ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೨: ಅಖಿಲೇಶ್ ಚಿಪ್ಪಳಿ
ಇಲ್ಲಿಯವರೆಗೆ ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು … Read more