editor
ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ
೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು. ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ … Read more
ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ: ಹೃದಯಶಿವ
ಅನಂತಮೂರ್ತಿಯವರ ಕುರಿತು ಒಂದಿಷ್ಟು ಧ್ಯಾನಿಸುವ ಸಮಯವಿದು. ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ. ಬರೋಬ್ಬರಿ ಎಂಭತ್ತೊಂದು ವರ್ಷ ಬಾಳಿದ ತುಂಬುಜೀವನ ಅವರದು; ನಮಗೆಲ್ಲ ಗುರುವಿನಂತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದಾದರು ಸಮಸ್ಯೆ ಎದುರಾದಾಗ ಅನಂತಮೂರ್ತಿ ಏನು ಹೇಳುತ್ತಾರೆ ಎಂದು ಕಾತರಿಸುತ್ತಿದ್ದೆವು. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಇನ್ನು ಸಾಧ್ಯವಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ನಾವು ಆತಂಕಗೊಳಗಾಗುತ್ತಿದ್ದೆವು. ಅವರಿಲ್ಲದ ಈ ಶೂನ್ಯವನ್ನು ತುಂಬಿಕೊಳ್ಳಲು ಈಗ ಸ್ವಲ್ಪ ಕಷ್ಟವಾಗುವುದಂತೂ ನಿಜ. ಅವರ ಮುಪ್ಪು, ವಿವಾದಗಳಿಂದ ಜರ್ಜರಿತವಾದ ಕವಿಮನಸು, ಟೀಕಾಕಾರರ ಮಾತುಗಳಿಂದ ನೊಂದುಹೋದ ಮುದಿಜೀವ- … Read more
ಪವಾಡ?: ಗುರುಪ್ರಸಾದ ಕುರ್ತಕೋಟಿ
(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೫): ಈ ಸಲ ಒಂದು ಚಿಕ್ಕ ಘಟನೆಯಾ ಬಗ್ಗೆ ಹೇಳುತ್ತೇನೆ. ಇದು ನನ್ನ ಅಜ್ಜ (ಅಮ್ಮನ ತಂದೆ) ಅವರಿಗಾದ ಅನುಭವ. ಸುಮಾರು ಐದು ದಶಕಗಳ ಹಿಂದೆ ನಡೆದದ್ದು. ಆಗ ನನ್ನಜ್ಜ ಮಧ್ಯ ವಯಸ್ಕ. ಅವರ ಹೆಂಡತಿ, ಅಂದರೆ ನನ್ನ ಅಜ್ಜಿ, ರಾಘವೇಂದ್ರ ಸ್ವಾಮಿಗಳ ಭಕ್ತಳು. ಅಂತಿಂಥ ಭಕ್ತಳಲ್ಲ, ಘನಘೋರ ಭಕ್ತಳು! ರಾಯರ ಬಗ್ಗೆ ಅವಳಿಗೆ ಸಿಕ್ಕಾಪಟ್ಟೆ ನಂಬಿಕೆ. ಅದೇ ರೀತಿಯಾಗಿ ಅವರ ಸೇವೆಯನ್ನೂ ಚಾಚು ತಪ್ಪದೇ ಮಾಡುತ್ತಿದ್ದಳು. ಅದು ಪೂಜೆ-ಪುನಸ್ಕಾರವೋ, … Read more
ಸಮರ್ಥ ಶಿಕ್ಷಕ, ರಾಷ್ಟ್ರ ರಕ್ಷಕ: ಹೊರಾ.ಪರಮೇಶ್
