ಮುಳುಗದ ರವಿ…..: ಶೋಭಾ ಶಂಕರಾನಂದ

“ಪ್ರಿಯ ವೀಕ್ಷಕರೇ”…ಎಂದ ಕೂಡಲೇ…!!!! ಕೇಳುಗರು ಮತ್ತು ನೋಡುಗರೆಲ್ಲರೂ ಒಂದು ಕ್ಷಣ ತಮ್ಮನ್ನೇ ಮರೆತು ಮಂತ್ರ ಮುಗ್ಧರಂತೆ ಅತ್ತ ಗಮನವಿಟ್ಟು ಕೇಳಬೇಕು, ನೋಡಬೇಕು, ಹಾಗಿತ್ತು ಆ ಧ್ವನಿಯ ಆತ್ಮೀಯತೆ ಮತ್ತು ಗತ್ತು. ಆ ಧ್ವನಿ ಇನ್ನಿಲ್ಲ ಎಂದಾಗ ಏನೋ ಒಂಥರಾ ಸಂಕಟ ಮತ್ತು ತಳಮಳ. ಕಾರಣ… ಬಹುಶಃ ನಂಗೂ ಗೊತ್ತಿಲ್ಲ…..!!!??? ತಮ್ಮ ಬದುಕಿನುದ್ದಕ್ಕೂ ಬರವಣಿಗೆಯ ಮೂಲಕ ಹೋರಾಟವನ್ನೇ ಮಾಡುತ್ತಾ , ಹೇಳುವ ವಿಷಯವನ್ನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಅವರ … Read more

ಬೆಳಗಿದ ರವಿಗೊಂದು ಅಕ್ಷರ ಮಾಲೆ: ಸಾವಿತ್ರಿ ಹಟ್ಟಿ

ರವಿ ಬೆಳಗೆರೆ ಅವರ ಬಗ್ಗೆ ಎಲ್ಲವನ್ನೂ ಬರೆಯುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ಹಿಡಿದಿಡುವೆನೆಂಬ ಹುಂಬತನ. ಅವರ ಪತ್ರಿಕೆಗಳು ಮತ್ತು ಲೇಖನಗಳನ್ನು ಓದಿ ಅವರನ್ನು ಪೂರಾ ಅರ್ಥ ಮಾಡಿಕೊಂಡಿದ್ದೇವೆ ಎನ್ನುವವರಿಗೆ ಅವರ ಬಗ್ಗೆ ತಿಳಿಯದ ಸಂಗತಿಗಳೂ ಹಲವು ಇವೆ ಅಂತ ಹೇಳಬಹುದು. ಅವರ ಲೇಖನಗಳೆಂದರೆ ಸ್ಫೂರ್ತಿಯ ಚಿಲುಮೆಗಳು. ಖಾಸ್ ಬಾತ್ ಮತ್ತು ಬಾಟಮ್ ಐಟಮ್ ಅಂಕಣಗಳನ್ನು ಓದಲೆಂದೇ ಮುಂದಿನ ಸಂಚಿಕೆಗಾಗಿ ಕಾಯ್ದು ನಿಲ್ಲುತ್ತಿದ್ದ ಅಗಾಧ ಸಂಖ್ಯೆಯ ಓದುಗ ಅಭಿಮಾನಿಗಳು ಅವರಿಗಿದ್ದರು. ಆ ಬಳಗದಲ್ಲಿ ನಾನೂ ಒಬ್ಬಳು. ಬದುಕಿನಲ್ಲಿ ನೊಂದ … Read more

ದಿಲ್ ನೆ ಫಿರ್ ಯಾದ್ ಕಿಯಾ….: ಪಿ.ಎಸ್. ಅಮರದೀಪ್.

