ಸಾಮಾನ್ಯ ಜ್ಞಾನ (ವಾರ 43): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 
೧.    ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨.    ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೩.    ಗೀತ ರಹಸ್ಯ ಗ್ರಂಥದ ಕರ್ತೃ ಯಾರು?
೪.    ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
೫.    ಎನ್ಕೆ ಇದು ಯಾರ ಕಾವ್ಯ ನಾಮ?
೬.    ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?
೭.    ಪೆನ್ಸಿಲ್‌ನ ಸಂಶೋಧಕರು ಯಾರು?
೮.    ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು?
೯.    ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
೧೦.    ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು?
೧೧.    ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ?
೧೨.    ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು?
೧೩.    ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು?
೧೪.    ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೧೫.    ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?
೧೬.    ಏಷಿಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ?
೧೭.    ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೮.    ೧೯೯೨ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೯.    ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
೨೦.    ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯ ಯಾವುದು?
೨೧.    ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳುವಳಿಯಲ್ಲಿ ಕೂಗಲಾಯಿತು?
೨೨.    ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ?
೨೩.    ಖಾಲ್ಸಾದ ಸಂಸ್ಥಾಪಕರು ಯಾರು?
೨೪.    ಜನತಾ ಪಕ್ಷದಿಂದ ವಿಭಜನೆಗೊಂಡ ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು?
೨೫.    ಪಾರಾದೀಪ ಬಂದರು ಯಾವ ರಾಜ್ಯದಲ್ಲಿದೆ?
೨೬.    ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
೨೭.    ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು?
೨೮.    ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯.    ೨೦೦೧ರಲ್ಲಿ ಪಿ.ಗೋಪಿಚಂದ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೧ ವಿಶ್ವ ಶಾಂತಿ ದಿನ ಹಾಗೂ ಆಲಿಪ್ತ ನೀತಿ ದಿನ
ಸೆಪ್ಟೆಂಬರ್ – ೫ ಶಿಕ್ಷಕರ ದಿನ

ಉತ್ತರಗಳು:
೧.    ಊರ್ವಶಿ
೨.    ಡಾ||ಯು.ಆರ್.ಅನಂತ ಮೂರ್ತಿ
೩.    ಬಾಲಗಂಗಾಧರ ತಿಲಕ್
೪.    ೧೯೭೨
೫.    ಎನ್.ಕೆ.ಕುಲಕರ್ಣಿ
೬.    ಉತ್ತರಾಂಚಲ
೭.    ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
೮.    ಕಬ್ಬಿಣ 
೯.    ಕೊಡೈಕೆನಾಲ್ 
೧೦.    ರಾಜಧಾನಿ ಏಕ್ಸ್ ಪ್ರೆಸ್
೧೧.    ೧೭ನೇ ಕುಲುಮು
೧೨.    ಪುಲಿಕಾಟ್ 
೧೩.    ೧೯೮೪
೧೪.    ಜೋಗ್
೧೫.    ಆಂದ್ರಪ್ರದೇಶ
೧೬.    ಬುದ್ಧ
೧೭.    ನವದೆಹಲಿ
೧೮.    ದೇವರು
೧೯.    ಮೋಟಾರು ಕಾರು
೨೦.    ಗೋವಿಂದ ಸಾಗರ್
೨೧.    ಭಾರತ ಬಿಟ್ಟು ತೊಲಗಿ
೨೨.    ಮಾರ್ಗರೇಟ್ ನೊಬೆಲ್
೨೩.    ಗುರುಗೋವಿಂದ್ ಸಿಂಗ್
೨೪.    ೧೯೮೦
೨೫.    ಒರಿಸ್ಸಾ
೨೬.    ಸ್ಯಾಡಲ್ ಶಿಖರ
೨೭.    ಮೀರಾ ನಾಯಕ್
೨೮.    ಟೆನ್ನಿಸ್
೨೯.    ಬ್ಯಾಡ್ಮಿಂಟನ್
೩೦.    ಯೋಗೇಶ್ವರ ದತ್ತ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x