“ಉತ್ತಮ ಸಮಾಜಕ್ಕೆ ಮಿಡಿಯುವ ಭಾವ ಬುಗುರಿ”: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ: ಭಾವ ಬುಗುರಿ
ಕೃತಿ ಕತೃ: ಶ್ರೀದೇವಿ ಹೂಗಾರ, ಬೀದರ
ಬೆಲೆ:100 ರೂ

ಕನ್ನಡ ಕಾವ್ಯ ಪರಂಪರೆಯಲ್ಲಿ ಹಲವಾರು ಕವಿ ಗಣಗಳು ಬೆಳೆದು ಬೆಳೆಸುತ್ತಾ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಕನ್ನಡ ಸಾಹಿತ್ಯ ಸಾಗರ ತುಂಬಾ ವಿಶಾಲವಾದದ್ದು ಪ್ರಾಚೀನ ಕಾಲದ ದಾಸ ಶರಣ ಸಾಹಿತ್ಯ ಆಧುನಿಕ ಕನ್ನಡ ಕಾವ್ಯ ಬಂಡಾಯ ದಲಿತ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದಿದೆ.

ಸಾಹಿತ್ಯ ಸಮ್ ಪ್ರೀತಿಯು ಇಂದು ಯುವಜನತೆಯ ಮನಸೆಳೆದು ಕಾವ್ಯ ಜಗತ್ತಿನ ಕಡೆಗೆ ಕೈಬೀಸಿ ಕರೆಯುತ್ತಿದೆ ಆಧುನಿಕ ಕಾಲದ ನವ ನವ ತಂತ್ರಜ್ಞಾನದ ಕಾಲವಾದ ಇಂದು ಕಂಪ್ಯೂಟರ್ ಪೇಸ್ಬುಕ್ಕು ವಾಟ್ಸಪ್ಪು ಮುಂತಾದ ತಂತ್ರಜ್ಞಾನದಲ್ಲಿ ಸಾಹಿತ್ಯದ ಘಮಲನ್ನು ನಿತ್ಯ ನೂತನ ವಿನೂತನವಾಗಿ ಬಿತ್ತರಿಸುತ್ತಿರುವ ಸಾಹಿತ್ಯ ಚಟುವಟಿಕೆಗಳು ಚುರುಕಾಗಿ ಸಾಗುತ್ತಿದೆ, ಯುವಜನತೆ, ನವ ನವ ಕವಿ ಮನಗಳು ಬೆಳಕಿನಡೆಗೆ ಬರುತ್ತಿದ್ದಾರೆ.

ಕವಿಮನ ಗಳು ಪ್ರಸ್ತುತ ದಿನದ ಸಮಸ್ಯೆಗಳಿಗೆ ತತ್ತಕ್ಷಣವಾಗಿ ಪ್ರತಿಕ್ರಿಯೆ ನೀಡುವಂತ ವ್ಯಕ್ತಿಗಳಾಗಿದ್ದಾರೆ. ಅಂತಹ ಸಮಾಜದ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡುವ ಮನಗಳಲ್ಲಿ ಇಂದು ಸಾಹಿತ್ಯ ಸಾಗರದೊಳಗೆ ತುಂಬಾ ಕವಿಗಳಿದ್ದರು ಅಂತವರ ಸಾಲಿನಲ್ಲಿ ಬೀದರಿನ ನೆಲದಲ್ಲಿ ಕನ್ನಡದ ಸುಗಂಧವನ್ನು ಪಸರಿಸಲು ತನ್ನ ಮಗಳ ಒಂದು ಸವಿನೆನಪಿಗಾಗಿ “ನಿವೇದಿತಾ ಹೂಗಾರ್ ಸಾಹಿತ್ಯ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಾಸನ ಟ್ರಸ್ಟ್” ಎನ್ನುವ ತನ್ನದೇ ಆದ ಒಂದು ಟ್ರಸ್ಟ್ ಅನ್ನು ಕಟ್ಟಿಕೊಂಡು ಸಾಹಿತ್ಯದ ಶಿಬಿರಗಳನ್ನು ಮಕ್ಕಳ ವ್ಯಕ್ತಿತ್ವ ವಿಕಸನದ ಶಿಬಿರಗಳನ್ನು, ಶೈಕ್ಷಣಿಕ ಶಿಬಿರಗಳನ್ನು ಹಮ್ಮಿಕೊಂಡು ಅರಿವು ಮೂಡಿಸುತ್ತಾ ಬೀದರಿನ ನೆಲದ ತುಂಬಾ ಓಡಾಡಿಕೊಂಡು ಸಾಮಾಜಿಕ ಕಳಕಳಿ ಹೊಂದಿರುವಂತಹ ಒಬ್ಬ ಸಾಮಾನ್ಯ ಮಹಿಳೆ ಇಂದು ಪುರುಷರಂತೆ ನಾವು ಸಮಾಜಕ್ಕೆ ಏನಾದರೂ ಸಹಾಯ ಮಾಡೋಣ, ಮಾಡುತ್ತಿವೆ, ಎನ್ನುವ ತುಡಿತವನ್ನು ಹೊಂದಿರುವಂತಹ ಕ್ರಿಯಾಶೀಲ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವಂತ….., ಪಾದರಸದಂತೆ ಸದಾ ಓಡಾಡಿಕೊಂಡಿರುವಂತ ಶ್ರೀದೇವಿ ಹೂಗಾರ ಯುವ ಕವಯಿತ್ರಿ ರವರು ಒಬ್ಬರು.

