಸರ,ದ್ವೇಷ ಮನಸ್ಸಿನಲ್ಲಿ ಮನೆಮಾಡುತ್ತದೆ. ಆಸೆ-ದುರಾಸೆ ಲಾಲಸೀತನ ಮೈದಳೆಯುತ್ತದೆ. ನೀವು ಗಮನಿಸಬಹುದು, ಶಾಲಾ-ಕಾಲೇಜಿನಲ್ಲಿ ಪುಟ್ಟಪುಟ್ಟ ಮನಸ್ಸುಗಳು, ಮುಗ್ಧ ಮನಸ್ಸುಗಳೆಲ್ಲವೂ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸ್ವಚ್ಛಂದವಾಗಿ ಸ್ನೇಹಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ಪರಸ್ಪರ ಪ್ರೀತಿ, ಸ್ನೇಹ, ಸಹಾಯ ಮಾಡಿಕೊಂಡು ಸಂತೋಷದಿಂದ ಜೀವನ ಕಳೆಯುತ್ತಾ ಇರುತ್ತಾರೆ. ಆ ಮನಸ್ಸುಗಳಲ್ಲಿ ಯಾವುದೇ ಬೇಧಭಾವದ ಕಪ್ಪುಚುಕ್ಕೆಗಳಿರುವುದಿಲ್ಲ. ಅದೇ ಕಾಲೇಜು ಜೀವನದಿಂದ … Read more

ಟ್ರಿಣ್ ಟ್ರಿಣ್ . . . . . . . ದಾರಿಬಿಡಿ: ಸಂಗೀತ ರವಿರಾಜ್

ಸೈಕಲ್ ತುಳಿಯುತ್ತ, ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ, ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ, ಮೂರು ಕತ್ತೆ ವಯಸ್ಸಾಗಿ, ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು. ಬಾಲ್ಯದ ಬಾಗಿಲಲ್ಲಿಯೆ ಕಲಿತ ಸೈಕಲ್ ಸವಾರಿ, ಈಗಲು ನನ್ನ ಕಾಲತುದಿಯಲ್ಲಿ ಅದೇ ಆಸಕ್ತಿಯಿಂದ ಕುಳಿತಿದೆ ಅಂದರೆ ನನಗೆ ನಾನೆ ಪರಮಾಶ್ಚರ್ಯಗೊಳ್ಳುತ್ತೇನೆ. ಮನೆಗೆ ಯಾರಾದರೂ ಸೈಕಲಲ್ಲಿ ಬಂದರೆ, ಅಥವ ನಾವು ಹೋದ … Read more

ಕಗ್ಗದ ಅರ್ಥ ವಿವರಣೆ: ಜಗದೀಶ್ ಅಚ್ಚುತರಾವ್

ಧರೆಯ ಬದುಕೇನದರ ಗುರಿಯೇನು ಫಲವೇನು? । ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು? – ಮಂಕುತಿಮ್ಮ ॥ ೨೭ ॥ ಈ ಕಗ್ಗದಲ್ಲಿ ಡಿ.ವಿ.ಜಿ. ಬದುಕಿನ ಗುರಿ ಏನು ನಾವು ಬದುಕುವ ದಿನದ ಬದುಕಿಗೆ ಏನಾದರೂ ಅರ್ಥವಿದೆಯೇ ಎಂಬುದಾಗಿ ಪ್ರಶ್ನಿಸುತ್ತಾರೆ. ಮಾನವನ ಬದುಕಿಗೆ ಗುರಿಯಿರದೆ ಬಹಳಷ್ಟು ಜನ ಬದುಕಿರುತ್ತ ಇರುತ್ತಾರೆ. ದೇವರು ನಮಗೆ ಮಾನವ ಜನ್ಮ ಕೊಟ್ಟಿರುವುದು ವ್ಯರ್ಥ ಮಾಡುವುದಕ್ಕೆ ಅಲ್ಲ. ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ … Read more

