ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ … Read more

ನುಣುಪುಗಲ್ಲು: ತಿರುಪತಿ ಭಂಗಿ

“ಆದದ್ದು ಆಗೇತಿ ಹ್ವಾದುದ್ದು ಹೋಗೈತಿ, ಇನ್ನ ಏನಮಾಡಿದ್ರ ಹೊಡಮರಳಿ ಬರಾಕ, ಹೆಂಗ ಸಾದ್ಯ ಆದಿತವ್ವಾ..? ನಿನ್ನ ಹಣಿಬರ್ದಾಗ ಏನ್ ಬರದಿದ್ದೋ ಆ ಹಾಟ್ಯಾನ ದೇವ್ರಾ, ಅದನೇನಾರ ತಪ್ಪಸಾಕ ಬರತೈತೇನವ್ವಾ.. ಸಮಾಧಾನ ತಗೋ ತಂಗಿ, ನಿಂದರ ಏನ್ ದೊಡ್ಡ ವಯಸ್ಸಲ್ಲಾ ಈಗ ಬಲೆಬಾರ ಆದ್ರ ಇಪ್ಪತೈದ ಇರ್ಬೇಕ, ಇಷ್ಟ ಸಣ್ಣ ವಯ್ಯಸ್ದಾಗ ಗಂಡನ ಕಳಕೊಂಡ, ಮನಿಮೂಳಿಯಾಗಿ ಕುಂದ್ರೂದಂದ್ರ ನಿನ್ನ ಹಣಿಬರಾ ಎಷ್ಟಾರ ಸುಮಾರ ಇರ್ಬಾರ್ದ, ಸತ್ತಾರ ಜೋಡಿ ನಾಂವೂ ಸಾಯಾಕ ಹೆಂಗ ಸಾದ್ಯ ಆದೀತವ್ವಾ..? ನಾಂವ ನಮಗೋಸ್ಕರಾ ಇರ್ಬೇಕ, … Read more

ಬೆಂಬಿಡದ ಭೂತ: ರಾಜೇಂದ್ರ ಬಿ. ಶೆಟ್ಟಿ

ಸುಮಾರು ಅರುವತ್ತು ವರ್ಷಗಳ ಹಿಂದೆ * ಅಪ್ಪ ಇನ್ನೂ ಮನೆಗೆ ಬಂದಿಲ್ಲ. ಅವರು ಮಂಗಳೂರಿನಿಂದ ಬರಬೇಕು. ಅದು ನಮ್ಮ ಊರಿನಿಂದ ಹತ್ತೊಂಬತ್ತು ಮೈಲು ದೂರವಂತೆ. ನಾನು, ಅಣ್ಣ ಮತ್ತು ಅಮ್ಮ ಅಪ್ಪನಿಗಾಗಿ ಕಾದು ಕುಳಿತಿದ್ದೇವೆ. ಯಾವಾಗಲೂ ರಾತ್ರಿ ಆಗುವ ಮೊದಲೇ ಬರುವ ಅಪ್ಪ ಇವತ್ತು ಇನ್ನೂ ಬಂದಿಲ್ಲ. “ಅಪ್ಪ ಕೊನೆಯ ಬಸ್ಸಿನಲ್ಲಿ ಬರಬಹುದು. ನೀವು ಊಟ ಮಾಡಿ ಮಲಗಿ” ಎಂದು ಅಮ್ಮ ನಮಗೆ ಗಂಜಿ ಬಡಿಸಿದರು. ಊಟ ಮಾಡಿ, ನಿದ್ದೆ ತಡೆಯಲಾರದೆ ನಾನು ಮಲಗಿದೆ. ನಡುವೆ ಎಚ್ಚರ … Read more

