ಲೈಕು ಕಾಮೆಂಟುಗಳಲ್ಲಿ ಮರೆಯಾದ ಲೈಫು: ಪ್ರಶಸ್ತಿ ಪಿ.

ಮೊನ್ನೆ ವಾಟ್ಸಾಪಲ್ಲೊಂದು ವೀಡಿಯೋ ನೋಡ್ತಿದ್ದ್ರೆ. ಒಬ್ಬ ಸಮುದ್ರದಲ್ಲಿ ಮುಳುಗೋಕೆ ಅಂತ ಕಡಲಮಧ್ಯದಲ್ಲಿ ತಯಾರಾಗಿ ಕೂತಿರ್ತಾನೆ. ಮೀನುಗಳು ಅವನ ಕಡಲ ವಸ್ತ್ರ ತೊಟ್ಟ ಕಾಲಿಗೆ ಮುತ್ತಿಕ್ಕುತಿರುತ್ವೆ. ಆದ್ರೆ ಅವ ತನ್ನ ಸ್ಮಾರ್ಟ್ ಫೋನಲ್ಲಿ ಏನೋ ಮಾಡೋದ್ರಲ್ಲಿ ಬಿಸಿ ! ಇನ್ನೊಬ್ಬ ಟಾಯ್ಲೆಟ್ಟಲ್ಲಿ ತಾನು ಬಂದ ಕೆಲಸವನ್ನೇ ಮರೆತು ಸ್ಮಾರ್ಟ್ ಫೋನಲ್ಲಿ ಮುಳುಗಿ ಅದನ್ನಲ್ಲಿ ಬೀಳಿಸಿಕೊಳ್ತಾನೆ. ಮತ್ತೊಬ್ಬಳು ಆಯಿಲ್ ಮಸಾಜ್ ಮಾಡಿಸ್ಕೊಳ್ಳೋಕೆ ಅಂತ ಬಂದ ಪೇಷಂಟನ್ನೂ ಮರೆತು ತನ್ನ ಸ್ಮಾರ್ಟ್ ಫೋನಲ್ಲಿ ಮುಳುಗಿರ್ತಾಳೆ. ಉದಾಹರಣೆಗಳು ಹೀಗೇ ಮುಂದುವರೆದು ಇಷ್ಟೆಲ್ಲಾ ಹಚ್ಚಿಕೊಳ್ಳುವಿಕೆ(addiction) … Read more

ಸುಟ್ಟೇಬಿಡುವ ಸಿಟ್ಟು: ಪ್ರಶಸ್ತಿ ಪಿ.

ಅವನಿಗೆ ಮೂಗಿನ ತುದಿಗೇ ಕೋಪ, ಇವ ದೂರ್ವಾಸ ಮುನಿಯ ಅಪರಾವತಾರ ಅಂತ ಹೆಚ್ಚೆಚ್ಚು ಸಿಟ್ಟು ಮಾಡಿಕೊಳ್ಳೋ ಜನರ ಬಗ್ಗೆ ಮಾತನಾಡೋದು ಎಲ್ಲಾದ್ರೂ ಕೇಳೇ ಇರ್ತೇವೆ. ಕ್ಷಣ ಕ್ಷಣಕ್ಕೂ ಕೋಪ ಮಾಡಿಕೊಳ್ಳೋ ಜನರಿರೋ ತರ ಸಾಮಾನ್ಯವಾಗಿ ಶಾಂತ ಸ್ವಭಾವದ ಜನರೂ ಕೆಲಸಲ ಇದ್ದಕ್ಕಿದ್ದಂತೆ ಕೋಪಗೊಳಗಾಗುತ್ತಾರೆ. ಸಾತ್ವಿಕ ಸಿಟ್ಟು, ಜಗಳ ವಿಪರೀತಕ್ಕೊಳಗಾಗಿ ಮಿತ್ರರನ್ನೇ ಕೊಲ್ಲೋ ಸಿಟ್ಟು, ಕೆಲಸ ಮಾಡಿಸಲೋಸುಗ ತೋರೋ ಹುಸಿ ಸಿಟ್ಟು .. ಹಿಂಗೆ ಸಿಟ್ಟನ್ನು ಹಲಪರಿಯಲ್ಲಿ ವಿಂಗಡಿಸಬಹುದಾದ್ರೂ ಸಿಟ್ಟಿಂದ ಆಗಬಹುದಾದ ಲಾಭಗಳಿಗಿಂತ ಒದಗೋ ಅಪಾಯಗಳೇ ಹೆಚ್ಚೆಂದು ಕಾಣಿಸುತ್ತವೆ. … Read more

ಬೆಂಗಳೂರ ಅತೀ ಹಳೆಯ ದೇಗುಲದ ಬಗ್ಗೆಯೊಂದಿಷ್ಟು: ಪ್ರಶಸ್ತಿ

ಜೀ ಕನ್ನಡ ವಾಹಿನಿಯ ಡಿವೈಡೆಡ್ ಅನ್ನೋ ಕಾರ್ಯಕ್ರಮದಲ್ಲೊಂದು ಪ್ರಶ್ನೆ. ದೊಮ್ಮಲೂರಲ್ಲಿರೋ ಚೊಕ್ಕನಾಥಸ್ವಾಮಿ ದೇವಸ್ಥಾನ ಕಟ್ಟಿಸಿದರು ಯಾರು ? ೧)ಯಲಹಂಕ ನಾಡ ಪ್ರಭುಗಳು ೨)ಚೋಳರು ೩)ಮೈಸೂರ ಅರಸರು. ಅವತ್ತು ನಾನಂದುಕೊಂಡತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೂ ಹೇಳಿದ ಉತ್ರ ಯಲಹಂಕ ನಾಡ ಪ್ರಭುಗಳು. ಬೆಂಗ್ಳೂರಿಗೆ ಚೋಳರೆಲ್ಲಿಂದ ಬರಕ್ಕಾಗುತ್ತೆ ? ಮೈಸೂರರಸರು ಬೆಂಗ್ಳೂರಿಗೆ ಬಂದ್ಯಾಕೆ ದೇವಸ್ಥಾನ ಕಟ್ಟುಸ್ತಾರೆನ್ನೋ ಲಾಜಿಕ್ಕು. ಆದ್ರೆ ಅದು ತಪ್ಪು. ! ಚೊಕ್ಕನಾಥಸ್ವಾಮಿ ಅಥವಾ ಚೊಕ್ಕಪೆರುಮಾಳ್ ದೇವಸ್ಥಾನವನ್ನು ಸುಮಾರು ಕ್ರಿ.ಶ ೧೨೦೦ ರ ಸುಮಾರಿಗೆ  ಕಟ್ಟಿಸಿದ್ದು ಚೋಳರಸ ರಾಜರಾಜ ಚೋಳ … Read more

ಕನಸುಗಳು ನೆನಪುಳಿಯೋದು ಹೇಗೆ ?: ಪ್ರಶಸ್ತಿ ಪಿ.