ನಿಂತಲ್ಲೇ ಎಲ್ಲವೂ ಆಗಬೇಕು: ಕೆ.ಪಿ.ಎಮ್. ಗಣೇಶಯ್ಯ,

ಎಲ್ಲಾದರೂ ಉಂಟೆ..? ನಿಂತಲ್ಲೇ ಎಲ್ಲವೂ ಆಗಬೇಕು ಅಂದ್ರೆ..? ನಿಮಗೆಲ್ಲೋ ತಲೆ ಕೆಟ್ಟಿರಬೇಕು, ಇಲ್ಲಾ ಯಾರೋ ತಲೆಗೆ ತುರುಕಿರಬೇಕು. ಏನಂತ..? ನೀನು ಈಗಿಂದೀಗ ಅದು ಆಗಬೇಕು ಅಷ್ಟೆಯಾ..! ಎಲ್ಲಿಯಾದರೂ ಉಂಟೆ..? ನೆಚ್ಚಿಕೊಂಡ ಕ್ಷೇತ್ರದ ಬಗ್ಗೆ ಮಾಹಿತಿ, ತರಬೇತಿ, ಮಾರ್ಗದರ್ಶನ, ಅಭ್ಯಾಸ ಹೀಗೆ ಏನನ್ನೂ ಪಡೆಯದೆ, ಇದ್ದಕ್ಕಿದ್ದ ಹಾಗೆ ಎಲ್ಲವೂ ನನ್ನದಾಗಬೇಕು ಅಂದರೆ ಹೇಗೆ ಸಾಧ್ಯ.? ಮುಖವಾಡದ ಮುಖಗಳನ್ನು ಹೊತ್ತ ಮುಖಗಳಿಗೆ ನಿಜವಾದ ಮುಖಗಳ ಪರಿಶ್ರಮ, ಗೊತ್ತಿದ್ದರೂ ಅವುಗಳನ್ನು ಹಿಂದಕ್ಕೆ ನೂಕಿ, ನಾನೂ ಅವನಂತೆ, ನನ್ನನ್ನು ಒಪ್ಪಿಕೊಳ್ಳಿರಿ ಎಂದು ದುಂಬಾಲು … Read more

ಕಲಬುರ್ಗಿ: ರುಕ್ಮಿಣಿ ನಾಗಣ್ಣವರ

2018 ಫೆಬ್ರುವರಿ. ಕಲಬುರ್ಗಿಗೆ ಬೇಸಿಗೆಯ ಬಿಸಿಲು ಇನ್ನೂ ಆವರಿಸಿರಲಿಲ್ಲ. ಹುಬ್ಬಳ್ಳಿ-ದಾಂಡೇಲಿ ಪ್ರವಾಸ ಮುಗಿಸಿ, ರೈಲಿನಲ್ಲಿ ಬೆಳಿಗ್ಗೇನೆ ಕಲಬುರ್ಗಿಗೆ ಬಂದಿಳಿದ ನನಗೆ ಮೊದಲು ಕಾಣಿಸಿದ್ದೇ ಪುಟಾಣಿ ಚಹಾ ಅಂಗಡಿಗಳ ಸಾಲು. ಒಂದು ಅಂಗಡಿಯ ಹೆಸರು ಕರ್ನಾಟಕ ಟೀ ಸ್ಟಾಲ್, ಮತ್ತೊಂದರದ್ದು ಗಾಣಗಾಪುರ ಟೀ ಸ್ಟಾಲ್. ಮೊದಲ ಬಾರಿಗೆ ಕಲ್ಯಾಣ ನಾಡಿನ ನೆಲ ಸ್ಪರ್ಶಿಸಿದ ನನಗೆ ಬಿಸಿ ಬಿಸಿ ಚಹಾ ಕುಡಿದೇ ಮನೆಯತ್ತ ಹೆಜ್ಜೆ ಹಾಕಲು ಮನಸ್ಸು ಹೇಳಿತು. ಆದರೆ, ಮನೆ ತಲುಪಿದರೆ ಸಾಕು ಎಂಬಂತೆ ದಣಿವು ನನ್ನನ್ನು ಆಯಾಸಗೊಳಿಸಿತ್ತು. … Read more