ಫೆಬ್ರವರಿ-21, 1998. ಆ ದಿನ ಎಂತದೋ ಬೇಸರ. ಅನಾಹುತ ಮಾಡಿಕೊಳ್ಳುವಂಥ ಯಾವ ಸೀರಿಯಸ್ಸೂ ಇಲ್ಲ. ಆದರೂ ಜಗತ್ತು ತಲೆ ಮೇಲೆ ಬಿದ್ದೋರ ಥರಾ ಶನಿವಾರ ಆಫೀಸ್ ಮುಗಿಸಿಕೊಂಡವನೇ ಬಳ್ಳಾರಿಯ ರಾಯಲ್ ಸರ್ಕಲ್ ದಾಟಿದರೆ ಈಗಿನ ಹಳೇ ಬಸ್ ನಿಲ್ದಾಣದ ತನಕ ಕಾಲೆಳೆದುಕೊಂಡು ಹೊರಟೆ. ನಿಲ್ದಾಣದಿಂದ ಹೊರಬಂದ ಬಸ್ಸಿನ ಬೋರ್ಡ್ ನೋಡಿದೆ. ಮಂತ್ರಾಲಯ ಅಂತಿತ್ತು. ಯಾಕೆ ಹೋಗಬೇಕೆನ್ನಿಸಿತೋ ಏನೋ. ಸೀದಾ ಬಸ್ ಹತ್ತಿ ಕುಳಿತೆ. Actually, ನಾನು ಆ ದಿನ ಹಗರಿಬೊಮ್ಮನಹಳ್ಳಿಗೆ ಹೊರಡಬೇಕಿತ್ತು. ಹತ್ತಿ ಕುಳಿತದ್ದು ಮಾತ್ರ ಮಂತ್ರಾಲಯದ … Read more

ಆಪ್ತ ಬೆಳಗೆರೆ: ರವಿ ಶಿವರಾಯಗೊಳ

ರವಿ ಬೆಳಗೆರೆ ದೈತ್ಯ ಬರಹಗಾರ. ಅಕ್ಷರ ಮಾಂತ್ರಿಕ. ಸಹಸ್ರಾರು ಓದುಗರ ಹುಟ್ಟು ಹಾಕಿದ ಪ್ರತಿಭಾವಂತ ಲೇಖಕ. ಮುಂದೆಂದೂ ಮತ್ತೊಬ್ಬ ರವಿ ಬೆಳಗೆರೆಯನ್ನ ಕಾಣಲಾರೆವು. ಪತ್ರಿಕೋದ್ಯಮದಲ್ಲಿ ಬರವಣಿಗೆಯಲ್ಲಿ ಸ್ವಂತ ಪ್ರತಿಭೆ ಮುಂಖಾಂತರವೆ ಹೆಮ್ಮರವಾಗಿ ಬೆಳೆದು ನಿಂತ ಗಟ್ಟಿಗ ರವಿ ಬಾಸ್. ಕೂತು ಬರೆಯುವ; ಗಂಟೆ ಗಂಟೆಗಟ್ಟಲೆ ಓದುವ ಓದಿದ್ದನ್ನು ಇಷ್ಟವಾದದ್ದನ್ನು ತನ್ನದೇ ಓದುಗರೊಂದಿಗೆ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವದ ವ್ಯಕ್ತಿ. ಮಿತ್ರರನ್ನ ಓದುಗರನ್ನ ಹಿಂಬಾಲಕರ ಸಮ ಸಮಸಂಖ್ಯೆಯಲ್ಲಿ ಶತ್ರುಗಳನ್ನೂ ಹೊಂದಿದ್ದ ರವಿ ಬೆಳಗೆರೆ ಕಡೆಗೂ ಯಾರಿಗೂ ಜಗ್ಗದೆ ಬಗ್ಗದೆ ತನ್ನಿಷ್ಟದಂತೆ … Read more

”ಬೆಳಗೆರೆಯೂ, ಅಜ್ಞಾತ ಓದುಗದೊರೆಯೂ: ಒಂದು ಖಾಸ್ ಬಾತ್!”: ಪ್ರಸಾದ್‌ ಕೆ.

