ಕೆ ಟಿ ಸೋಮಶೇಖರ್ ಅಂಕಣ

ತಮ್ಮನ್ನು ರಕ್ಷಿಕೊಳ್ಳಲಾಗದ ಸಜ್ಜನಿಕೆ ಏಕೆ ಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ದಿನ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ ಒಂದೆರಡಾದರೂ ಸ್ತ್ರೀಯರ ಮೇಲಿನ ಅತ್ಯಾಚಾರಗಳು, ಚೀಟಿಹಾಕಿ ಮೋಸಹೋದ ಪ್ರಕರಣಗಳು, ಪೋಲೀಸ್ ಅಧಿಕಾರಿಗಳು ಪೋಲೀಸರಿಗೆ ನೀಡಿದ ಕಿರುಕುಳಗಳು, ವರದಕ್ಷಿಣೆ ಕಿರುಕುಳ ತಾಳಲಾಗದೆ ಹಸುಗೂಸನ್ನು ಬಿಟ್ಟು ತಾಯಿ ಮಾಡಿಕೊಂಡ ಆತ್ಮಹತ್ಯೆಗಳು, ಲಂಚ ಪ್ರಕರಣಗಳು, ಭಯೋತ್ಪಾದನೆಗಳು, ಜನಾಂಗೀಯ ದ್ವೇಷಕ್ಕೆ ತುತ್ತಾದ ಬಲಹೀನರು, ಬಹುಸಂಖ್ಯಾತರಿಂದ ತೊಂದರೆಗೊಳಗಾದ ಅಲ್ಪಸಂಖ್ಯಾತರ ನೋವುಗಳು ವರದಿ ಆಗಿಯೇ ಇರುತ್ತವೆ! ಇಲ್ಲೆಲ್ಲಾ ತೊಂದರೆ ಅನುಭವಿಸಿದ್ದು ದುರ್ಬಲರು! ತೊಂದರೆ ನೀಡಿದ್ದು ಸಬಲರು! ಅಂದರೆ ಪ್ರಬಲರು ದುರ್ಬಲರಿಗೆ ಸದಾ ತೊಂದರೆ ನೀಡುವುದನ್ನು ಕಾಣುವಂತಾಗಿದೆ. ದುರ್ಬಲರ ಶೋಷಣೆಗೆ […]

ಕೆ ಟಿ ಸೋಮಶೇಖರ್ ಅಂಕಣ

ಪರಮ ದೇಶಭಕ್ತ ಕ್ರಾಂತಿಕಾರಿ ಭಗತ್ ಸಿಂಗ್  !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

1931 ರಲ್ಲಿ  ತನ್ನ 23 ನೇ ವಯಸ್ಸಿನಲ್ಲಿ ನೇಣಿಗೆ ಸಿದ್ಧನಾಗಿ ಕಪ್ಪು ಬಟ್ಟೆಯನ್ನು ತೊಟ್ಟರೂ ನೇಣಿಗೆ ಹೆದರಿ ಮುಖ ಮುಚ್ಚಿಕೊಳ್ಳದೆ  ನೇಣಿಗೆ ನಡುಕ ಉಂಟು ಮಾಡಿ ಕತ್ತನ್ನು ನೇಣಿಗೆ ಕೊಟ್ಟು ಕತ್ತನ್ನು ಸುತ್ತುವರಿದ ನೇಣಿನ ಹಗ್ಗಕ್ಕೆ ಮುತ್ತಿಟ್ಟು ತನ್ನ ಇಬ್ಬರು ಸ್ನೇಹಿತರೊಂದಿಗೆ ಹುತಾತ್ಮನಾದ ಧೈರ್ಯವಂತ ಭಗತ್ ಸಿಂಗ್!  ನೇಣಿಗೆ ಕತ್ತು ಕೊಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕ ತಂದಿದ್ದೀರಾ? ಎಂದು ತಮ್ಮ ಕೊನೆಯ ಅಸೆಯ ತಿಳಿಯಲು ಬಂದ  […]