ನಾ ಬದಲಾಗೊ ಗಿರಾಕಿ ಅಲ್ಲಾ….: ಸಹನಾ ಪ್ರಸಾದ್

ಬಹುತೇಕ ಹೆಣ್ಣು ಮಕ್ಕಳಿಗೆ. ನಾನೂ ಸೇರಿದಂತೆ ಭಾವನೆಗಳು ಜಾಸ್ತಿ, ಬಹಳ ಬೇಗ ಬೇರೆಯವರಿಗೆ ಹತ್ತಿರವಾಗಿಬಿಡುತ್ತಾರೆ, ಅದೇ ರೀತಿ ಮುನಿಸು, ವಿರಸವೂ ಬೇಗ ಬಂದುಬಿಡುತ್ತದೆ,. ನಮ್ಮೆಜಮಾನ್ರು ನನಗೆ ಯಾವಾಗಲೂ ಹೇಳುತ್ತಿರುತ್ತಾರೆ” ನಿಂದೆಲ್ಲಾ ಯಾವಾಗಲೂ ಅತಿರೇಕದ ಪ್ರತಿಕ್ರಿಯೆಗಳು. ಹಚ್ಚಿಕೊಂಡರೆ ಅತಿಯಾಗಿ, ಅದೇ ಏನಾದರೂ ಸಣ್ಣ ವಿಷಯ ನಡೆಯಲಿ, ಕುಗ್ಗಿ ಹೋಗುತ್ತೀಯ. ಸ್ವಲ್ಪ ಸಮತೋಲನ ಇರಬೇಕು ಅಲ್ಲವಾ?” ಆಗೆಲ್ಲಾ ನನಗೆನಿಸುತ್ತದೆ ಹೌದಲ್ವಾ, ನಾನು ಸ್ವಲ್ಪ ಬದಲಾಗಬೇಕು ಎಂದು. ಆದರೆ ಆ ನಿರ್ಧಾರಗಳೆಲ್ಲ ತಾತ್ಕಾಲಿಕ. ಮೊನ್ನೆ ನಮ್ಮ ಪಕ್ಕದ ಮನೆಗೆ ನವ ದಂಪತಿಗಳು … Read more

ನೆರೆ ಹೊರೆಯ ಸಂಬಂಧದ ಸವಿನೆನಪು: ಎನ್. ಶೈಲಜಾ ಹಾಸನ

ಅಕ್ಕಪಕ್ಕದ ಮನೆಯವರೊಂದಿಗೆ ಅಂದಿನ ದಿನಗಳಲ್ಲಿ ಅಪಾರವಾದ ಬಾಂಧವ್ಯವನ್ನು ಹೊಂದಿದ್ದು,ಕಷ್ಟ ಸುಖ ಎಲ್ಲಾದರಲ್ಲೂ ಪರಸ್ಪರ ಭಾಗಿಯಾಗಿ ಸ್ಪಂದಿಸುವ ಹೃದಯಗಳನ್ನು ಅಂದು ಹೆಚ್ಚು ಹೆಚ್ಚು ಕಾಣಬಹುದಿತ್ತು.ನಾವು ನಮ್ಮ ತಂದೆಯ ಉದ್ಯೋಗ ನಿಮಿತ್ತ ಎಲ್ಲಾ ಊರುಗಳನ್ನು ಸುತ್ತಿ ಕೊನೆಗೆ ಜಿಲ್ಲಾ ಕೇಂದ್ರಕ್ಕೆ ಬಂದು ನೆಲೆ ನಿಂತೆವು. ನಾವಿದ್ದ ಮನೆ ಒಂದು ವಠಾರದಲ್ಲಿ ಇತ್ತು.ಎಂಟು ಮನೆಗಳಿರುವ ಆ ವಠಾರದಲ್ಲಿ ಇಬ್ಬರು ಒಂದೊಂದು ಸಾಲಿನ ನಾಲ್ಕು ಮನೆಗಳ ಒಡೆಯರಾಗಿದ್ದರು. ವಠಾರವಾದರೂ ಮನೆ ದೊಡ್ಡದಿತ್ತು. ಹತ್ತು ಹದಿನೈದು ಜನ ವಾಸ ಮಾಡಬಹುದಾಗಿತ್ತು.ಒಂದು ರೂಮು,ಎರಡು ದೊಡ್ಡ ಹಾಲು,ಮಹಡಿ … Read more