ಹಗಲುಗನಸು, ರಾತ್ರಿಯ ಸೊಗಸಾದ ಕನಸು, ಬೆಚ್ಚಿಬೀಳಿಸೋ ಕನಸು, ಬೆಳಗು ಯಾವಾಗಾಗತ್ತೋ ಎಂದು ಕನವರಿಸುವಂತೆ ಮಾಡೋ ಸಾಧನೆಯ ಕನಸು..ಹೀಗೆ ಕನಸಲ್ಲೂ ಎಷ್ಟು ವಿಧ ಅಲ್ವಾ ?  ಆಫೀಸಲ್ಲೇ ಕೂತು ತೂಕಡಿಸಿ ತೂಕಡಿಸಿ ಬೀಳೋ ತಿಮ್ಮನಿಗೆ ಬೀಳಬಹುದಾದ ಹಗಲುಗನಸ ಬಗ್ಗೆಯಲ್ಲ ನಾ ಹೇಳಹೊರಟಿರುವುದು ಈಗ. ರಾತ್ರಿಯ ಸೊಗಸಾದ ಪರಿಸರದಲ್ಲಿ, ಕರ್ಲಾನೋ, ಕಂಬಳಿಯೋ, ಚಾಪೆಯೋ,ಜಡ್ಡಿಯೋ, ಜಮಖಾನವೋ,  ಕೊನೆಗೆ ಬರಿನೆಲದ ಮೇಲೇ ಮಲಗಿ ನಿರ್ದಿಸುತ್ತಿರುವಾಗ ನಮಗೆ ಬೀಳೋ ಸಹಜಗನಸುಗಳ ಬಗ್ಗೆ ನಾ ಹೇಳಹೊರಟಿದ್ದು. ಕನಸೆಂದರೇನು ?  ಈ ಕನಸೆಂಬುದು ನಾವು ನಿತ್ಯಜೀವನದಲ್ಲಿ ಕಂಡುಕೇಳಿದ … Read more

ಕತ್ತಲ ಕೊಳ್ಳದಾಚೆಗೆ: ಪ್ರಶಸ್ತಿ ಪಿ.

  ಬೈಕಲ್ಲಿ ಹೋಗ್ಬೇಡ, ಒಂದಷ್ಟು ಲೇಟಾದ್ರೂ ಪರ್ವಾಗಿಲ್ಲ. ಬಸ್ಸಿಗೆ ಹೋಗೋ ಅಂತ ಅಮ್ಮ ಹೇಳಿದ ಮಾತ್ನ ಕೇಳ್ಬೇಕಾಗಿತ್ತು ಅಂತ ಬಾಳೇಬರೆ ಘಾಟೀಲಿ ಕತ್ತಲ ರಾತ್ರೇಲಿ ಕೆಟ್ಟ ಬೈಕಿಗೊಂದು ಮೆಕ್ಯಾನಿಕ್ನ ಹುಡುಕೋಕೋದಾಗ್ಲೇ ಅನಿಸಿದ್ದು. ಫ್ರೆಂಡ್ ಮನೆ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಹೊರಟು ಬಿಡ್ಬೇಕಿತ್ತು. ಆದ್ರೆ ಬೈಕಿದ್ಯಲ್ಲ, ಬಸ್ಸು ಹೋದ್ರೆ ಹೆಂಗಾದ್ರೂ ರಾತ್ರೆಗೆ ಮುಟ್ಕೋಬೋದು ಅನ್ನೋ ಧೈರ್ಯವೇ ನಿರ್ಲಕ್ಷ್ಯಕ್ಕೆ ಕಾರಣವಾಗಿ ಊರಲ್ಲೇ ಸಂಜೆಯಾಗೋಗಿತ್ತು. ನಾಳೆ ಹೋಗೋಣ ಅಂದ್ರೆ ಕಾರ್ಯಕ್ರಮವಿದ್ದಿದ್ದೇ ಇವತ್ತು ರಾತ್ರೆ. ಹೋಗ್ಲೇಬೇಕೆನ್ನೊ ಹಟಕ್ಕೆ ಮನೆಯವ್ರು ಅರೆಮನಸ್ಸಿಂದ್ಲೇ ಒಪ್ಪಿದ್ರು. ಜೊತೆಗಿನ್ನಿಬ್ರು ಗೆಳೆಯಂದ್ರು … Read more

“%”: ಪ್ರಶಸ್ತಿ ಪಿ.

ಈ ವಾರ ಯಾವ ವಿಷಯದ ಬಗ್ಗೆ ಬರೆಯೋದಪ್ಪ ಅಂತ ಯೋಚ್ನೆ ಮಾಡ್ದಾಗೆಲ್ಲಾ ಐಡಿಯಾಗಳ ಚೌಚೌಭಾತ್ ಮನಸಲ್ಲಿ. ಅದೋ , ಇದೋ ಅಥವಾ ಮತ್ತೊಂದೋ ಅಂತ ಒಂದಿಷ್ಟು ಬಿಡಿಬಿಡಿ ಎಳೆಗಳು ಹೊಳೆದಿರುತ್ತೆ. ಈ ಸಲ ೧೦೦% ಇದ್ರ ಬಗ್ಗೆನೇ ಬರಿಬೇಕು ಅಂತ ಧೃಢ ನಿರ್ಧಾರ ಮೂಡೋವರೆಗೆ ಈ ಬಿಡಿ ಬಿಡಿ ಐಡಿಯಾಗಳು ಮನದ ಒಂದಿಷ್ಟು ಪ್ರತಿಶತ ಭಾಗ ಆಕ್ರಮಿಸಿಕೊಂಡಿರುತ್ತೆ. ಸ್ವಸ್ತಿಕ್ಕು, ಸೂಪರ್ರು, ಎ,ಐ,ಝೆಡ್ ಹೀಗೆ ಚಿಹ್ನೆಗಳು ಅಕ್ಷರಗಳೆಲ್ಲಾ ಸಿನಿಮಾ ಆಗೋದು ನೋಡಿದ್ವಿ, ಇದೇನಿದು ಪ್ರತಿಶತದ ಚಿಹ್ನೆ(%) ಅಂದ್ಕೊಂಡ್ರಾ ? … Read more

ಧ್ವನಿ ಕೇಳೋ ಆಸೆಯೂ, ರೆಕಾರ್ಡಿಂಗ್ ನೆನಪೋಲೆಯು: ಪ್ರಶಸ್ತಿ ಪಿ.

