ನಾಡ ಹಬ್ಬ ಉಡುಪಿ ಪರ್ಯಾಯ: ವೆಂಕಟೇಶ್ ಪ್ರಸಾದ್

ದೇವಾಲಯಗಳ ನಾಡು , ಅನ್ನಬ್ರಹ್ಮನ ಬೀಡು ಉಡುಪಿಯಲ್ಲಿ ದೀಪಾವಳಿ ತಿ೦ಗಳ ನ೦ತರ ಶ್ರೀ ಕೃಷ್ಣನಿಗೆ ನಿತ್ಯ ಉತ್ಸವಗಳ ಸ೦ಭ್ರಮ.  ಶ್ರೀ ಕೃಷ್ಣ ಮುಖ್ಯಪ್ರಾಣರ ಉತ್ಸವ ಮೂರ್ತಿಗಳು ಅಲ೦ಕೃತ ತೇರುಗಳಲ್ಲಿ ವಿರಾಜಮಾನರಾದರೆ ಭಜಕರು ರಥಬೀದಿಯ ಸುತ್ತ ತೇರನ್ನೆಳೆದು ಕೃತಾರ್ಥರಾಗುತ್ತಾರೆ. ಈ ಉತ್ಸವಗಳಲ್ಲಿ ಮುಖ್ಯವಾದುದು ಜನವರಿ ತಿ೦ಗಳಲ್ಲಿ ಬರುವ ಮಕರಸ೦ಕ್ರಾ೦ತಿ ಉತ್ಸವ ಅ೦ದು ಏಕ ಕಾಲಕ್ಕೆ ಮೂರು ತೇರುಗಳನ್ನೆಳೆದು ಉಡುಪಿಗೆ ಉಡುಪಿಯೇ ಸ೦ಭ್ರಮಿಸುತ್ತದೆ. ಮರುದಿನ ಹಗಲು ಹೊತ್ತಿನಲ್ಲಿ ನಡೆಯುವ ಚೂರ್ಣೋತ್ಸವ ಅಥವಾ ಸುವರ್ಣೊತ್ಸವಕ್ಕೂ ಅಷ್ಟೇ ಸ೦ಖ್ಯೆ ಯಲ್ಲಿ ಜನ ಸೇರುತ್ತಾರೆ. … Read more

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ: ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ

          ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ? ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು … Read more

ವಿಸ್ಮಯಭರಿತ ವಿರಾಟ ವಿಶ್ವ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಸಿನಿಮಾ ಎಂದಾಗ ನೆನಪಾಯ್ತು. ನೀವು ‘ಅನಿಮಲ್ಸ್ ಆರ್ ಬ್ಯೂಟಿಫ಼ುಲ್ ಪೀಪಲ್’ ಅನ್ನೋ ಚಿತ್ರ ನೋಡಿದ್ದೀರಾ? ನೋಡಿಲ್ಲದಿದ್ದರೆ ಖಂಡಿತಾ ನೋಡಿ. ಎಲ್ಲರೂ ನೋಡಲೇಬೇಕಾದ ಚಿತ್ರವದು. ಆ ಚಿತ್ರದಲ್ಲಿ, ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ ಹನಿ ಗೈಡ್ ಹಕ್ಕಿ ಮತ್ತು ಹನಿ ಬ್ಯಾಡ್ಜರ್ ಅಥವಾ ರಾಟೆಲ್ ಎನ್ನುವ ಪ್ರಾಣಿಯ ಜೊತೆಗಿನ ಸಿಂಬಯೋಸಿಸ್ಸಿನ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಹನಿ ಗೈಡ್ ಹಕ್ಕಿಗೆ ಜೇನುತುಪ್ಪ ಮತ್ತು ರಸವತ್ತಾದ ಜೇನುಮೇಣವೆಂದರೆ ಎಲ್ಲಿಲ್ಲದ ಆಸೆ. ಜೇನು ಹುಳುಗಳು ರಹಸ್ಯವಾಗಿ ಸಂದಿಗೊಂದಿಗಳಲ್ಲಿ ಕಟ್ಟಿರುವ ಜೇನುಗೂಡುಗಳನ್ನು … Read more

ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ … Read more

ಬಾಲ ಕಾರ್ಮಿಕ: ಫ್ಲಾಪೀಬಾಯ್

ಅಣ್ಣಾ, ಅಣ್ಣಾ ಏನಾದ್ರೂ ಕೊಡಣ್ಣಾ.. ಅಂತ ದೈನ್ಯತೆಯ ದ್ವನಿಯೊಂದು ಅವನ ಹಿಂದಿನಿಂದ ಕೇಳಿ ಬಂತು. ಹಿಂತಿರುಗಿ ನೋಡಿದಾಗ ಕಾಣಿಸಿದ್ದು, ಎಣ್ಣೆಯೇ ಕಾಣದಿದ್ದ ಕೆದರಿದ ಕೂದಲು, ಕಳೆಗುಂದಿದ್ದ ಬೆಂಗಳೂರಿನ ಡಾಂಬರು ರಸ್ತೆಯಂತಾಗಿದ್ದ ಕಣ್ಣು, ಹೊರಗೆ ಮಾಸಿದ ಹರಕಲು ಬಟೆ, ಬಟ್ಟೆಯೊಳಗೆ ಹೊರಗಿಂದಲೇ ಗೋಚರಿಸುವ ಹಸಿದ ಹೊಟ್ಟೆ. ಆ ಹೊಟ್ಟೆಯ ಒಡೆಯ ಸುಮಾರು ೧೦-೧೧ ಪ್ರಾಯದ ಒಬ್ಬ ಹುಡುಗ. ಅವನನ್ನು ನೋಡುತ್ತಲೇ ಈತ ತನ್ನ ಫ್ಲಾಶ್‌ಬ್ಯಾಕ್‌ಗೆ ಜಾರಿದ..! ಬಹಳ ವರ್ಷಗಳ ಹಿಂದೆ ಈತ ಕೊಳ್ಳೆಗಾಲದಿಂದ ಬೆಂಗಳೂರಿಗೆ ಬಂದಾಗ ಈತನಿಗೂ ಹತ್ತು … Read more

ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡು: ಮಂಜು ಅರ್ಕಾವತಿ

            ಜಾದವ್ ಪಯೆಂಗ್ ಒಂಟಿಯಾಗಿ ಬೆಳೆಸಿದ ೧೩೬೦ ಎಕೆರೆ ಕಾಡುಸುಮಾರು ಸಲ ನಾವೇ ಅಂದುಕೊಳ್ತಾ ಇರ್‍ತೀವಿ ನಾನು ಒಬ್ನೆ / ಒಬ್ಳೆ ನಾನೇನು ಮಾಡೋಕು ಆಗಲ್ಲ ಅಂತ. ಆದ್ರೆ ದೊಡ್ಡ ಪ್ರವಾಹ ಶುರುವಾಗೋದು ಮೊದಲ ಹನಿಯಿಂದಲೇ, ದೂರದ ಪ್ರಯಾಣ ಶುರುವಾಗೋದು ಮೊದಲ ಹೆಜ್ಜೆಯಿಂದಲೇ, ಹೀಗೆ ದೊಡ್ಡ, ದೊಡ್ಡದು ಅಂತ ನಾವೇ ಏನೆ ಅಂದು ಕೊಂಡ್ರು ಅದಕ್ಕೆ ಮೂಲ ಒಂದೇ ಒಂದು ಎಂಬುದೇ ಆಗಿರುತ್ತೆ. ಹೀಗೆ ಎಲೆಮರೆಯ ಕಾಯಿಗಳಂತೆ ನಮ್ಮ ನಡುವೆ … Read more

ವಾಯೇಜರ್ ಗಗನ ನೌಕೆಗಳು – ೩೬ ವರ್ಷಗಳ ಕಾಲ ೧೯೦೦ ಕೋಟಿ ಕಿ.ಮೀ ದೂರ ಪಯಣ: ಜೈಕುಮಾರ್.ಹೆಚ್.ಎಸ್.

