ಹನುಮನ ವಿರಾಟ ರೂಪ ತೋರಿದ ಆ ಒಂದು ಹೂವು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಗದಾಯುದ್ದ ಎಂದರೆ ಭೀಮ! ಭೀಮಾ ಎಂದರೆ ಮಹಾಕಾಯ, ಬಲವಂತ! ಪರ್ವದಂತಹ ದೇಹದಾರಿ! ವಜ್ರಕಾಯ! ಇವನನ್ನು ವಾಯುವಿನ ಮಂತ್ರದಿಂದ ಕುಂತಿ ಮಗನಾಗಿ ಪಡೆಯುವಳು. ಬಾಲಕನಿದ್ದಾಗ ಪಾಂಡವರು ಕೌರವರ ನೂರು ಮಂದಿ ರಾಜಕುಮಾರರು ಸೇರಿ ಮರಕೋತಿ ಆಡುವಾಗ ಮರವನ್ನೇ ಅಲುಗಾಡಿಸಿ ಮರದಲ್ಲಿನ ಹಣ್ಣುಗಳನ್ನು ಉದುರಿಸಿದಂತೆ ಅವರನ್ನು ನೆಲಕುರುಳಿಸುತ್ತಿದ್ದ ಭೂಪ, ಅರಗಿನ ಮನೆಗೆ ಬೆಂಕಿಬಿದ್ದಾಗ ಎಲ್ಲರನ್ನೂ ಗುಪ್ತ ಸುರಂಗ ಮಾರ್ಗದಲ್ಲಿ ಒಬ್ಬನೇ ಹೊತ್ತೊಯ್ದ ಬಲಶಾಲಿ, ಬಂಡಿ ಭೋಜ್ಯ ಸವಿದು ಏಕಚಕ್ರ ನಗರಿಗೆ ಕಂಟಕನಾಗಿದ್ದ ಬಕಾಸುರನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟಿ ಏಕಚಕ್ರ … Read more

ಪಂಜು ಕಾವ್ಯಧಾರೆ

ಎನಿತು ಇನಿದು… ಎನಿತು ಇನಿದು ಅಕ್ಷಿನೋಟ; ಇಕ್ಷು ಮಧು! ಸ್ಪರ್ಶಿಸಿದ ರೇಶಿಮೆ ಮೈ ಎಷ್ಟು ಮೆದು!! ಮಧುರ ದನಿ ಅಧರ ಗಿಣಿ ಬರುವವೀ ಜಾತಿ ಧರ್ಮ; ಘನಪದರು ಎದುರ ದಾಟಬೇಕು ಸೀಳಿ; ಕೊಡದೆ ಸದರ ಏಕೆ? ಅಂಜುವೆ; ಎದೆಗುಂದುವೆ ಬಂದಿಹ ನಾ ವ್ಯಾಧನೆ? ನಾ; ಕಾಯುವ ಯೋಧ! ನಾವು ಆವು ಜೊತೆಗಿಹರು ಹಾವು ನಿತ್ಯ ಕಾಣುವುದು ಸಾವು-ನೋವು ಈ ಬಾಳೇ; ಸಿಹಿ-ಕಹಿ-ಬೇವು! -ಅಯ್ಯಪ್ಪಕಂಬಾರ         ಕೇಳು ನನ್ನೊಲವೇ …! ಒಲವೇ – ! … Read more

ಶಕ್ತಿದೇವತೆ: ಗಿರಿಜಾ ಜ್ಞಾನಸುಂದರ್

ಕಮಲಾ ತನ್ನ ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಬಾಲ್ಯ, ತನ್ನನ್ನು ಮುದ್ದುಮಾಡಿ ಬೆಳೆಸಿದ ತವರು, ಅವಳಪ್ಪ ಅಮ್ಮನ ಮುದ್ದು ಸಾಲದೆಂದು ಅವಳ ಅಣ್ಣ ಕೂಡ ಅವಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಅವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದ ಅವಳನ್ನು ಸಿರಿವಂತನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಅವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದ. ಆದರೆ ಅವನು ಮತ್ತು ಅವನ ಅಪ್ಪ ಅಮ್ಮ ಮನೆಯಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಿದ್ದರು. ಹೊರಗಿನ ಸಮಾಜದಲ್ಲಿ ಸಭ್ಯಸ್ಥರೆನಿಸಿಕೊಂಡ ಅವರು, ತಮ್ಮ ನಿಜವಾದ ಬಣ್ಣವನ್ನು ಮನೆಯಲ್ಲಿ ತೋರಿಸುತ್ತಿದ್ದರು. ಅವರನ್ನು … Read more