ಕೆ ಟಿ ಸೋಮಶೇಖರ್ ಅಂಕಣ

ಕನಸುಗಳು ನನಸಾಗುವುದು ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಕನಸುಗಳು ಮನುಷ್ಯನನ್ನು ಪ್ರಾಚೀನ ಕಾಲದಿಂದಲೂ ವಿಸ್ಮಯಗೊಳಿಸಿವೆ. ಕನಸೆಂಬುದು ಮಾಯಾಲೋಕ! ನಿಜ ಜೀವನದಲ್ಲಿ ಆಗದಿರುವುದು ಕನಸಿನಲ್ಲಿ ಸಾಧ್ಯವಾಗಬಹು. ಮಲಗಿದ್ದಾಗ ಅರೆ ಎಚ್ಚರದ ಸ್ಥಿತಿಯಲ್ಲಿ ಬೀಳುವಂಥವು ‘ ಕನಸು ‘ . ಕನಸು ಎಂದರೆ ಮಿಥ್ಯ! ಅವು ನನಸು ಆಗಬಹುದು ಆಗದೇ ಇರಬಹುದು. ಬಹುತೇಕ ಆಗಲಾರವು! ರಾತ್ರಿ ಅರೆ ಎಚ್ಚರದ ಸ್ಥಿತಿಯಲ್ಲಿ ಬಿದ್ದು ಎಚ್ಚರವಾಗುತ್ತಿದ್ದಂತೆ ಮಾಯವಾಗುವಂಥವು ಎಷ್ಟರಮಟ್ಟಿಗೆ ನನಸಾಗಿಯಾವು? ಬೆಳಗಿನಜಾವದಲ್ಲಿ ಬಿದ್ದ ಕನಸುಗಳು ನನಸಾಗುತ್ತವಂತೆ ಅಂತ ಯಾರು ಹೇಳಿದರೋ ಏನೋ ಆ ನಂಬಿಕೆಯಿದೆ! ಮನಸ್ಸಿಗೆ‌ ಸಂತೋಷ ನೀಡುವ ಸಕಾರಾತ್ಮಕವಾದ ಕನಸಿರುವಂತೆ […]

ಕೆ ಟಿ ಸೋಮಶೇಖರ್ ಅಂಕಣ

ಕೃಷ್ಣಂ ವಂದೇ ಜಗದ್ಗುರುಂ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ರಾಮಾಯಣ ಮಹಾಭಾರತಗಳು ಭಾರತ ದೇಶದ ಮಹಾಕಾವ್ಯಗಳು, ಹಾಗೇ ಅವು ಇತಿಹಾಸ ಅಂತನೂ ಸಾಕ್ಷಸಮೇತ ಇತಿಹಾಸಕಾರರು ಹೇಳುತ್ತಿದ್ದಾರೆ. ‘ಮಹಾಭಾರತ’ ಪ್ರಪಂಚದಲ್ಲೇ ಅತಿ ದೊಡ್ಡ ಮಹಾಕಾವ್ಯ. ಇದರ ಕತೃ ವ್ಯಾಸ. ಮಹಾಭಾರತದಲ್ಲಿ ಭೀಷ್ಮ ಪರ್ವ ಬಹಳ ಮುಖ್ಯವಾದುದು. ಏಕೆಂದರೆ ಭೀಷ್ಮಪರ್ವದಲ್ಲೇ ಕುರುಕ್ಷೇತ್ರ ಯುದ್ದ ಆರಂಭವಾಗುವ ಕಥನವಿರುವುದು, ಕೃಷ್ಣಾರ್ಜುನರ ಸಂವಾದ ರೂಪದಲ್ಲಿರುವ ಭಗವದ್ಗೀತೆ ಇರುವುದು. ಅರ್ಜುನನ ವಿಷಾದ ಭಾವದಿಂದ ಆರಂಭವಾಗುವ ಭಗವದ್ಗೀತೆ ಶ್ರೀಕೃಷ್ಣ ಅರ್ಜುನನಿಗೆ ಅನುಗ್ರಹಿಸುವ ಪ್ರಸಾದದೊಂದಿಗೆ ಮುಗಿಯುತ್ತದೆ. ವೇದಗಳ ಸಾರ ಉಪನಿಷತ್ತುಗಳು, ಉಪನಿಷತ್ತುಗಳ ಸಾರಸರ್ವಸ್ವ ಭಗವದ್ಗೀತೆ ಅಂತ ಹೇಳುವರು. ಮಹಾಭಾರತದಲ್ಲಿ […]