ವಾಯೇಜರ್ ಗಗನನೌಕೆಗಳ ಪಯಣ: ೧೯೭೭ರಲ್ಲಿ ಅಮೇರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ನಾಸಾ) ’ವಾಯೇಜರ್ ೧’ ಮತ್ತು ಅದರ ಅವಳಿ ಗಗನನೌಕೆ ’ವಾಯೇಜರ್ ೨’ ಹೆಸರಿನ ಎರಡು ಗಗನನೌಕೆಗಳನ್ನು ೧೬ ದಿನಗಳ ಅಂತರದಲ್ಲಿ ಗಗನಕ್ಕೆ ಹಾರಿಬಿಟ್ಟಿತು. ಇವೆರಡೂ ಇನ್ನೂ ತಮ್ಮ ಪಯಣವನ್ನು ಮುಂದುವರೆಸುತ್ತಾ ಸೌರವ್ಯೂಹದಾಚೆಗಿನ ಮಾಹಿತಿಯನ್ನು ನಮಗೆ ರವಾನಿಸುತ್ತಲೇ ಇವೆ. ಇವೆರಡೂ ಗಗನನೌಕೆಗಳು ಮೊದಲಿಗೆ ಗುರು ಮತ್ತು ಶನಿ ಗ್ರಹವನ್ನು ಹಾದು ಹೋಗಿ ನಂತರದಲ್ಲಿ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ಹಾದು ಮುಂದೆ ಹೋಗಿವೆ. ಇಲ್ಲಿಂದಾಚೆಗೆ ಅಂತರನಕ್ಷತ್ರ ಪ್ರದೇಶವಿದೆ. … Read more

ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ … Read more

ಎರಡು ಕಿರು ಲೇಖನಗಳು: ಹೆಚ್.ಕೆ. ಶರತ್, ಸಂದೇಶ್ ಎಲ್. ಎಂ.

ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳು? ಮಡುಗಟ್ಟಿದ ಮೌನ. ಮಾತಿನ ಮನೆಯಲ್ಲಿ ಸೂತಕ. ಸಂತಸ ಹೊತ್ತು ಮೆರೆಯುತ್ತಿದ್ದ ಮನಸ್ಸು ನೀರವತೆಯ ದಡದಲ್ಲಿ ನಿಸ್ತೇಜವಾಗಿ ಕೂತಿದೆ. ಅಕಾರಣವಾಗಿ ಬದುಕು ಬೇಸರವೆನಿಸಿದೆ. ಎಲ್ಲದಕ್ಕೂ ಕಾರಣ ಹುಡುಕುವ ಬುದ್ಧಿಗೆ ಸವಾಲೊಡ್ಡುವ ಅಕಾರಣಗಳ ನಡುವಲ್ಲಿ ಬದುಕಿನ ಬಹುದೊಡ್ಡ ಸಡಗರವಿದೆ. ಹಾದಿ ಬದಿಯಲ್ಲಿ ಕಣ್ಣಿಗೆ ಬಿದ್ದ ಅವಳನ್ನು ಆವಾಹಿಸಿಕೊಳ್ಳುವುದರಲ್ಲಿ ಇರುವುದು ಕೇವಲ ಅಕಾರಣ. ಎಲ್ಲವನ್ನೂ ಲೆಕ್ಕಾಚಾರದ ತಕ್ಕಡಿಯೊಳಗೆ ತೂಗಲು ಸಾಧ್ಯವಾದರೆ ಬದುಕು ಸಿದ್ಧ ಮಾದರಿಯೊಳಗೆ ಸಮಾಧಿಯಾದಂತಲ್ಲವೇ? ತಿಕ್ಕಲುತನ ಮೈಗಂಟಿಸಿಕೊಳ್ಳದೇ ಹೋದರೆ ಮನಸು ಹಗುರಾಗಿಸಿಕೊಳ್ಳುವುದು ಹೇಗೆ? ಗಾಂಭೀರ್ಯದ … Read more

