ವೈದ್ಯಕೀಯ ಲೋಕದ ಸಂಶೋಧನೆಗಳ ದಿಕ್ಕು ಬದಲಾಗಬೇಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಚಿಂತನೆಗಳು ಪ್ರಕೃತಿಯ ನಿಯಮಗಳಿಗೆ ದೇಹ ಪ್ರಕೃತಿಗೆ ಪೂರಕವಾಗಿರಬೇಕು. ಸಹಜ ಚಿಂತನೆಗಳು ಪ್ರಕೃತಿಯ, ದೇಹ ಪ್ರಕೃತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತವೆ. ಅಸಹಜ ಚಿಂತನೆಗಳು ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತವೆ! ಸಹಜ ಚಿಂತನೆಗಳಿದ್ದರೂ ಮಾನವ ತನ್ನ ದುರಾಸೆಯಿಂದ ದುಡ್ಡಿನ ಪಿಶಾಚಿ ಯಾಗಿರುವುದರಿಂದ ಉದ್ದೇಶಪೂರ್ವಕವಾಗಿ ಅಸಹಜವಾಗಿ ಚಿಂತಿಸಿ ಪ್ರಕೃತಿಯ, ದೇಹ ಪ್ರಕೃತಿಯ ನೋವು ಯಾತನೆಗಳಿಗೆ ಕಾರಣವಾಗುತ್ತಿದ್ದಾನೆ. ಪರಿಸರ ಮಾಲಿನ್ಯಕ್ಕೂ ಕಾರಣನಾಗಿದ್ದಾನೆ! ಇತ್ತೀಚೆಗೆ ಜಗತ್ತಿನಾದ್ಯಂತ ಇದೆ ವಿಜೃಂಭಿಸಿ ಜೀವಜಲ, ಅನಾರೋಗ್ಯ ಸಮಸ್ಯೆಗಳು ಅತಿ ಆಗಲು ಯಾತನೆ ಮುಗಿಲು ಮುಟ್ಟಲು ಕಾರಣವಾಗಿದೆ. ಇಡೀ … Read more

ಲೋಕದೊಳಗೆ ಹುಟ್ಟಿದ ಬಳಿಕ.. ಕೋಪವತಾಳದೆ ಸಮಾಧಾನಿಯಾಗಿರಬೇಕು: ಕೆ ಟಿ ಸೇಮಶೇಖರ ಹೊಳಲ್ಕೆರೆ!

ಅರಿಷಡ್ವರ್ಗಗಳು ಮಾನವನನ್ನು ಉತ್ತಮನಾಗಲಿಕ್ಕೆ ಬಿಡುವುದಿಲ್ಲ. ಉತ್ತಮನಾಗಿ ರೂಪಿಸದಿದ್ದರೂ ಪರವಾಗಿಲ್ಲ, ದುಷ್ಟನಾಗುವಂತೆ ಮಾಡುತ್ತವೆ! ಅರಿಷಡ್ವರ್ಗಗಳಲ್ಲಿ ಕೋಪವೂ ಒಂದು. ಕೋಪ ಬೆಂಕಿಯಿದ್ದಂತೆ. ಕೋಪಕ್ಕೆ ತುತ್ತಾದವರ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ ಕೋಪಗೊಂಡವರನ್ನೇ ಸುಟ್ಟುಬಿಡುತ್ತದೆ. ಆದುನಿಕ ಬದುಕಿನಲ್ಲಿ ಸಮಾಧಾನವಾಗಿರುವುದು ಕಷ್ಟ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಿದ್ದಂತೆ ಅಯ್ಯೋ! ಟೈಂ ಆಯ್ತು! ಅಯ್ಯೋ! ಟೈಂ ಆಯ್ತು! ನಿತ್ಯ ಕರ್ಮ ತೀರಿಸಬೇಕು, ಸ್ನಾನ ಇಲ್ಲ! ಪೂಜೆ ಇಲ್ಲ! ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ. ಎಲ್ಲಾ ಮುಗಿಸಿ ಹೊರಡುವುದು ಎಷ್ಟು ಹೊತ್ತಾಗುತ್ತದೋ ಏನೋ? ಎಂದು ಅವಸರ … Read more