ಕೆ ಟಿ ಸೋಮಶೇಖರ್ ಅಂಕಣ

ಒಂದು ಹಳ್ಳಿ ಜನರ ಉಳಿವಿನ ಹೋರಾಟ ಜಗದ್ವಿಖ್ಯಾತ ಪರಿಸರದ ಹೋರಾಟವಾಯಿತೆ ..!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಗಿಡ ಮರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ತನ್ನಂತೆ ಪ್ರಕೃತಿಯ ಮಮತೆಯ ಮಕ್ಕಳು ಅವುಗಳಿಗೂ ಮಾನವನಂತೆ ಬದುಕುವ ಹಕ್ಕೂ, ಸ್ವಾತಂತ್ರ್ಯವೂ ಇದೆ ಎಂದು ಮಾನವ ಭಾವಿಸದೆ ಅವುಗಳನ್ನು ಮನಬಂದಂತೆ ತನಗೆ ಅನುಕೂಲವಾಗುವಂತೆ ದುಡಿಸಿಕೊಳ್ಳುತ್ತಲು ಹಿಂಸಿಸುತ್ತಲು ಕೊಲ್ಲುತ್ತಲೂ ಇದ್ದಾನೆ. ಇದು ಸರಿಯಲ್ಲ! ಇತ್ತೀಚೆಗೆ ಪ್ರಕೃತಿಯ ಉಳಿವಿನಲ್ಲಿ, ಬದುಕಿನಲ್ಲಿ, ನಲಿವಿನಲ್ಲಿ ಮಾನವನ ನಗು ಅಡಗಿದೆ! ಪ್ರಕೃತಿಯ ಗಿಡ ಮರ ಪ್ರಾಣಿ ಪಕ್ಷಿ ಜಲಚರಗಳನ್ನೂ ಮಾನವನ ಬದುಕು ಅವಲಂಬಿಸಿದೆ! ಅದರ ನಾಶ ಮಾನವನ ಸರ್ವನಾಶ! ಎಂದು ತಿಳಿದಾಗಿನಿಂದ ಪ್ರಕೃತಿಯನ್ನು ಅದನ್ನು ಆಶ್ರಯಿಸಿರುವ […]

ಕೆ ಟಿ ಸೋಮಶೇಖರ್ ಅಂಕಣ

ಶಿಶಿರನ ಅಂತ್ಯ ವಸಂತನ ಆದಿಯೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಒಂದರ ಅಂತ್ಯ ಇನ್ನೊಂದರ ಆರಂಭ! ಹಗಲಿನ ಅಂತ್ಯ ರಾತ್ರಿಯ ಆರಂಭ! ರಾತ್ರಿಯ ಅಂತ್ಯ ಹಗಲಿನ ಆರಂಭ! ಕಷ್ಟಗಳ ಅಂತ್ಯ ಸುಖದ ಆರಂಭ! ಸುಖದ ಅಂತ್ಯ ಕಷ್ಟದ ಆರಂಭ! ಜೀವನ ಸುಖದ ಸುಪ್ಪತ್ತಿಗೆಯಲ್ಲ, ಕಷ್ಟ ಸುಖಗಳ ಹಾಸು! ಪುರಾಣಗಳು ಘನಘೋರ ಕಷ್ಟಗಳ ಅಂತ್ಯ ಸುಖದ ಸೂಚಕ ಎಂದು ಸಾರಿವೆ! ಭಗವಂತ ಕಷ್ಟಗಳ ಮಳೆಗರೆದು ಭಕ್ತರನ್ನು ಪರೀಕ್ಷಿಸಿ ಕೊನೆಗೆ ಅಪರಿಮಿತ ಸುಖ ನೀಡುತ್ತಾನೆ ಎಂದು ಪುರಾಣಗಳಲ್ಲಿ ಕಥೆಗಳಿವೆ. ಇದಕ್ಕೆ ಸತ್ಯಹರಿಶ್ಚಂದ್ರನ ಕಥೆ ಉತ್ತಮ ಉದಾಹರಣೆಯಾಗಿದೆ. ಹೀಗೆ ಜೀವನದಲ್ಲಿ ಏಳು ಬೀಳಿಗೆ, […]