ತಿರಂಗಾ ಧ್ವಜದ ರೂವಾರಿ ಪಿಂಗಳಿ ವೆಂಕಯ್ಯ: ನಾರಾಯಣ ಬಾಬಾನಗರ

ಏರುತಿಹುದು. . ಹಾರುತಿಹುದು ನೋಡು ನಮ್ಮ ಬಾವುಟಾ!! ಪುಟಾಣಿಗಳೇ, ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ನೀವು ಉಂಡಿರಬಹುದು. ಝೇಂಡಾ ಊಂಚಾ ರಹೇ ಹಮಾರಾ…ದಂತಹ ಹಾಡುಗಳನ್ನು ಹಾಡಿ, ಹೆಮ್ಮೆ ಗೌರವದಿಂದ ತಲೆ ಎತ್ತಿ, ನಮ್ಮ ದೇಶದ ಬಾವುಟಕ್ಕೆ ವಂದನೆ ಸಲ್ಲಿಸುತ್ತೀರಿ. ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಧ್ವಜ ಪಟ. . ಪಟನೆ ಹಾರಾಡುತ್ತಿದ್ದರೆ ನಮ್ಮ ಕಣ್ಣಿಗೆ ಹಬ್ಬ. ನಮ್ಮ ಭಾರತದ ಬಾವುಟ ನಮಗೆಷ್ಟು ಆಪ್ತವಾದದ್ದು, ಆಪ್ಯಾಯಮಾನವಾದದ್ದು ಎಂದನಿಸುತ್ತದಲ್ಲವೇ? ಬಾವುಟದ ಚಿತ್ರ ಬಿಡಿಸಿ ಹೆಮ್ಮೆಯಿಂದ ನೀವು ಬೀಗಿರಲೂ ಸಾಕು. ನೀವು … Read more

ವೆಂಕ್ಟಣ್ಣ ಟೈಯರ್ ಅಂಗಡಿ: ದಯಾನಂದ ರಂಗದಾಮಪ್ಪ

ಸತತವಾಗಿ ಹತ್ತು ವರ್ಷ ಯಾವುದೋ ಖಾಸಗಿ ವಿದೇಶಿ ಕಂಪನಿಗೆ ಜೀತದಾಳಾಗಿ ದುಡಿದ ಮೇಲೆ ಯಾಕೋ ಬೇಸರ, ಒಂಟಿತನ, ಜಿಗುಪ್ಸೆ ನಿತ್ಯ ನೋಡೋ ಮಾನಿಟರ್ ಗಿಂತ ಹತ್ತಿರವಾಗಿ ಕಾಣುತ್ತಿತ್ತು. ಟ್ರಾಫಿಕ್ ಜಾಮ್ ನಲ್ಲಿ ನಿಂತಾಗ ನಮ್ಮೂರು ಜಾತ್ರೇಲಿ ನಿಂತ ನೆನಪು, ಯಾರದೋ ಬೈಕ್ ಹಿಂದಿನಿಂದ ಹಾರ್ನ್ ಮಾಡಿದಾಗ ನಮ್ಮೂರ ಗಣೇಶ ಹಬ್ಬ ದಲ್ಲಿ ಹೊಡೆದ ತಮಟೆ ಸದ್ದಿನ ಹಾಗೆ ಭಾಸವಾಗುತ್ತಿತ್ತು. ಆರಂಭದ ದಿನಗಳಲ್ಲಿ ಇಷ್ಟವಾಗುತಿದ್ದ ಮಾಲ್ಗಳು ಹೀಗೇ ಮಾಮೂಲಿಯಾಗಿ ಕಾಣುತ್ತಿವೆ. ಬೆಂಗಳೂರಿನ ದೆವ್ವಗಳೆಲ್ಲ ಒಂದು ಕಡೆ ಸೇರಿ ಜೋರಾಗಿ … Read more

ನವರಾತ್ರಿಯ ಸಂಭ್ರಮ: ಪೂಜಾ ಗುಜರನ್ ಮಂಗಳೂರು.

ಭೂಮಿ ಮೇಲೆ ರಾಕ್ಷಸರ ಅಟ್ಟಹಾಸವು ಮಿತಿಮೀರಿದಾಗ. ಎಲ್ಲೆಲ್ಲೂ ಅನ್ಯಾಯ ವಿಜೃಂಭಿಸಿ ಅಧರ್ಮವೇ ತಾಂಡವಾಡುವಾಗ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು, ರಕ್ಷಿಸಲು ಧರೆಗಿಳಿದು ಬಂದವಳೇ ದುರ್ಗಾಮಾತೆ. ತನ್ನ ಬಳಿಗೆ ನೊಂದು ಬರುವ ಭಕ್ತರಿಗೆ ದೇವಿಯೂ ಅನುಗ್ರಹವನ್ನು ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಹರಸುತ್ತಾಳೆ ಅನ್ನುವ ಅಚಲವಾದ ನಂಬಿಕೆ ಭಕ್ತರಿಗಿದೆ. ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ದುರ್ಗಾದೇವಿಯೂ ಮಹಿಷಾಸುರನೊಂದಿಗೆ ಪಾಡ್ಯದಿಂದ ನವಮಿವರೆಗೆ ಯುದ್ಧ ಮಾಡಿ ನವಮಿಯಂದು ಅಸುರನನ್ನು ಕೊಂದಳು. ಅದುದರಿಂದ ದೇವಿಗೆ ಮಹಿಷಾಮರ್ಧಿನಿ ಎಂದು ಕರೆಯುತ್ತಾರೆ. ಪುರಾಣದ … Read more

ನನ್ನ ಆನಂದ: ಹೆಚ್. ಷೌಕತ್ ಆಲಿ, ಮದ್ದೂರು

ಖಾಸಗಿ ಶಾಲೆಗಳಲ್ಲಿ ಪ್ರತಿಷ್ಠಿತ ವಿದ್ಯಾರ್ಥಿಗಳೇ ಹೆಚ್ಚು, ಪೋಷಕರಿಗೂ ತಮ್ಮ ಮಕ್ಕಳ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ, ಆಡಳಿತಾಧಿಕಾರಿ, ಕಾರ್ಯಕಾರಿ ಮಂಡಳಿಯ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳೋದೆ ಒಂದು ಶ್ರೀಮಂತಿಕೆ ಎನ್ನಬಹುದು ಒಂದು ನಗರದ ಹೃದಯ ಭಾಗದಲ್ಲಿದ್ದ ಒಂದು ಪ್ರಸಿದ್ಧ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಸೇರಿದ್ದ ಮೊದಲ ವರ್ಷದಲ್ಲಿ ……………. . ! ಎಂಟನೆಯ ತರಗತಿಗೆ ಪ್ರವೇಶ ಮಾಡುವ ಕೆಲ ವಿದ್ಯಾರ್ಥಿಗಳಿಗೆ ನಾನು ಕೆಲವು ಪ್ರಶ್ನೆಗಳನ್ನು ಅವರ ಮೆಂಟಲ್ ಎಬಿಲಿಟಿ, ಮೆಮೋರಿ, ರೀಡಿಂಗ್, ರೈಟಿಂಗ್, ಜಿ. ಕೆ. ಸ್ಕಿಲ್ಸ್ ಬಗ್ಗೆ … Read more

ಜೀವದ ಪ್ರಾಮುಖ್ಯತೆ: ಗಿರಿಜಾ ಜ್ಞಾನಸುಂದರ್

ಅಹ್! ದೇಹ ಹಗುರವಾಗುತ್ತಿರುವ ಅನುಭವ! ಏನಾಯಿತು ಅಷ್ಟೊಂದು ನೋವಾಗುತ್ತಿದ್ದ ದೇಹಕ್ಕೆ? ಪ್ರಸಾದ್ ಯೋಚಿಸುತಿದ್ದಂತೆ ತಿಳಿಯಿತು ಅವನ ಆತ್ಮ ದೇಹದಿಂದ ಹೊರಗೆ ಬಂದಿದೆ!! ಹಾಗಾಗಿ ನೋವು ಮರೆಯಾಗಿದೆ…. ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ನೆನಪಿಗೆ ಬಂತು….. ಕಷ್ಟಪಟ್ಟು ಓದಿ ಶಾಲೆಯಲ್ಲಿ ಮೊದಲನೆಯವನಾಗಿದ್ದ ಪ್ರಸಾದ್. ಎಲ್ಲದರಲ್ಲೂ ಮೊದಲು. ಆಟ ಪಾಠ, ವಿದ್ಯೆ, ಪರಿಶ್ರಮ, ಸಹನೆ, ಸ್ನೇಹ ಎಲ್ಲದರಲ್ಲೂ. ಅತ್ಯಂತ ಶ್ರದ್ಧೆಯಿಂದ ಓದಿ ಡಾಕ್ಟರ್ ಆಗಿದ್ದು ಆಯಿತು. ಉತ್ತಮ ರಾಂಕ್ ಗಳಿಸಿದ್ದಕ್ಕಾಗಿ ಸರ್ಕಾರಿ ಉದ್ಯೋಗವು ಆಯಿತು. ಡಾಕ್ಟರ್ ಆಗಿ ತನ್ನ ಕರ್ತವ್ಯ … Read more

ಪ್ರಾಮಾಣಿಕತೆ ಎಂಬ ಪ್ರತಿಬಿಂಬ: ಎಂ.ಎಚ್. ಮೊಕಾಶಿ ವಿಜಯಪುರ

ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಾಮಾಣಿಕತೆ ಎಂಬುದು ಮಹಾಮೌಲ್ಯವಾಗಿದೆ ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳ ನಂಬಿಕೆ. ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯ ನಡತೆಯ ಅಂಶವನ್ನು ಸೂಚಿಸುವುದಾಗಿದೆ. ಪ್ರಾಮಾಣಿಕತೆಯಲ್ಲಿ ನಿಷ್ಠೆ, ನಿಷ್ಪಕ್ಷಪಾತ, ವಿಶ್ವಾಸರ್ಹ ಮೊದಲಾದ ಗುಣಗಳು ಸೇರಿವೆ. ಇಂದಿಗೂ ನಮ್ಮಲ್ಲಿ ಸತ್ಯ, ನಿಷ್ಟೆ, ಪ್ರಾಮಾಣಿಕತೆಯಂತಹ ಹಲವಾರು ಸದ್ಗುಣಗಳಿವೆ. ಆದರೆ ಅದನ್ನು ಗುರುತಿಸುವ ಒಳಗಣ್ಣು ಬೇಕಾಗಿದೆ. “ನಾನು ಸರಿ, ಉಳಿದವರು ಸರಿಯಿಲ್ಲ” ಎಂಬ ಭಾವನೆಗಳು ಪ್ರಸ್ತುತ ಹೆಚ್ಚಾಗುತ್ತಿವೆ. ನಾವು ಸತ್ಯ ನಿಷ್ಟರೇ? ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಬಗ್ಗೆ … Read more

ಪರಿವರ್ತನೆಗೊಂದು ಅವಕಾಶಕೊಟ್ಟಾಗ: ಎಂ. ಡಿ. ಚಂದ್ರೇಗೌಡ ನಾರಮ್ನಳ್ಳಿ

ಬದುಕನ್ನು ರೂಪಿಸಿಕೊಳ್ಳಲು ಒಂದು ಕೆಲಸ ಬೇಕು. ಕೆಲವರು ವೈಟ್ ಕಾಲರ್ ವೃತ್ತಿಯನ್ನೆ ಹುಡುಕುತ್ತಾರೆ. ಕೆಲವರು ಕಮಾಯಿ ಅಧಿಕವಿರುವುದನ್ನು ಅಪೇಕ್ಷಿಸುತ್ತಾರೆ. ಮತ್ತೆ ಕೆಲವರು ಆದರ್ಶಗಳ ಬೆನ್ನು ಹತ್ತುತ್ತಾರೆ. ದೇಶ ಪ್ರೇಮದ ತುಡಿತವುಳ್ಳವರು ಸೈನಿಕರಾಗುತ್ತಾರೆ. ಅರ್ಪಣಾ ಮನೋಭಾವ ಇರುವವರು ಶಿಕ್ಷಕರಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ‘ತಮ್ಮ ಗುರುಗಳನ್ನು ಅನುಕರಿಸಿ ಶಿಕ್ಷಕರಾಗಬೇಕೆಂದು’ ಹೊರಡುತ್ತಾರೆ . ಕೆಲವರು ಸ್ವ- ಉದ್ಯೋಗದ ದಾರಿ ಹಿಡಿದು ಬದುಕು ಕಟ್ಟಿಕೊಳ್ಳುತ್ತಾರೆ. ಎಷ್ಟೋ ದಿನಗಳ ನಂತರ, ಎದುರು ಸಿಕ್ಕಾಗಲೋ, ಪೋನ್ ಕರೆ ಮಾಡಿದಾಗಲೋ, ನೆನಪುಗಳಿಗೆ ಮತ್ತಷ್ಟು ಹಸಿರು ಬಣ್ಣ ಬಳಿಯುತ್ತಾರೆ. … Read more