ಮೇರು ವಿಮರ್ಶಕ- ರಾಷ್ಟ್ರಕವಿ ಕುವೆಂಪು ಮತ್ತು ಅವರ ವಿಮರ್ಶಾ ವೈಶಿಷ್ಟ್ಯತೆ: ಡಾ. ಹನಿಯೂರು ಚಂದ್ರೇಗೌಡ

ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ, ಅಧ್ಯಾತ್ಮ ಜ್ಯೋತಿಯ ವಿಷಯದಲ್ಲಿ ಅಚಲಶ್ರದ್ಧೆ, ವಿಭೂತಿಪೂಜೆಯಲ್ಲಿ ನಿಷ್ಠೆ, ಸಾಹಿತ್ಯದ ಪರಮಪ್ರಯೋಜನದಲ್ಲಿ ಪೂರ್ಣವಿಶ್ವಾಸ, ಪ್ರಕೃತಿಯ ಬಹುಮುಖ ವಿನ್ಯಾಸದಲ್ಲಿ ಒಂದು ಆತ್ಮೀಯತೆ, ಭವ್ಯತೆಯ ಅನುಭವದಲ್ಲಿ ಭಕ್ತಿ, ಜೀವನದಲ್ಲಿ ಧರ್ಮದ ಮೂಲಭೂತ ಅಗತ್ಯವನ್ನು ಒಪ್ಪುವ ಮನೋಧರ್ಮ, ಜನತೆಯ ಉದ್ಧಾರಕ್ಕಾಗಿ ಹಂಬಲಿಸುವ ಚೇತನ, ಆತ್ಮಸಾಕ್ಷಾತ್ಕಾರದ ಲಕ್ಷ್ಯ-ಇವೆಲ್ಲವೂ ಒಂದು ಸುಂದರ ಪಾಕದಲ್ಲಿ ಸಮರಸವಾಗಿ ಏಕತ್ರಗೊಂಡಿವೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟ್ಯಾಗೋರ್, ಶ್ರೀಅರವಿಂದ, ರಮಣಮಹರ್ಷಿ, ಗಾಂಧೀಜಿ-ಇನ್ನಿತರೆ ಭಾರತೀಯ ಮಹಾತ್ಮರ ವಿಚಾರಗಳಿಂದ ಭಾವಿತವೂ ಪ್ರಭಾವಿತವೂ … Read more

ಜನಜಾಗೃತಿಯ ಮಹಾಮಾರ್ಗದ ‘ಆಯುಧ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಬದುಕಿನಲ್ಲಿ ಸರ್ವವನ್ನು ಕಳೆದುಕೊಂಡ ವ್ಯಕ್ತಿಯೋರ್ವ ಅಂತಿಮವಾಗಿ ಗುರುವಿನ ಹುಡುಕಾಟದಲ್ಲಿ ಅಲೆಮಾರಿಯಾಗಿ ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಹಂಬಲಿಸುತ್ತಾ ರಂಗಪ್ರವೇಶಿಸುವುದರೊಂದಿಗೆ ‘ಆಯುಧ’ ನಾಟಕ ಅಸಂಗತವಾಗಿ ಆರಂಭವಾಗುತ್ತದೆ. ಕೆಲಸವಿಲ್ಲದ ವಿದ್ಯಾವಂತ ನಿರುದ್ಯೋಗಿಗಳು ಬಡಾವಣೆಯೊಂದರ ಹರಟೆ ಕಟ್ಟೆಯಲ್ಲಿ ಕಲಿತ ವಿದ್ಯೆಯನ್ನು ಮರೆತು ಇಸ್ಪೀಟು, ಜೂಜಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲಿಗೆ ಆಗಮಿಸುವ ಅನಾಮಿಕನೋರ್ವನು ‘ಸೇವ್ ಇಂಡಿಯಾ ; ಸೇವ್ ಡೆಮಾಕ್ರಸಿ’ ಎಂದು ತನ್ನಷ್ಟಕ್ಕೆ ತಾನೆ ಬಡಬಡಿಸುತ್ತಾ, ನಗುತ್ತಾ ಅವಧೂತನಂತೆ ಆಗಮಿಸಿ, ಕುಳಿತುಕೊಳ್ಳುತ್ತಾನೆ. ಹೀಗೆ ಎಷ್ಟೋ ಹೊತ್ತು ನಡೆದರೂ ನಿರುದ್ಯೋಗಿಗಳು ಮತ್ತು ಅನಾಮಿಕರ ನಡುವೆ ಯಾವುದೇ ಸಂವಹನ … Read more

ಗಾದೆಗಳು- ರೂಪದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ: ಹೊರಾ.ಪರಮೇಶ್ ಹೊಡೇನೂರು

         ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪದ ಸಾಹಿತ್ಯವೂ ಪ್ರಮುಖವಾದುದಾಗಿದೆ. ಜನಪದರ ಅನುಭವ ಜನ್ಯವಾಗಿ ಉದಯಿಸಿದ ಈ ಸಾಹಿತ್ಯ ಪ್ರಕಾರದಲ್ಲಿ "ಗಾದೆಗಳು" ವಿಶೇಷವಾಗಿ ಗಮನ ಸೆಳೆಯುತ್ತವೆ. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಜನಜನಿತವಾದ ಗಾದೆಯೆ ಗಾದೆಗಳ ಮಹತ್ವ, ಅರ್ಥವಂತಿಕೆಯನ್ನು ಎತ್ತಿ ತೋರಿಸುತ್ತದೆ.          ಗಾದೆಗಳು ಜನಸಾಮಾನ್ಯರ ಪ್ರತ್ಯಕ್ಷ ಅನುಭವಗಳ ಮೂಸೆಯಿಂದ ರೂಪುಗೊಂಡಿರುವುದರಿಂದ ಅವುಗಳ ಅರ್ಥ ಸುಲಭವಾಗಿ ತಿಳಿಯುವುದರ ಜೊತೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತವೆ. ದೈನಂದಿನ ಸಂದರ್ಭಗಳಲ್ಲಿ ಇಕ್ಕಟ್ಟುಗಳು … Read more

ಮಹಿಳಾ ಕಲಾವಿದರ “ಏಕಲವ್ಯ” ದೊಡ್ಡಾಟ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, … Read more

ಸಾವಿರದ ಸರದಾರ ರವಿ ಭಜಂತ್ರಿಯವರ “ನಗೆ ರತ್ನಮಂಜರಿ” ವಿಡಿಯೋ ಸಿ.ಡಿ.: ಗುಂಡೇನಟ್ಟಿ ಮಧುಕರ

ಅಂದು ಹುಕ್ಕೇರಿ ಬಾಳಪ್ಪನವರನ್ನು ಸಾವಿರ ಪದಗಳನ್ನು ಹಾಡಿದವರೆಂಬ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಸಾವಿರದ ಸರದಾರ’ ಅಂದರೆ ‘ಸಾವು’ ಇರದ ಸರದಾರ ಎಂಬ ಅರ್ಥದಲ್ಲಿ ಹೊಗಳಿದ್ದರಂತೆ. ಹುಕ್ಕೇರಿ ಬಾಳಪ್ಪನವರು ತಮ್ಮ ಹಾಡುಗಳಿಂದ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅಂದು ಬೇಂದ್ರೆಯವರು ಹೇಳಿದ ಮಾತು ಇಂದು ಮಾತಿನ ಮೋಡಿಗಾರ ರವಿ ಭಜಂತ್ರಿಯವರಿಗೆ ಅನ್ವಯಿಸುತ್ತದೆ. ಸಾವಿರ ಹಾಸ್ಯಭಾಷಣಗಳ ಧಾಖಲೆ ಮಾಡುವ ಮೂಲಕ ಭಜಂತ್ರಿಯವರು ಸಾವಿರದ ಸರದಾರರಾಗಿದ್ದಾರೆ. ಇವರ ಭಾಷಣಗಳೂ ‘ಸಾವು’ ಇರದ ಭಾಷಣಗಳೆಂಬುದರಲ್ಲಿ ಎರಡು ಮಾತಿಲ್ಲ.        ರವಿ ಭಜಂತ್ರಿ ಹಾಸ್ಯಲೋಕದಲ್ಲಿ ಚಿರಪರಿಚಿತ … Read more

ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ

ತ್ರಿವರ್ಣ ಗಣಪ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ … Read more

ನಗಿಸಲು ಪ್ರಯತ್ನಿಸಿದ ನಗೆ ನಾಟಕೋತ್ಸವ: ಹಿಪ್ಪರಗಿ ಸಿದ್ಧರಾಮ

ಸದಭಿರುಚಿಯ ನಾಟಕಕಾರ ಹುಬ್ಬಳ್ಳಿಯ ಡಾ.ಗೋವಿಂದ ಮಣ್ಣೂರ ಅವರು ಹಿಂದೊಂದು ಕಾಲದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ ನಿರ್ದೇಶನದ ಕನ್ನಡ ಚಿತ್ರ ‘ಉಪಾಸನೆ’ಯಲ್ಲಿ ನಾಯಕಿ ಆರತಿಗೆ ಸಮಸಮನಾಗಿ ನಾಯಕ ಪಾತ್ರದಲ್ಲಿ ನಟಿಸಿ, ಹೆಸರಾದವರು. ಮುಂದೆ ಏನಾಯಿತೋ ಗೊತ್ತಿಲ್ಲ, ಚಿತ್ರರಂಗದ ಸಹವಾಸ ಬಿಟ್ಟು, ಹುಬ್ಬಳ್ಳಿಯಲ್ಲಿ ಸೈಲೆಂಟಾಗಿ ತಮ್ಮ ವೃತ್ತಿಯೊಂದಿಗೆ ಆಗಾಗ ಧಾರವಾಡ ಆಕಾಶವಾಣಿಗೆ ಸದಭಿರುಚಿಯ ಹಾಸ್ಯ ನಾಟಕಗಳನ್ನು ರಚಿಸಿ ಕೊಡುವುದು, ಕಲಾವಿದರನ್ನು ಪ್ರೋತ್ಸಾಹಸಿ, ಸಂಘಟಿಸುವುದು, ಪತ್ರಿಕೆಗಳಿಗೆ ಕಾಲಮ್ ಬರೆಯುತ್ತಾ ತಮ್ಮಲ್ಲಿರುವ ಸೃಜನಶೀಲತೆಯನ್ನು ಇಂದಿಗೂ ಕಾಪಿಟ್ಟುಕೊಂಡು ಸಕ್ರೀಯರಾಗಿದ್ದಾರೆ. ಇಂತಹ … Read more

ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ‘ಅಗ್ನಿದಿವ್ಯ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಆಸ್ಟ್ರೀಯನ್ ಮೂಲದ ಜರ್ಮನಿಯ ರಾಜಕಾರಣಿಯಾಗಿದ್ದು, ನಂತರ ಸರ್ವಾಧಿಕಾರಿಯಾಗಿ ಬದಲಾದ ಅಡಾಲ್ಪ್ ಹಿಟ್ಲರ್ ಯಾರಿಗೆ ತಾನೆ ಗೊತ್ತಿಲ್ಲ ?  ಇತ್ತೀಚೆಗೆ (07-03-2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಂಗಳೂರಿನ ಆವಿಷ್ಕಾರ ತಂಡದ ಕಲಾವಿದರು ಡಾ.ಬಿ.ಆರ್.ಮಂಜುನಾಥ ರಚಿಸಿದ ‘ಅಗ್ನಿದಿವ್ಯ’ ನಾಟಕವನ್ನು ಭಾನು ನಿರ್ದೇಶನದಲ್ಲಿ ಅಭಿನಯಿಸಿದರು. ಯುರೋಪಿನ ಇತಿಹಾಸದ ಕಾಲಘಟ್ಟವೊಂದರಲ್ಲಿ ಬದಲಾವಣೆಗೆ ತಹತಹಿಸುವ ಕ್ರಾಂತಿಕಾರಿ ಮನೋಭೂಮಿಕೆಯ ವ್ಯಕ್ತಿಯೊಬ್ಬನು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ಎದುರಿಸುತ್ತಾ ವ್ಯವಸ್ಥೆಯೊಂದಕ್ಕೆ ಸವಾಲಾಗುತ್ತಾ, ಅದೇ ವ್ಯವಸ್ಥೆಯನ್ನು ಪ್ರಶ್ನಿಸುವ ಗಂಭೀರ ಕಥಾನಕದ ಪ್ರಯೋಗವನ್ನು ಪ್ರೇಕ್ಷಕರು ಕುತೂಹಲದೊಂದಿಗೆ ವೀಕ್ಷಿಸಿದರು. ಆವಿಷ್ಕಾರ, ಎಐಡಿವೈಒ ಮತ್ತು … Read more

ಪುರಾಣಂ ಪರಾಭವಂ’ನ ಒಂದು ರಂಗ ನೋಟ: ಮಂಜುಳಾ ಎಸ್.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ರೀತಿಯ ಸಂಸ್ಕøತಿ, ಸಾಮಾಜಿಕ ಹಿನ್ನಲೆಯನ್ನು ಹೊತ್ತು ಬಂದಿರುವ ನಮ್ಮ ತೆನೆ ಗುಂಪಿನಲ್ಲಿ, ಕೌರವರ ಜೊತೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿ ಬೆತ್ತಲಾಗಿದ್ಲು, ಪ್ರಸ್ತುತ ಕತ್ತಲಲ್ಲೂ, ಬೆಳಕಲ್ಲೂ ದೇವದಾಸಿ ವ್ಯವಸ್ಥೆಯಲ್ಲಿ, ಲೈಂಗಿಕ ಕಾರ್ಯಕರ್ತೆಯರಾಗಿ, ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ, ಬೆತ್ತಲಾದ ವ್ಯವಸ್ಥೆಯಿಂದ ಬಂದವರು, ನಮ್ಮ ಜೀವನದಲ್ಲಿ ಇನ್ಯಾರೋ ಬಂದು ನಿರ್ಧಾರದ ಅಧಿಕಾರ ಚಲಾಯಿಸುವ ವ್ಯವಸ್ಥೆಯನ್ನು … Read more

ಪುಣ್ಯಕೋಟಿ-ಜಾನಪದ ಕಥನ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮೈಸೂರು ಸರ್ಕಾರಿ ಪ್ರೌಢಶಾಲಾ, ಕುಕ್ಕರಹಳ್ಳಿ ಮೈಸೂರು ಸರ್ವೋದಯ ದಿನಾಚರಣೆ ಉಪನ್ಯಾಸ ಮತ್ತು ನಾಟಕ ಪ್ರದರ್ಶನ  ನಮ್ಮೊಂದಿಗೆ ಶ್ರೀ ಎಂ.ಕೆ.ಬೋರೇಗೌಡ ನಿವೃತ್ತ ಮುಖ್ಯ ಶಿಕ್ಷಕರು      ಶ್ರೀ ಎನ್.ಎಸ್.ಗೋಪಿನಾಥ್ ಮಾಜಿ ಸಿಂಡಿಕೇಟ್ ಸದಸ್ಯರು,ಮೈಸೂರು ವಿಶ್ವವಿದ್ಯಾಲಯ ಮಕ್ಕಳು ಅಭಿನಯಿಸುವ ಜಾನಪದ ಕಥನ ಪುಣ್ಯಕೋಟಿ ಪರಿಕಲ್ಪನೆ ಮತ್ತು ವಿನ್ಯಾಸ :ಜೀವನ್ ಹೆಗ್ಗೋಡು ವಸ್ತ್ರ ವಿನ್ಯಾಸ : ಶೀಲಾ.ಎಸ್  ಪರಿಕರ ಮತ್ತು ಪ್ರಸಾಧನ : ಮಂಜು ಕಾಚಕ್ಕಿ ನಿರ್ದೇಶನ : ದೀಪಕ್ ಮೈಸೂರು ದಿನಾಂಕ : 30.01.16 … Read more

ನೆರಳು-ಬೆಳಕಿನ ಮಾಯಾಲೋಕದ ಮಹಿಳಾ ಭಾರತ: ಹಿಪ್ಪರಗಿ ಸಿದ್ಧರಾಮ, ಧಾರವಾಡ

ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ … Read more

” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)

  (ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ … Read more

ಬೆಳಕಿನ ಹಬ್ಬ ದೀಪಾವಳಿ..: ಸವಿತಾ ಗುರುಪ್ರಸಾದ್

     ''ಇವತ್ತು ಹಬ್ಬ ಎಷ್ಟ್ ಕೆಲಸ ಇರ್ತು ಇವತ್ತಾದ್ರೂ ಸ್ವಲ್ಪ ಬೇಗ ಬೇಗ ಮಾಡನಹೇಳಿಲ್ಲೆ, ಇವತ್ತೂ ತೋಟಕ್ಕ್ ಹೋಗಿ ಕೂತ್ಕೈನ್ದ ಎಲ್ಲರ ಮನೆಲೂ ಪೂಜೆ ಮುಗಿದರೆನಮ್ಮನೇಲಿ ಇನ್ನೂ ಸ್ನಾನವೇ ಆಗಲ್ಲೆ, ಎಲ್ಲ ನಾ ಒಬ್ಬಳೇ ಮಾಡಿ ಸಾಯಕ್ಕು ''ಹಬ್ಬದ ತಯಾರಿ ಮಾಡ್ತಾ ಅಜ್ಜಿಯ  ಸುಪ್ರಭಾತ ಸಾಗ್ತಾ ಇತ್ತು, ನಿಧಾನಕ್ಕೆ ಒಳಗಡೆಬಂದ ತಾತ, ಪೂಜೆ ಆತನೇ ಮಂತ್ರ ಕೇಳ್ತಾ ಇತ್ತು ಅಂತ ಕೇಳಿದ್ರು ನನ್ನ ಮುಖನೋಡಿ ನಗ್ತಾ, ಹು ಈಗ ಬಂದ್ರ, ಬೇಗ್ ಬೇಗ್ ಸ್ನಾನ ಮಾಡಿ, … Read more

ಹೊಟ್ಟೆ ತುಂಬಾ ನಗು ಕಣ್ಣ ತುಂಬಾ ನೀರು ಉಕ್ಕಿಸಿದ ನಾಟಕ ಕಿಲಾಡಿ ರಂಗಣ್ಣ: ಹಿಪ್ಪರಗಿ ಸಿದ್ಧರಾಮ

ನವರಸಗಳಿಂದಾದ ಕಲಾರಂಗವು ಜನಸಮುದಾಯದ ಸಮಸ್ಯೆಗಳನ್ನು ವಿವಿಧ ಕಾನ್ವಾಸಗಳ ಮೂಲಕ ಹೊರಹೊಮ್ಮಿಸುತ್ತಾ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ತೋರಿಸಿ ಜಾಗೃತಿಯ ನಿನಾದವನ್ನು ನಿರಂತರವಾಗಿಸುವ ಶಕ್ತಿ ಹೊಂದಿದೆ. ಇಂತಹ ಪ್ರಖರ ಶಕ್ತಿಯನ್ನು ಹೊಂದಿರುವ ಕಪಾಪ್ರಕಾರಗಳಲ್ಲಿ ಒಂದಾದ ರಂಗಭೂಮಿಯು ಶತಮಾನದಿಂದಲೂ ಇಂಥಹ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಾ ಕೆಲವೊಂದು ಬಗೆಹರಿಸಲಾಗದ ಸಮಸ್ಯೆಗಳನ್ನು ನವರಸಗಳಲ್ಲಿಯೇ ಹೆಚ್ಚು ಇಷ್ಟವಾಗುವ ಹಾಸ್ಯರಸದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಹಲವಾರು ನಾಟಕಕಾರರು ಆಗಾಗ ಪ್ರಯತ್ನ-ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಯಾಕಂದರೆ ರಂಗಭೂಮಿಯೆಂಬುದು ನಾಗರಿಕ ಚಿಕಿತ್ಸಕ ಶಕ್ತಿಯೊಂದಿಗೆ ಅನುದಿನವೂ ನಿತ್ಯನಿರಂತರ ಪ್ರವಹಿಸುವ … Read more

ಸತ್ಯಶೋಧಕನಿಗೊಂದು ರಂಗನಮನ ಸಲ್ಲಿಸಿದ ‘ಖರೇ-ಖರೇ ಸಂಗ್ಯಾ-ಬಾಳ್ಯಾ’ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. … Read more

ವಿಕಟ ವಿನಾಯಕ (ಭಾಗ-2): ಎಸ್. ಜಿ. ಸೀತಾರಾಮ್, ಮೈಸೂರು.

ಚೆಲುಗನ್ನಡದಲ್ಲಿ ಚೆನ್‍ಗಣೇಶ ಕೆಳಕಾಣುವ “ಕನ್ನಡಗಣೇಶ ಏಕವಿಂಶತಿ ನಾಮಾವಳಿ” ಪಾಠದಲ್ಲಿ “ಓ” ಮತ್ತು “ಕೈಮುಗಿದೆ” ಎಂದು ಪ್ರತಿ ಹೆಸರಿಗೂ ಹಿಂದೆ-ಮುಂದೆ (ಓ ಬೆನಕ! ಕೈಮುಗಿದೆ…ಓ ಆನೆಮೊಗ! ಕೈಮುಗಿದೆ ಎಂಬಂತೆ) ಸೇರಿಸಿಕೊಂಡು ಜಪಿಸಿದವರಿಗೆ ವಿಘ್ನಪತಿಯು ಅಪವಿಘ್ನದ ಅಭಯವನ್ನೀವನು. ಕನ್ನಡರಕ್ತವನ್ನು ಉಕ್ಕೇರಿಸಿ, ಅಂಥವರನ್ನು “ಕನ್ನಡ ಚೆನ್ನೈದಿಲು” ಮಾಡುವನು ಎಂದು “ಬೆನಕ ಬಲ್ಮೆ” ಎಂಬ ಹವಳಗನ್ನಡ ಕೃತಿಯು ವಿಶಿಷ್ಟವಾಗಿ ವಿಶದಪಡಿಸಿದೆ. ಬೆನಕ= ವಿನಾಯಕ ಪಿಳ್ಳಾರಿ (ಪಿಳ್ಳೆ)= ಬಾಲಗಣಪತಿ  ಆನೆಮೊಗ= ಆನೆಯ ಮುಖದವನು  ಸುಂಡಿಲಮೊಗ= ಸೊಂಡಿಲ ಮುಖದವನು ಇಲಿದೇರ= ಇಲಿಯನ್ನು ತೇರಾಗಿ ಚಲಿಸುವನು ಬಿಂಕಣಗಿವಿಯ … Read more

ವಿಕಟ ವಿನಾಯಕ: ಎಸ್. ಜಿ. ಸೀತಾರಾಮ್, ಮೈಸೂರು.

      ವಿಚಿತ್ರ ಮೈಸಿರಿ-ಮೈಮೆಗಳಿಂದ, ಆಕೃತಿ-ಅಲಂಕಾರಗಳಿಂದ, “ವಿಕಟಾಯ ನಮಃ” ಎಂದೇ ಆರಾಧಿಸಲ್ಪಡುವ ವಿನಾಯಕನ ವಿಕಟಬಿಂಬವೊಂದನ್ನು ಸೆರೆಹಿಡಿಯಲು ಈ ಅಕ್ಷರಬಂಧದಲ್ಲಿ ಯತ್ನಿಸಲಾಗಿದೆ. ಇದರಲ್ಲಿ “ಅಕಟವಿಕಟ ನುಡಿಕಟ್ಟು”, “ಘನೇಶ ಭವಿಷ್ಯೋತ್ತರ ಪ್ರಲಾಪವು”, “ಚೆಲುಗನ್ನಡದಲ್ಲಿ ಚೆನ್‍ಗಣೇಶ”, “ವಿಶೇಷ ವಿಘ್ನೇಶ” ಮತ್ತು “ವಿನಾಯಕನ ವಿನಿಕೆಗಾಗಿ” ಎಂಬೆನಿಸುವ ಪಂಚಖಂಡಗಳು ಒಳಗೂಡಿವೆ.   ಅಕಟವಿಕಟ ನುಡಿಕಟ್ಟು      ಗಣೇಶವಿಚಾರವನ್ನು ಕುರಿತಂತೆ ‘ಕೃಷ್ಣಶಕ ಹದಿನೂರನೇ’ ಶತಮಾನದ ಕೆಲವು ಸೊಟ್ಟಸೊಲ್ಲುಗಳು ಇಲ್ಲಿವೆ. “ಇವುಗಳನ್ನು ಯುಕ್ತಿಯಿಂದ ನೋಡಿದಲ್ಲಿ, ಬುದ್ಧಿನಾಥನು ಪ್ರಸನ್ನವದನನಾಗಿ ಒಂದೊಂದನ್ನು ನೋಡಿದಾಗಲೂ ಒಂದೊಂದು ವಿಘ್ನವನ್ನು ಉಪಶಾಂತಿಗೊಳಿಸುತ್ತಾ … Read more