ಶಾಲಾ ದಿನಗಳಲ್ಲಿ ಆಕಾಶವಾಣಿಯಲ್ಲಿ ಶನಿವಾರ ಬರ್ತಿದ್ದ ಗಾಂಧಿ ಸ್ಮೃತಿ, ಭಾನುವಾರದ ರೇಡಿಯೋ ಸಿನಿಮಾ(ಧ್ವನಿಯಲ್ಲೇ ಸಿನಿಮಾದ ಕಲ್ಪನೆಗಳ ಕಟ್ಟೋ ಅದ್ಬುತ ಅನುಭವ ಕೇಳೇ ಸವಿಬೇಕು), ಪ್ರತಿದಿನ ಸಂಸ್ಕೃತ ವಾರ್ತೆಯ ಬಲದೇವಾನಂದ ಶರ್ಮ,  ಏಳೂ ಮೂವತ್ತೈದರ ವಾರ್ತೆ, ಎಂಟರ ಹಿಂದಿ, ಇಂಗ್ಲೀಷ್ ವಾರ್ತೆಗಳು, ನಂತರದ ರೇಡಿಯೋ ಡಾಕ್ಟರಗಳನ್ನು ಕೇಳೇ ದೊಡ್ಡವರಾದ ನಮಗೆ  ರಾತ್ರಿ ಎಂಟು ಘಂಟೆಗೆ ಬರೋ "ಯುವವಾಣಿ" ಅಚ್ಚುಮೆಚ್ಚಾಗಿತ್ತು. ಅದರಲ್ಲಿ ಬರ್ತಿದ್ದ ಕಾಲೇಜು, ಶಾಲಾ ವಿದ್ಯಾರ್ಥಿಗಳು ಮತ್ತು ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಕೇಳುತ್ತಿದ್ದ ನನಗೆ ನಾನೂ ಒಮ್ಮೆ ರೇಡಿಯೋದಲ್ಲಿ … Read more

ಕಾಣೆಯಾದ ಕತೆಯ ಹಿಂದೆ: ಪ್ರಶಸ್ತಿ

  ರೈಟ್ ಕ್ಲಿಕ್ ಮಾಡಲೂ ಸಾಧ್ಯವಿಲ್ಲದಂತೆ ತುಂಬಿಹೋಗಿತ್ತು ಡೆಸ್ಕಟಾಪು. ಡೆಸ್ಕಟಾಪಿನ ಮೇಲೆ, ಸಿ ಡ್ರೈವಲ್ಲಿ ಜಾಸ್ತಿ ಏನು ಇಡಬೇಡಿ, ಕಂಪ್ಯೂಟ್ರು ನಿಧಾನವಾಗತ್ತೆ ಅಂತಿದ್ದವ್ನೇ ಈ ತರ ಕಸ ತುಂಬಿಸ್ಕೊಂಡಿರೋದಾ ಅನಿಸ್ಬಿಡ್ತು ಒಮ್ಮೆ. ಕಸ ಅನ್ನೋಕೆ ಮನಸ್ಸು ಬಾರದ ಕಸ ಅದು. ಬೆಳಕ ಕಂಡು ವಾರವಾಗಬೇಕಿದ್ದ ಕನಸುಗಳು ನೋಟಪ್ಯಾಡಿನ ಗೀಚುಗಳೇ ಆಗುಳಿದು ಪರದೆಯ ತುಂಬೆಲ್ಲಾ ಮಲಗಿಬಿಟ್ಟಿದ್ವು. ದಿನದೆಂಟು ಘಂಟೆಗಳು ಹೊಟ್ಟೆಪಾಡಿಗೆ , ಅದಾದ ನಂತರ ಎಂಟು ಘಂಟೆ ನಿದ್ರೆ ಅಂದ್ರೂ ಇನ್ನೆಂಟು ಘಂಟೆ ಏನ್ಮಾಡ್ತೀಯೋ ? ಒಂದೆಂರಡು ಘಂಟೆ … Read more

ಧರ್ಮ, ಧರ್ಮಾಂಧತೆ ಮತ್ತು ಊಟ: ಪ್ರಶಸ್ತಿ

ಟೈಟಲ್ ನೋಡಿ ಇದೇನಪ್ಪಾ ? ಕ್ಯಾಲೆಂಡರ್ ಹೊಸವರ್ಷ ಅಂತ ಯದ್ವಾತದ್ವಾ ಏರ್ಸಿದ್ದು ಇನ್ನೂ ಇಳಿದಿಲ್ವಾ ಅಂತ ಅಂದ್ಕಂಡ್ರಾ ? ಹಂಗೇನಿಲ್ಲ. ಹೊಸವರ್ಷ ಅಂದ್ರೆ ಯುಗಾದಿ ಅನ್ನೋ, ಎಣ್ಣೆಯನ್ನೋದ್ನ ತಲೆಗೆ ಹಾಕಿದ್ರೂ ತಲೆಗೇರಿಸಿಕೊಳ್ಳದ ಒಂದಿಷ್ಟು ಜನರ ಮಧ್ಯದಿಂದ ಬಂದಂತ ಮಾತುಗಳ ಸಂಗ್ರಹವಿದು. ಧರ್ಮವನ್ನೋದು ಅಫೀಮು, ಮೂಢನಂಬಿಕೆಗಳ ಸಂಗ್ರಹವನ್ನೋ ಬುದ್ಧಿಜೀವಿಗಳ, ಅವರಿಗೆ ಬುದ್ಧಿ ಬಿಟ್ಟು ಬೇರೆಲ್ಲಾ ಇದೆಯೆಂದು ಲೇವಡಿ ಮಾಡೋ ಬಣ್ಣಗಳ ನಡುವೆ ನಿಂತು ನೋಡಿದ ನೋಟಗಳಿವು. ಅಂತದ್ದೇನಿದೆ ಇದ್ರಲ್ಲಿ ಅಂದ್ರಾ ? ಲೇಖನದ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದೆ ಸುಮ್ಮನೇ … Read more