ಪದ್ಯಗಳೂ ಹೂನಗೆ ಬೀರಲಿ: ಹೆಚ್. ಷೌಕತ್ ಆಲಿ

ಬೆಣ್ಣೆನಗರಿಯ ಸರಿತ ಕೆ.ಗುಬ್ಬಿ ಹೊಸಪೇಟೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಂತೆ ಸಾಹಿತ್ಯಸಕ್ತಿ ಬೆಳೆಸಿಕೊಂಡ ಕವಯತ್ರಿಯು ಹೌದು ಅನೇಕ ವಿಷಯಗಳು ವಿಚಾರಗಳು, ಘಟನೆಗಳು ಕಣ್ಣಿನ ಮುಂದೆ ಘಟಿಸಿದಾಗ ಆ ಚಿತ್ರಗಳನ್ನು ಮನದಾಳದಲ್ಲಿ ರೂಪನೀಡಿ ಸುಂದರ ಕವಿತೆಗಳಿಗೆ ತಮ್ಮ ಲೇಖನಿಯ ಮುಖಾಂತರ ಬರೆಯುವ ಹವ್ಯಾಸಿ ಕನ್ನಡತಿ. ಬದುಕು ಸುಲಭದ ವಿಚಾರವಲ್ಲ ಇಲ್ಲಿ ಅನೇಕ ಹಂತಗಳಿವೆ, ಮಜಲುಗಳಿವೆ. ಸಂತಸ ಸಂಭ್ರಮ ನೋವು ಹಿಂಸೆ ಎಲ್ಲವನ್ನು ಮೆಟ್ಟಿನಿಲ್ಲಲ್ಲಿ ಸಮಾಜದ ವಕ್ರತೆಯಲ್ಲಿಯು ಗಮನಿಸಬೇಕಾದ ಜವಾಬ್ದಾರಿಯು ತಮ್ಮ ಕವನಗಳ ಮೂಲಕ ಓದುಗರ ಮುಂದೆ ಪ್ರಸ್ತುತ ಪಡೆಸುವಲ್ಲಿ ಸಫಲತೆಯನ್ನು … Read more

ಮೈ ಫಿರ್ ಭೀ ತುಮ್ ಕೋ ಚಾಹುಂಗಾ…: ಬೀರೇಶ್ ಎನ್ ಗುಂಡೂರ್

ಕಗ್ಗತ್ತಲ ರಾತ್ರಿಗೂ ಒಂದು ಕೊನೆಯುಂಟು. ಅಲ್ಲಿ ಹೊಸ ಬೆಳಕಿನ ಹೊಸ ಚಿಗುರಿನ ಆಶಯ ಉಂಟು. ಕಪ್ಪುಗಟ್ಟಿ ಆರ್ಭಟಿಸಿ ಸುರಿಯುವ ಮಳೆಯು ಕೂಡ ಒಂದರೆ ಕ್ಷಣ ಯೋಚಿಸಿ ರಂಗುರಂಗಿನ ಕಾಮನಬಿಲ್ಲಿನ ಅಂದವನಿಕ್ಕುತ್ತದೆ. ಆದರೆ ಆ ನಿನ್ನ ಓರೆನೋಟದ ಬಿಸುಪು ಮಾತ್ರ ಇನ್ನೂ ಕರುಣೆ ತೋರುತ್ತಿಲ್ಲ ನೋಡು. ದಿನವೂ ಖಾಲಿ ಮಾಡಿಕೊಳ್ಳುವ ಚಂದಿರನ ಕಾಂತಿಗೂ ಹೊಟ್ಟೆ ಕಿಚ್ಚುಪಡುವಷ್ಟು ಕಾಂತಿಯನ್ನು ಕಣ್ಣಲ್ಲೇ ಕಾಪಿಟ್ಟುಕೊಂಡಿದ್ದೀಯಾ. ನನ್ನ ಕೆಣಕಲೆಂದೆ ಆ ನೀಳ ಹುಬ್ಬುಗಳ ಸಂಗ ಬೆಳೆಸಿದ್ದೀಯ. ಮುಂಗುರುಳ ಸರಿಸಿ ಸರಿಸಿ ಆ ಮೂಗುತಿಗೆ ಅಷ್ಟು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 21 & 22): ಎಂ. ಜವರಾಜ್