ಒಂಟಿ ಹೆಣ್ಣಿನ ಕಥೆ: ವರದೇಂದ್ರ ಕೆ

ಕಡು ಬಡತನದ ಬೇಗೆ. ಮನೆಯಲ್ಲಿ ತಾಯಿ ಮಗಳು ಮಾತ್ರ. ಗಾಯತ್ರಿ ಬದುಕಿಗೆ ಆದ ಹಲವು ಗಾಯಗಳಿಗೆ ನಗು ಸಹನೆಗಳನ್ನೇ ಔಷಧಿ ಆಗಿಸಿಕೊಂಡಾಕೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗುತ್ತಾಳೆ. ಹೆರಿಗೆ ಆದ ದಿನವೇ ಗಂಡ ಆ್ಯಕ್ಸಿಡೆಂಟ್ ನಲ್ಲಿ ಸತ್ತು ಹೋಗುತ್ತಾನೆ. ಹೆರಿಗೆಗೆ ಬಂದಾಕಿ ತವರು ಮನೆಯಲ್ಲೇ ಉಳಿಯುತ್ತಾಳೆ. ಹುಟ್ಟಿ ತಂದೆಯನ್ನು ತಿಂದುಕೊಂಡ ಕೆಟ್ಟ ನಕ್ಷತ್ರದವಳೆಂಬ ಹಣೆ ಪಟ್ಟಿ ಹೊತ್ತ ಮಗಳನ್ನು ಗಂಡನ ಅಪ್ಪ ಅಮ್ಮ, ಮುಖ ನೋಡಲೂ ಬರುವುದಿಲ್ಲ. ಗಾಯತ್ರಿಗೆ ತವರು ಮನೆಯೇ ಗತಿಯಾಗುತ್ತದೆ ತವರನ್ನು … Read more

ಮಾಲಿಂಗ. . .: ಸಿದ್ದರಾಮ ತಳವಾರ

ರಾಮೇನಹಳ್ಳಿಯ ಇಡೀ ಊರಿಗೆ ಊರೇ ಪತರಗುಟ್ಟಿ ಹೋಗಿದೆ. ಊರ ರಾಮೇಗೌಡರ ಮನೆಯೆಂಬುದೊಂದು ಸಂತೆಯಾಗಿ ಹೋಗಿತ್ತು. ಇಡೀ ಊರಿಗೆ ಊರೇ ಅವರ ಮನೆ ಮುಂದೆ ನೆರೆದು ನೆರೆದವರೆಲ್ಲ ಕೌತುಕದಿಂದ ಪರಿಶೀಲನೆಗೆ ಬಂದ ಪೋಲೀಸರ ಮುಖಗಳನ್ನ ದಿಟ್ಟಿಸುತ್ತಿದ್ದಾರೆ. ಊರಿನ ಯಾವೊಬ್ಬ ಹೆಂಗಸು ಮುಖ ತೊಳೆದಿಲ್ಲ ಅಂಗಲದ ಕಸ ಗುಡಿಸಿಲ್ಲ ರಂಗೋಲಿ ಹಾಕಿಲ್ಲ ಬಾಯಲ್ಲಿ ಸೆರಗಿಟ್ಟುಕೊಂಡು “ಯವ್ವಾ ಹೆಂಗಾಗ್ಯದೋ ಏನೋ, ಪಾಪ ದೇವ್ರಂಥ ಗೌಡ್ರಿಗೆ ಹಿಂತಾ ಸ್ಥಿತಿ ಯಾಕ ಬಂತುಅಂತೇನಿ, ಮನೀ ಮಗನಂಗಿದ್ದ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಪಾಪ ಗೌಡರ … Read more

ಅಂತರಾಗ್ನಿ (ಭಾಗ 5): ಕಿರಣ್. ವ್ಹಿ

ಇಲ್ಲಿಯವರೆಗೆ.. ” ಆಮೇಲೆ ಇಲ್ಲಿಗೆ ಹೊರಟದ್ದು ಮಧ್ಯದಲ್ಲಿ ನೀವು ಸಿಕ್ಕಿದ್ದು. ನಿಮ್ಮ ಪರಿಚಯ. ಇದೆಲ್ಲ ನಡೆದದ್ದು. ಇಲ್ಲಿ ಕೂತುಕೊಂಡು ಗುಂಡು ಹಾಕುತ್ತಿರೋದು. ಅಷ್ಟೇ ಅಂಕಲ್. ಹೆಂಗಿತ್ತು ನನ್ನ ಪ್ಲಾಪ್ ಲವ್ ಸ್ಟೋರಿ?” ಎನ್ನುತ್ತಾ ನಕ್ಕ ಹರಿ. ಅಷ್ಟರಲ್ಲಿ ನಶೆಯಲ್ಲಿ ತೇಲುತ್ತಿದ್ದ. ” ಇಷ್ಟೆಲ್ಲಾ ಆಗಿದೆ ನಿನ್ನ ಲೈಫ್ನಲ್ಲಿ ಅಂತಾಯ್ತು..” ” ಹಂ ಅಂಕಲ್. ಎಲ್ಲರೂ ಮೋಸಗಾರು……. ಮೋಸಗಾರರು.” ಎನ್ನುತ್ತ ಧೊಪ್ಪನೆ ಬಿದ್ದುಬಿಟ್ಟ. ಹುಡುಗ ಫುಲ್ ಟೈಟ್ ಆಗಿದ್ದಾನೆ ಎಂದುಕೊಂಡು, ಎಲ್ಲವನ್ನೂ ನೀಟಾಗಿ ತೆಗೆದಿಟ್ಟು, ತಮ್ಮ ರೂಮಿಗೆ ನಡೆದರು … Read more

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ ನಮ್ಮ ಮೈತ್ರಿ ಪ್ರಕಾಶನದ ವತಿಯಿಂದ ಈಗಾಗಲೇ ಅಪ್ಪನ ಕುರಿತಾಗಿ ಎರಡು ಪುಸ್ತಕಗಳು ಬಂದು ಜನಜನಿತವಾಗಿವೆ ಈಗ ನಿಮ್ಮ ತಾಯಿಯ ಕುರಿತಾಗಿ ಭಾವನೆಗಳ ಅನಾವರಣಗೊಳಿಸಲು ಸದಾವಕಾಶ. ಅವ್ವ, ಆಯಿ, ಮಾಯಿ, ಅಬ್ಬೆ ಹೀಗೆ ಅವಳ ನಾಮ ಹಲವು ದೈವಿರೂಪ ಒಂದೇ..! ನಿಮ್ಮ ತಾಯಿಯ ಬಗ್ಗೆ ನಿಮಗಿರುವ ಆದರ,ಪ್ರೀತಿ, ಅಂತಃಕರಣ ಲೇಖನದ ರೂಪದಲ್ಲಿ ಪ್ರಕಟಿಸುವ ವಿಚಾರವಿದೆ..ಲೇಖನ ಬರೆದು ಕೊಡಲು ನಿಮಗೆ ಖುಶಿ ಅನಿಸಿದರೆ ಪ್ರಕಟಿಸಲು ಮೈತ್ರಿಗೆ ಡಬಲ್ ಖುಷಿ….!! … Read more

ಕನ್ನಡ ಕಲಿಸಿದ ಮಕ್ಕಳು: ವೆಂಕಟೇಶ ಚಾಗಿ

ಆಸಂಗಿಪುರದ ಮಕ್ಕಳು ಎಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧಿ. ಯಾವುದೇ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಓದಿನಲ್ಲಿ ಆಸಂಗಿಪುರದ ಮಕ್ಕಳು ಸದಾ ಮುಂದು. ಪ್ರತಿ ಸಾರಿಯೂ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡೇ ಊರಿಗೆ ಬರುತ್ತಿದ್ದರು. ಆಸಂಗಿಪುರವು ಆ ಊರಿನ ಮಕ್ಕಳಿಂದಲೇ ಪ್ರಸಿದ್ಧಿ ಪಡೆದಿತ್ತು. ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಗಳಿಸಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಆ ಊರಿನ ಶಾಲೆಯ ಗುರುಗಳು. ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಛಲದಿಂದ ಯಾವುದೇ ಕಾರ್ಯವನ್ನಾಗಲೀ ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು. ಬೇಸಿಗೆ ರಜೆ ಹತ್ತಿರ ಬರುತ್ತಿದ್ದ ಕಾಲ … Read more