ಚಳಿಗೆ ಮುರುಟಿದ ಮನಕ್ಕೊಂದು ಹೊದಿಕೆ ಹೊಚ್ಚುತ್ತಾ: ಪ್ರಶಸ್ತಿ

ಚಳಿಯೆಂದ್ರೆ ವಿಪರೀತ ಚಳಿ ಕಣೋ ಬೆಂಗ್ಳೂರಲ್ಲಿ ಅಂದ್ರೆ ದೆಲ್ಲೀಲಿ ಕೂತ ಫ್ರೆಂಡು ನಗ್ತಾ ಇದ್ದ. ಅಲ್ಲಿ ಅಬ್ಬಬ್ಬಾ ಅಂದ್ರೆ ಹದಿನೆಂಟೂ ಇಪ್ಪತ್ತೋ ಆಗಿರಬಹುದಷ್ಟೆ. ಅಷ್ಟಕ್ಕೇ ಚಳಿಯೆನ್ನೋ ನೀನು ಇಲ್ಲಿನ ಮೈನಸ್ಸುಗಳಿಗೆ ಬಂದ್ರೆ ಸತ್ತೇ ಹೋಗಬಹುದೇನೋ ಅಂದ. ಅರೆ ಹೌದಲ್ವಾ ಅನಿಸ್ತು. ಊರಲ್ಲಿ ಎರಡು ಕಂಬಳಿ, ಮೂರು ಕಂಬಳಿ ಚಳಿಯಂತ ಹೇಳುತ್ತಿದ್ದ, ಸ್ವೆಟರಿಲ್ಲದೆ ಹೊರಗಲ್ಲ ಮನೆಯೊಳಗೂ ಕೂರಲಾಗದಿದ್ದ ನಮ್ಮೂರೆಲ್ಲಿ ಬೆಳಗ್ಗೆ ಎಂಟಕ್ಕೇ ಆಫೀಸಿಗೆ ಬರೋ ಪರಿಸ್ಥಿತಿಯಿದ್ರೂ ಸ್ವೆಟರುಗಳೆಲ್ಲಾ  ಧೂಳು ಹೊಡೆಯುತ್ತಿರುವ ಬೆಂಗಳೂರೆಲ್ಲಿ ಅಂತನೂ ಒಮ್ಮೆ ಅನಿಸಿದ್ದು ಸುಳ್ಳಲ್ಲ.ಇಷ್ಟರ ಮಧ್ಯೆವೂ … Read more

ಆಟಿಸಂ ಅನ್ನೋ ಸಂಕೀರ್ಣ ಮನೋ ಅವಸ್ಥೆ: ಪ್ರಶಸ್ತಿ

ದೈಹಿಕ ಅಂಗವೈಕಲ್ಯ ಅನ್ನೋದು ಮೇಲುನೋಟಕ್ಕೆ ಕಂಡುಬರುತ್ತೆ. ಆದ್ರೆ ಮಾನಸಿಕ ಅಂಗವೈಕಲ್ಯ ? ಕಣ್ಣೆದ್ರೇ ಇದ್ರೂ ಗೊತ್ತಾಗಲ್ಲ.  ಏ ಅವನ್ಯಾಕೆ ಅಷ್ಟು ದೊಡ್ಡದಾಗಿ , ಎಳೆದೆಳೆದು ಮಾತಾಡ್ತಾನೆ, ದೇಹ ನೋಡಿದ್ರೆ ಅಷ್ಟು ವಯಸ್ಸಾದಂತಿದೆ ಆದ್ರೆ ಬುದ್ದಿ ಮಾತ್ರ ಇನ್ನೂ ಬೆಳೆದಿಲ್ಲವಾ ಅನ್ನುವಂತಹಾ ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ.  ಇದ್ದಕ್ಕಿದ್ದಂಗೆ ಜಗಳಕ್ಕೆ ಬಂದು ಬಿಡ್ತಾನೆ ಮಾರಾಯ ಅವ. ಸ್ವಲ್ಪ ಹುಷಾರಾಗಿರು ಅಂತಿದ್ದ ಹೊಸದಾಗಿ ಪೀಜಿಗೆ ಬಂದವನ ಬಗ್ಗೆ ಗೆಳೆಯ. ಹೂಂ. ಅವನು ಆಟಿಸಂ ಇಂದ ಒದ್ದಾಡ್ತಾ ಇದಾನೆ . ನಿನ್ನೆ ಸಿಕ್ಕಾಗ … Read more

ಒಂದು ಕಾಗದದ ಕತೆ: ಪ್ರಶಸ್ತಿ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ … Read more

ಮೆಸೇಜೆಂಬ ಅಂಚೆ: ಪ್ರಶಸ್ತಿ ಪಿ.

  ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. "ಮೆಸೇಜೆಂಬ ಅಂಚೆ" .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. … Read more

ಬರವಣಿಗೆಯ ಶನಿವಾರವೂ ಜೋಗಿಯವ್ರ ಕಾಲಂಬರಿಯೂ: ಪ್ರಶಸ್ತಿ.ಪಿ.

ಕನಸೊಳಗೊಂದು ಕನಸು, ಅದರೊಳಗೆ ಮತ್ತೊಂದು, ಅದರೊಳಗೆ ಇನ್ನೊಂದು ಕನಸು. ಹೀಗೆ ಕನಸೊಳಗೆ ಕನಸ ಬಿತ್ತುತ್ತಲೇ ವಾಸ್ತವ ಕನಸುಗಳ ಪರಿವೆಯಿಲ್ಲದೇ ಕಥೆ ಕಟ್ಟುತ್ತಾ  ಸಾಗುವ ಸಿನಿಮಾವೊಂದಿದೆ ಇಂಗ್ಲೀಷಲ್ಲಿ,inception ಅಂತ. ವಾಸ್ತವ ಕನಸುಗಳ ಅರಿವಿಲ್ಲದಂತೆ ಸಾಗುವ ಅದಮ್ಯ ಪರಿಯದು. ಅದೇ ತರ ವಿಮರ್ಶೆಯ ಬಗ್ಗೆ ವಿಮರ್ಶೆ ಬರದ್ರೆ ? ಕತೆಗಾರನೊಬ್ಬನ ಕತೆ ಹುಟ್ಟಿದ ಬಗ್ಗೆಯೇ, ಕಥಾಸಂಕಲನದಲ್ಲಿ ಬಂದ ಕತೆಗಳ ಬಗ್ಗೆಯೇ ಒಂದು ಕತೆ ಬಂದ್ರೆ ? ಪಂಪಕಾವ್ಯದಲ್ಲಿ ಬರುವ ಕರ್ಣನ ಬಾಯಲ್ಲಿ ಬರುವ ಭಾನಾಮತಿಯ ದ್ಯೂತದ ಪ್ರಸಂಗದ ಬಗ್ಗೆ ಬರೆದ … Read more

ನಶೆಯ ನಿಶೆಯಲ್ಲಿ: ಪ್ರಶಸ್ತಿ.ಪಿ,

ಕಿಟಕಿಯ ಕಂಬಿಗಳಿಗೆ ಒಣಗಿಸಿದ ಕರ್ಚೀಪು, ಟವೆಲುಗಳ ಸಂದಿಯಿಂದಲೇ ಇಣುಕಿದ್ದ ಸೂರ್ಯ, ಬಂಡೆಗಳ ಬಿರುಕಲ್ಲೇ ಅರಳೋ ನ್ಯಗ್ರೋಧದಂತೆ. ಅಲಾರಮ್ಮನ್ನೇ ಮೂರು ಬಾರಿ ಮಲಗಿಸುತ್ತಿದ್ದ ಆ ಮಲಗುವೀರನ ಕಷ್ಟಪಟ್ಟು ಎಬ್ಬಿಸುತ್ತಿದ್ದ ನಿತ್ಯದ ಆ ಸೂರ್ಯರಶ್ಮಿಗಳಿಗೂ ಅಂದ್ಯಾಕೋ ಆತ ಮಲಗಿದ್ದ ಪರಿ ಕಂಡು ಅಯ್ಯೋ ಪಾಪ ಅನಿಸಿತ್ತು. ರಾತ್ರಿಯ ಚಳಿಗೋ, ಬಿದ್ದ ಕೆಟ್ಟ ಕನಸಿಗೋ ನಡುಗಿ, ಕಾಲುಗಳ ನಡುವೆ ಕೈಯಿಟ್ಟು ಮುದುರಿ ಮಲಗಿರೋ ಮಗುವ ಕಂಡು ಕರಗಿದ ತಾಯಿಯ ಅಂತಃಕರಣದಂತಾಗಿತ್ತು ರವಿಯ ಕಿರಣಗಳ ಕತೆಯಿಂದು. ಈತನ ರೂಮ ಹೊಕ್ಕ ಅವು ನಿತ್ಯದಂತೆ … Read more