-೨೧- ಅಯ್ಯಯ್ಯೋ ಅಯ್ಯಯ್ಯಪ್ಪಾ ಅಂತಂತಾಗಿ ಮೈಕೈ ನೋವ ತಡಿದೆ ಪಕ್ಕಂತ ಕಣ್ಬುಟ್ಟು ನೋಡುದ್ರಾ.. ಸೂರ್ಯ ಮೂಡಿ ನಾ ಗಬ್ಬುನಾತ ಬೀರೋ ಮೋರಿ ಬದಿಲಿ ಬಿದ್ದು ನನ್ನ ಆಕಡ ಒಂದು ಈಕಡ ಒಂದು ಹಾಲ್ಕುಡಿಯೋ ಸಣ್ಣ ನಾಯಿ ಮರಿಗಳು ಎಳಿತಾ ಈಜಾಡ್ತ ಆಟ ಆಟ್ತ ಪಣ್ಣ ಪಣ್ಣಾಂತ ಆಕಡ್ಕು ಈಕಡ್ಕು ನೆಗೆದಾಡ್ತ ಗುರುಗುಡ್ತ ಇದ್ದು. ಅಸ್ಟೊತ್ಗ ಬಾಗ್ಲು ಕಿರುಗುಟ್ತು ನನ್ನ ದಿಗಿಲು ಅತ್ತಗೋಗಿ ನೋಡ್ತು.. ಸವ್ವಿ ಕಣ್ಣುಜ್ಕೊಂಡು ತಲ ಕೆರಕೊಂಡು ಲಂಗ ಮ್ಯಾಲಕ್ಕೆತ್ಕಂಡು ಬಾಯಾನಿ ಆಕುಳಿಸ್ಕಂಡು ಮೂಲಲಿರ ಸೀಗಕಡ್ಡಿ … Read more

ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ: ನಾಗೇಶ್ ಪ್ರಸನ್ನ.ಎಸ್.

ಓದಿಕೊಂಡಿದ್ದನ್ನೆಲ್ಲಾ ಬರೆಯಲಾಗುವುದಿಲ್ಲ, ಅರಿತುಕೊಂಡಿದ್ದನ್ನಷ್ಟೇ ಬರೆಯಲಾಗುವುದು. ಅದಲ್ಲದೇ, ಅರಿತುಕೊಂಡ ಎಷ್ಟೋ ವಿಷಯಗಳಲ್ಲಿ ಕೆಲವು ಮರೆತು ಹೋಗುವುದೂ ಉಂಟು. ಮರೆತ ವಿಷಯಗಳನ್ನು ಜ್ಞಾಪಿಸಿಕೊಂಡು ಬರೆಯುವುದು ಮಾತ್ರ ಕೆಲವೇ ಕೆಲವು. ಅಂತಹ ಕೆಲವು ವಿಷಯಗಳನ್ನು ಬರೆಯಲೆತ್ನಿಸಿದಾಗಲೇ ತಿಳಿದುಕೊಂಡಿರುವುದು ಎಷ್ಟೆಂದು ತಿಳಿಯುವುದು. ಈ ಒಂದೆರಡು ವಿಷಯಗಳನ್ನು ತಿಳಿದ ಮೇಲೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ# ನಾವು ಮೊದಲೇ ಸಿದ್ಧರಿರುತ್ತೇವೆ. ಯಾವ ವಿಷಯದ ಬಗ್ಗೆ ಬರೆಯಬೇಕು, ಯಾವ ಅಂಶಗಳನ್ನು ಬರೆಯಬೇಕು, ಯಾವ ಅಳತೆಯಲ್ಲಿ ಬರೆಯಬೇಕು ಮತ್ತು ಇತ್ಯಾದಿ. ಬರವಣೆಗಯಲ್ಲಿ ಶುದ್ಧತೆಯ ಜೊತೆಗೆ ಪಕ್ವತೆ ಇರಬೇಕು. ಬರೆಯುತ್ತಿರುವ … Read more

ಬಸು ಬೇವಿನಗಿಡದ ಅವರ “ನೆರಳಿಲ್ಲದ ಮರ”: ಅಶ್ಫಾಕ್ ಪೀರಜಾದೆ.

ನಾಡು ಕಂಡ ಪ್ರಮುಖ ಕಥೆಗಾರರಲ್ಲಿ ಬೇವಿನಗಿಡದ ಕೂಡ ಒಬ್ಬರು. ಅದರಲ್ಲೆ ವಿಶೇಷವಾಗಿ ಉತ್ತರ ಕರ್ನಾಟಕದ ಅತ್ಯಂತ ಪ್ರಖ್ಯಾತ ಕಥೆಗಾರರು ಬಸು ಅವರು. ತಾಯವ್ವ, ಬಾಳೆಂಬ ಕಂಬ, ಹೊಡಿ ಚಕ್ಕಡಿ, ಹಾಗು ಉಗುಳು ಬುಟ್ಟಿ ಹೀಗೆ ಒಟ್ಟು ಐದು ಕಥಾಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಬಸುಬೇವಿನ ಗಿಡದ ಅವರು ಇತ್ತೀಚೆಗೆ ಆರನೇಯ ಕಥಾ ಸಂಕಲನ “ನೆರಳಿಲ್ಲದ ಮರ” ಕತಾಪ್ರಿಯರ ಕೈಗಿಟ್ಟಿದ್ದಾರೆ. ಪ್ರತಿಷ್ಠಿತ ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿ ತನ್ನ ಬಾಹ್ಯ ಸೌಂದರ್ಯದಿಂದ ಮನ ಸೆಳೆಯುವಂತೆ ಒಳ … Read more