ಕೆ ಟಿ ಸೋಮಶೇಖರ್ ಅಂಕಣ

ರಾಜನ ಕಿವಿ ಕತ್ತೆ ಕಿವಿ – ಸಂಕೇತಳ ಸ್ವಾರಸ್ಯಕರ ಕತೆ : ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕತೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟವೆ! ಅದರಲ್ಲೂ ಸ್ವಾರಸ್ಯಕರವಾದ ಕತೆಗಳು, ವಿಕ್ರಮ್ ಭೇತಾಳದಂತ ಕತೆಗಳು, ಅಲೌಕಿಕ ಕತೆಗಳು, ಹ್ಯಾರಿ ಪಾಟರ್ ನಂತಹ ಕತೆಗಳು, ಆಲಿಬಾಬಾ ಅರವತ್ತು ಕಳ್ಳರು, ಪಂಚತಂತ್ರದ ಕತೆಗಳು ತುಂಬಾ ಇಷ್ಟ. ಮಕ್ಕಳಿಗೇ ಏಕೆ ದೊಡ್ಡವರೂ ಟಾಮ್ ಅಂಡ್ ಜರ್ರಿ, ಹ್ಯಾರಿಪಾಟರ್, ಚೋಟಾ ಭೀಮ್, ಗೇಮುಗಳಲ್ಲಿ ಮುಳುಗಿರುವುದು ಅವರೂ ಇಷ್ಟಪಡುವರೆಂಬುದ ಸಾರುತ್ತವೆ! ನಾವು ಚಿಕ್ಕವರಿದ್ದಾಗ ದಿನಾ ರಾತ್ರಿಯಾಗುವುದನ್ನೇ ಕಾಯುತ್ತಿದ್ದೆವು. ಇಂದಿನಂತೆ ಮಕ್ಕಳನ್ನು ಹಿಂದೆ ಓದು ಓದು ಹೋಂ ವರ್ಕ್ ಮಾಡು ಮುಗಿಸು ಅಂತ […]

ಕೆ ಟಿ ಸೋಮಶೇಖರ್ ಅಂಕಣ

ಪೂರ್ವಜರ ಪರಿಸರ ಪ್ರೇಮ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾಗಾಭರಣನಾದ ನಟರಾಜ! ನಾಗನನ್ನು ಸೊಂಟದ ಪಟ್ಟಿ ಮಾಡಿಕೊಂಡಿರುವ ಲಂಬೋದರ! ಶೇಷಶಯನನಾದ ವಿಷ್ಣು! ಕಾಡಿನ ರಾಜ ಸಿಂಹವಾಹನೆಯಾದ ಆದಿಶಕ್ತಿ! ನಂದಿವಾಹನನಾದ ನಂದೀಶ! ಮಹಿಷ ವಾಹನನಾದ ಯಮಧರ್ಮ! ಮರದ ಕೆಳಗೆ ಕುಳಿತು ಪಶುಗಳಿಂದ ಸುತ್ತುವರಿಯಲ್ಪಟ್ಟು ಪಶು ಪಕ್ಷಿ ಪರಿಸರ ಪ್ರೇಮಿ ಪಶುಪತಿ! ಕೊಳಲ ನುಡಿಸುತ ಗೋವುಗಳ ಮಧ್ಯ ನಿಂತ ಗೋಪಾಲ! ಜ್ಞಾನದ ಸಂಕೇತವಾದ ಗಜ ತಲೆಯ ಗಜಾನನ! ನಾಗಯಜ್ಞೋಪವೀತನಾದ ವಿಘ್ನೇಶ್ವರ! ಕುರಿ ತಲೆಯ ದಕ್ಷಬ್ರಹ್ಮ! ಹದಿನಾರು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಹಂದಿಯ ತಲೆಯುಳ್ಳದ್ದಾದ ವರಹಾವತಾರ! ಪಕ್ಷಿರಾಜ ಗರುಡವಾಹನನಾದ ವಿಷ್ಣು! ಸುಂದರ […]