ವಿಭಿನ್ನ ಕಲೆಯ ಪ್ರವೃತ್ತಿಯನ್ನು ವೃತ್ತಿ ಯನ್ನಾಗಿಸಿ ಯಶಸ್ಸು ಕಂಡ ಭರತ್ ಕುಲಾಲ್: ಹರ್ಷಿತಾ ಹರೀಶ ಕುಲಾಲ್

ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಬಾತು ಕುಲಾಲ್.. ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿ ಯವರ ತೃತೀಯ ಪುತ್ರನಾಗಿ. ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ … Read more

ಮಾಯವಾಗುತ್ತಿರುವ ಬರವಣಿಗೆ ಎಂಬ ಭಾಷಾ ಕೌಶಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ವಿಜ್ಞಾನ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಮಾನವನ ಬದುಕು ಎಷ್ಟು ಸುಖಮಯ ಸುಲಭವಾಗುತ್ತದೋ ಅಷ್ಟೇ ಸಂಕೀರ್ಣವೂ ಅವಲಂಬಿಯೂ ಆಕಸ್ಮಿಕವೂ ಅಘಾತಕಾರಿಯೂ ಆಗುವುದರೊಂದಿಗೆ ಏಷ್ಟೋ ಶ್ರೇಷ್ಠ ಕಲೆಗಳ ಅಳಿವಿಗೂ ಹೊಸ ಕಲೆಗಳ ಸೃಷ್ಟಿಗೂ ನಾಂದಿ ಹಾಡಿದೆ! ಆದರೆ ವಿಜ್ಞಾನದ ಪ್ರಗತಿಯ ಓಟದಲ್ಲಿ ನಾವು ಈ ಸಂಕೀರ್ಣತೆಯನ್ನು, ಕಲೆಯನ್ನೂ ಮುಖ್ಯವೆಂದು ಭಾವಿಸುತ್ತಿಲ್ಲ! ಮುಂದೊಂದು ದಿನ ಅದರ ಪ್ರಾಮುಖ್ಯತೆ ಗೊತ್ತಾಗುತ್ತದೆ. ವಿಜ್ಞಾನ ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದಾಗಿ ಇಂದು ಕ್ಯಾಶ್ಲೆಸ್ ವ್ಯವಹಾರ ಆರಂಭವಾಗಿದೆ! ಇದು ಅದ್ಭುತ ಸಾಧನೆ! ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು … Read more

ಪಂಜು ಕಾವ್ಯಧಾರೆ

ಗಜಲ್ ಕೊನೆಯುಸಿರವರೆಗೂ ನಿನ್ನದೇ ಹಾಡು ಹಾಡಬೇಕೆಂದಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ನೆನ್ನೆಗೇ ವಿದಾಯ ಹೇಳಿ ನನ್ನೆಲ್ಲ ತಪ್ಪುಗಳ ಚೀಟಿ ಬರೆದಿಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಪ್ರೀತಿಯ ಯುಗಾದಿ ಮೊಹರಂಗಳು ಈ ಜಗತ್ತಿನಲಿ ಎಲ್ಲಿಯವರೆಗೆ ಒಂದಾಗಲಾರವೋ ಸಾವು ಮೆರೆಯುವುದು ಗಲ್ಲಿಯಲಿ ಸದ್ದಿಲ್ಲದಂತೆ ಬೇವು ಬೆಲ್ಲ ಕೊಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಅಪ್ಪ ಕಣ್ಣು ಅಮ್ಮ ಹೃದಯ ರಕ್ತ ಚರಿತ್ರೆಯಲಿ ದಾಖಲಾಗಿ ಕಣ್ಣೀರಿಗೆ ಬದಲು ರಕ್ತ ಸೋರಿಹುದು ಅಟ್ಟಹಾಸದ ಬೆಂಕಿಗೆ ಆಹುತಿಯಾದ ಆತ್ಮಗಳ ಕ್ಷೇಮ ಕೋರಿರುವೆ … Read more