ನಮ್ಮ ಭೂಮಂಡಲದಲ್ಲಿ ಜೀವಿಗಳು ಸೃಷ್ಟಿಯಾದಾಗಿನಿಂದಲೂ 'ಚಿಂತನ-ಮಂಥನ' ಕ್ರಿಯೆಯು ನಡೆಯುತ್ತಲೇ ಬಂದಿದೆ. ಅಂದರೆ, ಹೊಸ ವಿಷಯಗಳ ಬಗ್ಗೆ ಕುತೂಹಲ, ಹುಡುಕಾಟ, ಆವಿಷ್ಕಾರಗಳು ಸಾಗುತ್ತಲೇ ಸಾಮಾನ್ಯ ಬುದ್ಧಿ ಶಕ್ತಿಯು ಅಸಾಮಾನ್ಯ ಅನ್ವೇಷಣೆಗಳಿಗೆ ನಾಂದಿ ಹಾಡಿರುವುದರಿಂದಲೇ ಇಂದು ಜಗತ್ತು ಅತ್ಯಾಧುನಿಕ ಕಾಲ ಘಟ್ಟಕ್ಕೆ ತಲುಪಿದೆ. ಒಂದು ವೇಳೆ ಮಾನವನಲ್ಲಿ ಈ "ಮಂಥನ" ಕಾರ್ಯ ಆಗದೇ ಇದ್ದಿದ್ದರೆ, ಇಂದು ವಿದ್ಯುತ್ ಸೌಲಭ್ಯವಾಗಲೀ, ಸಾರಿಗೆ-ಸಂಪರ್ಕ ಸಾಧನಗಳಾಗಲೀ, ಹರಿಯುವ ನೀರಿನ ಸದುಪಯೋಗವಾಗಲೀ, ಐಷಾರಾಮೀ ಬದುಕಿನ ಸೌಕರ್ಯಗಳಾಗಲೀ, ವೈಜ್ಞಾನಿಕ ಆವಿಷ್ಕಾರಗಳಾಗಲೀ ಯಾವುವೂ ಆಗುತ್ತಿರಲಿಲ್ಲ. ಇತಿಹಾಸದ ಪುಟಗಳು ನಮಗೆ … Read more
ನಂಬಿಕೆ ಮತ್ತು ಜೀವನ: ಜಯಪ್ರಕಾಶ್ ಪುತ್ತೂರು
ಜೀವಿಗಳಲೆಲ್ಲಾ ಶ್ರೇಷ್ಠ ಮಾನವ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರಾವ ಮ್ಯಾಜಿಕ್ ಅಂತೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿ ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ … Read more
ಅಧ್ಯಕ್ಷ ಅಧ್ಯಕ್ಷ: ಪ್ರಶಸ್ತಿ
ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ … Read more
ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ
ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು … Read more
ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ
ಮಸಣದ ಹೂವು: 1.ವಿಕೃತ ಕಾಮಿಗಳ ಕಾಮದಾಹಕೆ ಬಲಿಯಾದ ಹುಡುಗಿಯ ಗೋರಿಯ ಮೇಲಿನ ಹೂವಲ್ಲೂ ಅದೇ ಮುಗ್ಧ ನಗು… ಆದರೆ ಇಲ್ಯಾರೂ ಹೊಸಕುವವರಿಲ್ಲ. 2.ಇಂದು ಮಸಣದಲ್ಲೂ ನೀರವ ಮೌನ ಆಕೆ ಬಂದಿದ್ದಾಳೆ ಕಾಮುಕರ ಕಾಮಕ್ರೀಡೆಗೆ ಪ್ರಾಣತೆತ್ತು. 3.ಹೆಣ್ಣೊಡಲ ಮಾತು… ಯಾರ ಭಯವಿಲ್ಲ ನನಗೆ ಹುಟ್ಟಿಬಂದರೆ ಮಸಣದ ಹೂವಾಗಿ. 4.ಹೆಣ್ಣು ಸುರಕ್ಷಿತ ಒಂದು ತಾಯಿಯ ಗರ್ಭದಲ್ಲಿ, ಇನ್ನೊಂದು ಮಸಣದ ಗೋರಿಗಳಲ್ಲಿ. 5.ಮಸಣದಲ್ಲಿ ನನ್ನವಳ ಗೋರಿಯ ಮೇಲೆ ಅರಳಿದ್ದ ಹೂವೂ ನನ್ನ ನೋಡಿ ನಕ್ಕಿತ್ತು ಅವಳು ನಕ್ಕಂತೆ. 6.ಎಷ್ಟಿದ್ದರೂ ಏನಿದ್ದರೂ … Read more
ನೆನಪುಗಳೆಂಬ ಬುತ್ತಿಗಳು: ಪದ್ಮಾ ಭಟ್, ಇಡಗುಂದಿ.
ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ … Read more
ಮನಕ್ಕೆ ಮುದ ನೀಡಿದ ’ಚಮ್ಮಾರನ ಹೆಂಡತಿ’: ಹಿಪ್ಪರಗಿ ಸಿದ್ಧರಾಮ
ಸೃಜನಶೀಲ ಸಮಾನ ಮನಸ್ಸುಗಳು ಒಂದೇಡೆ ಸೇರಿಕೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಬೇಕೆಂಬ ತೀವ್ರ ಹಂಬಲದೊಂದಿಗೆ ಭವಿಷ್ಯದ ಜಾಗೃತಿಯ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಉದಯೋನ್ಮುಖ ಪ್ರತಿಭೆಗಳ ಸಂಗಮವಾಗಿ ’ಥಿಯೇಟರ್ ಸಮುರಾಯ್’ ಉದಯವಾಗಿ ನಾಲ್ಕು ವರ್ಷಗಳು ಸರಿದು ಸರಿಯಾಗಿ ಐದನೇ ವರ್ಷಕ್ಕೆ ಮುಂದಡಿಯಿಡುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಪಲ್ಲಟಗಳು, ಸ್ಥಿತ್ಯಂತರಗಳು ಘಟಿಸಿವೆ. ಇಂತಹ ನಿರಂತರ ಬದಲಾವಣೆಯ ಪ್ರಸ್ತುತ ಪ್ರಸಂಗದಲ್ಲಿ ತಮ್ಮ ಹಲವಾರು ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿರುವ ’ಥಿಯೇಟರ್ ಸಮುರಾಯ್’ ತಂಡವು ಈ ಸಲ ಸ್ಪೇನ್ ರಂಗಕರ್ಮಿ ಫೆಡರಿಯೋ … Read more
ಸಾಮಾನ್ಯ ಜ್ಞಾನ (ವಾರ 42): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು: ೧. ಪರ್ವ ಕೃತಿಯ ಕರ್ತೃ ಯಾರು? ೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ? ೩. ವಿಸೀ ಇದು ಯಾರ ಕಾವ್ಯನಾಮ? ೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? ೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ? ೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು? ೭. ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ? ೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು? ೯. ಕುವೆಂಪುರವರ ಆತ್ಮ … Read more
ಒಂದು ತಲ್ಲಣದ ಸಂಜೆ: ಹೃದಯಶಿವ
ಅದೊಂದು ಮಾಮೂಲಿ ದಿನ… ಆ ಸಂಜೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಎಂದೋ ಹಾಡು ಬರೆದು ಮರೆತು ಹೋಗಿದ್ದ ಸಿನಿಮಾವೊಂದರ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕಾಗಿ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಆ ಚಿತ್ರದ ನಿರ್ದೇಶಕರು ಫೋನ್ ಮಾಡಿ ಆಹ್ವಾನಿಸಿದ್ದರು; ಪತ್ರಕರ್ತರ, ಟಿವಿ ಮಾಧ್ಯಮದವರ ಮುಂದೆ ನಿಂತು ಆ ಚಿತ್ರಕ್ಕಾಗಿ ನಾನು ಬರೆದಿದ್ದ ಹಾಡುಗಳ ಬಗ್ಗೆ ಒಂದೆರಡು ಮಾತಾಡಿ ವೇದಿಕೆ ಮೇಲೆ ಇರಬಹುದಾದವರ ಜೊತೆ ಸಿಡಿ ಹಿಡಿದುಕೊಂಡು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಕೆಲಸ. ಇಷ್ಟಕ್ಕೂ ನಾನು ನೆಟ್ಟಗೆ ಸಿನಿಮಾ ಹಾಡು … Read more
ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ
ಶಾಲೆಯಿಂದ ಫೋನ್ ಬಂದಿತ್ತು. ಇವತ್ತು ಶಾಲಾವಾಹನ ಹಾಳಾದ ಕಾರಣ ಸರ್ವಿಸ್ ಬಸ್ಸಿನಲ್ಲೇ ಮಕ್ಕಳನ್ನು ಕಳಿಸ್ತಾ ಇದ್ದೀವಿ.. ಟಕ್ಕನೆ ಫೋನ್ ಕಟ್ಟಾಯಿತು. ಅಯ್ಯೋ.. ಪಾಪ ಸಣ್ಣವನು.. ಸರ್ವಿಸ್ ಬಸ್ಸಿನಲ್ಲಿ ಹೇಗೆ ಬರ್ತಾನೆ ಎಂಬ ಆತಂಕ ನನ್ನದು. ನಾನೇ ಹೋಗಿ ಕರೆತರಬಹುದು ಆದರೆ ಅಷ್ಟರಲ್ಲೇ ಅವನು ಬೇರೆ ಬಸ್ಸಿನಲ್ಲಿ ಹೊರಟು ಬಿಟ್ಟಿದ್ದರೆ.. ಶಾಲೆಗೆ ಫೋನ್ ಮಾಡಿ ವಿಚಾರಿಸೋಣ ಅಂತ ಡಯಲ್ ಮಾಡಿದರೆ ಅದು ಎಂಗೇಜ್ ಸ್ವರ ಬರುತ್ತಿತ್ತು. ಎಲ್ಲಾ ಮಕ್ಕಳ ಮನೆಗಳಿಗೂ ಸುದ್ದಿ ಮುಟ್ಟಿಸುವ ಅವಸರದಲ್ಲಿ ಅವರಿದ್ದರೇನೋ.. ಮನೆಯಿಂದ ಶಾಲೆಗೆ … Read more
ತಿಮ್ಮನ ಹುಚ್ಚು!: ಮಂಜು ಹಿಚ್ಕಡ್
ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ … Read more
ಮಹಿಳೆ, ಮಗು , ಕಾನೂನು..: ಮಮತಾ ದೇವ
ಮಹಿಳೆಯರಿಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿ ಗತಿ ಸಮಾಜದ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶಗಳಲ್ಲೂ ಸುಧಾರಣೆಯನ್ನು ಕಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಹೆಚ್ಚುತ್ತಿರುವುದು ಅಪಾಯಕಾರಿಯೆನಿಸುತ್ತಿದೆ. ಮಹಿಳೆ ಇನ್ನೂ ಎರಡನೇ ದರ್ಜೆ ಪ್ರಜೆಯಾಗಿಯೇ ಉಳಿದಿದ್ದಾಳೆ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಪುರುಷನಿಗೆ ಸಮಾನಳಾಗಿದ್ದರೂ, ಮಹಿಳೆಗೆ ಸುರಕ್ಷತೆಯ ವಾತಾವರಣ ಎಲ್ಲೆಲ್ಲೂ ಇಲ್ಲ.ಇಂದಿನ 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳು ಭದ್ರತೆ, ಸುರಕ್ಷತೆಗಳಿಂದ ವಂಚಿತರಾಗುತ್ತಿದ್ದಾರೆ.ಕಾನೂನು ಎಲ್ಲ ದೇಶದಲ್ಲೂ ಒಂದೇ ಆಗಿಲ್ಲ. ಕೆಲವು ದೇಶಗಳಲ್ಲಿ ಮಹಿಳೆಯರಿಗೆ … Read more
ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.
ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ; "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ" ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ. ಆದರೆ, ನಾನು ನೋಡಿದ ಸ್ವತಃ ನೋಡಿ ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ. ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ ದಡ್ಡರ ಸಾಲಿಗೆ. ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು. ಈ ಮಧ್ಯೆ ಓದಿನ ಹಂತದಲ್ಲೇ ಚೂರು ಮೈ … Read more
ನಾಲ್ಕು ಕವಿತೆಗಳು: ವೆಂಕಟೇಶ್ ನಾಯಕ್, ಶಿವಕುಮಾರ ಚನ್ನಪ್ಪನವರ, ಗುರು ಪ್ರಸಾದ್, ರಾಣಿ ಪಿ.ವಿ.
ಬೆಳೆ ಕಳೆ ನನ್ನ ಬೆಳೆ, ನನ್ನ ಕಳೆ ನನ್ನದೇ ಹೊಲದಲ್ಲಿ ನಾನೇ ಭಿತ್ತಿದ ಬೀಜ ಸದಾವಕಾಶದಲ್ಲಿ ಬೆಳೆದು ಕಳೆ ಇಲ್ಲದ ಬೆಳೆ ಕನಸು ಕಂಡಿದ್ದು ನಿಜ ಮಣ್ಣಿದು, ಕಪ್ಪಿರಲಿ ಕೆಂಪಿರಲಿ ಖಂಡಿತ ಚಿಗುರುವುದು ಕಳೆ ನೀರಾಕಿದ್ದು ನಾನೇ ಬೆಳೆಗೆ, ಇಂಗಿತ. ಅದರೊಡನೆ ಬೆಳೆದದ್ದು ಕಳೆ ಇಂದು, ಬೆಳೆಗಾತ್ರಕ್ಕೆ ಬೆಳೆದ ಕಳೆ ಅಲ್ಲಿ ಕೆಸರು ತುಂಬಿದ ಕೊಳೆ ಈಗ ಪಿಕಾಸಿ ಹಿಡಿದು ಹೊಲದ ಬದಿಯಲ್ಲಿ ನಿಂತ ನಾನು ತಲೆಯಲ್ಲಿ ಸಾಕದಿದ್ದರೂ ಬದುಕುವ ಹೇನು ರಭಸದಲಿ ತೆಗೆಯ ಬೇಕೆಂದಿರುವೆ … Read more