ಕೆ ಟಿ ಸೋಮಶೇಖರ್ ಅಂಕಣ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರಪಂಚ ರಹಸ್ಯಗಳ, ವಿಸ್ಮಯಗಳ ಆಗರ! ಎಲ್ಲಾ ಜೀವಿಗಳಂತೆ ಮಾನವ ಭೂಮಿಯ ಮೇಲೆ ಹುಟ್ಟಿದ್ದಾನೆ. ಎಲ್ಲಾ ಜೀವಿಗಳು ಬದುಕಿನಲ್ಲಿ ಲೀನವಾಗಿ ಬದುಕುತ್ತಿವೆ. ಅವು ಬದುಕಿನ ಹೊರತು ಬೇರೇನೂ ಯೋಚಿಸವು. ಇಂದಿನ ಆಹಾರದ ಹೊರತು ನಾಳಿನ ಆಹಾರದ ಬಗ್ಗೆ ಚಿಂತಿಸವು. ಮಾನವ ಮಾತ್ರ ಈ ಎಲ್ಲಾ ಜೀವಿಗಳು, ಮಾನವರು ಯಾಕೆ ಹುಟ್ಟಬೇಕು? ಯಾಕೆ ಬದುಕಬೇಕು? ಬದುಕಿನ ಉದ್ದೇಶವೇನು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಹುಡುಕುತ್ತಿದ್ದಾನೆ! ನಾಳಿನ ಆಹಾರದ ಬಗ್ಗೆ, ಸುಂದರವಾದ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾನೆ! ಎಲ್ಲರೂ ಹುಟ್ಟಿದಂತೆ ಹುಟ್ಟುವುದು ಹುಟ್ಟಿಸುವವರನ್ನು […]

ಕೆ ಟಿ ಸೋಮಶೇಖರ್ ಅಂಕಣ

ಪೋಷಕಾಂಶಗಳೇ ಅಲ್ಲದ ನಾರು ನೀರಿಗೇಕೆ ಅಷ್ಟು ಪ್ರಾಮುಖ್ಯತೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಆಹಾರದ ಘಟಕಗಳು ಎಂದು ಕರೆಯುವ ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು, ವಿಟಮಿನುಗಳು, ಲಿಪಿಡ್ ಗಳು, ಖನಿಜಗಳನ್ನು ಜೀವಿಯ ಪೋಷಕಾಂಶಗಳು ಎನ್ನುತ್ತೇವೆ. ಏಕೆಂದರೆ ಇವು ಜೀವಿಗಳನ್ನು ಪೋಷಿಸುತ್ತವೆ. ಜೀವಿ ಬೆಳೆಯಲು, ಅದರ ಸರ್ವಾಂಗಗಳು ವೃದ್ದಿಸಲು, ಜೀವಿ ಸದಾ ಚಟುವಟಿಕೆಯಿಂದ ಕೆಲಸಮಾಡುವಂತಾಗಲು, ಜೈವಿಕ ಚಟುವಟಿಕೆ ನಡೆಸಲು ಅವಶ್ಯಕ! ನಾರು, ನೀರು ಇವು ಸಹ ಆಹಾರದ ಘಟಕಗಳೇ ಆದರೂ ಪೋಷಕಾಂಶಗಳೇ ಅಲ್ಲ! ಅವು ದೇಹದ ಬೆಳವಣಿಗೆಗಾಗಲಿ, ಅಂಗಾಗಗಳ ವೃದ್ದಿಗಾಗಲಿ ಪೂರಕಗಳಲ್ಲ! ಆದರೆ ಅವಿಲ್ಲದೆ ಪೋಷಕಾಂಶಗಳು ದೇಹಗತವಾಗುವುದಿಲ್ಲ! ಅಷ್ಟೇ ಅಲ್ಲ ಜೀವಿಯ ಯಾವ ಕ್ರಿಯೆಗಳು  ನಡೆಯುವುದಿಲ್ಲ. […]

