ಮದುವೆಯೆಂಬುದೊಂದು ಖಾಸಗಿ ಸಂಗತಿ (ಮೂಲ: ಚಿನುವ ಅಚಿಬೆ, ಅನುವಾದ: ಮೋಹನ್ ವಿ ಕೊಳ್ಳೇಗಾಲ)

  ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೆ ಕೇಳಿದಳು – ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ ಹೋದಾಗ ಹೇಳುವುದು ಸರಿ ಎನಿಸುತ್ತಿದೆ’ ‘ಯಾಕೆ? ನಿನ್ನ ರಜೆಗೆ ಇನ್ನೂ ಆರು ವಾರಗಳು ಬೇಕು. ಈ ಖುಷಿಯ ವಿಚಾರ ನಿಮ್ಮ ತಂದೆಗೆ ಬೇಗ ಗೊತ್ತಾಗಲಿ’ ಕೆಲ ಕ್ಷಣ ಮೌನವಾದ ನಾಮೇಕಾ ಪದಗಳಿಗೆ ತಡಕಾಡುವವನಂತೆ ಮಾಡಿ ಮಾತನಾಡಿದ – ‘ಈ … Read more

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಪೀಸು: ದಿವ್ಯ ಆಂಜನಪ್ಪ

  ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ, ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ.  ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಶ್ರೀಮಿತಹೊಂದಿರುವ ಅದರ ಕ್ರಾಂತಿಕಾರಕತನ.  ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ.  ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ … Read more

ಪ್ರಶಸ್ತಿ ಬರೆವ ಅಂಕಣ: ಪತ್ರಿಕಾ ಸಾಹಿತ್ಯ ಮತ್ತು ನಾವು

  ಹಿಂಗೇ ಸುಮ್ನೆ ಬರ್ಯೋ ಹವ್ಯಾಸದ ಒಬ್ಬ. ಬರಹಗಾರ, ಸಾಹಿತಿ ಅಂತ ಖ್ಯಾತಿ ಪಡೋದೊದ್ರೂ ಚನಾಗ್ ಬರಿತೀಯ ಕಣಲೇ ಅಂತ ತನ್ನ ಗೆಳೆಯರತ್ರ ಅನೇಕ ಸಲ ಶಬಾಷ್ಗಿರಿ ಪಡೆದವ. ಪೇಪರಲ್ಲಿ ಬರೋ ಬಣ್ಣಬಣ್ಣದ ಲೇಖನಗಳ್ನ ದಿನಾ ಓದೋ ಆ ಹುಡುಗನಿಗೆ  ತಾನೂ ಯಾಕೆ ಒಮ್ಮೆ ಪತ್ರಿಕೆಗೆ ಕಳಿಸ್ಬಾರ್ದು ಅನ್ನೋ ಭಾವ. ಪಕ್ಕದ್ಮನೆ ಹುಡ್ಗ ಯಾವಾಗ್ಲೂ ಹೊಡ್ಯೋ ಸೈಕಲ್ ನೋಡಿ ತಾನೂ ಒಮ್ಮೆ ಸೈಕಲ್ ಹೊಡಿಬೇಕು ಅಂತ ಮೂಡೋ ಭಾವದ ತರ.  ಸರಿ, ಲೇಖನದ ಕೆಳಗೆ ನಿಮ್ಮ ಲೇಖನಗಳನ್ನು … Read more