ಸಾವನ್ ಕೆ ಸಿಂಧನೂರು ರವರ ಮಗರಿಬ್‌ ಗಜಲ್‌ ಸಂಕಲನ: ಶಿವಕುಮಾರ ಮೋ ಕರನಂದಿ

ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು. ಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ ಹುಚ್ಚು … Read more

ಪಂಜು ಕಾವ್ಯಧಾರೆ

ನಂಕ್ಯಾಕೋ…. ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ ಸುಮ್ಜೆ ಕೂಕಂತೀನಿ ಗವ್ವನ್ನೋ ಕತ್ಲು ಮೈಮ್ಯಾಗೇ ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ ಗ್ವಾಡೇ ಮ್ಯಾಗೆ ನೀನೇ ಬಂದಂಗಾತು ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ ಕಳಿಯಾಕೆ ಮನುಸಾಗ್ತಿಲ್ವಾ… ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ … Read more

ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್

ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! … Read more

ಭಾವೈಕ್ಯತೆಯೆಂಬ ಬಳ್ಳಿಯ ಹೂವುಗಳು: ಹೆಚ್. ಷೌಕತ್ ಆಲಿ

ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ … Read more

ಅಹಮಿಲ್ಲದ ಮಹಮದರ ಬದುಕೇ ಕವಿತಾಸಾರ: ಡಾ. ಹೆಚ್ಚೆನ್ ಮಂಜುರಾಜ್

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ, ಮಧುರ ನೆನಪೇ? ಬಹಳ ಒಳ್ಳೆಯ ಕವಿ ಹಾಗೂ ಅದಕಿಂತಲೂ ಒಳ್ಳೆಯ ಮನುಷ್ಯರಾದ ನಿಸಾರ್ ಅಹಮದ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ‘ಕನ್ನಡವೆಂದರೆ ಬರಿ ನುಡಿಯಲ್ಲ. ………’ ಎಂದು ತಿಳಿಸಿ ಕೊಟ್ಟವರಿವರು. ಮನಸು ಗಾಂಧಿಬಜಾರು ಎಂದವರು. ಕನ್ನಡ ನಾಡು ನುಡಿಗಳ ನಿತ್ಯೋತ್ಸವವನ್ನು ಸತ್ಯವಾಗಿಸಿದವರು. ಕುರಿಗಳು ಸಾರ್ ಕುರಿಗಳು ಎಂದು ವಿಡಂಬಿಸಿದವರು. ಮೂಲತಃ ಭೂಗರ್ಭ ವಿಜ್ಞಾನಿಯಾದರೂ ನವೋಲ್ಲಾಸದ ಕವಿಗಳಾಗಿಯೇ … Read more

ಕುರಿಯ ಹಾಲಿನ ಐಸಕ್ರೀಮು (ಭಾಗ ೧): ಗುರುಪ್ರಸಾದ ಕುರ್ತಕೋಟಿ

ಅಮೇರಿಕೆಗೆ ಹೋಗುವುದು ಖಚಿತವಾಗಿ, ವೀಸಾ ಸಂಭ್ರಮಗಳೆಲ್ಲ ಮುಗಿದಾಗ ನಮ್ಮ ಕಂಪನಿಯಲ್ಲಿ ನನಗೆ ಕರೆಗಳು ಬರಲು ಶುರುವಾಗಿದ್ದವು. ಅಮೆರಿಕೆಯ ವೀಸಾ ಸೀಲು ಬಿದ್ದವರು ಅಂದರೆ ಮದುವೆಗೆ ತಯಾರಾದ ಕನ್ಯೆಯರು ಇದ್ದಂತೆ. ಹುಡುಗಿಗೆ ವಯಸ್ಸಾದಂತೆ ತಂದೆತಾಯಿಯರಿಗೆ ಎಷ್ಟು ಆತಂಕ ಇರುತ್ತದೋ (ನಮ್ಮ ಕಾಲದಲ್ಲಿ ಹಾಗಿತ್ತು, ಈಗ ಹುಡುಗನ ತಂದೆತಾಯಿಗೆ ಅಂತ ಓದಿಕೊಳ್ಳಿ!) ಅದಕ್ಕಿಂತ ಹೆಚ್ಚು ಆತಂಕ ಆಯಾ ವಿಸಾಧಾರಿಗಳ ಮ್ಯಾನೇಜರ್ ಗಳಿಗೆ. ನಾವು ಒಂಥರಹದ ಬಿಸಿ ತುಪ್ಪ ಅವರಿಗೆ. ಅದಕ್ಕೆ ಕಾರಣವೂ ಇದೆ. ವೀಸಾಕ್ಕೆ ಅಂತ ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. … Read more

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more

ಸುಖಾಂತ: ಅಶ್ಫಾಕ್ ಪೀರಜಾದೆ

-೧- ಮೊದಮೊದಲು ಕ್ಷೇಮವಾಗಿಯೇ ಇತ್ತು ಜೀವನ, ಹೂವಿನಹಾಸಿಗೆಯಾಗಿತ್ತು. ಯಾರಿಗೆ ಗೊತ್ತಿತ್ತು? ಹೀಗೆ ಮುಳ್ಳಿನದಾರಿಯಾಗುವುದೆಂದು?, ಬದುಕು ಕಣ್ಣೀರ ಕಡಲಾಗುವದೆಂದು. ಮನೆಗೆನಾನೊಬ್ಬಳೆ ಮಗಳು, ಅರಮನೆಯಂಥ ಮನೆಗೆ ನಾನೇ ಒಡತಿ. ಅವ್ವನನ್ನನ್ನು ಅಪ್ಪನ ಕೈಗಿಟ್ಟು ಶಿವನ ಪಾದಾ ಸೇರಿದ್ದಳು. ಅವ್ವ ಹೋದಮ್ಯಾಗ ಊರ ಜನ ಅಪ್ಪನಿಗೆ ಇನ್ನೊಂದು ಮದುವೆ ಆಗುವ ಸಲಹೆನೀಡಿದ್ದರೂ, ಹೊಸದಾಗಿ ಬರುವ ಹೆಂಗಸು ಹೆಂಗಿರತಾಳೋ?. ತಾಯಿ ಇಲ್ಲದ ತಬ್ಬಲಿಗೆ ಮಲತಾಯಿ ಹಿಂಸೆ ಬೇರೆ ಬೇಡ ಅಂತಾ ಕಣ್ಣಲ್ಲಿ ಕಣ್ಣಿಟ್ಟು, ಅಂಗೈಯಲಿ ಅರಗಿಣಿ ಸಾಕಿದಾಂಗ ನನ್ನ ಸಾಕಿದ್ದ. ನಾ ಬೆಳದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 19 & 20): ಎಂ. ಜವರಾಜ್

-೧೯- ಸೂರ್ಯ ಕಣ್ಬುಟ್ಟು ನಾನು ಕಪಿಲ ಬಾವಿ ಮೆಟ್ಲತ್ರ ಇದ್ದಿ ಅಯ್ನೋರು ಬಾವಿ ನೀರೊಳ್ಗ ಈಜ್ತಾ.. ಚೆಂಗುಲಿ ಬಾವಿ ಕಟ್ಟ ಮ್ಯಾಲ ನಗ್ತಾ.. ಅರೆ, ಮ್ಯಾಲಿಂದ ತಿಗುನ್ ತಳ್ಳು ಬೀಳ್ತಲ್ಲಾ.. ಚೆಂಗುಲಿ, ‘ಅಯ್ನೋರಾ ತಳ್ಳು ಉದುರ್ತಾ ಅವ ಆದು ಗುಡ್ಯಾಕಕಿಲ್ವ. ಶಂಕ್ರಪ್ಪೋರು ಈಚೀಚ್ಗ ಬರದೇ ಇಲ್ಲ’ ‘ಅಂವ ನಿಗುರ್ತ ಅವ್ನ ನೀನೆ ಮಾಡ್ಲಾ ಸಂತಗೋಗಿ ಹರಾಜಾಕ್ಲಾ ನಿಂಗೇನ್ ಕೇಮಿ ಇದ್ದದು..’ ‘ಆಯ್ತು ಅಯ್ನೋರಾ ಆಗ ನನ್ನೇನಾರ ಶಂಕ್ರಪ್ಪೋರ್ ಕೇಳುದ್ರಾ..’ ‘ಏಯ್, ಲೌಡೆ ಬಂಚೊತ್ ಅಂವ ಹಂಗೇನಾರ ಬಂದ್ರ … Read more

