ಬದುಕಿನ ಆಶಾಕಿರಣ: ಪದ್ಮಾ ಭಟ್
”ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲನ್ನು ಪದೇ ಪದೇ ಕೇಳಬೇಕೆನಿಸಿತ್ತು.. ಮುಂದುವರೆದು ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೆ ಜೀವನ ಸಾಲೂ ಮತ್ತೊಮ್ಮೆ ಮಗದೊಮ್ಮೆ ಹಾಕಿ ಕೇಳಿಸಿದೆ. ಯಾವ ಮೋಹನ ಮುರಳಿ ಕರೆಯಿತೋ ಹೊಸದಾಗಿ ಕೇಳುವವಳೇನಲ್ಲ. ಆದರೆ ಎಂದಿಗಿಂತಲೂ ಆಪ್ತವೆನಿಸಿತ್ತು ಸಾಲುಗಳು..ಯಾಕೋ ಒಬ್ಬಂಟಿಯಾಗಿ ಕುಳಿತಿದ್ದವಳಿಗೆ ಹಾಡಿನಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬುವುದು ಅರಿವಾಗದೇ ಇರುವಷ್ಟು ಮುಳುಗಿ ಹೋಗಿದ್ದೆ … Read more