ನಾಟಕಕಾರರಾಗಿ ಕುವೆಂಪು (ಭಾಗ-2): ಹಿಪ್ಪರಗಿ ಸಿದ್ದರಾಮ್

  ಕುವೆಂಪುರವರ ನಾಟಕ(ರಂಗಕೃತಿ)ಗಳು :  ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ರಂಗಭೂಮಿಗಾಗಿ ಕುವೆಂಪುರವರು ಸರಿಸುಮಾರು ಹದಿನಾಲ್ಕು ನಾಟಕ(ರಂಗಕೃತಿ)ಗಳನ್ನು ರಚಿಸಿದ್ದಾರೆ. ಪ್ರತಿಯೊಂದರಲ್ಲಿಯ ವಸ್ತುವೈವಿಧ್ಯತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ನಾವು ಗಮನಿಸಿದರೆ ಕನ್ನಡ ರಂಗಸಾಹಿತ್ಯದ ಬೆಳವಣಿಗೆಯ ಆಯಾ ಕಾಲಘಟ್ಟವನ್ನು ಪರಿಚಯಿಸಿಕೊಂಡ ಅನುಭವವಾಗುತ್ತದೆ. ತಮ್ಮ ಸೃಜಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ರಂಗಭೂಮಿಯನ್ನು ಬಳಸಿಕೊಂಡಿರುವುದು ಮಹಾಕವಿಗಳ ಶ್ರೇಷ್ಟತೆಯನ್ನು ತೋರಿಸುತ್ತದೆ. ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ, ದೃಶ್ಯಗಳ ಜೋಡಣೆ, ಹಳೆಗನ್ನಡ/ನಡುಗನ್ನಡ ಶೈಲಿಯ ಛಂದಸ್ಸಿನ ಶೈಲಿಯ ಸರಳ ರಗಳೆಯಂತಿರುವ ಸಂಭಾಷಣೆ ಹಾಗೂ ಹಾಡುಗಳಂತಹ ಸಾಹಿತ್ಯದ ಹಲವಾರು ಪ್ರಕಾರಗಳನ್ನು … Read more

ನಿನ್ನ ಪ್ರೀತಿಗೆ ಹೃದಯ ಮಾರಿದವನು: ರಾಜು ಬಾಡಗಿ

  ಬಸ್  ಸ್ಟಾಫಿ ನಲ್ಲಿ ನಿನ್ನ ನೋಡಿದಾಗ ಹುಟ್ಟಿದ ಪ್ರೀತಿ ಇಂದೂ ಮುಂದುವರೆದಿದೆ. ಅದಕ್ಕೆ ಯವುದೂ ಇಂಟೆರ್ವಲ್ ಇಲ್ಲ. ಅದರೆ ಈ ಪ್ರೀತಿಗೆ ಇನ್ನೂ ಯಾವ ಭಾಷೆಯೂ ಗೊತ್ತಿಲ್ಲ. ಕಲಿಯುವ ಯಾವ ಬಯಕೆಯೂ ಬರ್ತಾ ಇಲ್ಲ. ಈ ಮೌನದಲ್ಲೂ  ಎಂಥಹ ಪ್ರೀತಿ ಇದೆ …ಅಲ್ವಾ….???  ಈ ಪ್ರೀತಿಗೆ ನಾನು ಏನಾದರೂ ಹೆಸರು ಇಡಬೇಕು ಅಂತ ಅಂದರೆ ನಾನು ’ಮೌನದ ಮಾತು" ಅಂತ ಇಡುತ್ತೇನೆ. ಕಾಡುವ ನಿನ್ನ ಕನಸುಗಳು, ಕನ್ನಡಿ ಮುಂದೆ ನಿಂತಾಗ ಕಾಣುವ ನಿನ್ನ ರೂಪ, ಹಸಿ … Read more

ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ

  ಅವಳು ಇದ್ದದ್ದು ಹಾಗೆ!! ಸೊಕ್ಕಿನ ಕೋಗಿಲೆ ಹಾಗೆ!! ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ, ಮಣಿಯದ ಮನಗಳಿಲ್ಲ.   ಹೆಸರು ಪೂರ್ವಿ!!  ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.  ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!! ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ. ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ!! … Read more

ನಾಲ್ವರ ಕವಿತೆಗಳು

  ಬಣ್ಣದ ಬದುಕು ಕಣ್ಣ ಕನ್ನಡಿಯಲ್ಲಿ ಇಂದು ಕಾಣುತಿಹುದು ನಿನ್ನ ಬಿಂಬ ಏರಬೇಕು ಮಲ್ಲಗಂಬ ಸಲ್ಲದೆಂದೂ ನಾನು ನನ್ನದೆಂಬ ಜಂಬ.   ಅವನೇ ಜಗದ ಸೂತ್ರಧಾರಿ ನೀನು ಇಲ್ಲಿ ಪಾತ್ರಧಾರಿ ಪ್ರಾಯ ಹೋಗೋ ಮುನ್ನ ಜಾರಿ ಬೆಳೆಯಬೇಕು ಎಲ್ಲ ಮೀರಿ ..!!   ಇದ್ದರೇನು ಪ್ರಾಯ ಸಣ್ಣ ಎಲ್ಲ ಹಚ್ಚ ಬೇಕು ಬಣ್ಣ ನಾವು ಹೆಜ್ಜೆ ಹಾಕಬೇಕು ತುತ್ತ ಚೀಲ ತುಂಬಬೇಕು.   ಕೆಂಪಾದರೇನು ಕಪ್ಪಾದರೇನು? ಹೆಚ್ಚಬೇಕು ಪಾತ್ರದಂದ ಬಣ್ಣಕಿಂತ ನಗುವೇ ಚಂದ ನಗುವು ಮಾಸದಿರಲಿ ಕಂದ … Read more

ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಶರತ್ ಚಕ್ರವರ್ತಿ ಚುಟುಕಗಳು

  1. ಕಣ್ಣುಗಳು ನೂರಾರು ತಾರೆಗಳು ಉಲ್ಕೆಗಳಾಗಿ ಉದುರಿದವು ನಿನ್ನ ಕಣ್ ಹೊಳಪಿಗೆ ಸೋತು. 2. ಮಿಂಚು ಬೆಳಕಾಗಿ ಬಾ, ಬೆಳದಿಂಗಳಾಗಿ ಬಾ ಎಂದಾಡಿರೇ.. ಮಿಂಚಾಗಿ ಬಂದಳು ದೃಷ್ಟಿಯನೆ ಹೊತ್ತೊಯ್ದಳು. 3. ಚಳಿ ನವಂಬರ್ ಚಳಿ, ಭಾರವಾದ ಕಂಬಳಿ ಹೊದೆಯಲು ಇಚ್ಚಿಸಿರಲು ನಿನ್ನ ನೆನಪುಗಳು ಬೆಚ್ಚನೆ ಭಿಗಿದಪ್ಪಿದವು. 4. ಹಣತೆ-ಪತಂಗ ಸುಟ್ಟು ಬೂದಿಯಾಗುವೆ ಎಂಬ ಅರಿವಿದ್ದರೂ ಏಕೆ ಎನ್ನನೇ ಸುತ್ತಿ ಸುತ್ತಿ ಬರುತಿರುವೆ.. ನಿನ್ನ ಕೋಮಲ ರೆಕ್ಕೆಗಳ ಸುಡುವ ಮನಸ್ಸಿಲ್ಲದೇ ಇಗೋ.. ನಾನೇ ನಂದಿಹೋಗುತಿರುವೆ. 5. ನೀ … Read more

ಕಣ್ಣುಗಳನ್ನು ನೋಡಿದೆ ಕಣ್ಣಾಲಿಗಳಲ್ಲಿ ನೀರಾಡುತ್ತಿತ್ತು: ಡಾ. ಗವಿ ಸ್ವಾಮಿ

  ಮೊನ್ನೆ ಒಬ್ಬ ರೈತ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ. ಎತ್ತುಗಳು ಕುಂಟುತ್ತಿದ್ದವು. ಕಾಲುಗಳಲ್ಲಿ ಗಾಯಗಳಾಗಿದ್ದವು. ಏನಪ್ಪಾ ಆಯ್ತು.. ಇಷ್ಟೊಂದು ಗಾಯಗಳಾಗಿವೆಯಲ್ಲ ಅಂದೆ. ''ಯಾನೇಳ್ಳಿ ಸೊಮಿ ಎಲ್ಲಾ ನಮ್ ಹಣಬರ'' ಅಂದು ಹಣೆ ಕುಟ್ಟಿಕೊಂಡ. ಅದೇನ್ ಸ್ಪಷ್ಟವಾಗಿ ಹೇಳಪ್ಪ ಅಂದೆ. '' ಓದುಡ ಓದುಡ ಅಂತ್ ಬಡ್ಕಂಡಿ… ಬಡ್ಡಿಕೂಸು ಕಿಂವಿಗೇ ಹಾಕನಿಲ್ಲ… ಎಸ್ಸೆಲ್ಸಿ ಪೈಲ್ ಮಾಡ್ಕತು. ನಿನ್ ಹಣಾಲ್ ಬರದಾಗಾಬುಡು ನಡ ಆರಂಬನ್ಯಾರು ಕಲ್ತಗ ಅಂತ ಆರಂಬ ಕಲಸ್ದಿ'' '' ಬಡ್ಡಿಕೂಸು ಇವತ್ಯಾನ್ ಮಾಡ್ತು ಅಂದ್ರ.. ಕಟ್ಟಿರ ಏರ್ನೂ … Read more

ಇವ ಸುಮ್ನೇ ಗೀಚ್ತಾನೆ, ಸೀರಿಯಸ್ ಆಗ್ಬೇಡಿ…: ಎಂ. ಆರ್. ಸಚಿನ್

ಗುರುಭ್ಯೋ ನಮಃ ಅದೊಂದು ಕಾಲವಿತ್ತು. ಗುರುಗಳು ಎಂದರೆ ಸಾಕ್ಷಾತ್ ದೇವರೇ ಎಂಬ ಭಾವನೆ ಜನರಲ್ಲಿತ್ತು. ’ಹರ ಮುನಿದರೂ ಗುರು ಕಾಯ್ವನು’ ಎಂಬಾ ನಂಬುಗೆಯಿತ್ತು. ಮೇಲಾಗಿ ಗೌರವವಿತ್ತು, ಆದರವಿತ್ತು. ಆದರೆ,,, ಕಾಲ ಬದಲಾಯ್ತೋ, ಜನರೇ ಚೇಂಜ್ ಆದ್ರೋ ಗೊತ್ತಾಗ್ಲಿಲ್ಲಾ, ಗುರು ಅನ್ನೋ ಪದವೇ ಇಂದು ಏನೇನೋ ಆಗೊಗಿದೆ. "ಬಾ ಗುರು’, "ತೊಗೋ ಗುರು", "ಮಗಾ ಹೊಡಿ ಗುರು" ಮುಂತಾದ ಪದಗಳನ್ನ ನಿಮ್ಮಾ ಆಸುಪಾಸಲ್ಲಿ ಕೇಳದ ಕಿವಿಗಳಿದ್ರೆ,  ಅದಕ್ಕೆರಡು ಲೀಟರ್ ಚಿಮಣಿ ಎಣ್ಣೆ ಹಾಕಿಸಿ ಕಿಲಿನು ಮಾಡಿಸಿ, ಪುಣ್ಯ ಕಟ್ಕಳಿ. … Read more

ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್

ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು!    ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ … Read more

ಪ್ರಶಸ್ತಿ ಬರೆವ ಅಂಕಣ: ‘ಪೇಪರ್ ಪೇಪರ್’

ಸಣ್ಣವನಿದ್ದಾಗ ದೂರದರ್ಶನದಲ್ಲಿ ಬೆಳಗ್ಗೆ ಹತ್ತರಿಂದ ಹನ್ನೊಂದರವರೆಗೆ ಬರುತ್ತಿದ್ದ "ಗ್ಯಾನ್ ದರ್ಶನ್" ರಜಾವೇಳೆಯ ಅಚ್ಚುಮೆಚ್ಚಿನ ಕಾರ್ಯಕ್ರಮ ಆಗಿತ್ತು. ಅದರಲ್ಲಿ ಒಮ್ಮೆ ನೋಡಿದ್ದ ರದ್ದಿ ಪೇಪರ್ ಅಂತ ಎಸೆಯೋ ಬದಲು ನಾವು ಮನೆಯಲ್ಲೇ ಅದ್ನ ಹೇಗೆ ಪುನರ್ಬಳಕೆ ಮಾಡ್ಬೋದು, ರದ್ದಿ ಪೇಪರ್ಗಳನ್ನ ಹೇಗೆ ರೀಸೈಕಲ್ ಮಾಡ್ತಾರೆ ಅಂತ ತೋರ್ಸಿದ್ದರು. ವಿಜ್ಞಾನ, ಮುಂದುವರಿದ ಜನ ನಾವು ಅಂತ ರೀಚಾರ್ಚ್ ಕಾರ್ಡಿಂದ ಹಿಡ್ದು ಎಟಿಎಮ್ನಲ್ಲಿ ತೆಗ್ದ ಪ್ರತೀ ನೂರಕ್ಕೂ ಪಡ್ದ ಹರ್ದೆಸೆದ ಪೇಪರ್ನಿಂದ ಎಟಿಎಮ್ನಲ್ಲಿ ದಿನಾ ಬೀಳೋ ಕಸದ ರಾಶಿ, ಫ್ಯಾಷನ್ನಾಗಿರೋ ಪೇಪರ್ … Read more