ರವಿಯವರ ಅಕ್ಷರಜಗತ್ತಿನ ಬಗ್ಗೆ ನನಗಾದ ಮೊದಲ ಪರಿಚಯವೆಂದರೆ ‘ಬಾಟಮ್ ಐಟಮ್’ ಸರಣಿ. ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ರವಿ ಬೆಳಗೆರೆ ಆಗಲೇ ಖ್ಯಾತ ಲೇಖಕರಾಗಿದ್ದರು. ಅವರ ಕೃತಿಗಳು ಆವತ್ತಿಗೇನೇ ಬೆಸ್ಟ್ ಸೆಲ್ಲರ್ಸ್. ಅಂದಿನ ನನ್ನ ಸೀಮಿತ ಅರಿವಿನ ಪ್ರಕಾರ ರವಿ ಸಾರಥ್ಯದ ಪತ್ರಿಕೆ ‘ಹಾಯ್ ಬೆಂಗಳೂರು’ ಚೆನ್ನಾಗಿ ಓಡುತ್ತಿತ್ತು. ಇನ್ನು ‘ಕ್ರೈಂ ಡೈರಿ’ ಮತ್ತು ‘ಎಂದೂ ಮರೆಯದ ಹಾಡು’ ಟಿವಿ ಕಾರ್ಯಕ್ರಮಗಳಿಂದ ರವಿಯವರು ರಾಜ್ಯದಾದ್ಯಂತ ಮನೆಮಾತೂ ಆಗಿದ್ದರು. ಹೀಗಿದ್ದರೂ ಇಂಗ್ಲಿಷ್ ನಲ್ಲಿ living under the … Read more

ಮರೆಯಲಾಗದ ಮಾತಿನ ಮಲ್ಲ: ಪರಮೇಶ್ವರಪ್ಪ ಕುದರಿ

“ ರವಿ ಬೆಳಗೆರೆ “ ಹೆಸರೇ ಒಂದು ರೋಮಾಂಚನ ! ಕನ್ನಡ ಪತ್ರಿಕಾರಂಗ ಕಂಡ ಅದ್ಭುತ ಪ್ರತಿಭಾವಂತ ಬರಹಗಾರ ರವಿ ಬೆಳಗೆರೆ. ಅವರ “ ಹಾಯ್ ಬೆಂಗಳೂರು “ ಪತ್ರಿಕೆಯ ಹೆಸರೂ ವಿಶಿಷ್ಟ , ಆ ಪತ್ರಿಕೆಯ ಕಪ್ಪು – ಬಿಳುಪು ರೂಪ ವಿನ್ಯಾಸವೂ ವಿಭಿನ್ನ ! ಪ್ರಾರಂಭದ ದಿನಗಳಲ್ಲಿ ಪತ್ರಿಕೆಯ ರೂಪು – ರೇಷೆಗಳನ್ನು ನೋಡಿದವರು ಆಡಿಕೊಂಡದ್ದೇ ಹೆಚ್ಚು. ಆದರೆ ರವಿ ಸರ್ ತಮ್ಮ ಬರವಣಿಗೆಯ ವಿಶಿಷ್ಟ ಶೈಲಿಯಿಂದ ನಾಡಿನ ಮನೆ ಮಾತಾದರು. ಮೊದ ಮೊದಲು … Read more

ರವಿ ಕಾಣದ್ದನ್ನ “ರವಿ” ಕಂಡ’: ನಂದಾದೀಪ, ಮಂಡ್ಯ

ಓದೊ ಹಸಿವು, ಬರೆಯೊ ದರ್ದು, ತಲೆಗೆ ಬಂದಿರೋದನ್ನ ಬರ್ದು ಗೀಚಿಬಿಡಬೇಕು ಅನ್ನೊ ಉನ್ಮಾದ ಬರೋದು ರವಿಬೆಳೆಗೆರೆಯವರ ಪುಸ್ತಕ ಓದಿದಾಗಲೆ..! ಅದೇನ್ ಬರಿತಾನ್ರಿ..! ಮೆದುಳಿಗೆ ಕೈ ಹಾಕಿ ಮನಸಿನೊಂದಿಗೆ ಮಾತನಾಡಿ ಹೃದಯಗೂಡಲ್ಲಿ ಬೆಚ್ಚಗೆ ಕಥೆಗಳ ಇಳಿಸಿಬಿಡ್ತಾನೆ..! ಹೀಗೆ ಅವರ ಪುಸ್ತಕ ಓದಿದವರು ಮಾತಾಡೋದು..! ಯಾವುದಕ್ಕೂ ಮಿತಿ ಇಲ್ಲ.. ಪ್ರೀತಿ, ಪ್ರೇಮ, ಕಾಮ, ಚರಿತ್ರೆ, ರಕ್ತ, ಕ್ರೈಂ, ಮಾಟಮಂತ್ರ, ಇತಿಹಾಸ, ಬದುಕಿನ ಚಿತ್ರಣ, ರಾಜಕೀಯ ಯಾವುದಕ್ಕೂ ಯಾವುದೇ ಮುಲಾಜಿಲ್ಲದೆ ಬರೆದು ಓದುವ ಗೀಳಿಗೆ ಸಲೀಸಾಗಿ ಹಚ್ಚಿಬಿಡುವ ಅಕ್ಷರ ಲೋಕದ ಮಾಂತ್ರಿಕ … Read more