ಕೃಷ್ಣ ಪ್ರೇಮದಲ್ಲಿ ನಾವೆಲ್ಲರೂ….: ಅಭಿ ಸಾರಿಕೆ

ಅಚ್ಯುತಮ್, ಕೇಶವಂ ಕೃಷ್ಣ ದಾಮೋದರಂ ಜಾನಕಿವಲ್ಲಭಂ ವಾಸುದೇವಂ ಭಜೇ… ಕೃಷ್ಣ ಎಂಬ ಹೆಸರೇ ಮನಕ್ಕೆ ಒಂದು ರೀತಿಯ ಆನಂದ ತರುತ್ತದೆ, ಕೃಷ್ಣ ಸರ್ವಾಂತರ್ಯಾಮಿ ಅಂದರೆ ಸರ್ವರ ಅಂತರಂಗಗಳಲ್ಲೂ ಅಲೆವವನು, ಅವನಿಲ್ಲದ ಉಸಿರಿಲ್ಲ. 'ಕೃಷ್ಣಂ ವಂದೇ ಜಗದ್ಗುರು' ಕೃಷ್ಣನೇ ಜಗದ ಗುರು, ಜಗದ ಗುರುವಾದ ಕೃಷ್ಣನೇ ನಿನಗೆ ವಂದಿಸುವೆ.  ನಾವೆಷ್ಟೆ ದೇವರನ್ನು ಪೂಜಿಸಿದರು ಆ ಪೂಜೆಯಲ್ಲೊಂದು ಭಯವಿರುತ್ತದೆ. ಆದರೆ ಕೃಷ್ಣನ ವಿಷಯ ಹಾಗಲ್ಲ ಆತನ ಪೂಜಿಸಲು ಭಯ ಪಡಬೇಕಿಲ್ಲ ಪ್ರೇಮ ಮಿಳಿತವಾದ ಭಕ್ತಿಯೊಂದಿದ್ದರೆ ಸಾಕು, ಕೃಷ್ಣನನ್ನು  ನಮಗೆ ಬೇಕಾದ … Read more

ಗೌರಿಯ ಕಂದ ಗಜಮುಖ ತಾಯಿಯ ಜೊತೆ ಬಂದ: ಅಭಿಸಾರಿಕೆ

ಸರ್ವ ಮಂಗಳ ಮಾಂಗಲ್ಯೇ  ಶಿವೇ ಸರ್ವಾರ್ಥ ಸಾಧಿಕೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇಃ ವಕ್ರತುಂಡ ಮಹಾಕಾಯ  ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದಾ….. ಗಣೇಶ, ಗೌರಿ ಹಬ್ಬ ಎಂದರೆ ಮಕ್ಕಳಿಂದ ದೊಡ್ಡವರೆಗೂ ತುಂಬಾ ಸಡಗರದಿಂದ ಹಬ್ಬ. ಗಣೇಶ ಗಂಡು ಮಕ್ಕಳ ಹಬ್ಬವಾದರೆ, ಗೌರಿ ಹೆಣ್ಣುಮಕ್ಕಳ ಹಬ್ಬ, ಗೌರಿ ವ್ರತ ಹೆಣ್ಣು ಮಕ್ಕಳಿಗೆ ಇರುವ ಮಹತ್ತರ ವ್ರತ,ಗೌರಿ ತನಗೆ ಶಿವನನ್ನು ಪಡೆಯಲು ಬಹು ಭಕ್ತಿ ಶ್ರದ್ದೆಯಿಂದ ಈ ಪೂಜೆ ಮಾಡಿದಳಂತೆ, ಇದರಿಂದಾಗಿಯೇ ಮದುವೆಯಾಗದ ಹೆಣ್ಣು … Read more