ಶರಣರ ನೆಲದ ಮಣ್ಣಿನ ಕಣ್ಣದ ಕುಡಿಯಾದ ಶ್ರೀದೇವಿ ಹೂಗಾರ ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಕವಿಮನದ ಭಾವನೆಗಳನ್ನು ತುಂಬಿಕೊಂಡಿರುವ ಒಂದು ಸಂಗಮ, ಕೂಡಲಸಂಗಮ ವಾಗಿರುವ ಭಾವನಾ ಜೀವಿ ಸಂಘ ಜೀವಿ ಮೃದು ಮನದ ಕವಯಿತ್ರಿ, ಅವರ ಒಂದು ರಚನೆಯ, ಅವರ ಭಾವನೆಗಳ ಸಂಗಮವೇ ಆಗಿರುವ “ಭಾವ ಬುಗುರಿ” ಎಂಬ ಕವಿತೆಗಳ ಸಂಕಲನವನ್ನು ಹೊರತಂದು ಸಾಹಿತ್ಯ ಲೋಕದಲ್ಲಿ ಲೋಕಾರ್ಪಣೆ ಮಾಡಿದ್ದಾರೆ,

ಭಾವ ಬುಗುರಿ ಎನ್ನುವ ಸುಂದರವಾದ ಕೃತಿಗೆ ಹಿರಿಯ ಸಾಹಿತಿಗಳಾದ ಡಾ ಸೋಮನಾಥ ಯಾಳವಾರ, ಹುಮನಾಬಾದ್ ರವರು ತಮ್ಮ ಮುನ್ನುಡಿಯೊಂದಿಗೆ ಶ್ರೀದೇವಿ ಹೂಗಾರ ರವರ ಕೃತಿಯನ್ನು ಪರಿಚಯಿಸುತ್ತಾ ಹೇಳುತ್ತಾರೆ ” ತಂದೆ ತಾಯಿ ಬಂಧು ಬಳಗವನ್ನು ಸದಾ ಗೌರವಿಸುವ ಭಾವನ ಜೀವಿಯಾಗಿರುವ ಶ್ರೀದೇವಿ ಹೂಗಾರ ಅವರು ಈ ಭಾವನೆಗಳ ಬಳುವಳಿಯೇ ಅವರ ಕವನ ಸಂಕಲನ ಭಾವ ಬುಗುರಿ. ಆದರೆ ಎಷ್ಟೋ ಕವನಗಳು ಭಾವದ ಭಾರ ಹೊತ್ತುಕೊಳ್ಳಲು ಸಮರ್ಥವಾಗಿ ಇರುವುದನ್ನು ಮನಗಾಣಬಹುದು, ಕವಿಯ ಭಾವ ಪ್ರಪಂಚ ತೀವ್ರವಾಗಿದ್ದು ಸಂಕೀರ್ಣತೆಯಿಂದ ಕೂಡಿದ್ದಾಗಿದೆ ಭಾವಗಳ ಅನುಭಾವ ಸಾಂದ್ರತೆಯನ್ನು ಅಭಿವ್ಯಕ್ತಿಗೊಳಿಸುವ ಶಬ್ದಗಳಿಗೆ ಆ ತೀವ್ರತೆಯನ್ನು ಅಭಿವ್ಯಕ್ತಿಸಲು ಶಕ್ತಿ ಸಾಲುತ್ತಿಲ್ಲ ಎನಿಸುತ್ತದೆ, ಮಾನವ ಬದುಕಿನ ಸುತ್ತ ಸದಾ ತಿರುಗುತ್ತಿರುವ ಈ ಭಾವಗಳ ಕೇಂದ್ರ ಬಿಂದುವಿನಲ್ಲಿ ಬಾಂಧವ್ಯದ ಬಂಧವಿದು ಭಾವಗಳ ಪರಿವರ್ತನೆ ಮಾಡಲು ಈ ಭಾವ ಬುಗುರಿಯನ್ನು ಕಟ್ಟಿಕೊಟ್ಟಿದ್ದಾರೆ, ಇವರ ಕವಿತೆಗಳು ಆತ್ಮಶಕ್ತಿಯನ್ನು ಹೊರಹೊಮ್ಮಿಸಿರುವುದನ್ನು ಕೃತಿಯಲ್ಲಿ ಕಾಣಬಹುದು, ಹೆಣ್ಣು ಮಕ್ಕಳು ಕಣ್ಣೀರು ಸುರಿಸುತ್ತಾ ನಿಲ್ಲುವ ಕಾಲ ಈಗ ಮುಗಿಯುತ್ತ ಬಂದಿದೆ, ಅವಳು ತನ್ನ ಆತ್ಮ ಬಲವನ್ನು ಹೆಚ್ಚಿಸಿಕೊಂಡು ಬದುಕಬೇಕಾಗಿದೆ ಹಾಗೆಯೇ ಅನ್ಯರನ್ನು ಬದುಕಿಸಬೇಕಾಗಿದೆ, ಅಂತಹ ವಿಶ್ವಾಸವನ್ನು ತುಂಬುವ ಸಾಲುಗಳು ನಮ್ಮ ಶ್ರೀದೇವಿ ಹೂಗಾರ ರಚನೆಯ ‘ಭಾವ ಬುಗುರಿ’ ಕೃತಿಯಲ್ಲಿ ಕಾಣಬಹುದು” ಎಂದು ಹೇಳಿದ್ದಾರೆ.

ಸಾಹಿತ್ಯ ಲೋಕದೊಳಗೆ ಭಾವಲಹರಿಯ ಮೂಲಕ ಕನ್ನಡ ಮನಸ್ಸುಗಳನ್ನ ತಂಪು ಗೊಳಿಸಿ ಹೃದಯ ವೀಣೆಯೊಂದಿಗೆ ಕನ್ನಡ ಮನಸುಗಳ ಹೃದಯ ಮೀಟಿದ್ದಾರೆ, ಇದು ಮೂರನೆಯ ