ಖುಷಿ ಮತ್ತು ಸಂತೋಷ: ಶಿವರಾಜ್ ಬಿ. ಎಲ್

shivaraj-b-l

ನಾನು ಅನೇಕ ಬಾರಿ, ತುಂಬಾ ದಿನಗಳಿಂದ ಅತಿಯಾಗಿ ಕಾಡುತ್ತಿದೆ ಅದೇನೆಂದರೆ ನಮ್ಮ ಜೀವನದ ಮುಖ್ಯ ಗುರಿ ಕೇವಲ ಸಂತೋಷವಾಗಿರುವುದಾ???. ಹೌದು ತಾನೇ ನಮ್ಮ ಜೀವನದ ಮುಖ್ಯ ಉದ್ದೇಶ ನಾವು ಖುಷಿಯಾಗಿ ಇರುವುದೇ ಆಗಿದೆ,  ಆದರೆ ಈ ನೋವು ಮತ್ತು ಕಷ್ಟ ಪಡುವುದು ಯಾಕೆ ?? ಇವು ಕೂಡ ನಾವು ಸಂತೋಷವನ್ನು ಪಡೆಯೋಕೆ ಇರುವ ಕೆಲವು ಕಾರಣಗಳು. ಈ ರೀತಿಯಾಗಿ ನಂಬಿರುವುದು ನಾನೊಬ್ಬನೇ ಅಲ್ಲ,ನಮ್ಮ ಸುತ್ತ ಮುತ್ತಲಿನ ಎಲ್ಲ ಜನರು ಇದೆ ಸಿದ್ಧಾಂತ ನಂಬಿ ಜೀವನ ಮಾಡುತ್ತಿದ್ದಾರೆ. ಕೆಲವರು ತಮ್ಮ ಜೀವನ ಸುಖ ಸಂತೋಷದಿಂದ ಇರಬೇಕೆಂದು ಕಷ್ಟ ಪಟ್ಟು ದುಡಿದು, ದಣಿದು ಜೀವನ ಸವೆಸುತ್ತಾರೆ, ಇನ್ನು ಕೆಲವರು ಬೇರೆಯವರನ್ನು ಮೆಚ್ಚಿಸಲು ಹೆಣಗಾಡಿ ಜೀವನ ನಡೆಸುತ್ತಾರೆ. ಇಷ್ಟೆಲ್ಲಾ ನಾವು ಯಾತಾಕ್ಕಾಗಿ ಮಾಡುವುದು ??? ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದನ್ನೆಲ್ಲಾ ಜನ ಯಾಕೆ ಈ ರೀತಿ ಮಾಡುತ್ತಾರೆ ಎಂಬ ಕಾರಣ ನಾನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮಲ್ಲಿ ಕೆಲವರು  ಯಾಕೆ ಖುಷಿಯಾಗಿಲ್ಲ, ಯಾಕೆ ತಮ್ಮ ಜೀವನವನ್ನು ಪರಿಪೂರ್ಣತೆಯಿಂದ ನಡೆಸುತ್ತಾ ಇಲ್ಲ ಎಂಬುದನ್ನು ತಿಳಿಯಲು ಇಷ್ಟ ಪಡುತ್ತಾರೆ. ಆದರೆ ನಾನು ಮಾತ್ರ ಇಂತಹ ಉಪಯೋಗವಿಲ್ಲದ, ಅರ್ಥವಿಲ್ಲದ  ವಿಷಯಗಳ ಬಗ್ಗೆ ಚಿಂತೆ ಮಾಡದೆ, ನಾವು ಯಾವ ರೀತಿ ನಮ್ಮ ಜೀವನ ಶೈಲಿ ಬದಲಾವಣೆ ಮಾಡಿಕೊಂಡರೆ ನಾವು ಚೆನ್ನಾಗಿರ್ತೀವಿ ಅನ್ನೋದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ.
                   