ರವಿಯನ್ನು ಎಲ್ಲರು ಇಷ್ಟಪಡುತ್ತಾರೆ ಅನ್ನುವ ಸಂಭ್ರಮ: ಗಿರಿಜಾ ಜ್ಞಾನಸುಂದರ್

ರವಿ ಬೆಳಗೆರೆ – ಈ ಹೆಸರಿನಲ್ಲಿ ಒಂದು ಶಕ್ತಿ, ಒಂದು ಆತ್ಮೀಯತೆ, ಒಂದು ಹೆಸರಿಸಲಾಗದ ಭಾವನೆ, ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸಂಬಂಧ. ಸುಮಾರು ೨೮-೩೦ ವರ್ಷಗಳ ಹಿಂದೆ ಕರ್ಮವೀರ ಪತ್ರಿಕೆಯನ್ನು ಓದುತ್ತಿದ್ದ ನನಗೆ ರವಿ ಅವರ ಪರಿಚಯ ಅವರ ಲೇಖನಗಳ ಮೂಲಕ ಆಯಿತು. ಹದಿವಯಸ್ಸಿನಲ್ಲಿ ಮನಸ್ಸಿನ ತೊಳಲಾಟ, ಭಾವನೆಗಳ ಏರು ಪೆರು, ಸಮಾಜದಲ್ಲಿ ವ್ಯಕ್ತಿತ್ವದ ಮೌಲ್ಯ, ಹೀಗೆ ಅನೇಕ ವಿಷಯಗಳಲ್ಲಿನ ಗೊಂದಲಗಳನ್ನು ನನಗೆ ಗೊತ್ತಿಲ್ಲದಂತೆ ತಿಳಿಹೇಳುತ್ತಿದ್ದ ಲೇಖನಗಳನ್ನು ರವಿ ಬರೆಯುತ್ತಿದ್ದರು. ತೃತೀಯ ಲಿಂಗಿಗಳ ಬಗ್ಗೆ ಅವರು ಬರೆದ … Read more

ನಮ್ಮ ಮನೆಯಲ್ಲಿ ರವೀ ಮೂಡಿದ್ದಾನೆ!: ದೀಕ್ಷಿತ್ ಕುಮಾರ್ ಕೆ. ಎಂ

ಯಾಕೋ ಗೊತ್ತಿಲ್ಲ ಇಂದಿಗೂ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ನಮ್ಮ ಮನೆಯ ಸದಸ್ಯರಲ್ಲಿ ಯಾರೋ ಒಬ್ಬರು ನನ್ನನ್ನು ಅಗಲಿ ಹೋಗಿದ್ದರೂ ಇಷ್ಟು ಹೊತ್ತಿಗೆ ಚೇತರಿಸಿಕೊಂಡು ಸದೃಢನಾಗುತ್ತಿದ್ದೆನೇನೊ? ಆದರೆ ನಾನು ಕಳೆದುಕೊಂಡದ್ದು ಒಬ್ಬ ದೈತ್ಯ ಪ್ರತಿಭೆಯನ್ನು, ನಾ ಲೇಖನಿ ಹಿಡಿದು ಬರೆಯಲು ಕಾರಣರಾದವರನ್ನು, ನನ್ನ ಪ್ರಬುದ್ಧ ಮಾತುಗಳ ಹಿಂದಿನ ಗುರುವನ್ನು ಹಾಗೂ ನನ್ನ ಕಿಂಚಿತ್ತು ಸಾಧನೆಯ ಹಿಂದಿನ ಸ್ಫೂರ್ತಿದಾಯಕರನ್ನು! ಅವರು ಕಾಲವಾದ ನಂತರ ಅವರನ್ನು ಕುರಿತು ಪುಂಕಾನುಪುಂಕ ಬರೆಯಲು ನಿರ್ಧರಿಸಿ ಹಠಕ್ಕೆ ಬಿದ್ದು ಟೇಬಲ್ ನ ಮೇಲೆ ಹಾಳೆ ಹರವಿಕೊಂಡು ಕುಳಿತರೂ … Read more

ಹೇಳಿ ಹೋಗು ಕಾರಣ: ಭಾರ್ಗವಿ ಜೋಶಿ

ನಾ ಓದಿದ್ದ ಕೆಲವೇ ಕೆಲವು ಕಾದಂಬರಿಗಳಲ್ಲಿ ತೀರಾ ಕಾಡಿ, ಅಳಿಸಿದ ಕಾದಂಬರಿ ಇದು. ಹಿಂದೆ ಒಮ್ಮೆ ಆವರಣ ಓದಿದಾಗ ವಿಚಿತ್ರ ಆವೇಶ, ಉದ್ವೇಗ. ಆದರೆ ಇದರ ಭಾವವೇ ಬೇರೆ. ಪ್ರೀತಿ ಪ್ರೀತಿ. ಹಿಮೂನ ಪ್ರೀತಿ ಉಕ್ಕಿ ಹರಿಯುತ್ತದೆ. ಹಿಮೂ ಎಂಬ ಪ್ರಾರ್ಥನಾ ಳ ದೇವರು, ತಂದೆಯಂತೆ ಅವಳಿಗೆ ಹೊಸ ಜೀವನ ಕೊಟ್ಟು ಶಿವಮೊಗ್ಗ ಕೇ ಕರೆದು ತರುತ್ತಾನೆ. ಸೋದರನಂತೆ ಯಾವತ್ತು ಅವಳ ಆರೈಕೆ ಮಾಡುತ್ತಾನೆ. ಗೆಳೆಯನಂತೆ ಅವಳ ಕನಸಿಗೆ ಬಣ್ಣ ತುಂಬುತ್ತಾನೆ, ಗುರುವಿನಂತೆ ದಾರಿ ತೋರುತ್ತಾನೆ. ಪ್ರಿಯಕರನಂತೆ … Read more

ರವಿಬೆಳಗೆರೆಯವರನ್ನು ನೆಗ್ಲೆಕ್ಟ್ ಮಾಡಲಿಕ್ಕಂತೂ ಸಾಧ್ಯವಿಲ್ಲ: ನಟರಾಜು ಮೈದನಹಳ್ಳಿ

‘ರವಿ ಬೆಳಗೆರೆ’ ಈ ಹೆಸರು ಗೊತ್ತಿರದ ಕನ್ನಡಿಗನೇ ಇಲ್ಲ ಎನ್ನಬಹುದು. ಬಿಸಿಲು ನಾಡಿನ ಬಳ್ಳಾರಿಯಲ್ಲಿ ದಿನಾಂಕ: 15-03-1958 ರಂದು ಪಾರ್ವತಮ್ಮ ಟೀಚರ್ ಮಗನಾಗಿ ಹುಟ್ಟಿ, ಕಡು ಕಷ್ಟಗಳನ್ನು ಅನುಭವಿಸಿ, ಮುನ್ನೂರು ಚಿಲ್ಲರೆ ರೂ.ಗಳೊಂದಿಗೆ ಬೆಂಗಳೂರು ಎಂಬ ಮಾಯಾನಗರಿಗೆ ಬಂದು, ಅನೇಕ ಬವಣೆಗಳನ್ನು ಅನುಭವಿಸಿ, ಪತ್ರಿಕೋದ್ಯಮದ ದೈತ್ಯನಾಗಿ, ಅಕ್ಷರ ಮಾಂತ್ರಿಕನಾಗಿ ಬೆಳೆದಿದ್ದು ಒಂದು ಯಶೋಗಾಥೆ. ರವಿ ಬೆಳಗೆರೆ ಒಬ್ಬ ಬಹುಮುಖ ಪ್ರತಿಭೆ. ಇವರು ಪತ್ರಕರ್ತ, ಸಂಪಾದಕ, ಕತೆಗಾರ, ಕಾದಂಬರಿಕಾರ, ಸಿನಿಮಾ ನಟ, ಟಿವಿ ನಿರೂಪಕ ಇತ್ಯಾದಿ. ಪತ್ರಕರ್ತ ಆಗುವುದಕ್ಕೆ … Read more