ನಾನೇಕೆ ಬರೆಯುವುದಿಲ್ಲ?: ಎಂ. ಎಸ್. ನಾರಾಯಣ

‘ನಾನೇಕೆ ಬರೆಯುವುದಿಲ್ಲ’ ಎಂಬ ಪ್ರಶ್ನೆ ಈ ಹಿಂದೆಯೂ ಕೆಲವೊಮ್ಮೆ ನನ್ನನ್ನು ಕಾಡಿರುವುದು ನಿಜ. ಹೌದು, ಎಲ್ಲರೂ ಬರೆಯಲೇಬೇಕೆಂಬ ನಿಯಮವೇನೂ ಇಲ್ಲ. ಅಸಲು, ಕೆಲವರು ಬರೆಯದೇ ಇರುವುದೇ ಕ್ಷೇಮ. ಆದರೆ ಒಂದು ಮಟ್ಟಿಗೆ ಓದಿಕೊಂಡಿರುವ ನನ್ನಲ್ಲಿ ಬರೆಯಬೇಕೆಂಬ ಕಾಂಕ್ಷೆಗೇನೂ ಕೊರತೆಯಿಲ್ಲ. ಸಮಸ್ಯೆ ಏನೆಂದರೆ, ನನ್ನ ತಿಳುವಳಿಕೆಯಂತೆ ನನಗೆ ಸುಮಾರಾಗಿ ಬರುವ ಇಂಗ್ಲೀಷಿನಷ್ಟೂ ಚೆನ್ನಾಗಿ ಕನ್ನಡ ಬರುವುದಿಲ್ಲ. ಜೊತೆಗೆ ಗಣಕಯಂತ್ರದಲ್ಲಿ ಕನ್ನಡ ಬರೆಯುವ ಕೌಶಲ್ಯವೂ ಕಡಿಮೆಯೇ. ಇಷ್ಟೆಲ್ಲಾ ಇತಿಮಿತಿಗಳಿರುವಾಗ, ನಾನು ಬರೆದು ಏನಾಗಬೇಕು? ನಾನು ಬರೆಯದೇ ಇದ್ದಲ್ಲಿ ಸಮಸ್ತ ಕನ್ನಡ … Read more

ನಂಬಿಕೆ, ಮೂಢನಂಬಿಕೆ: ಅಖಿಲೇಶ್ ಚಿಪ್ಪಳಿ ಅಂಕಣ

ಹೊಸದಾಗಿ ಮದುವೆಯಾಗಿದ್ದ ದಂಪತಿಗಳು ಸಿನಿಮಾ ನೋಡಲು ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಹೆಂಡತಿಗೆ ವಿಪರೀತ ತಲೆನೋವು ಶುರುವಾಯಿತು. ಗಂಡನಿಗೆ ಏನು ಮಾಡುವುದು ತಲೆ ಓಡಲಿಲ್ಲ. ಅಷ್ಟರಲ್ಲಿ ಪರಿಚಿತ ಡಾಕ್ಟರು ಅದೇ ಸಿನೆಮಾ ನೋಡಲು ಬಂದ್ದಿದ್ದರು. ಗಂಡ ಹೋಗಿ ಸಂಕೋಚದಿಂದ ಡಾಕ್ಟರಲ್ಲಿ ಅವಲತ್ತುಕೊಂಡ. ಡಾಕ್ಟರ್ ಬುದ್ಧಿವಂತನಿದ್ದ, ಥಿಯೇಟರ್‌ನ ಒಳಗಡೆ ಕತ್ತಲಿತ್ತು, ಗಂಡನಿಗೆ ಗೊತ್ತಾಗದ ಹಾಗೆ ತನ್ನದೆ ಕೋಟಿನ ಒಂದು ಗುಂಡಿಯನ್ನು ಕಿತ್ತು, ಈ ಮಾತ್ರೆಯನ್ನು ಬಾಯಲಿಟ್ಟುಕೊಳ್ಳಲು ಸಲಹೆ ಮಾಡಿದರು. ಹತ್ತು ನಿಮಿಷದಲ್ಲಿ ತಲೆನೋವು ಮಾಯ. ಗಂಡ-ಹೆಂಡತಿ ಸಿನಿಮಾವನ್ನು ಎಂಜಾಯ್ ಮಾಡಿದರು … Read more

ಪಂಜು ಪ್ರವಾಸ ಕಥನ ಸ್ಪರ್ಧೆ

  ಪಂಜು ಅಂತರ್ಜಾಲ ವಾರಪತ್ರಿಕೆ (https://www.panjumagazine.com/) ಮತ್ತು ಪಂಜು ಪ್ರಕಾಶನದ ವತಿಯಿಂದ ಪಂಜು ಪ್ರವಾಸ ಕಥನ ಸ್ಪರ್ಧೆಗೆ ನಿಮ್ಮ ಪ್ರವಾಸ ಕಥನಗಳನ್ನು ಆಹ್ವಾನಿಸಲಾಗಿದೆ. ಲೇಖನಗಳು ಸ್ವಂತ ರಚನೆಗಳಾಗಿರಬೇಕು. ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನಗಳನ್ನು ಕಳುಹಿಸಬಹುದು (ಗರಿಷ್ಠ ಮಿತಿ 3 ಲೇಖನಗಳು). ಪ್ರತಿ ಲೇಖನಗಳು ಕನಿಷ್ಠ 3000 ಪದಗಳಿಂದ ಕೂಡಿರಬೇಕು (ಗರಿಷ್ಠ ಮಿತಿ 5 ಸಾವಿರ ಪದಗಳು). ಲೇಖನಗಳಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರವಾಸಗಳ ವೈವಿಧ್ಯತೆ ಇರಲಿ. ಸಾಧ್ಯವಾದರೆ ಲೇಖನಗಳ ಜೊತೆಗೆ ಲೇಖನಕ್ಕೆ ಹೊಂದುವ ನೀವೇ ತೆಗೆದಿರುವ … Read more

ಕನ್ನಡ ಪ್ರೇಮಿ: ಮಹಾಂತೇಶ್ ಯರಗಟ್ಟಿ

ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ವೊಲಿಸ್ಯಾರೆದ್ರೊವೆ|| ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ನ ಮನಸನ್ ನೀ ಕಾಣೆ|| ಈ ಮೇಲಿನ ಸಾಲುಗಳನ್ನು ಓದಿದರೆ ತುಂಬಾ ರೋಮಾಂಚನ ಅನಿಸುತ್ತೆ ಅಲ್ವಾ..? ನಮ್ಮ ನಾಡಿನ ಗಡಿ ಜಿಲ್ಲೆಯಾದ ಚಾಮರಾಜನಗರದ, ಗುಂಡ್ಲುಪೇಟೆಯ ಹಿರಿಯ ಸಾಹಿತಿಗಳಾದ ಶ್ರೀ ಜಿ.ಪಿ.ರಾಜರತ್ನಂರವರ ಈ ಸಾಲುಗಳು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನನ್ನು ಬಡಿದ್ದೆಬ್ಬಿಸುತ್ತವೆ. ಅವರ ಅಪ್ಪಟ ಕನ್ನಡಾಭಿಮಾನವನ್ನು ಬಿಂಭಿಸುವ, ಈ ಸಾಲುಗಳಂತೆ ಇದೇ ಗುಂಡ್ಲುಪೇಟೆಯ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ” ದಲ್ಲಿ ಕಂಡಕ್ಟರಾಗಿ ಕೆಸಲನಿರ್ವಹಿಸುತ್ತಿರುವ, ಶ್ರೀ ನಟರಾಜ … Read more