ಬಾಲಕಿ ನೀಡಿದ ಆ ೫೭ ಸೆಂಟ್‌ಗಳು: ಎಂ.ಎನ್.ಸುಂದರ ರಾಜ್

ಅದೊಂದು ಚರ್ಚ್. ಚರ್ಚಿನಲ್ಲೊಬ್ಬ ಉದಾರವಾದಿ ಪಾದ್ರಿ. ಕೇವಲ ಧರ್ಮಪ್ರಚಾರವಷ್ಟೇ ತನ್ನ ಜೀವನದ ಉದ್ದೇಶವೆಂದು ಭಾವಿಸದವನು. ತನ್ನ ಚರ್ಚಿನ ಸುತ್ತ ಮುತ್ತ ಇದ್ದ ಬಡ ಕೂಲಿ ಕಾರ್ಮಿಕರ ಮನೆಮನೆಗೆ ಹೋಗಿ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದ. ಅಂತಹ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನೂ ಸಹ ಚರ್ಚ್ನ ಕೆಳಭಾಗದ ಒಂದು ಪುಟ್ಟ ಕೊಠಡಿಯಲ್ಲಿ ನಡೆಸುತ್ತಿದ್ದ. ಅಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಸುತ್ತಿದ್ದ. ಅವರಿಗೆ ಲಘು ಉಪಹಾರ, ಪುಸ್ತಕ, ಬಟ್ಟೆ ಎಲ್ಲವನ್ನೂ ನೀಡಿ, … Read more

ಕರಾವಳಿಯ ಸೆಖೆಯೂ ಕುಚ್ಚಲು ಗಂಜಿಯೂಟವೂ: ಕೃಷ್ಣವೇಣಿ ಕಿದೂರ್

ಈ ವರ್ಷ ಕಾಡುಮಾವಿನಮರಗಳ ತುಂಬ ಜೋತಾಡುವ ಗೊಂಚಲು ಗೊಂಚಲು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮನೆಯಂಗಳದಲ್ಲಿ ನಿಂತು ಸುತ್ತ ತಿರುಗಿದಾಗ ಆಕಾಶ ಮುಟ್ಟುವ ಹಾಗೆ ಬೆಳೆದ ಕಾಡುಮಾವಿನ ಮರದ ತುಂಬ ಗಾಳಿಗೆ ತೊನೆಯುವ ಅರೆಹಣ್ಣು, ಕಾಯಿಗಳು . ಬಲವಾಗಿ ಬೀಸುವ ಗಾಳಿ ಉದುರಿಸುವ ಹಣ್ಣು ಹೆಕ್ಕಲು ಮಕ್ಕಳ ಸ್ಪರ್ಧೆ.ಈ ದುರ್ಮುಖ ಸಂವತ್ಸರವನ್ನೇ ಅಪರಾಧಿ ಮಾಡಬೇಕೋ ಅಲ್ಲ ವರುಷ ವರುಷಕ್ಕೂ ಬರಡಾಗುವ ಪ್ರಕೃತಿಗೆ ವಿಷಾದಿಸಬೇಕೋ ಅರಿಯದು. ಹೇಳಿ ಕೇಳಿ ನಮ್ಮದು ಅರಬ್ಬಿ ಸಮುದ್ರದ ಪಕ್ಕದ ಊರು. ಕೇರ ನಾಡಿನ ತುಂಬ … Read more

ದೈವತ್ವದ ಪರಿಕಲ್ಪನೆ: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ … Read more

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ.. ಒಂದು ವಾರದಿಂದ ಅನೂಷಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಏನಾಯಿತು ಎಂದು ಕೇಳಿದರೆ ಬಾಯಿ ಸಹ ಬಿಡಲಿಲ್ಲ. ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಭಾವನೆ ಹರಿಯಲ್ಲಿ ಮೂಡಲಾರಂಭಿಸಿತು. ಮುಂದಿನವಾರ ಊರಿಗೆ ಹೋಗುವ ಯೋಚನೆಯಲ್ಲಿದ್ದ ಹರಿ, ಅದೇ ಶುಕ್ರವಾರದ ರಾತ್ರಿ ಬಸ್ ಹತ್ತಿದ. ಏನಾಗಿದೆಯೋ ಎಂಬ ಚಿಂತೆ ಅವನನ್ನು ಬಹಳವೇ ಕಾಡುತ್ತಿತ್ತು. ರಾತ್ರಿಯಿಡಿ ನಿದ್ರೆ ಮಾಡಲಿಲ್ಲ ಹರಿ. ಏನೇನೋ ಯೋಚನೆಗಳು ಬೆಳಗು ಯಾವಾಗ ಆದೀತು, ಯಾವಾಗ ತಲುಪುತ್ತೇನೊ, ಎನ್ನುವ ಅವಸರ. ಬೆಳಗ್ಗೆ ಏಳರ ಸುಮಾರು ಬೆಂಗಳೂರು ತಲುಪಿದ. ಮನೆಗೆ ಹೋದವನೇ ಫ್ರೆಶ್ … Read more