ರವಿ ಬೆಳಗೆರೆಯವರ ನೆನಪಿನ ವಿಶೇಷ ಸಂಚಿಕೆಗಾಗಿ ಲೇಖನಗಳ ಆಹ್ವಾನ

ಸಹೃದಯಿಗಳೇ, ಮಾರ್ಚ್ 15 ಖ್ಯಾತ ಬರಹಗಾರರಾದ ರವಿ ಬೆಳಗೆರೆಯವರು ಹುಟ್ಟಿದ ದಿನ. ಆ ದಿನ ಅವರ ನೆನಪಿನ ವಿಶೇಷ ಸಂಚಿಕೆಯನ್ನು ಪಂಜು ತರಲು ಬಯಸುತ್ತದೆ. ಅವರ ಕುರಿತ ಅವರ ಪುಸ್ತಕಗಳ ಕುರಿತ ನಿಮ್ಮ ಲೇಖನಗಳನ್ನು ಮಾರ್ಚ್ 14, 2021 ರ ಒಳಗೆ ನಮಗೆ ಕಳುಹಿಸಿ. ನಿಯಮಗಳು: ಲೇಖನಗಳು ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ಬರಹಗಳು ಯೂನಿಕೋಡ್ ನಲ್ಲಿದ್ದರೆ ಒಳ್ಳೆಯದು. ಪಿಡಿಎಫ್ ನಲ್ಲಿರುವ ಬರಹಗಳನ್ನು … Read more

ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ … Read more

ಮತ್ತೊಂದು ಮಹಾಭಾರತ (ಭಾಗ ೧): ಡಾ.ಸಿ.ಎಂ.ಗೋವಿಂದರೆಡ್ಡಿ

ಅರಿಕೆ ಹಸ್ತಿನಾವತಿ ಶಂತನು ಸತ್ಯವತಿಯರ ಪ್ರೇಮ ಪ್ರಸಂಗ -ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಕುರುಜಾಂಗಣವೆಂಬ ದೇಶವಿದ್ದು ಸಹಜ ಸೊಬಗಿನಿಂದ ಮೆರೆಯುತ್ತ ಸಿರಿಗೆ ತವರುಮನೆಯಾಗಿತ್ತು.ಈ ದೇಶಕ್ಕೆ ಹಸ್ತಿನಾಪುರವೆಂಬುದು ರಾಜಧಾನಿ.ಇಲ್ಲಿ ಚಂದ್ರವಂಶದ ಅರಸ ದುಷ್ಯಂತ ಹಾಗೂ ಶಕುಂತಲೆಯರ ಮಗನಾದ ಭರತನ ಪರಂಪರೆಯಲ್ಲಿ ಜನಿಸಿದಂತಹ ಪ್ರದೀಪನ ಮಗನಾದ ಶಂತನು ಮಹಾರಾಜನು ರಾಜ್ಯವಾಳುತ್ತಿದ್ದನು. ಇವನು ಒಮ್ಮೆ ಬೇಟೆಯಾಡಲಿಕ್ಕೆಂದು ಕಾಡಿಗೆ ಹೊರಟವನು ಆಯಾಸ ಪರಿಹಾರಾರ್ಥವಾಗಿ ಗಂಗಾನದಿಯ ತೀರದಲ್ಲಿ ವಿಶ್ರಮಿಸುತ್ತಿರುವಾಗ ಪರಮ ಸುಂದರಿಯಾದ ಗಂಗಾದೇವಿಯೆಂಬ ಹೆಣ್ಣನ್ನು ಕಂಡು ಅವಳ ರೂಪಸಂಪತ್ತಿಗೆ ಮರುಳಾದ- -ಡಾ.ಸಿ.ಎಂ.ಗೋವಿಂದರೆಡ್ಡಿ ಮುಂದುವರೆಯುವುದು.. … Read more

