ಮೂವರ ಕವಿತೆಗಳು: ಜಾನ್ ಸುಂಟಿಕೊಪ್ಪ, ಉಷಾಲತಾ, ಜೊ. ಸಿ. ಸಿದ್ದಕಟ್ಟೆ
ಬೇಡದ ಜೀವ ಹಸಿದ ಕತ್ತಲು ಲೊಚಗುಟ್ಟುತ್ತದೆ ಹೊಸೆದ ಬಿರುಸು ಬಂಧನಕ್ಕಾಗಿ,.. ಬಿಸಿಯುಸಿರು ಅಸ್ತವ್ಯಸ್ತವಾಗುತ್ತದೆ ಕ್ರೌರ್ಯ ಕಂಡ ಗೋಡೆಗಳಿಗಾಗಿ… ಏದುಸಿರು…ಅಸಹನೆ ಸಾಕ್ಷಿಯಾಗುತ್ತದೆ ನಿಗೂಢ ಮೌನವಾಗಿ…. ಬಗಲಲಿ ಮಲಗಿದ ಮೊದಲ ಕೂಸಿಗೂ ಆಗಲೆ ಮೊಳಕೆಯೊಡೆದ ಮುಗ್ಧ ಪಿಂಡಕ್ಕೂ ಏನು ಅಂತರ,,!? ಉತ್ತರವಿಷ್ಟೇ- ಕೆಲವೊಮ್ಮೆ ತೊಟ್ಟಿಲು ತೂಗುತ್ತದೆ, ಕೆಲವೊಮ್ಮೆ…. ತೊಟ್ಟಿ ತುಂಬುತ್ತದೆ.,… ಮೊಳಕೆಯೊಡೆದ ಪಿಂಡ ಕೆಂಪು ಕೆಂಪಾಗಿ ತೊಟ್ಟಿಕ್ಕುತ್ತದೆ… ಕಾಣದ ಜೀವದ ಮೌನರೋಧನಕೆ ಹೊಸದೊಂದು ನ್ಯಾಪ್ಕಿನ್ ಕೆಂಪಾಗುತ್ತದೆ…. –ಜಾನ್ ಸುಂಟಿಕೊಪ್ಪ. ಕೊನೆ ಎಂದು … Read more