ಕಾಡುಪೇಟೆಯ ಕತೆ: ಪ್ರಶಸ್ತಿ

ಬರೆಯಹತ್ತಿದ್ರೆ ಒಂದು ಕಾದಂಬರಿಯಾಗೋವಷ್ಟು ವಿಷಯ ದಕ್ತಿತ್ತೇನೋ ಅವರ ಪ್ರೇಮಕತೆಯಲ್ಲಿ. ಅದು ಸ್ನೇಹವಾ ಪ್ರೇಮವಾ ಅನ್ನೋ ಸಂದಿಗ್ದತೆಯಲ್ಲಿ ಅವನಿದ್ದರೆ ಅದಕ್ಕೊಂದು ಹೆಸರಿಡಲೇಬೇಕಾದ ಅನಿವಾರ್ಯತೆಯಲ್ಲೋ, ಅರ್ಜೆಂಟಿನಲ್ಲೋ ಅವಳಿರಲಿಲ್ಲ. ಸ್ನೇಹವೆಂದರೆ ಖುಷಿಪಟ್ಟು, ಪ್ರೇಮವೆಂದರೆ ಬೇಸರಪಡುವಳೂ ಅಲ್ಲ  ಅವಳು. ಸಮಾಜದ ಕಟ್ಟುಪಾಡುಗಳಿಗೆ ಗೌರವವಿದ್ದರೂ ಯಾರನ್ನೋ ತೃಪ್ತಿಪಡಿಸಲು ಮನ ಮನಗಳ ಭಾವಕ್ಕೊಂದು ಚೌಕಟ್ಟು ಹಾಕೋಕೆ ವೈಯುಕ್ತಿಕ ವಿರೋಧವಿದ್ದರೂ ತನ್ನ ಅವನ ನಡುವಿನ ಮಾತುಕತೆಗಳಿಗೆ ಯಾರೋ ಒಂದು ಸಂಬಂಧದ ಹೆಸರಿಟ್ಟರೆ ಯಾವ ಅಭ್ಯಂತರವೂ ಇರಲಿಲ್ಲ ಅವಳಿಗೆ. ಯಾರನ್ನಾದರೂ ತೀರ ಹಚ್ಚಿಕೊಂಡು ಅವರು ದೂರವಾಗೋ ಕಾಲನ ಆಘಾತಗಳು … Read more

ಬರೆಯಲೊಲ್ಲದ ಮನಕ್ಕೊಂದು ಪೆನ್ನ ಕೊಟ್ಟು: ಪ್ರಶಸ್ತಿ

  ಈ ವಾರ ಬರೆಯೆಂದರೂ ಬರೆಯಲೇನೋ ಬೇಸರ. ವಿಷಯವಿಲ್ಲವೆಂದಲ್ಲವೀ  ಕಸಿವಿಸಿ. ಆದರೆ ಇರೋ ದುಃಖಗಳಲ್ಲಿ ಯಾವುದರ ತೋಡಿಕೊಳ್ಳಲೆಂಬುದರ ತೊಳಲಾಟ. ತೀರ್ಥಹಳ್ಳಿಯಲ್ಲೊಂದು ಹೂವ ಅರಳೋ ಮೊದಲೇ ಕೊಂದ ಖದೀಮರ ಬಗ್ಗೆ ಬರೆಯಲಾ ? ಬೆಂಗಳೂರಲ್ಲಾದ ದೌರ್ಜನ್ಯಗಳ ಬಗ್ಗೆ ಬರೆಯಲಾ ? ಸ್ವಚ್ಛ ಭಾರತವೆಂದ ತೆಂಡೂಲ್ಕರನಿಗೇ ಬೇಸರವೆನಿಸುವಷ್ಟು ಆ ಜಾಗದಲ್ಲಿ ಮಾರನೆಯ ದಿನವೇ ಕಸ ಹಾಕಲು ಹೋದ ಬೇಜವಬ್ದಾರಿ ಭಾರತೀಯರ ಬಗ್ಗೆ ಬರೆಯಲಾ ? ಗಡಿಯಲ್ಲಿ ಅತ್ತ ಪಾಕಿಗಳು ಗುಂಡಿನ ಮಳೆಗಯ್ಯುತ್ತಿದ್ದರೆ ಮತ್ತೊಂದೆಡೆ ಚೀನಾದವ್ರು ನಮ್ಮ ನೆಲದಲ್ಲಿ ರಸ್ತೆ ಮಾಡೋಕೂ … Read more

ಸ್ವಚ್ಛ ಭಾರತ ಮತ್ತು ನಾವು : ಪ್ರಶಸ್ತಿ

ಎರಡು ವಾರದ ಹಿಂದೆ. ಆಫೀಸಿಂದ ಮನೆಗೆ ನಡ್ಕೊಂಡು ಬರ್ತಾ ಇದ್ದೆ. ಐಟಿಪಿಎಲ್ಲಿನ್ ಗ್ರಾಫೈಟ್ ಸಿಗ್ನಲ್ಲಿಂದ ಕುಂದಲಹಳ್ಳಿ ಗೇಟಿಗೆ ಬರೋ ರಸ್ತೆ. ಎಡಭಾಗದ ಫುಟ್ಪಾತಲ್ಲಿ ಬರ್ತಿದ್ದೋನಿಗೆ ಏನೋ ಚಿತ್ತಾರ ಬರೆದ ಹಾಗೆ ಕಾಣ್ತು ಗೋಡೆ ಮೇಲೆ. ಹೌದು. ಸಖತ್ತಾದ ಚಿತ್ರ(ಚಿತ್ರ ೧). ಅಕ್ಟೋಬರ್ ಎರಡನೇ ತಾರೀಖಿಂದ ಶುರುವಾದ ಸ್ವಚ್ಛ ಭಾರತ ಅಭಿಯಾನದ ಪ್ರಭಾವವಾ ಇದು ಅನಿಸ್ತು. ಹ್. ಒಂದೆರಡು ದಿನ ಚೆನ್ನಾಗಿ ಇಟ್ಟಿರ್ತಾರೆ. ಒಂದ್ನಾಲ್ಕು ದಿನ ಆಗ್ಲಿ.ಮತ್ತೆ ಇದೇ ತರ ಆಗಿರತ್ತೆ. ಬದಲಾಗಬೇಕಿದ್ದುದು ಜನರ ಮನೋಭಾವ. ಒಬ್ರಿಬ್ರು ಹಿಂಗೆ … Read more