ನ್ಯಾನೋ ಕತೆಗಳು: ಸುನೀತಾ ಮಂಜುನಾಥ್, ನವೀನ್ ಮಧುಗಿರಿ

ಒಂದಷ್ಟು ವಾಸ್ತವಗಳು ……….!!! ಬೆಳಗು ಬೈಗಿನ ಅನ್ನಕ್ಕೆ ಆ ಹೋಟಲಲ್ಲಿ ದುಡಿವ ಅವನು ಚೆಂದದ ಹುಡುಗ ನನ್ನ ಮಗಳ ವಯಸ್ಸೇ ಏನೋ … ಒಂದಷ್ಟು ನೀರೆದು ಹೊಸ ಬಟ್ಟೆ ಹಾಕಿದರೆ ನನ್ನ ಮಕ್ಕಳಿಗಿಂತ ಚೆಂದವೇನೋ … ಒಂದಷ್ಟು ಓದು ನೀಡಿದರೆ ನನ್ನ ಮಕ್ಕಳಿಗಿಂತ ಎತ್ತರಕ್ಕೇರುವನೇನೊ …. 'ಶಾಲೆಗೆ ಹೋಗುವೆಯೇನೋ ಪುಟ್ಟ'ಅಂದೆ 'ಈಗ ಹೋಗಿಬಂದೆ ಅವ್ವ, ಟೀ ಕೊಟ್ಟು ಬಂದೆ' ಅಂದ …. !!!!!!! 'ನಾ ಅಮ್ಮ ಆಗ್ತಾ ಇದ್ದೀನಿ ' ಅಂದ್ಲು ಅವನ ಕಣ್ಣಲ್ಲಿ ಖುಷಿ …. … Read more

ಆತ್ಮಹತ್ಯೆ; ಒಂದು ಚಿಂತನೆ: ದಿವ್ಯಾ ಆಂಜನಪ್ಪ

ಇತ್ತೀಚೆಗೆ ನಾಲ್ಕನೇ ತರಗತಿಯಲ್ಲಿ ವಿಜ್ಞಾನ ಪಾಠವೊಂದರ ಕುರಿತು ಚರ್ಚಿಸುತ್ತಿದ್ದ ಸಮಯ. ಪಾಠದ ಹೆಸರು "ಮಣ್ಣು". ಮಕ್ಕಳಿಗೆ ಮಣ್ಣು ಹೇಗಾಯಿತು? ಮಣ್ಣಿನ ರಚನೆ, ಮಣ್ಣಿನ ಉಪಯೋಗಗಳನ್ನು ಹೇಳುವಾಗ, ಇಂಧನವಾದ ಕಲ್ಲಿದ್ದಲು ಕುರಿತು ಚರ್ಚೆ ಬೆಳೆಯಿತು. ಹಾಗಾಗಿ ಪಾಠಕ್ಕೆ ಹೊರತಾಗಿದ್ದು ಹೆಚ್ಚಿನ ಮಾಹಿತಿಯೆಂದೇ ತಿಳಿದು ವಿಷಯಾಂತರವಾದರೂ ಸರಿಯೇ ಎಂದು ಅದರ ಬಗ್ಗೆಯೂ ಮಾಹಿತಿ ನೀಡುತ್ತಿದ್ದೆ. ಈಗಿನ ಶಿಕ್ಷಣ ಕ್ರಮದಲ್ಲಿ ವಿಷಯಾಂತರ ಎಂಬ ಮಾತಿಲ್ಲ. ಕನ್ನಡ ಪಾಠದಲ್ಲಿ ವಿಜ್ಞಾನದ ವಿಷಯಾಂಶ ಬಂದರೂ ಅದನ್ನು ಭೋದಿಸಿಯೇ ಮುಂದೆ ನಡೆಯಬೇಕು. ಮಕ್ಕಳಲ್ಲಿ ಯಾವುದೊಂದು ಪ್ರಶ್ನೆಯೂ … Read more

ದೀಪ..!!: ಸಚಿನ್ ಎಂ. ಆರ್.

ದೀಪ..!! ಕತ್ತಲೆಯ ಬಾಳಲ್ಲಿ ನೀನಾಗುವೆಯಾ ದೀಪ…? ಅರಸುತಿದೆ ಮನವು ಮುಗ್ಧತೆಯ ಪಾಪಾ.. ಹಳೆಯ ನೋವೆಲ್ಲವೂ ಘನಘೋರ ಶಾಪ.. ಬೇಡ ನನಗಾವುದೇ ಅನುಕಂಪದ ತಾಪ.. ದೀಪದ ಬುಡದಲ್ಲಿ ಕತ್ತಲೆ… ಕತ್ತಲೆಯ ಮೇಲೊಂದು ದೀಪ… ನನ್ನ ಬಾಳಿನ ಕತ್ತಲೆಗೆ ನೀನಾಗುವೆಯಾ ದೀಪ.. ನಂದದಾ ದೀಪ.. ಹುಡುಕುತಿದೆ ಮನವು ಬೆಳಕು ಕರೆದ ಎಡೆಗೆ.. ಕಿಡಿಗೇಡಿ ಬುದ್ಧಿಗೆ, ನನಬಾಳು ಒಡೆದ ಗಡಿಗೆ… ದುಡುಕಿದ ಮನಕೆ ಬೇಕೊಂದು ಭಾವ.. ಮಡಿದ ಮನಸಿಗೆ ಕೊಡುವೆಯಾ ಜೀವ…!! ಹಾಳಾದ ಮನಸು ಈ ಲೆವೆಲ್‌ಗೆ ಕವನ ಗೀಚ್ಕೊಂಡು, ಬಡಬಡಾಯಿಸಿಕೊಂಡು … Read more

ಓಜೋನ್-ವಿನಾಶ ಅನಿಲಗಳ ನಿಯಂತ್ರಣ: ಜೈಕುಮಾರ್

ದೈತ್ಯ ಕಂಪನಿಗಳ ಪರ ನಿಂತಿರುವ ಅಮೇರಿಕಾ ಅಮೇರಿಕಾ ದೇಶದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಅನಿಲಗಳನ್ನು ಮಾತ್ರವೇ ಶೀತಲೀಕರಣ (ರೆಫ್ರಿಜರೇಶನ್) ಉಪಕರಣಗಳಲ್ಲಿ ಉಪಯೋಗಿಸುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹಾಕುತ್ತಿದೆ. ಶೀತಲೀಕರಣಗಳಲ್ಲಿ ಬಳಸುವ ಅನಿಲಗಳು ಇತರೆ ಹಸಿರು ಮನೆ ಅನಿಲಗಳಂತೆ ಭೂಮಿಯ ತಾಪಮಾನಕ್ಕೆ ಕಾರಣವಾಗುತ್ತವೆ ಎಂಬ ಕಾರಣವೊಡ್ಡಿ ಅಮೇರಿಕಾ ತನ್ನ ಕಂಪನಿಗಳಿಗೆ ಭಾರತದಲ್ಲಿ ಮಾರುಕಟ್ಟೆ ಹುಡುಕುತ್ತಿದೆ.  ಶೀತಲೀಕರಣ ಅನಿಲಗಳನ್ನು ಎರಡು ಅಂತರಾಷ್ಟ್ರೀಯ ಒಪ್ಪಂದಗಳ ವ್ಯಾಪ್ತಿಗೆ ತರಲಾಗಿದೆ: ಮಾಂಟ್ರಿಯಲ್ ಒಡಂಬಡಿಕೆ ಮತ್ತು ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದ. … Read more

ಹುಟ್ಟು ಹಬ್ಬದ ಶುಭಾಶಯಗಳು ಸರ್: ರೇಣುಕಾ ಶಿಲ್ಪಿ, ಹೂವಿನಹಡಗಲಿ.

ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯಿಂದ ಜನಪ್ರಿಯರಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಕತೆಗಾರ ಕುಂ.ವೀರಭದ್ರಪ್ಪ ಅವರಿಗೆ ಇದೇ ಅಕ್ಟೋಬರ್ 1 ರಂದು ಜನ್ಮದಿನದ ಸಂಭ್ರಮ. ಈ ಸುಸಂದರ್ಭದಲ್ಲಿ ‘ಕುಂವೀ ಯವರಿಗೆ ಈ ಕಿರು ಪರಿಚಯಾತ್ಮಕ ಲೇಖನದ ಮೂಲಕ ಶುಭ ಕೋರುವ ಪುಟ್ಟ ಪ್ರಯತ್ನವಿದು. ನಾನು ಮೊದಲ ಬಾರಿ ಅವರನ್ನು ಕಂಡದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಸರಿಸುಮಾರು ಹದಿನೈದು ವರ್ಷಗಳ ಹಿಂದೆ, ನನ್ನೂರು ಹೂವಿನಹಡಗಲಿಯಲ್ಲಿ- ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ … Read more

ಸೈಬರ್ ಕ್ರಾಂತಿ ಮಾರಕವೇ?: ಸಂದೀಪ ಫಡ್ಕೆ, ಮುಂಡಾಜೆ

ಡಿಜಿಟಲ್ ತಂತ್ರಜ್ಞಾನವನ್ನು ಬಗಲಲ್ಲಿಟ್ಟುಕೊಂಡು ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ವಿಶ್ವವನ್ನೇ ಅಂಗೈಯಲ್ಲಿ ತಂದು ಕೂರಿಸಿವೆ. ಎಲ್ಲ ಕ್ಷೇತ್ರಗಳ ವಿದ್ಯಮಾನ ಮತ್ತು ದೈನಂದಿನ ಬದುಕಿನ ಪುಟ-ಪುಟಗಳು ಮುಕ್ತವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೇ, ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲೂ ಇವು ಹಿಂಜರಿಯುವುದಿಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಉದಾರ ಗುಣ ಸೈಬರ್ ಕ್ರಾಂತಿಯ ಬೆನ್ನೆಲುಬು. ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಹೇಳಿ ಮಾಡಿಸಿದಂತಿರುವ … Read more

ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಕಗ್ಗೊಲೆ ವೈಚಾರಿಕತೆಯ ಮೇಲಿನ ಧಾಳಿ: ಜೈಕುಮಾರ್

          ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ದ ಮಹಾರಾಷ್ಟ್ರದಲ್ಲಿ ಕಳೆದ ೨೫ ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಖ್ಯಾತ ವಿಚಾರವಾದಿ ಡಾ: ನರೇಂದ್ರ ದಾಬೋಲ್ಕರ್ ರವರನ್ನು ಎರಡು ವಾರಗಳ ಹಿಂದೆ ಕೊಲೆ ಮಾಡಿರುವುದು ಎಲ್ಲೆಡೆ ಪ್ರತಿಭಟನೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಅವರು ದಿ: ೨೦.೦೮.೨೦೧೩ ರಂದು ವಾಯುವಿಹಾರಕ್ಕೆ ಹೋಗಿದ್ದಾಗ ಅವರನ್ನು ಸಮಾಜಘಾತುಕ ಶಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮಾಯ, ಮಾಟ, ಮಂತ್ರಗಳಿಂದ ಅವರನ್ನು ಕೊಲ್ಲಲಾಗಿಲ್ಲ! ಡಾ: ನರೇಂದ್ರ ದಾಬೋಲ್ಕರ್ ರವರು ಮೂಲತ: … Read more