ಪಂಜು ಹುಟ್ಟುಹಬ್ಬದ ಫೇಸ್ ಬುಕ್‌ ಚಾಲೆಂಜ್

ಜನವರಿ ೨೧ ಪಂಜು ಮ್ಯಾಗಜಿನ್‌ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್‌ ಬುಕ್‌ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ಬಳಸಿ ಅಪ್‌ ಲೋಡ್‌ ಮಾಡಿಈ ಚಾಲೆಂಜ್‌ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್‌ ಟ್ಯಾಗ್‌ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್‌ ಮಾಡಿ ನಾಮಿನೇಟ್‌ ಮಾಡಿ.‌ಕನ್ನಡದ ಬರಹಗಳು … Read more

ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ

ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ … Read more

ಪ್ರಾಣಿ ಪಕ್ಷಿಗಳಲ್ಲಿ ಸಂವಹನ: ಡಾ. ಯುವರಾಜ ಹೆಗಡೆ

ಆಧುನೀಕರಣದ ಕಪಿಮುಷ್ಠಿಗೆ ಸಿಕ್ಕು ನಲುಗಿದ ಪಶ್ಚಿಮ ಘಟ್ಟದ ಹೆಬ್ಬಾಗಿಲಿಗೆ ರಸ್ತೆ ಅಗಲೀಕರಣವೆಂಬ ನೆಪವೊಡ್ಡಿ ಟಿಂಬರ್ ಲಾಬಿಯವರು ಲಗ್ಗೆ ಇಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿಯ ಬೃಹದಾಕಾರದ ಮರಗಳು ನೆಲಕ್ಕುರುಳುತ್ತಾ ಇರುವಾಗ ಒಂದೂವರೆ ಶತಮಾನದಷ್ಟು ಹಳೆಯ ಮಾಮರದ ಸರದಿ ಬಂದೇ ಬಿಟ್ಟಿತು. ಮರದ ಬುಡಕ್ಕೆ ಮರ ಕಡಿಯುವ ಯಂತ್ರವನನ್ನಿಟ್ಟು ಗಿರ ಗಿರನೆ ಶಬ್ಧ ಮಾಡುತ್ತಿದ್ದಂತೆ ಮರದ ಪೊಟರೆಯಿಂದ ಹೊರಬಂದು ಗಿಳಿಗಳೆರಡು ಕಿಟಾರನೆ ಕೂಗುತ್ತಾ ಸಂಕಟಪಡುತ್ತಿದ್ದವು. ಕೆಲವೇ ನಿಮಿಷದಲ್ಲಿ ಮಾವಿನ ಮರ ದರೆಗುರುಳುತ್ತಿದ್ದಂತೆ ಪೊಟರೆಯಲ್ಲಿದ್ದ ಇನ್ನು ಪುಕ್ಕವೂ ಹುಟ್ಟದ 3 ಗಿಣಿ ಮರಿಗಳು … Read more

ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದರ ಜನ್ಮದಿನ: ಡಾ. ಅವರೆಕಾಡು ವಿಜಯ ಕುಮಾರ್

ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾ ನಗರದಲ್ಲಿ ಜನಿಸಿದರು. ನರೇಂದ್ರನಾಥ ದತ್ತ ಎಂಬುದು ಇವರ ಹುಟ್ಟಿದ ಹೆಸರು. ಕಾಲಕ್ರಮೇಣ ಅದು ಬದಲಾಗಿ ವಿವೇಕನಂದವಾಯಿತು. ತಂದೆ ವಿಶ್ವನಾಥ ದತ್ತ ಇವರು ಕಲ್ಕತ್ತದ ಉಚ್ಚನ್ಯಾಯಾಲಯದಲ್ಲಿ ಅಟಾರ್ನಿಯಾಗಿ ಸೇವೆಸಲ್ಲಿಸುತ್ತಿದ್ದರು. ತಾಯಿ ಭುವನೇಶ್ವರಿ ದೇವಿ. ಅಜ್ಜ ದುರ್ಗಾ ಚರಣ್ ದತ್ತ, ಇವರು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಯ ಸಾಹಿತಿಯಾಗಿದ್ದರು. ತನ್ನ 25ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಕೊಲ್ಕತ್ತ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಶಿಕ್ಷಣವನ್ನು ಪಡೆದರು. 1884 … Read more

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು … Read more