ತಿರಸ್ಕಾರ (ಭಾಗ 5): ಜೆ.ವಿ.ಕಾರ್ಲೊ, ಹಾಸನ
(ಇಲ್ಲಿಯವರೆಗೆ…) ಅವಳು ತನ್ನೊಟ್ಟಿಗಿದ್ದಾಳೆ ಎಂದು ಹ್ಯಾನ್ಸನಿಗೆ ಖಾತ್ರಿಯಾಯ್ತು. ಈ ಸಂಗತಿ ಅವನನ್ನು ನಿರಾಶೆಯ ಮಡಿಲಿಂದ ಮೇಲೆತ್ತಲು ನೆರವಾಯಿತು. ಆನ್ನೆಟ್ ಮತ್ತೊಬ್ಬನ ಪ್ರೇಮದಲ್ಲಿರುವ ಸಂಗತಿ ಅವನಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಅದೃಷ್ಟವಶಾತ್ ಅವನ ಪ್ರತಿಸ್ಪರ್ಧಿ ಜರ್ಮನಿಯಲ್ಲಿ ಯುದ್ಧಕೈದಿಯಾಗಿದ್ದ. ಮಗು ಜನಿಸುವ ಮೊದಲೇ ಅವನಿಗೆ ಬಿಡುಗಡೆಯಾಗದಿದ್ದರೆ ಸಾಕೆಂದು ಅವನು ಭಗವಂತನಿಗೆ ಮೊರೆಯಿಟ್ಟ. ಮಗು ಜನಿಸಿದ ನಂತರ ಆನ್ನೆಟ್ ಬದಲಾದರೂ ಆದಳೇ. ಈ ಹುಡುಗಿಯರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಊರಿನಲ್ಲಿ ಅವನಿಗೆ ಗೊತ್ತಿದ್ದ ಜೋಡಿಯೊಂದು ಎಷ್ಟೊಂದು ಅನ್ಯೋನ್ಯವಾಗಿತ್ತೆಂದರೆ, ಅವರಿಗೆ ಒಬ್ಬರನ್ನೊಬ್ಬರು ಬಿಟ್ಟು ನೋಡಲು ಸಾಧ್ಯವೇಯಿರಲಿಲ್ಲ. … Read more