ರೋಮಾಂಚಕ ಗಣಿತ ! ಶಾಲೆಯಲ್ಲಿ ಇದನ್ನು ಕಲಿಸುವುದಿಲ್ಲ: ಪ್ರವೀಣ್‌ ಕೆ.

ಗಣಿತವನ್ನು ಎಷ್ಟೊಂದು ಎಂಜಾಯ್ ಮಾಡಬಹುದು ಎಂಬುದಕ್ಕೆ ಈ ವಿಡಿಯೋ ನೋಡಿ. ಇದರಲ್ಲಿ ಒಂದೇ ವಿಧಾನದಿಂದ ಹಲವು ರೀತಿಯ ಗಣಿತದ ಸಮಸ್ಯೆಗಳನ್ನು ಹೇಗೆ ಬಿಡಿಸಬಹುದು ಎಂಬುದನ್ನು ತೋರಿಸಿದ್ದೇನೆ ಅದೂ ಕೂಡ 100% ಸರಿಯಾಗಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸಾಗಬೇಕೆಂದರೆ ಇಂಥ ಸುಲಭ, ತ್ವರಿತ ವಿಧಾನಗಳು ಅವಶ್ಯಕ. ನನ್ನ ಚಾನೆಲ್ ಇರುವುದೇ ನಿಮ್ಮನ್ನು ಯಶಸ್ಸಿನತ್ತ ಒಯ್ಯುವುದಕ್ಕಾಗಿ. ಇನ್ನೂ ಇಂಥ ಹಲವಾರು ಅದ್ಭುತ ವಿಧಾನ, ತಂತ್ರಗಳನ್ನು ಮುಂದಿನ ವಿಡಿಯೋಗಳಲ್ಲಿ ಕಾಣಬಹುದು. ನೀವು ಊಹಿಸದಷ್ಟು ಸುಲಭ ವಿಧಾನಗಳಿವು. ವಿಡಿಯೋ ನೋಡಿ, ಆನಂದಿಸಿ, ಇಷ್ಟವಾದರೆ ಚಂದಾದಾರರಾಗಿ, … Read more

ಮಕ್ಕಳ ಕಥೆಗಳ ಆಹ್ವಾನ

ಮಕ್ಕಳ ಕಥೆಗಳ ಆಹ್ವಾನ ರಾಯಚೂರು ತಾಲೂಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ “ಮಕ್ಕಳ ಕಥೆಗಳ” ಪುಸ್ತಕ ಹೊರತರಬೇಕೆಂದು ನಿರ್ಧರಿಸಿದ್ದು, ಇದೆ ನವೆಂಬರ್ ೧೪ ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಮಕ್ಕಳ ಪ್ರಪಂಚಕ್ಕೆ ಒಂದು ಉತ್ತಮ ಪುಸ್ತಕವನ್ನು ನವೆಂಬರ್ ೧೪ ರಂದೆ ಒಂದು ಪುಸ್ತಕ ಮಕ್ಕಳ ಕೈ ಸೇರಬೇಕಿದೆ ಕಾರಣ ಆಸಕ್ತ ಕಥಾ ಬರಹಗಾರರು ನೀವು ಬರೆಯುವ ಮಕ್ಕಳ ಕಥೆಯನ್ನು ನವೆಂಬರ್ 4 ರ ಮಧ್ಯೆ ರಾತ್ರಿ ಒಳಗೆ ತಲುಪಿಸಬೇಕು. ▪ಸೂಚನೆಗಳು:- =>ಮಕ್ಕಳ ಕಥೆಯೆ ಆಗಿರಬೇಕು ೫೦೦-600 ಪದಗಳು … Read more