ಪ್ರೇಮಿಗಳ ದಿನಾಚರಣೆಯನ್ನು ಹೇಗೆ ಆಚರಿಸಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರೀತಿ ಅತಿ ಅಮೂಲ್ಯ! ಜಗದ ತುಂಬ ತುಂಬಿದೆ. ಮಾನವನ ಜಗತ್ತನ್ನು ಆಳುತ್ತಿದೆ. ಸಕಲ ಜೀವಜಂತುಗಳಲ್ಲೂ ಮನೆ ಮಾಡಿದೆ. ಜಗತ್ತು ಆಗಿರುವುದೇ ಪ್ರೀತಿಯಿಂದ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರೀತಿ, ಪ್ರೇಮ ತೋರಿಸುವಂಥವು ಆಗಿರದೆ ನಡೆ, ನುಡಿ, ಮಾಳ್ಕೆಗಳಲ್ಲಿ ಕಂಡುಬರುವಂಥವು ಆಗಿವೆ. ಅವರವರ ಸಂಬಂಧ, ಭಾವನೆ, ಇಬ್ಬರಲ್ಲಿರುವ ಇಷ್ಟವಾಗುವ ಗುಣಗಳಿಂದ ಅವರ ಪ್ರೀತಿಯ ಅನ್ಯೋನ್ಯತೆ ತೀರ್ಮಾನವಾಗುತ್ತದೆ. ಪ್ರೀತಿ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಇರುವಂತಹದ್ದೇ! ಆದ್ದರಿಂದ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಅಮ್ಮಂದಿರ ದಿನ… ಆಚರಿಸುವುದು ಭಾರತೀಯ ಪರಂಪರೆಯಲ್ಲಿಲ್ಲ! … Read more

ಆರೋಗ್ಯಕ್ಕಾಗಿ ಮರಳಬೇಕಿದೆ ಹಿಂದಿನ ಬದುಕಿಗೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಕಾಲಚಕ್ರ ಉರುಳುತ್ತನೇ ಇರುತ್ತದೆ. ಉರುಳುವಾಗ ಚಕ್ರದ ಭಾಗ ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಬರುವುದು ಸಹಜ! ಇತಿಹಾಸ ಸಹ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ. ಹಾಗೇ ಮಾನವನ ಬದುಕಿನ ರೀತಿ ಸಹ ಪುನರಾವರ್ತನೆಯಾಗಬೇಕಿದೆ! ನಾವು ನಾಗರೀಕರು ತುಂಬಾ ಮುಂದುವರಿದವರು ಎಂಬುದು ನಾವು ಬಹಳ ಹಿಂದುಳಿದವರೆಂಬ ಧ್ವನಿಯನ್ನು ಒಳಗೊಂಡಿದೆಯಲ್ಲವೆ? ನಮಗೆ ಅನುಕೂಲವಾಗಲೆಂದು, ಸುಲಭವಾಗಿ ಬದುಕಬೇಕೆಂದು ಕಷ್ಟಕರ ಬದುಕನ್ನು ತೊರೆದು ಸುಲಭವಾಗಿ ಬದುಕಲು ಪ್ರಯತ್ನಿಸುವಾಗ ಹಿಂದಿನದಕ್ಕೆ ತಿಲಾಂಜಲಿ ಇತ್ತು ಹೊಸದನ್ನು ಬಿಗಿದಪ್ಪಿಕೊಂಡು ಜೀವಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ಈಗ ಅರಿತದ್ದರಿಂದ ಹಿಂದಿನ ಜೀವನದ ರೀತಿಯ … Read more

ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ. ಧರ್ಮ, ಅರ್ಥ, ಕಾಮ, … Read more

ಬದುಕೆಂದರೆ ಪೂರ್ಣತ್ವದ ಕಡೆಗೆ ಸಾಗುವುದ?: ಕೆ ಟಿ ಸೋಮಶೇಖರ ಹೊಳಲ್ಕೆರೆ

 ‌ " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಜೀವನ ಎಂದರೇನು ಎಂದು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವುದು ಕಷ್ಟ. ಆದರೂ ಕೆಲವರು ಪ್ರಯತ್ನಿಸಿದ್ದಾರೆ ಅದು ಜೀವನವನ್ನೆಲ್ಲಾ ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಟ್ಟಿದ್ದರೂ ಅವು ಪರಿಪೂರ್ಣ ಅನ್ನಿಸವು. ಏಕೆಂದರೆ ಜೀವನ ಹೇಗೆ ಬೇಕಾದರೂ ಇರಬಹುದು! ವಿಶಾಲವೂ ಆಗಬಹುದು, ಅತಿ ಕಿರಿದೂ ಆಗಬಹುದು! ಹಿಗ್ಗಿನ ಸುಗ್ಗಿಯಾಗಬಹುದು, ಬಿರು ಬಿಸಿಲ ಬೇಸಿಗೆಯಾಗಬಹುದು. ಕಷ್ಟಗಳ ಮಳೆಯಾಗಬಹುದು! ಸಾಧನೆಯ ಶಿಖರವೇ ಆಗಬಹುದು. ಭೂಮಿಯ ಮೇಲಿರುವವರಾರೂ ಪರಿಪೂರ್ಣರಲ್ಲ. ಹುಟ್ಟಿದ ಪ್ರಯುಕ್ತ … Read more

ಮಾಂಸಾಹಾರ ತಪ್ಪೆಂದರೆ ಸಸ್ಯಾಹಾರ ಸರಿ! ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಂಗನಿಂದ ಮಾನವ ಎಂದು ಹೇಳುತ್ತೇವೆ. ಯಾವುದೋ ಕಾಲಘಟ್ಟದಲ್ಲಿ ಮಂಗ ಮಾನವನಾಗಿ ಬದಲಾದ ಎಂದು ಡಾರ್ವಿನ್ ವಿಕಾಸವಾದ ಹೇಳುತ್ತದೆ. ಮಂಗನೋ ಗೋರಿಲ್ಲಾನೋ ಚಿಂಪಾಂಜಿಯೋ ವಿಕಾಸ ಹೊಂದಿ ಮಾನವನಾಗಿ ಬದಲಾದ ಎಂಬುದನ್ನು ಎಲ್ಲರೂ ಓದಿದ್ದೇವೆ. ಈಗ ಇರುವ ಮಂಗ, ಗೊರಿಲ್ಲ , ಚಿಂಪಾಂಜಿಗಳು ಯಾವಾಗ ಮಾನವರಾಗುತ್ತವೆ? ಯಾಕೆ ಇನ್ನೂ ಮಾನವರಾಗಿಲ್ಲ? ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳು ಮೇಲುನೋಟಕ್ಕೆ ಕಿಡಿಗೇಡಿಗಳ ಪ್ರಶ್ನೆಗಳೆನಿಸಿದರೂ ಒಮ್ಮೆ ಹೌದಲ್ಲಾ! ಈ ಮಂಗಗಳೆಲ್ಲ ಯಾವಾಗ ಮಾನವರಾಗಿ ಬದಲಾಗುತ್ತವೆ? ಯಾಕೆ ಇನ್ನೂ ಮಾನವರಾಗಿ ಬದಲಾಗಿಲ್ಲ? ಎಂಬ ಪ್ರಶ್ನೆ … Read more

ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ನಾಂದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

      ಹಿಂದೆ ಪ್ರತಿ ಗ್ರಾಮದಲ್ಲಿ ರಾಮಾಯಣ,  ಮಹಾಭಾರತ, ಪುರಾಣ  ಕತೆಗಳು ಯಕ್ಷಗಾನ ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ  …. ಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು. ಓಲೆ ಬಸವ  … ಗಳ ಮೂಲಕವೂ ರಾಮ ಸೀತೆಯರ ಕತೆ ಜಾತ್ರೆ,  ಹಬ್ಬಹರಿದಿನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದು ಹಳ್ಳಿ ಜನರಿಗೆ ಮನರಂಜನೆ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರತಿ ಮನೆಗಳಲಿ ಗ್ರಾಮದ ದೇವಾಲಯಗಳಲಿ, ಪಂಚಾಯಿತಿ ಕಟ್ಟೆಗಳಲ್ಲಿ,  ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಹರಿಕಥೆ,  ಪುರಾಣ,  ಪುಣ್ಯಕಥೆ,  ಶಿವಲೀಲಾಮೃತ, … Read more

ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಹೂವು ಅರಳುವುದನ್ನು ' ವಿಕಸನ  ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು … Read more

ಒಳ್ಳೆಯ ಚಿಂತನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ.        