ಮೊದಲ ಸೂರ್ಯೋದಯ: ಪ್ರಜ್ವಲ್ ಕುಮಾರ್

  ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ … Read more

ಸರ್ವತ್ರ:’ಪ್ರೀತೀಶ’

ಚಲಂ ನನ್ನ ಬೆನ್ನು ಹತ್ತಿಬಿಟ್ಟಿತ್ತು.  ಯಾವತ್ತೂ ನನ್ನ ಮಾತು ಮೀರದ ಚಲಂ ಇಂದು ಬೇಡಬೇಡವೆಂದರೂ, ನಾನು ಕೋರ್ಟಿಗೆ ಹೋಗುತ್ತಿದ್ದೇನೆ, ಅಲ್ಲಿ ನೀನು ಬರಬಾರದು ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ದಾರಿಯಲ್ಲಿ ಒಂದೆರಡು ಬಾರಿ ಸಿಟ್ಟಿಗೂ ಬಂದೆ.  ನನ್ನ ಸಿಟ್ಟಿಗೆ ಹೆದರಿ ಕಾಲು ಉದ್ದಕ್ಕೆ ಬಿಟ್ಟು ದಾರಿಯಲ್ಲಿ ಕುಳಿತುಕೊಂಡಿತು.  ಹಾಳಾಗಿ ಹೋಗಲಿ, ಮನೆ ದಾರಿ ಅದಕ್ಕೆ ಗೊತ್ತು, ಯಾವಾಗಲಾದರೂ ಮನೆಗೆ ಹೋಗಲಿ ಎಂದು ನಾನು ಬಿರಬಿರನೆ ನಡೆದುಬಿಟ್ಟೆ.  ಮೊದಲೇ ಅದರ ಹಟದಿಂದಾಗಿ ಆಫೀಸಿಗೆ ಹೋಗುವುದು ತಡವಾಗಿತ್ತು. ಕೋರ್ಟಿನ ಗೇಟು … Read more

ನಾಟಕಕಾರರಾಗಿ ಕುವೆಂಪು (ಭಾಗ-1): ಹಿಪ್ಪರಗಿ ಸಿದ್ದರಾಮ್

  ಸಮೃದ್ಧ ಕನ್ನಡ ಸಾಹಿತ್ಯ ಪ್ರಕಾರದ ಬೆಳವಣಿಗೆಯಲ್ಲಿ ಇಪ್ಪತ್ತನೆಯ ಶತಮಾನವೆಂಬುದು ಹಲವಾರು ದೃಷ್ಟಿಕೋನಗಳಿಂದ ವಿಶಿಷ್ಟ ಮತ್ತು ಅಪರೂಪದ ನವೋದಯ ಕಾಲವಾಗಿ ಬೆಳೆದಿರುವುದು ಸಾಹಿತ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಆಂಗ್ಲರ ಆಳಿಕೆಯ ದೆಸೆಯಿಂದಾಗಿ ಭಾಷೆಯೆಂಬ ಸಂವಹನ ಸಾಧನದ ಮೂಲಕ ಪಡೆದುಕೊಂಡ ಪರಿಜ್ಞಾನದ ವಿವಿಧ ಮಗ್ಗಲುಗಳು ದೇಶದ ಪ್ರಜ್ಞಾವಂತರ ಮನಸ್ಸನ್ನು ತಾಕಿದ್ದು ಸುಳ್ಳೇನಲ್ಲ. ಇದರ ಪರಿಣಾಮವಾಗಿ ಸಾಹಿತ್ಯಕ್ಷೇತ್ರವೂ ಪ್ರಚೋಧಿತವಾದಂತಾಯಿತು. ಸಾಹಿತ್ಯವು  ಹಲವಾರು ಮಗ್ಗಲುಗಳನ್ನು ಕಂಡುಕೊಂಡಂತೆ ರಂಗಭೂಮಿಯಲ್ಲಿಯೂ ವಿವಿಧ ಪ್ರಕಾರದ ವಿಭಿನ್ನ ಪ್ರದರ್ಶನ-ಪ್ರಯೋಗಗಳು ಚಾಲ್ತಿಗೆ ಬಂದು, ಸಾಹಿತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ … Read more

ಮೂವರ ಕವಿತೆಗಳು: ಕಮಲ ಬೆಲಗೂರ್, ನರಸಿಂಹಮೂರ್ತಿ ಎಂ.ಎಲ್., ಮಾಧವ

  ಬಡವ ಸಿರಿಯು ಬರಿದಾದ  ಸಾಮ್ರಾಜ್ಯದಿ  ಗರಿಕೆದರಿದೆ ಬದುಕು ….    ಬೇಡಿಕೊಂಡಿದ್ದಲ್ಲ  ಅರಸೊತ್ತಿಗೆ  ವಂಶಪಾರಂಪರ್ಯವಾಗಿ  ಸಂದ ಬಳುವಳಿ  ಅವನ ಬದುಕಿಗೇ …..    ಮಾಡು ಗೋಡೆಗಳಿಲ್ಲದ  ಗೂಡೇ ಅವನರಮನೆಯು  ಕಡುಕೋಟಲೆಗಳ  ಹಾರತುರಾಯಿ  ತಾತ್ಸಾರ ಕುಹಕಗಳ  ಬಹು ಪರಾಕು….    ಹುಟ್ಟಿಗೆ ಸಂಭ್ರಮವಿಲ್ಲ  ಸಾವಿಗೆ ಶೋಕವಿಲ್ಲ  ಎಲ್ಲವೂ ಆಕಸ್ಮಿಕವಿಲ್ಲಿ  ನಿಟ್ಟುಸಿರು, ಹಸಿವು  ಆಕ್ರಂದನಗಳ  ಜೋಗುಳದೊಂದಿಗೆ  ಬದುಕಿನ ಸೋಪಾನ …..    ಹಾಸಿಗೆಯಿದ್ದಷ್ಟೇ  ಕಾಲು  ಚಾಚೆಂಬ ಪರಿಪಾಠ  ಪಟ್ಟು ಬಿಡದ ಹಠ  ಪ್ರಾಮಾಣಿಕತೆಯಾ ಶ್ರೀರಕ್ಷೆ ….   ಸಿರಿಯು … Read more

ಕಟ್ಟೆಯಲ್ಲೊ೦ದಿಷ್ಟು ಹರಟೆ: ವೆಂಕಟೇಶ್ ಪ್ರಸಾದ್

  ಬೆ೦ಗಳೂರಿನಲ್ಲಿ ಆರು ತಿ೦ಗಳ ಬಿಡುವಿಲ್ಲದ ಕೆಲಸದ ಬಳಿಕ ತುಸು ವಿಶ್ರಾ೦ತಿ ಬಯಸಿ ಊರಿಗೆ ಬ೦ದಿದ್ದೆ. ಈ ಆರು ತಿ೦ಗಳಿನಲ್ಲಿ ಓದುವುದು, ಬರೆಯುವುದು ಎರಡೂ ಉದಾಸೀನವೆ೦ಬ ಹೊದಿಕೆ ಹೊದ್ದುಕೊ೦ಡು ಮಕಾಡೆ ಮಲಗಿತ್ತು! ಈ ಬಾರಿ ಏನಾದರು ಬರೆಯೋಣವೆ೦ದು ಲ್ಯಾಪ್ ಟಾಪ್ ನೆದುರು ಫ್ಯಾನಿನ ಕೆಳಗೆ ಕುಳಿತಿದ್ದೆ, ಏನಾಯಿತೊ ಏನೋ ಧುತ್ತನೆ ಕರೆ೦ಟ್ ಹೋಯಿತು. ಬಿಸಿಲ ಬೇಗೆಗೆ ಬೆವರ ಪ್ರವಾಹ ಪ್ರಾರ೦ಭವಾಯಿತು, ತುಸು ಬಾಯಾರಿದ೦ತಾಗಿ ನೀರು ಕುಡಿಯಲು ಅಡುಗೆ ಮನೆಗೆ ಹೋದರೆ ಫಿಲ್ಟರ್ ನಲ್ಲಿ ನೀರು ಖಾಲಿಯಾಗಿತ್ತು. ಸರಿ, … Read more