ಅರ್ಥವಿಲ್ಲ ತತ್ವವಿಲ್ಲ ಅಸಂಗತವೆ ಸತ್ವವೆಲ್ಲ: ಸಚೇತನ
ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ. ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ ನಮ್ಮ ಕಲ್ಪನೆಗೆ ನಿಲುಕಿರದ ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ. ಅಸಂಗತತೆ ತನ್ನನ್ನು ತಾನು ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ ಒಪ್ಪಿಸಿಕೊಂಡಿರುತ್ತದೆ. ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ … Read more