" ಒಳ್ಳೆಯತನವೇ ಸಂಸ್ಕೃತಿಯ ಸಾರ " ಶ್ರೀನವರತ್ನ ರಾಮರಾವ್. ಒಳ್ಳೆಯ ವಿಚಾರಗಳು ಎಂದರೆ ಯಾವ ಜೀವಿಗಳಿಗೂ ತೊಂದರೆ ಮಾಡದೆ ಆದಷ್ಟು ಅನುಕೂಲ, ಸಹಾಯ ಮಾಡುವ ವಿಚಾರಗಳು, ಚಿಂತನೆಗಳು, ನಡೆಗಳು. ಏನನ್ನು ಚಿಂತಿಸುತ್ತೇವೋ ಅದನ್ನು ಮಾಡಲು ಮುಂದಾಗುತ್ತೇವೆ. ಒಳ್ಳೆಯ ಚಿಂತನೆಗಳು, ವಿಚಾರಗಳು ಒಳಿತನ್ನುಂಟು ಮಾಡಿಸುತ್ತವೆ. ಕೀರ್ತಿ ತರುತ್ತವೆ. ಕೆಟ್ಟ ವಿಚಾರಗಳು, ಚಿಂತನೆಗಳು ಕೆಡುಕನ್ನುಂಟು ಮಾಡಿಸುತ್ತವೆ. ಅಪಕೀರ್ತಿಯನ್ನು ಹರಡುತ್ತವೆ. ಆದ್ದರಿಂದ ಏನನ್ನು ನುಡಿಯಬೇಕು ಹೇಗೆ ನಡೆಯಬೇಕು ಯಾವ ಕೀರ್ತಿ ಸಂಪಾದಿಸಬೇಕು ಎಂಬುದು ಆಯಾಯ ವ್ಯಕ್ತಿಗಳಿಗೆ ಸಂಬಂಧಿಸಿರುತ್ತದೆ. ಅವರವರ ವ್ಯಕ್ತಿತ್ವವನ್ನು ಅವರವರ … Read more

ಕನ್ನಡಿ  ಮತ್ತು  ನಿಂದಕರು: ಕೆ ಟಿ ಸೋಮಶೇಖರ ಹೊಳಲ್ಕೆರೆ

          ಕನ್ನಡಿ ಗೊತ್ತಿಲ್ಲದವರಿಲ್ಲ. ಅದೊಂದು ಹೆಚ್ಚು ಬೆಲೆಬಾಳದ, ಕೆಳಗೆ ಬಿದ್ದರೆ ಸಾಕು ಒಡೆದೇಹೋಗುವ ವಸ್ತು. ಗಾಜಿನ ಒಂದು ಮುಖವನ್ನು ಮೆರುಗುಗೊಳಿಸಿದರೆ ಕನ್ನಡಿ ಸಿದ್ದ! ವಿವಿಧ ಆಕಾರ, ಎತ್ತರಗಳಲ್ಲಿ ಮಾರುಕಟ್ಟಿಯಲ್ಲಿ ದೊರೆಯುವ ನುಣುಪಾದ ಮೇಲ್ಮೈಯುಳ್ಳ ವಸ್ತು! ಹಾಗೆ ನೋಡಿದರೆ ಅದು ವಸ್ತುವೇ ಅಲ್ಲ! ವಿರೂಪ ತೊಡೆದು ಸುರೂಪಿಯಾಗಿಸುವ ಮೂಕ ಸಲಹೆಗಾರ, ಆತ್ಮೀಯ ಸ್ನೇಹಿತ, ಮನೆಯ ಸದಸ್ಯ, ಅಜಾತ ಶತೃ!        ಕನ್ನಡಿಯನ್ನು ಪ್ರೀತಿಸದವರಿಲ್ಲ. ಕನ್ನಡಿಯನ್ನು ಯಾರು ಎಷ್ಟು ಪ್ರೀತಿಸುತ್ತಾರೋ ಅವರು … Read more