ಕೆ ಟಿ ಸೋಮಶೇಖರ್ ಅಂಕಣ ಪಂಜು-ವಿಶೇಷ

ಗುರುಗಳನ್ನು ಗೌರವಿಸಿ ಗೌರವ ಹೆಚ್ಚಿಸಿಕೊಂಡವರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸೆಪ್ಟಂಬರ್ 5 ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅದನ್ನೇ ಭಾರತದಲ್ಲಿ ಶಿಕ್ಷಕರ ದಿನ ಎಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಕ್ಟೋಬರ್ 5 ನ್ನು ವಿಶ್ವ ಶಿಕ್ಷಕರ ದಿನ ಎಂದು ಆಚರಿಸುವರು. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸಬೇಕು. ಸಮಾಜದಲ್ಲಿನ ಸಂಘ – ಸಂಸ್ಥೆಗಳು ಆಚರಿಸಿದರೆ ಶಿಕ್ಷಕರಿಗೆ ಗೌರವ. ಅಷ್ಟೇ ಅಲ್ಲ ಆ ಸಂಘ ಸಂಸ್ಥೆಗಳಿಗೂ ಗೌರವ ! ಸಮಾಜ ಶಿಕ್ಷಕರ ದಿನವನ್ನು ಆಚರಿಸದಿರುವುದರಿಂದ ಶಿಕ್ಷಕರೇ ಅವರ ದಿನವನ್ನು ಅವರೇ ಆಚರಿಸಿಕೊಳ್ಳುವಂತಾಗಿರುವುದು ಅವರೇ ಅವರ ಬೆನ್ನನ್ನು […]

ಕೆ ಟಿ ಸೋಮಶೇಖರ್ ಅಂಕಣ

ಸತ್ಯಮೇವಜಯತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಜೀವನದಲ್ಲಿ ಸತ್ಯ ಬಹು ಅಮೂಲ್ಯವಾದುದು. ಸತ್ಯದ ನಡೆ – ನುಡಿ ಕಠಿಣವಾದರೂ, ಮೌಲ್ಯಯುತವಾದುದು. ಬದುಕನ್ನು ಪಾರದರ್ಶಕಗೊಳಿಸಿ ಸತ್ಯವಂತರನ್ನು ಪ್ರಾಕಾಶಿಸುವಂತೆ ಮಾಡುತ್ತದೆ. ಸತ್ಯಕ್ಕೆ ಪ್ರತ್ಯೇಕ ಅಸ್ಥಿತ್ವವಿಲ್ಲ. ಅದು ಅದನ್ನು ಉಳಿಸಿಕೊಳ್ಳಲು ಹೋರಾಡುವುದಿಲ್ಲ. ಅದು ಮಾನವರ ನಡವಳಿಯನ್ನು ಅವಲಂಭಿಸಿರುತ್ತದೆ. ಮಾನವರು ಸತ್ಯದ ಪರ ನಿಂತಂತೆ ಅವರ ವ್ಯಕ್ತಿತ್ವ ಉನ್ನತಿಗೇರುತ್ತಾ ಹೋಗಿ ಅವರದು ಪರಿಶುದ್ದ ಆತ್ಮ ಆಗುತ್ತಾ ಹೋಗುತ್ತದೆ. ಆದ್ದರಿಂದ ‘ ಸತ್ಯ’ ಜೀವಕ್ಕಿಂತ ಅಮೂಲ್ಯ ಎಂದು ಭಾವಿಸಿ ಅಮರರಾದವರು ನಮ್ಮ ಸುತ್ತ ಇದ್ದಾರೆ! ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಮುಚ್ಚಿಟ್ಟಷ್ಟೂ ಬಡಬಾಗ್ನಿಯಂತೆ […]

ಕೆ ಟಿ ಸೋಮಶೇಖರ್ ಅಂಕಣ

ತಲ್ಲೀನತೆಯ ಪರಾಕಾಷ್ಠೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಲ್ಲೀನತೆಯೆಂದರೆ ವ್ಯಕ್ತಿ ಏನನ್ನು ಮಾಡಬಯಸುತ್ತಾನೋ ಅದರಲ್ಲಿಯೇ ಮನಸ್ಸು ಐಕ್ಯವಾಗುವುದು! ಮತ್ತೊಂದರ ಕಡೆಗೆ ಗಮನ ಹರಿಸದಂತೆ ಕೆಲಸದಲ್ಲಿ ಮುಳುಗುವುದು! ಯಾವುದೇ ಕೆಲಸವನ್ನು ಏಕಾಗ್ರತೆಯಿಂದ, ಇಷ್ಟಪಟ್ಟು, ಪ್ರೀತಿಸಿ ಮಾಡಿದಾಗ ಆ ಕೆಲಸ ಸುಂದರವಾಗುವುದು, ಮನಸ್ಸಿಗೆ ಮುದನೀಡುವುದು, ಇತರರ ಮನಸೂರೆಗೊಳ್ಳುವುದು! ಕಾಟಾಚಾರಕ್ಕೆ, ಒತ್ತಾಯಕ್ಕೆ, ಅಧಿಕಾರದ ದರ್ಪಕ್ಕೆ ಹೆದರಿ ಮಾಡುವ ಕೆಲಸಗಳು ಸುಂದರವಾಗವು, ಮಾಡಿದವರಿಗೂ ನೋಡುವವರಿಗೂ ಮೆಚ್ಚಿಗೆಯಾಗವು, ಯಾರಿಗೂ ತೃಪ್ತಿನೀಡವು. ಮಾಡಿದ್ದು ಸುಂದರವಾಗಬೇಕೆಂದರೆ ಗರಿಷ್ಟಮಟ್ಟದ ತಲ್ಲೀನತೆ ಅವಶ್ಯ! ಪ್ರಪಂಚದಲ್ಲಿ ಯಾವುವು ಪ್ರಸಿದ್ಧವಾದ, ಸುಂದರವಾದ ಕೆಲಸಗಳೋ ಅವು ತಲ್ಲೀನತೆಯ ಪರಾಕಾಷ್ಠೆಯ ಫಲಗಳಾಗಿವೆ. ಅವು ಯೋಗದ […]