ಕೆಲವು ವರ್ಷಗಳ ಹಿಂದೆ ನಾನು ಸಂತೋಷ ಪಡೆಯಲು ಎಲ್ಲಾನೂ ಮಾಡಿದೆ ಆದರೆ ನಾನು ಸೋತು, ಕೊರಗಿ , ಸೊರಗಿ ಹೋದೆನು. ಕೊನೆಗೆ " ಈ ಸಂತೋಷ ಅನ್ವೇಷಣೆ ಯಲ್ಲಿ ಮುಂದೇನು???" ಎಂಬ ಯಕ್ಷ ಪ್ರಶ್ನೆ ಕಾಡಿತು. ಮುಂದೇನು ಎಂಬುದನ್ನು ನಾನು ನಿಮಗೆ ಇವಾಗ ಹೇಳುತ್ತೇನೆ, ನೀವು ಸಂತೋಷವನ್ನು ಪಡೆಯಲು ಮನಬಂದಂತೆ, ಗೊತ್ತುಗುರಿಯಿಲ್ಲದೆ ಯಾವುದೋ ಒಂದು ದಾರಿಯನ್ನು ಬೆನ್ನಟ್ಟುತ್ತೀರಿ ಆದರೆ ಇದು ನಮಗೆ ನಾವೇ ಮಾಡಿಕೊಂಡ ವಂಚನೆ ಅಲ್ಲದೆ ಬೇರೇನೂ ಅಲ್ಲ.ಆದರೆ ಒಂದು ವಿಚಾರ ಇದೆ, ಅದೇನೆಂದರೆ ಸಂತೋಷವನ್ನು ನಾವು ಹೇಗೆ ಸಾಧಿಸಬೇಕು?? ಸಂತೋಷ ಪಡೆಯೊದೊಂದೇ ನಮ್ಮ ಜೀವನದ ಮುಖ್ಯ ಉದ್ದೇಶವಲ್ಲ. ಉಪಯುಕ್ತತೆ ಮತ್ತು ಲಾಭದಾಯಕಗಳ ಉಪಉತ್ಪನ್ನವೇ ಸಂತೋಷ ಎಂದು ನಂಬಿದವನು ನಾನು. ಇಂತಹ ಸಂದಿಗ್ನ ವಿಷಯವನ್ನು ನನ್ನ ಗೆಳೆಯರು, ಕುಟುಂಬ ಹಾಗೂ ನನ್ನ ಸಹೋದ್ಯೋಗಿಯರ ಮುಂದೆ ಮಂಡಿಸುವದಕ್ಕೆ ತುಂಬಾ ಕಷ್ಟಕರವಾಗುತ್ತದೆ, ಆದ್ದರಿಂದ ಈ ಕ್ಲಿಷ್ಟಕರವಾದ ವಿಷಯವನ್ನು ಈ ಬರಹದ ಮೂಲಕ ವ್ಯಕ್ತಪಡಿಸುತ್ತಿದ್ದೇನೆ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳು ನಮಗೆ ಅನುಭವಗಳನ್ನು ನೀಡುತ್ತವೆ, ಆ ವಿಷಯಗಳು ನಮಗೆ ಸಂತೋಷ ವನ್ನೇ ನೀಡಬೇಕೆಂಬ ಆಕಾಂಕ್ಷೆ ನಮ್ಮೆಲ್ಲರದ್ದಾಗಿರುತ್ತದೆ ಹೌದು ತಾನೇ??? ಆದರೆ ಅವೆಲ್ಲವೂ ನಮಗೆ ಉಪಯೋಗಕಾರಿಯಾಗಿರುವುದಿಲ್ಲ, ನಾವು ಅವುಗಳಿಂದ ಏನನ್ನೂ ಸೃಷ್ಟಿಸುವುದಿಲ್ಲ. ನನ್ನ ಈ ರೀತಿಯ ಗೊಂದಲ ಮಾತುಗಳಿಂದ ನಿಮಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿದೆ ಅಂತ ನನಗೂ ಗೊತ್ತು. 
                      
ನನಗೆ ರಜೆ ದಿನಗಳಂದ್ರೆ ಪಂಚಪ್ರಾಣ, ಗೆಳೆಯರ ಜೊತೆ ಹರಟೆ ಹೊಡೆಯುವದೆಂದರೆ ತುಂಬಾ ಇಷ್ಟ ಆದರೆ ಪ್ರಾಮಾಣಿಕವಾಗಿ ಹೇಳಬೇಕಂದ್ರೆ ಇದರಲ್ಲಿ ಯಾವುದೇ ಪ್ರಯೋಜನವಾಗಲಿ ಅಥವಾ ಸಂತೃಪ್ತಿ ಸಿಗುವುದಿಲ್ಲ. ನನ್ನಿಂದ ಯಾರಿಗಾದರೂ ಉಪಯೋಗವಗುಂತಹ ಅಥವಾ ಖುಷಿಯಾಗುವಂತಹ ಕೆಲಸ ಆದಾಗ ಮಾತ್ರ ನನಗೆ ನಿಜವಾದ ಸಂತೋಷ ಸಿಗುತ್ತದೆ. ನಾನು ಏನಾದರೂ ಮಾಡಿದರೆ ಅದನ್ನು ಬೇರೆಯವರು ಉಪಯೋಗಿಸುವಂತೆ ಆದರೆ ಅದಕ್ಕಿಂತ ಮಹಾನ್ ಸಂತೃಪ್ತಿ ಬೇರೊಂದಿಲ್ಲ.  ಈ ಉಪಯುಕ್ತತೆ ಮತ್ತು ಸಂತೋಷ ಗಳೆಂಬ ಪರಿಕಲ್ಪನೆಯನ್ನು ಮಂಡಿಸುವುದು ನನಗೆ  ತುಂಬಾ ಕಷ್ಟ ಮತ್ತು ಅತಿ ಕ್ಲಿಷ್ಟಕರವಾದ ಕೆಲಸವಾದರೂ ಇದರ ಬಗ್ಗೆ ವಿವರಿಸಲು ತುಂಬಾ ಹೆಮ್ಮೆ ಅನಿಸುತ್ತದೆ. ನಾವು ಈ ಜಗತ್ತನ್ನು ಪೂರ್ತಿಯಾಗಿ ಬದಲು ಮಾಡಲು ಸಾಧ್ಯವಿರದ ಸಂಗತಿ , ಆದರೂ ನಾವು ಈ ಭೂಮಿ ಮೇಲೆ ಇರುವಷ್ಟು ದಿನ ಸ್ವಲ್ಪವಾದರೂ ನಮ್ಮಿಂದ ಉಪಯೋಗವಾಗುವಂತ , ಸಂತೋಷ ನೀಡುವಂತ ಕಾರ್ಯಗಳು  ನಮ್ಮಿಂದ ಆದರೆ ನಾವು ಜನ್ಮ ಪಡೆದುದಕ್ಕೆ ಸಾರ್ಥಕವೆನಿಸುತ್ತದೆ. ಮೊದಲು ನಮಗೆ ಉಪಯೋಗವಾಗುವಂತಹ ಪುಟ್ಟ ಪುಟ್ಟ ಕೆಲಸಗಳನ್ನು ಮಾಡುತ್ತ ಸಾಗಬೇಕು, ಅನಂತರ ತಾನಾಗಿಯೇ ನಮ್ಮಲ್ಲಿ ಏನಾದರೂ ಮಾಡಬೇಕು ಎಂಬ ಕೌಶಲ್ಯತೆ ಮೂಡಿಸಿ ಆತ್ಮವಿಶ್ವಾಸ ಬೆಳೆಸುತ್ತದೆ. ಹನಿ ಹನಿ ಸೇರಿದರೆ ಹಳ್ಳವೆಂಬಂತೆ ನಮ್ಮ ಚಿಕ್ಕ ಚಿಕ್ಕ ಕೆಲಸಗಳು ಮುಂದೆ ದೊಡ್ಡವಾಗಿ ನಮಗೆ ಸಂತೋಷವನ್ನು ಕೊಡುವುದಲ್ಲದೆ ಬೇರೆಯವರಿಗೆ ಉಪಯೋಗಿಸಲು ಸಹಕಾರಿಯಾಗುತ್ತದೆ.
          
ಇಲ್ಲಿ  ಒಂದು ನಿದರ್ಶನ ನೀಡಲು ಬಯಸುತ್ತೇನೆ ಅದೇನಂದರೆ, ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿ ಪಡೆದ ತಿಮ್ಮಕ್ಕ ಒಬ್ಬ ಅನಕ್ಷರಸ್ಥೆ ಅಲ್ಲದೆ ಕೂಲಿ ಕೆಲಸ ಮಾಡಿ ಜೀವನ ಮಾಡೋ ಒಬ್ಬ ಮಹಿಳೆ ಇಂದು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿ ಅನೇಕ ಪ್ರತಿಷ್ಠಿತ ಪ್ರಶಸ್ತಿ ಪಡೆಯುದಲ್ಲದೆ ಪರಿಸರ ಸಂರಕ್ಷಣೆ ಮಾಡಬೇಕು ಎಂಬ ಒಳ್ಳೆಯ ಸಂದೇಶ ನೀಡಿ ಅನೇಕ ಪರಿಸರವಾದಿಗಳಿಗೆ ಮಾದರಿಯಾಗಿದ್ದಾರೆ. ತಿಮ್ಮಕ್ಕ ಓದಿದವರು ಅಲ್ಲ, ಆರ್ಥಿಕವಾಗಿ ಸದೃಢರು ಅಲ್ಲದಿದ್ದರೂ ಇಂತಹ ಮಹಾನ್ ಸಾಧನೆ ಮಾಡಿದರು. ನಮಗೆ ಎಲ್ಲನೂ ಇದ್ದರೂ ಏನಾದರೂ ಮಾಡಬೇಕು, ಸಾಧನೆ ಮಾಡಬೇಕು ಎಂಬ ಇಚ್ಚಾಶಕ್ತಿ ಕೊರತೆ ಇದೆ ವಿನಃ ಬೇರೇನೂ ಸಮಸ್ಯೆ ಇಲ್ಲ ಅಂತ ಹೇಳಿದರೆ ತಪ್ಪಾಗದು. ಇದನ್ನು ಗಂಭೀರವಾಗಿ ತೆಗೆದುಕೊಂಡರೂ ಸರಿಯೇ ಇಲ್ಲವಾದರೂ ಸರಿಯೇ ಆದರೆ ಏನೇ ಮಾಡಿ ನಮಗೆ ಸಂತೋಷ ನೀಡುವಂತ ಕೆಲಸದ ಜೊತೆ ಬೇರೆಯವರಿಗೆ ಖುಷಿ ಆಗುವಂತಹ ಹಾಗೂ ಉಪಯೋಗವಂತಹ ಕೆಲಸವನ್ನೇ ಮಾಡಿ ಎಂದು ತಮ್ಮಲ್ಲಿ ನನ್ನದೊಂದು ಪುಟ್ಟ ಕೋರಿಕೆ. 


           


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Babu gaurampet
Babu gaurampet
6 years ago

  ನಿಮ್ಮ ಲೇಖನ  ಚನ್ನಾಗಿದೆ

1
0
Would love your thoughts, please comment.x
()
x