ಪ್ರಾಮಾಣಿ – ಕತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಇಂದು ಬೇರೆಯವರನ್ನು , ಭ್ರಷ್ಟರನ್ನು  ಸರಿಮಾಡುವುದೆಂದರೆ ನಾವು ಕೆಟ್ಟುಹೋಗುವುದು ಅಂಥ ಅರ್ಥ! ಅಥವಾ ಅತಿ ದುಷ್ಟರಾಗುವುದು ಅಂಥ!  ಏಕೆಂದರೆ ಅವರಿಗೆ ನಾವು ಸರಿಯಿಲ್ಲ ಅನ್ನಿಸುವುದರಿಂದ ನಮ್ಮನ್ನು ಅವರು ಅವರಂತೆ ಆಗಿಸಿಬಿಡುತ್ತಾರೆ! ಪುರಾಣಗಳಲ್ಲಿ ದುಷ್ಟರ ದೌಷ್ಟ್ಯ ಹೆಚ್ಚಾದಾಗ ಭಗವಂತ ಬಂದು ದುಷ್ಟರ ಸಂಹರಿಸುವುದನ್ನು ಓದಿರುತ್ತೇವೆ. ಅಂದರೆ ಸಾಮಾನ್ಯರು ಇವರನ್ನು  ಮಟ್ಟ ಹಾಕಲು ಅಸಮರ್ಥರು ಎಂಬ ಸತ್ಯ ಅಲ್ಲಿ ಅಡಗಿದೆ! ದುಷ್ಟರ ನಾಶ ಮಾಡುವುದಕ್ಕೆ ಭಗವಂತನೇ ಅವತರಿಸಬೇಕಾಗುತ್ತದೆ. ಅವನೆ ಸಮರ್ಥ! ಭ್ರಷ್ಟತೆಯನ್ನು ನಿರ್ನಾಮ ಮಾಡುವವರೆ ಮಹಾಭ್ರಷ್ಟರಾಗಿರುವುದರಿಂದ ಎಲ್ಲಾ … Read more

ಸಾಮಾನ್ಯ ತುಲಾಯಂತ್ರವು, ಅಸಾಮಾನ್ಯ ದ್ರವ್ಯರಾಶಿಯು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಜಗತ್ತಿನಲ್ಲಿ ಕೈಗೆಟುಕುವ ಎಲ್ಲಾ ವಸ್ತುಗಳನ್ನು ಅಳೆದು ಬೆಲೆ ಕಟ್ಟುತ್ತಿದ್ದೇವೆ. ಪ್ರತಿಯೊಂದು ವಸ್ತುವನ್ನು  ಅಳೆಯಲು ಆ ವಸ್ತುವಿನ ದ್ರವ್ಯರಾಶಿಯ ಸ್ವರೂಪದ ಆಧಾರದ ಮೇಲೆ ಅಳೆಯುವ ಸಾಧನಗಳನ್ನು ರೂಪಿಸಿದ್ದೇವೆ. ಇನ್ನೂ ಕೆಲವು ಸಾಧನಗಳನ್ನು ರೂಪಿಸುತ್ತಿದ್ದೇವೆ. ಎಲ್ಲಾ ತುಲಾ ಯಂತ್ರಗಳು ಅದರದೇ ಆದ ದ್ರವ್ಯರಾಶಿಯನ್ನು ಅಳತೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಅದರ ಸಾಮರ್ಥ್ಯಕ್ಕಿಂಥಾ ಹೆಚ್ಚು ದೊಡ್ಡದಾದ ವಸ್ತುವನ್ನು ಅವು ಅಳೆಯಲಾರವು. ಇದರಿಂದ ತಿಳಿಯುವುದೇನೆಂದರೆ ಎಲ್ಲಾ ತುಲಾ ಯಂತ್ರಗಳು ಎಲ್ಲಾ ಗಾತ್ರ, ತೂಕದ ದ್ರವ್ಯರಾಶಿಯನ್ನು ಅಳೆಯುವ ಸಾಮರ್ಥ್ಯ ಹೊಂದಿರುವುದಿಲ್ಲಾ, ಅವಕ್ಕೂ … Read more