ಮಣ್ಣಾದ ಶೂ ಮತ್ತು ಮೋಡಗಳ ಊಟಿ: ಪ್ರಶಸ್ತಿ ಅಂಕಣ

ಇದೇನಪ್ಪಾ ವಿಚಿತ್ರ ಶೀರ್ಷಿಕೆ ,ಶೂ ಮಣ್ಣಾಗೋಕೂ ಮತ್ತು ಊಟಿ ಮೋಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂದ್ಕೊಂಡ್ರಾ ? ಊಟಿ ಅಂದ್ರೆ ಮಧುಚಂದ್ರದ ಜಾಗ. ಅದ್ರ ಬಗ್ಗೆ ಮದ್ವೆಯಾಗದ ಈ ಹುಡ್ಗ ಏನು ಬರಿಬೋದು ಅಂದ್ಕೊಂಡ್ರಾ ? ಹಿ.ಹಿ. ನಾ ಆ ವಿಷ್ಯದ ಬಗ್ಗೆ ಹೇಳ್ತಿರೋದಲ್ಲ.ಶೂ ಬೆಂಗ್ಳೂರಲ್ಲಿದ್ರೂ ಮಣ್ಣಾಗತ್ತೆ. ಅದಕ್ಕೆ ಊಟಿ ಮೋಡ ಸುರ್ಸೋ ಮಳೇನೇ ಆಗ್ಬೇಕಾ ಅಂದ್ರಾ ? ವಿಷ್ಯ ಅದೂ ಅಲ್ಲ. ಹೇಳೋಕೆ ಹೊರಟೊರೋದು ಎಲ್ಲಾ ಸಾಮಾನ್ಯವಾಗಿ ನೋಡೋ ದೊಡ್ಡಬೆಟ್ಟ, ಗುಲಾಬಿ ತೋಟ, ಊಟಿ ಕೆರೆಗಳನ್ನೊಳಗೊಂಡ ಊಟಿಯ … Read more

ಒಂದು ಮುತ್ತಿನ ಕತೆ: ಪ್ರಶಸ್ತಿ

ನಿಮ್ಗೆಲ್ಲಾ ದೀಪಾವಳಿ ಶುಭಾಶಯಗಳು ಅಜ್ಜಿ. ಆರೋಗ್ಯ ಚೆನ್ನಾಗಿ ನೊಡ್ಕೋಳಿ. ಹೋಗ್ಬರ್ತೀವಿ. ಹೂಂ ಕಣಪ್ಪ. ಥ್ಯಾಂಕ್ಸು.ನಿಮ್ಗೂ ಶುಭಾಶಯಗಳು. ಸರಿ ಅಜ್ಜಿ ಬರ್ತೀವಿ. ನಮಸ್ಕಾರ ಮಾಡ್ತೀವಿ ತಡೀರಿ ಅಂತ ಕಾಲು ಮುಟ್ಟಿ ನಮಸ್ಕಾರ ಮಾಡಿದ್ರೆ ನೂರ್ಕಾಲ ಚೆನ್ನಾಗಿ ಬಾಳಿ ಅಂದ್ರು ಎಂಭತ್ನಾಲ್ಕರ ಹೊಸ್ತಿಲಲ್ಲಿದ್ದ ಅಜ್ಜಿ. ತಡಿ ಮೊಮ್ಮಗನೆ ಅಂತ ಸುಗುಣಜ್ಜಿ  ಹತ್ತಿರ ಬಂದಾಗ ಏನು ಹೇಳ್ಬೋದಪ್ಪಾ ಅನ್ನೋ ಕುತೂಹಲ ನನಗೆ. ಬಾಚಿ ತಪ್ಪಿದ ಅಜ್ಜಿ ಕೆನ್ನೆಗೊಂದು ಸಿಹಿಮುತ್ತಿನ ಮುದ್ರೆಯೊತ್ತಿಬಿಡೋದೇ ? ! ಅಲ್ಲಿದ್ದಿದ್ದು ಅವ್ರಿಬ್ರೇ ಅಲ್ಲ.  ಸಲೋನಿ ಅಜ್ಜಿ. ಆನೇಕಲ್ಲಿನಜ್ಜಿ, … Read more

ಭರ್ಜರಿ ಸಿನಿಮಾ ಬಹದ್ದೂರ್: ಪ್ರಶಸ್ತಿ

ಮಂಗಳವಾರನೇ ಫ್ರೆಂಡ್ ಹೇಳಾಗಿತ್ತು. ಈ ಶನಿವಾರ ಅಥ್ವಾ ಭಾನುವಾರ ಒಂದು ಮೂವಿಗೆ ಹೋಗ್ಬೇಕಂದಿದ್ದ. ಅದ್ರಲ್ಲೇನಿದೆ ದೊಡ್ ವಿಷ್ಯ. ಪ್ರತೀವಾರ ಒಂದೊಂದು ಹೊಸ ಸಿನಿಮಾ ಬರುತ್ತಿರುತ್ತೆ. ಅದ್ರಲ್ಲೂ ಇದು ಬೆಂಗ್ಳೂರು. ಇಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲೀಷು, ಮಲೆಯಾಳಿ ಅಥ್ವಾ ಅವುಗಳದ್ದೇ ರಿಮೇಕಾದ ಯಾವ್ದ್ರಾದ್ರೂ ಚಿತ್ರ ಯಾವಾಗ್ಲೂ ಓಡ್ತಿರತ್ತೆ ! ಅದ್ರಲ್ಲೊಂದಕ್ಕೆ ಹೋಗೋದ್ರಲ್ಲೇನಿದೆ ವಿಶೇಷ ಅಂದ್ರಾ ? ಅಲ್ಲೇ ಇದ್ದಿದ್ದು ಫ್ರೆಂಡ್ ಹೇಳ್ತಾ ಇದ್ದಿದ್ದು ಈ ವಾರಕ್ಕೆ ಎರಡನೇ ವಾರ ಮುಗಿಸಿದ ಕನ್ನಡದ ಸ್ವಮೇಕ್ ಸಿನಿಮಾ ಬಹಾದ್ದೂರ್ ಬಗ್ಗೆ 🙂 … Read more

ಮಂದ್ಲಪೇಟೆಯ ಮೋಡಗಳ ನಡುವೆ: ಪ್ರಶಸ್ತಿ ಅಂಕಣ

ಮಡಿಕೇರಿ ಅಂದಾಕ್ಷಣ ನೆನಪಾಗೋ ಸ್ಥಳಗಳಲ್ಲಿ ಮಂದ್ಲಪೇಟೆಯೂ ಒಂದು. ಹಿಂದಿನ ಸಲ ಹೋದಾಗ ಇಲ್ಲಿಂದ ೨೭ ಕಿ.ಮೀ ಅಂತ ನೋಡಿದ್ರೂ ಹೋಗಕ್ಕಾಗದೇ ಇದ್ದ ಕಾರಣಕ್ಕೋ ಏನೋ ಗೊತ್ತಿಲ್ಲ. ಈ ಸಲ ಮಡಿಕೇರಿಗೆ ಹೋದಾಗ ಮಂದ್ಲಪೇಟೆಗೆ ಹೋಗ್ಲೇಬೇಕು ಅಂತ ಮನ ತುಡೀತಿತ್ತು . ನಮ್ಮ ಗಾಳಿಪಟ ಚಿತ್ರದಲ್ಲಿ ಮುಗಿಲುಪೇಟೆ, ಕೆಲವರ ಬಾಯಲ್ಲಿ ಮಾಂದ್ಲಪೇಟೆ, ಮಂದ್ಲಪಟ್ಟಿ.. ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳೋ ಮುಗಿಲುಗಳಿಗೆ ಮುತ್ತಿಕ್ಕೋ ಜಾಗ ಇದೇನೆ. ಗಾಳಿಪಟ ಚಿತ್ರದ ಹೆಸರಿದ್ದಂತೆಯೇ ಇಲ್ಲಿ ಮುಗಿಲುಗಳದ್ದೇ ಮೊಹಬ್ಬತ್ . ಆದ್ರೆ ಕೆಲೋ ಸಲ … Read more

ಮಂಗಳಪ್ರಿಯನೊಬ್ಬನ ಮಮಕಾರದ ಮಾತುಗಳು: ಪ್ರಶಸ್ತಿ ಅಂಕಣ

ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ … Read more

ಭಾವಗಳ ಮೂಟೆ ಕಟ್ಟೋ ಹಾಗಿದ್ರೆ: ಪ್ರಶಸ್ತಿ

ಈ ಗಣಕ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಕೆಲೋ ಸಲ ಅಂದ್ರೆ ಅದನ್ನ ಬರಿ ಮಾತಲ್ಲಿ ಹೇಳೋಕಾಗದಷ್ಟು. ಯಾಕಂತೀರಾ ?  ಸದ್ಯಕ್ಕೆ ಸಮಯವಿಲ್ಲದಿದ್ದರೂ ಮುಂದೆಂದಾದರೂ ಬೇಕಾಗುವುದೆಂಬ ನಮಗಿಷ್ಟದ ಅದೆಷ್ಟೋ ಜೀ.ಬಿಗಟ್ಲೆ ಹಾಡುಗಳನ್ನು, ಸಿನಿಮಾಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ನೋಡಬಹುದಾದ ವ್ಯವಸ್ಥೆಯಿದೆಯೆಲ್ಲ ಅದೇ ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡೋದು ನಂಗೆ ಅಂದ್ರೆ ಕೆಲವರಿಗೆ ಅಷ್ಟೇನಾ ಅನಿಸಬಹುದು. ಕೆಲವರಿಗೆ  ತಮಾಷೆಯೆನಿಸಬಹುದು . ಕೆಲವರಿಗೆ ವಿಡಂಬನೆಯಂತೂ ಭಾಸವಾಗಬಹುದು. ನಮ್ಮ ಮನಸ್ಸಿನಲ್ಲಿರೋ.. ವೈಜ್ನಾನಿಕವಾಗಿ ಹೇಳೋದಾದ್ರೆ ಮೆದುಳಿನಲ್ಲಿರೋ ಮಾಹಿತಿಯ ವಾಹಕವಾಗಿ ಸಂಗ್ರಾಹಕವಾಗಿ ಕೆಲಸ ಮಾಡೋ ನ್ಯೂರಾನುಗಳಲ್ಲಿ … Read more

ಎಲ್ಲ ಬರೆವವರೇ ಆದರೆ ಓದುವವರ್ಯಾರು?: ಪ್ರಶಸ್ತಿ ಪಿ. ಸಾಗರ

  ಇಂಥಾ ಗಂಭೀರ ಪ್ರಶ್ನೆಯ ಬಗ್ಗೆ ಒಂದು ಲೇಖನ ಬೇಕಿತ್ತಾ ಅಂತ ಯೋಚಿಸ್ತಾ ಇದ್ದೀರಾ ? ನೀವಷ್ಟೇ ಅಲ್ಲ. ನಾನೂ ಹಾಗೇ ಯೋಚಿಸಿದ್ದು. ನಾನೇ ಕೆಲ ಘಟನೆಗಳ ನೋಡಿ ಬೇಸತ್ತು, ರೋಸತ್ತು ಇದರ ಬಗ್ಗೆ ಬರೆಯಹೊರಟೆ ಅನ್ನುವುದರ ಬದಲು ಇತ್ತೀಚಿಗಿನ ಕೆಲ ವಿದ್ಯಮಾನಗಳು ಬೇರೆ ವಿಷಯಗಳಿಗಿಂತ ಇದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಇದರ ಬಗ್ಗೆಯೇ ಈ ವಾರ ಬರೆಯುವಂತೆ ನನ್ನ ಪ್ರೇರೇಪಿಸಿದವು ಅಂದ್ರೆ ತಪ್ಪಾಗಲಾರದೇನೋ. ಅನಂತಮೂರ್ತಿಗಳ ನಿಧನದ ವೇಳೆ ಚರ್ಚೆಯಾದ ಕೃತಿಗಳಿರಬಹುದು. ಭೈರಪ್ಪನವರ ಯಾನದ ಬಗೆಗಿನ ಪರ-ವಿರೋಧ … Read more

ಗುರುಭ್ಯೋ ನಮ: ಪ್ರಶಸ್ತಿ

ಬದುಕ ಪಯಣಕೆ ಬೆಳಕನಿತ್ತಿಹ ಪ್ರಣತಿ ಗುರುವರ್ಯ ಹುಡುಗು ಮುದ್ದೆಯ ಪ್ರತಿಮೆಯಾಗಿಸಿ ನಿಂತ ಆಚಾರ್ಯ ಸಕಲವಿದ್ಯೆಯ ಮಳೆಯಗಯ್ದಿಹೆ ಮುನಿಸ ಮೋಡದಲಿ ಕಷ್ಟ ಸುಡುತಿರೆ, ಜೀವವಳುತಿರೆ ಸಹಿಸಿ ಮೌನದಲಿ ನಳಿನಿ ಮೇಲಣ ಹನಿಯ ತರದಲಿ ತಪ್ಪ ಮಸ್ತಕದಿ ಸರಿಸಿ ಹರಿಸಿದೆ ಜ್ಞಾನ ಬೆಳಕನು ತೊಳೆದ ಬುದ್ದಿಯಲಿ |೧| ಅರಿವಿಗೆ ನಿಲುಕದ ಮಾತುಗಳಲ್ಲಿ ಗುರುವಿನ ನಿಲುವುಗಳೆಷ್ಟಿಹುದೋ ಕತ್ತಲ ಪಥದಲೂ ಹಾಕುವ ಹೆಜ್ಜೆಯ ತಿದ್ದಿಹ ಬುದ್ದಿಗಳೆಷ್ಟಿಹುದೊ  ಶಿಸ್ತನು ಕಲಿಸಿದೆ, ಬುದ್ದಿಯ ಬೆಳೆಸಿದೆ ಸವಾಯೀಯುತಲೆ ಜಡಮನಕೆ ತೊಲಗಿಸಿ ಮೌಢ್ಯತೆ, ಮೂಡಿಸಿ ಐಕ್ಯತೆ ನನ್ನನು ತೆರೆದಿಹೆ … Read more

ಗಣನಾಥನಿಗೊಂದು ನಮನವೆನ್ನುತ್ತಾ: ಪ್ರಶಸ್ತಿ

ವಿಘ್ನೇಶನ ಬಗ್ಗೆ ಬರೆಯೋದೇನನ್ನ ನಾಥನೆನ್ನಲೇ ಗೌರೀತನಯನನ್ನ ಯಶವ ಹಂಚುವ ಆದಿ ಪೂಜ್ಯನನ್ನ ಕರವ ಮುಗಿಯುವೆ ಹರಸು ಗಣಪನೆನ್ನ ಗಣೇಶನೆಂದರೆ ಏನು ಹೇಳಲಿನ್ನ ಜಾಣನೆನ್ನಲೇ ವಿದ್ಯಾ ದೇವನನ್ನ ನಮನವೆನ್ನಲೇ ವಕ್ರದಂತನನ್ನ ನಶಿಶು ವಿಘ್ನವ ನೀಡಿ ಹರುಷ, ಹೊನ್ನ ವಿನಾಯಕ, ಗಜಾನನ ಅಂತ ಬರಿಯೆ ಬರೆಯೋದೇನು, ಅದನ್ನೇ ಆದಿಯಕ್ಷರಗಳಾಗಿಸಿ ಒಂದಿಷ್ಟು ಸಾಲು ಗೀಚಬಾರದೇಕೇ ಅಂತೆನ್ನೋ ಆಲೋಚನೆ ನರನ ತಲೆಯಲ್ಲಿ ಹೊಳೆದಿದ್ದೇ ತಡ ಕೃಷ್ಣ ಪಿಂಗಾಕ್ಷನ ಬಗ್ಗೆ ಒಂದಿಷ್ಟು ಸಾಲು ಜೋಡಿಸಾಯ್ತು. ತನ್ನ ದಂತದಿಂದಲೇ ರಾಮಾಯಣವನ್ನು ಬರೆದನೆಂಬೋ ಧೂರ್ಮವರ್ಣನ ಬಗ್ಗೆ ಒಂದಿಷ್ಟು … Read more

ಅಧ್ಯಕ್ಷ ಅಧ್ಯಕ್ಷ: ಪ್ರಶಸ್ತಿ

ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ … Read more

ದೋಸೆ ದೋಸ್ತಿ : ಪ್ರಶಸ್ತಿ ಅಂಕಣ

  ರಜಾ ದಿನ ಭಾನುವಾರ ಅಂದ್ರೆ ಎಚ್ಚರಾಗೋದು ಹೊಟ್ಟೆಯಿಂದ್ಲೇ. ಮುಖಕ್ಕೆ ಬಿಸಿಲು ಬಿದ್ರೂ ಎಚ್ಚರಾಗದ ದೇಹವನ್ನ ಹುಟ್ಟೋ ಹೊಟ್ಟೆ ಹಸಿವು ಎಬ್ಬಿಸಿಬಿಡುತ್ತೆ. ಹಂಗೇ ಎದ್ದು ಹೊರಗಿಣುಕಿದ್ರೆ ಎದುರಿನ  ತೆಂಗಿನ ಮರದ ಮೇಲಿನ ಕಾಗೆ ಗುಡ್ಮಾರ್ನಿಂಗ್ ಅಂತ ಕೂಗ್ತಾ ಇದ್ದುದು ನಂಗೇನಾ ಅನಿಸುತ್ತೆ. ತಿರುಗೋ ಭೂಮಿಗಿಲ್ಲದ ರಜೆ, ಸುತ್ತೋ ಬಸ್ಸಿಗಿಲ್ಲದ ರಜೆ , ಅಹಮಿಗಿಲ್ಲದ , ಹಸಿವಿಗಿಲ್ಲದ ರಜೆ ನಿಂಗೇಕೋ ಬೆಪ್ಪೇ ? ಜಗವೆಲ್ಲ ಎದ್ದಿರಲು ಮಲಗಿರುವೆ ಸಿದ್ದ ಅಂತ ನಂಗೆ ಬಯ್ಯೋಕೆ ಶುರು ಮಾಡಿತ್ತಾ ಗೊತ್ತಿಲ್ಲ. ಎಲ್ಲಾ … Read more

ಅಣ್ಣಾ ಎಂಬ ಕೂಗಲಿ ಕರಗಿಹೋಗುವ ಮುನ್ನ: ಪ್ರಶಸ್ತಿ ಅಂಕಣ

ಪ್ರತೀ ಪದಕ್ಕೂ ತನ್ನದೇ ಆದೊಂದು ನೆನಪ ಬುತ್ತಿಯಿರುತ್ತಾ ಅಂತ.  ಕೆಲವದ್ದು ನಲಿವ ನರ್ತನವಾದರೆ ಕೆಲವದ್ದು ನೋವ ಮೌನ ಗಾನ. ಅಕ್ಕ ಅನ್ನೋ ಎರಡಕ್ಷರದ ಮಾಧುರ್ಯ, ಗೆಳತಿ ಅನ್ನೋ ಮೂರಕ್ಷರದ ನವಿರು ಭಾವಗಳು, ಅಮ್ಮಾ ಅನ್ನೋ ಮಮತೆ, ಅಪ್ಪ ಅನ್ನೋ ಗೌರವ, ಹೆಮ್ಮೆ .. ಹೀಗೆ ಪ್ರತೀ ಪದವೂ ತಮ್ಮದೇ ಆದೊಂದು ಹೊಸಲೋಕಕ್ಕೆ ಕೊಂಡೊಯ್ಯುವಂತೆ. ಸ್ನೇಹ ಎಂಬ ಪದದ್ದೆಂತೂ ನೆನಪುಗಳ ಬುತ್ತಿಯಲ್ಲ. ಅದೊಂದು ಜಾತ್ರೆ. ತಿರುಗಿದಷ್ಟೂ ಮುಗಿಯದಷ್ಟು, ನೋಡಿದಷ್ಟೂ ದಣಿಯದಷ್ಟು , ಹೊಸ ಹೊಸ ದಿಕ್ಕಲ್ಲಿ ಹೊಸ ಹೊಸ … Read more