ಪ್ರೀತಿಯ ದೇವತೆಗಾಗಿ……: ಜಹಾನ್ ಆರಾ

ನನ್ನ ಮುದ್ದು ಮಮ್ಮಿ ಜಾನ್‍ಗೆ ನನ್ನ ಮನದಾಳದಿಂದ ಪ್ರೀತಿ ತುಂಬಿದ ಒಂದು ಸಲಾಮ್. ಅಮ್ಮೀಜಾನ್ ತುಂಬಾ ನೆನಪಾಗ್ತಿದ್ದೀರಾ ನಿಮ್ಮ ಮಡಿಲಿಗೆ ಹಾಗೆ ಓಡಿ ಬಂದು ಮಗುವಾಗಿ ನೆಮ್ಮದಿಯ ತುಸು ಗಳಿಗೆ ಕಳಿಬೇಕು ಅಂತಾ ಅನಿಸ್ತಿದೆ ಆದರೆ ಏನ್ಮಾಡಲಿ ನಿಮ್ಮಿಂದ ನನ್ನನ್ನು ಬಹಳ ದೂರಕ್ಕೆ ಕಳಿಸಿದ್ದೀರಾ. ಮಮ್ಮೀಜಾನ್ ನೆನ್ನೆ ಒಂದು ಪದ್ಯ ಓದ್ದೆ ಸುಭದ್ರಕುಮಾರಿ ಚೌಹಾನ್ ‘ಮೈ ಬಚ್‍ಪನ್ ಕೊ ಭೂಲ್ ರಹಿತಿ ಬೋಲ್ ಉಲಿ ಬಿಟಿಯಾ ಮೇರಿ’ ‘ನಂದನ ವನಸಿ ಖಿಲ್ ಉಟ್ಟಿ ಯಹ ಛೋಟಿಸಿ ಕುಟಿಯಾ … Read more

“ಮಾನಸ ಗುರುವಿಗೆ ನನ್ನ ನಮನ”: ಶ್ರೀ ಕೊಯಾ

” ಮನೋರಮಾ ಮನೋರಮಾ ಮಲಗೋಬದ ಘಮ ಘಮ ” ನಾನು ಅದುವರೆವಿಗೂ ಹೈಸ್ಕೂಲು ದಿನಗಳಲ್ಲಿ ಕೇಳಿ, ಕಲಿತ ಪದ್ಯಗಳಿಗಿಂತಲೂ ಭಿನ್ನವಾಗಿದ್ದ ಪದ್ಯ ಇದಾಗಿತ್ತು. ಕಾಲೇಜಿನ ಮೆಟ್ಟಿಲು ಏರಿದ್ದ ದಿನಗಳವು : ಇಸವಿ ೧೯೭೬ , ದ್ವಿತೀಯ ಪಿಯುಸಿ. ನನಗೆ ನಿಸಾರ್ ಅಹಮದ್ ರವರಂತಹ ಕವಿಯ ಪರಿಚಯ ಮಾಡಿಸಿದ್ದು ಅಂದಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಬಸವರಾದ್ಯರು. ಅಂದಿನ ದಿನಗಳಲ್ಲಿ ತಾಲೂಕ್ ಆಗಿದ್ದ ಚಾಮರಾಜನಗರದ ಕಾಲೇಜಿನಲ್ಲಿ ಕೇವಲ ಮೂವತ್ತು ವಿದ್ಯಾರ್ಥಿಗಳ ವೃಂದಕ್ಕೆ ; ಪಂಪ , ರನ್ನ , ಕುವೆಂಪು … Read more

ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್‌ ಪ್ರಸನ್ನ

ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ … Read more