ಲೇಡಿ ವಿತ್ ದ ಲ್ಯಾಂಪ್: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

  ಮೇ ೧೨ ಪ್ಲಾರೆನ್ಸ್ ನೈಟಿಂಗೆಲ್ ಜನ್ಮದಿನ. ಅವಳ ಜನ್ಮದಿನದ ನೆನಪಿಗಾಗಿ ಮೇ ೬ ರಿಂದ ೧೨ ರ ವರೆಗ ನರ್ಸ್ ಗಳ ಅಂತರಾಷ್ಟ್ರೀಯ ದಿನ ಆಚರಿಸುತ್ತಾರೆ. ಇಂತಹ ಗೌರವಕ್ಕೆ ಅವಳು ಭಾಜನವಾಗಬೇಕೆಂದರೆ ಅವಳು ಯಾರು ? ಅವಳು ಮಾಡಿದ ಸಾಧನೆಯಾದರೂ, ಮಹತ್ಕಾರ್ಯವಾದರೂ ಏನೆಂದು ತಿಳಿಯುವುದು ಸೂಕ್ತ. ಸೇವೆಗೆ ಮತ್ತೊಂದು ಹೆಸರೇ ಪ್ಲಾರೆನ್ಸ್ ನೈಟಿಂಗೇಲ್! ' ಲೇಡಿ ವಿತ್ ದ ಲ್ಯಾಂಪ್ ' ಎಂದು ಪ್ರಸಿದ್ಧರಾದವರು. ಇವಳು ಶ್ರೀಮಂತ ಕುಟುಂಬದ ಹಿನ್ನೆಲೆಯವಳು. ೧೮೨೦ ಮೇ ೧೨ ರಂದು … Read more

ಮಹತ್ವ ಕಳೆದುಕೊಳ್ಳುತ್ತಿರುವ ಮಹಾತ್ಮರ ಜಯಂತಿಗಳು:  ಕೆ ಟಿ ಸೋಮಶೇಖರ ಹೊಳಲ್ಕೆರೆ.

ರಾಮನ ಆದರ್ಶ, ಹನುಮನ ಸೇವಾನಿಷ್ಟೆ, ಮಹಾವೀರನ ಅಹಿಂಸೆ, ಪ್ರಾಣಿದಯೆ, ಅಂಬೇಡ್ಕರವರ ಸ್ವಾಭಿಮಾನ, ಯೋಗ್ಯವಾದುದಕ್ಕಾಗಿ ಅಸದೃಶ ಹೋರಾಟ, ಅಕ್ಕನ ಸ್ವಾತಂತ್ರ್ಯಕ್ಕಾಗಿ ಅರಸೊತ್ತಿಗೆಯನ್ನು ದಿಕ್ಕರಿಸಿದ ದಿಟ್ಟತನ … ಆನುಭಾವ,  ಸ್ವಾಭಿಮಾನ, ಗಾಂಧೀಜಿಯ ಸತ್ಯ –  ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ?  ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ  ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ. " … Read more

 ಕಾಯಕದ ಅನಿವಾರ್ಯತೆ ಮತ್ತು ಮಹತ್ವ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಕಾಯಕ ಎಂದರೆ ಕೆಲಸ. ಪ್ರತಿಯೊಬ್ಬರೂ ಕೆಲಸ ಮಾಡಬೇಕಿರುವುದು ಅನಿವಾರ್ಯ. ಬ್ರಹ್ಮಾಂಡದಲ್ಲಿರುವ ಸಕಲ ಕಾಯಗಳೂ ಚಲಿಸುತ್ತಾ ಸದಾ ಕೆಲಸದಲ್ಲಿ ನಿರತವಾಗಿವೆ. ಗ್ರಹ, ಉಪಗ್ರಹ, ನಕ್ಷತ್ರ ….. ಆಕಾಶ ಕಾಯಗಳು ಭ್ರಮಿಸುತ್ತಾ, ಪರಿಭ್ರಮಿಸುತ್ತಾ ಕಾರ್ಯನಿರ್ವಹಸುತ್ತಿವೆ. ಭೂಮಿ ಒಂದು ದಿನ ಭ್ರಮಿಸದಿದ್ದರೆ ಹಗಲು – ರಾತ್ರಿಗಳು ಆಗುವುದಿಲ್ಲ. ಪರಿಭ್ರಮಿಸದಿದ್ದರೆ ಋತುಮಾನಗಳು ಸಂಭವಿಸುವುದಿಲ್ಲ. ಆಗ ಬದುಕಾಗುವುದು ಅಯೋಮಯ! ನಮಗಷ್ಟೇ ಅಲ್ಲದೆ ಭೂಮಿಗೂ ಬರುವುದು ಆಪತ್ತು! ಭೂಮಿ ನಿತ್ಯ ಕಾಯಕದಲ್ಲಿ ತೊಡಗಿರುವುದರಿಂದ ಎಂದಿನಂತೆ ಬದುಕು ಸಾಗುವುದು.     … Read more

 ಪದ್ಮಪತ್ರದ ಜಲಬಿಂದುವಿನಂತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾವು ಈ ಭೂಮಿಯ ಮೇಲೆ ಶಾಶ್ವತವಾಗಿ ಬದುಕಲು ಬಂದವರಲ್ಲ. ಪಂಚಭೂತಗಳಿಂದಾದ ಈ ದೇಹ ಇಲ್ಲಿ ಬದುಕುವ ಸಾಮರ್ಥ್ಯ ಕಳೆದುಕೊಂಡಾಕ್ಷಣ ಭೂಮಿಯ ಬದುಕು ಅಂತ್ಯವಾಗುತ್ತದೆ. ಒಮ್ಮೊಮ್ಮೆ ದೇಹ ಬದುಕಲು ಸಮರ್ಥವಾಗಿದ್ದರೂ ಅನೇಕ ಕಾರಣಗಳಿಂದ ಬದುಕು ಅಂತ್ಯವಾಗುವುದನ್ನು ನೋಡಿದ್ದೇವೆ. ಆದರೆ ಯಾವಾಗ ನಮ್ಮ ಬದುಕು ಕೊನೆಗೊಳ್ಳುತ್ತದೆಂದು ಯಾರಿಗೂ ತಿಳಿದಿರುವುದಿಲ್ಲ.  ಬದುಕಲು ಸ್ವಲ್ಪ ಆಹಾರ, ವಸ್ತ್ರ, ವಸತಿ ಅವಶ್ಯಕ. ನಮ್ಮ ಜೀವಿತಾವಧಿ ಅಲ್ಪ ಎಂದು ತಿಳಿದೂ, ಆಸಯೇ ದುಃಖಕ್ಕೆ ಮೂಲ ಎಂದು ಕೇಳಿ, ಇತರರಿಗೆ ಬೋಧಿಸಿ,  ಅದು ತಮಗೆ ಅನ್ವಹಿಸುವುದಿಲ್ಲವೆಂಬಂತೆ ವರ್ತಿಸುತ್ತಾರೆ! … Read more

ಯುಗಾದಿ ಹೊಸ ವರ್ಷಾರಂಭವೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಭಾರತದ ಕೆಲವು ರಾಜ್ಯಗಳಲ್ಲಿ ಹೊಸ ವರ್ಷವನ್ನು ಯುಗಾದಿ ಅಥವಾ ಉಗಾದಿ ಎಂದು ಆಚರಿಸುತ್ತಾರೆ. ' ಯುಗ ' ಎಂದರೆ ಒಂದು ನಿಗಧಿತ ಕಾಲಾವಧಿ. ವರ್ಷ ಎಂದೂ ಅರ್ಥವಿದೆ. ' ಆದಿ ' ಎಂದರೆ ಆರಂಭ. ಯುಗಾದಿ ಎಂದರೆ ವರ್ಷದ ಆರಂಭ. ದಕ್ಷಿಣ ಭಾರತೀಯರಿಗೆ ಚೈತ್ರ ಮಾಸದ ಆರಂಭದ ದಿನವೇ ವರ್ಷದ ಆರಂಭ. ಅಂದು ಯುಗಾದಿಯನ್ನು ಕರ್ನಾಟಕ, ಆಂದ್ರಪ್ರದೇಶದಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ಯ ಎಂದು ಆಚರಿಸುತ್ತಾರೆ. ಯಾವುದೇ ಸಂತೋಷ ಸಂಭ್ರಮಾಚರಣೆಗಳು ಬದುಕಿಗೆ ನವಚೇತನವನ್ನು ನೀಡುತ್ತವೆ. ಆದ್ದರಿಂದಾಗಿ ಅಂತಹ ಅವಕಾಶಗಳನ್ನು … Read more

ಎರಡು ಜಾನಪದ ಚಿತ್ರಣಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಯಾರಿಂದ ಸೃಷ್ಟಿಯಾದವೆಂದು ತಿಳಿಯದ ತ್ರಿಪದಿ, ಸೋಬಾನೆ ಹಾಡು, ಬೀಸುವಾಗ, ದವಸ ಧಾನ್ಯ ಕುಟ್ಟುವಾಗ ಬ್ಯಾಸರ ಕಳೆಯಲೆಂದು ಕಟ್ಟಿ ಹಾಡಿದ ಹಾಡು,  ಕಾವ್ಯ,  ಕಥೆ, ಗಾದೆ, ತೊಗಲು ಗೊಂಬೆ ಆಟ, ಕೋಲಾಟ, ಸೋಮನ ಕುಣಿತ, ಎತ್ತುಗಳಿಂದ ಬೆಂಕಿ ಹಾಯಿಸುವ ಸ್ಪರ್ದೆ, ಜಲ್ಲಿಕಟ್ಟು, ಯಕ್ಷಗಾನ, ಭಜನೆ, ನಂದಿಕೋಲು ಕುಣಿತ, ಕಂಬಳ,  ವೀರಗಾಸೆ… ಮುಂತಾದವು ನಮ್ಮ ಸಂಪ್ರದಾಯವಾಗಿ ಪರಂಪರೆಯಲ್ಲಿ ಉಳಿದು ಬಂದಿವೆ. ಇವುಗಳನ್ನು ಜಾನಪದ ಎನ್ನುತ್ತೇವೆ. ಕೆಲವು ಮಂಟೆ ಸ್ವಾಮಿಯಂಥ ಕಾವ್ಯಗಳು, ಕಥೆ, ತ್ರಿಪದಿ, ಸೋಬಾನೆ ಹಾಡು, ಕುಟ್ಟುವಾಗ, … Read more

ಸಾಮಾಜಿಕ ಜವಾಬ್ದಾರಿ ಮತ್ತು ಜವಾಬ್ದಾರಿಯುತರು: ಕೆ ಟಿ ಸೋಮಶೇಖರ ಹೊಳಲ್ಕೆರೆ.

             ಪ್ರತಿಯೊಬ್ಬ ವ್ಯಕ್ತಿಯೂ ತಾನಿರುವ ಸಮಾಜದ, ನಾಡಿನ ಆಗು ಹೋಗಿಗೆ ಜವಾಬ್ದಾರಿಯಾಗಿರುತ್ತಾನೆ. ಹಾಗೆ ಇರಬೇಕಾದುದು ಅವನ ಕರ್ತವ್ಯ ಕೂಡ. ಜನಸಾಮಾನ್ಯರು ಇದಕ್ಕೆ ಹೊರತಲ್ಲ .ಇವರು ಹೊರತಾದರೆ ಬೆರಳೆಣಿಕೆಯಷ್ಟು ಜನಕ್ಕೆ ಹಾನಿ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೊರತಾದರೆ ಇಡೀ ಸಮಾಜಕ್ಕೆ, ನಾಡಿಗೆ, ದೇಶಕ್ಕೆ ಹಾನಿ ಸಂಭವಿಸುತ್ತದೆ. ಆದ್ದರಿಂದ ಜನಸಾಮಾನ್ಯರಿಗಿಂತ ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಪುರಾಣ, ಇತಿಹಾಸದಲ್ಲಿ ಅನೇಕರು ನುಡಿದಂತೆ ನಡೆದು ಆದರ್ಶವಾಗಿ ಬದುಕಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ! ಭರತ, ರಾಮ, … Read more