ಕೆ ಟಿ ಸೋಮಶೇಖರ್ ಅಂಕಣ

 ಮತ್ತೆ ಮತ್ತೆ ಪ್ರತಿದ್ವನಿಸುವ  ಪ್ರತ್ಯೇಕ ರಾಜ್ಯದ ಕೂಗು: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ವಿಶಾಲ ಭೂಪ್ರದೇಶ ಹೊಂದಿದ ಕೆಲವು ರಾಜ್ಯಗಳು ಪ್ರಾದೇಶಿಕವಾಗಿ ನೆಲ, ಜಲ, ಖನಿಜ, ಸಂಪನ್ಮೂಲ ಮಳೆಯ ಹಂಚಿಕೆ ಮುಂತಾದವುಗಳಲ್ಲಿ ಭಿನ್ನವಾಗಿರುತ್ತವೆ! ಅವು ಅಲ್ಲಿ ವಾಸಿಸುವ ಜನರ ಜೀವನಮಟ್ಟ ವ್ಯತ್ಯಾಸವಾಗಲು ಅಸಮಾನತೆ ಉಂಟಾಗಲು ಕಾರಣವಾಗಿರುತ್ತವೆ. ಆದರೆ ಇದನ್ನು ಗುರುತಿಸಿ ಅಸಮಾನತೆಯ ಹೋಗಲಾಡಿಸಲು ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮ ರೂಪಿಸಬೇಕಿದೆ. ರೂಪಿಸುತ್ತವೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸರ್ಕಾರಗಳು ಬೇಧಭಾವ ಮಾಡುವುದಿಲ್ಲ! ಕಾರಣಾಂತರದಿಂದ ಒಮ್ಮೊಮ್ಮೆ ಸರ್ಕಾರಗಳಿಂದನೇ ಬೇಧಭಾವ ಆಗಿಬಿಡುತ್ತದೆ. ಬೇಧಭಾವ ಎಲ್ಲಾ ಕಡೆ ಇದ್ದೇ ಇರುತ್ತದೆ. ಇಲ್ಲದಂತೆ ಇರಲು ಸಾಧ್ಯವಿಲ್ಲ! ಅದು ಸ್ವಲ್ಪ […]

ಕೆ ಟಿ ಸೋಮಶೇಖರ್ ಅಂಕಣ

ತಮ್ಮ ಭಾವಚಿತ್ರದ ಸೌಂದರ್ಯ ಹೆಚ್ಚಿಸುವ ಸ್ವಯಂ ಕಟ್ಟುಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಎಲ್ಲರೂ ತಮ್ಮ ತಮ್ಮ ಭಾವಚಿತ್ರಗಳಿಗೆ ಸಾಮಾನ್ಯವಾಗಿ ಕಟ್ಟನ್ನು ಹಾಕುತ್ತಾರೆ, ಹಾಕಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಭಾವಚಿತ್ರಗಳು ಸುಂದರವಾಗಿ ಕಾಣಬೇಕೆಂಬ ಆಸೆ. ಅದಕ್ಕೆ ಹಾಕಿಸುತ್ತಾರೆ. ಕಟ್ಟುಗಳು ಭಾವಚಿತ್ರದ ಶೋಭೆಯನ್ನು ಹೆಚ್ಚಿಸುತ್ತವೆ. ಭಾವಚಿತ್ರವನ್ನು ವಿರೂಪಗೊಳ್ಳದಂತೆ ಬಹಳ ವರುಷಗಳ ಕಾಲ ಹಾಳಾಗದಂತೆ ರಕ್ಷಿಸುತ್ತವೆ. ಕಟ್ಟು ಹಾಕಿದ ಭಾವಚಿತ್ರಗಳು ತಮ್ಮನ್ನು ಇರಿಸಿದ ಸ್ಥಳ, ಶೋಕೇಸಿನ, ನೇತು ಹಾಕಿದ ಗೋಡೆಯ, ತಾವಿರುವ ಟೇಬಲ್ಲಿನ ಅಂದವನ್ನು ಹೆಚ್ಚಿಸುತ್ತವೆ . ಭಾವಚಿತ್ರಗಳು ಯಾವ ವಯೋಮಾನದಲ್ಲಿನ ಭಾವಚಿತ್ರಗಳೋ ಆ ವಯೋಮಾನದಲ್ಲಿನ, ಯಾವ ಸಂದರ್ಭದಲ್ಲಿನ ಭಾವ ಚಿತ್ರಗಳೋ ಆ ಸಂದರ್ಭದಲ್ಲಿನ […]

ಕೆ ಟಿ ಸೋಮಶೇಖರ್ ಅಂಕಣ

ಗುರಿ ಮುಟ್ಟಿಸಲು ಅವಶ್ಯಕ ಸಮಚಿತ್ತದ ಸಾರಥಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಬದುಕು ಸಾರ್ಥಕ ಆಗಬೇಕಾದರೆ ಅವನು ಏನನ್ನಾದರೂ ಸಾಧಿಸಬೇಕು! ತನ್ನ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಿದರೆ ಅವನ ಜೀವನ ಸಾರ್ಥಕವಾಗುತ್ತದೆ. ಅವನಿಗೆ ಸಂತೃಪ್ತಿ ದೊರೆಯುತ್ತದೆ. ಸಾಧನೆಗೆ ಉತ್ತಮ ಸಲಕರಣೆ ಎಂದರೆ ಆರೋಗ್ಯವಂತ ಮನಸ್ಸು, ಸದೃಢ ದೇಹ. ಪ್ರಯುಕ್ತ ಆರೋಗ್ಯವನ್ನು ಕಾಪಾಡಿಕೊಂಡು ದೃಢ ಕಾಯವನ್ನು ಸಂಪಾದಿಸಿ ಸಾಧಿಸಲು ಲಪ್ರಯತ್ನಿಸಿದರೆ ಸಮಾಜದಲ್ಲಿ ಮಾನ ಮನ್ನಣೆಗಗಳು ದೊರೆಯುತ್ತವೆ. ಸಾಧಿಸಬೇಕಾಗಿರುವವನು ಮಾನಸಿಕ ದೈಹಿಕ ಸಾಮರ್ಥ್ಯ ಇರುವಾಗಲೇ ಗುರಿಯನ್ನು ಗುರುತಿಸಿಕೊಂಡು ಸಾಧಿಸಲು ಮುಂದಾಗಬೇಕು!. ಯೋಗ್ಯ ಗುರಿ ನಿರ್ಣಯವಾಗುತ್ತಿದ್ದಂತೆ ಅದನ್ನು ಸಾಧಿಸಲು ಅನೇಕ ದಾರಿಗಳು ಗೋಚರಿಸಲು ಆರಂಭಿಸುತ್ತವೆ. […]

ಕೆ ಟಿ ಸೋಮಶೇಖರ್ ಅಂಕಣ

ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ! ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ […]

ಕೆ ಟಿ ಸೋಮಶೇಖರ್ ಅಂಕಣ

ಭಾರತವ ವಿಶ್ವವಿಖ್ಯಾತಗೊಳಿಸಿದ ಆ ಎರಡು ಘಟನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, […]

ಕೆ ಟಿ ಸೋಮಶೇಖರ್ ಅಂಕಣ

ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ […]

ಕೆ ಟಿ ಸೋಮಶೇಖರ್ ಅಂಕಣ

ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ ! ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ […]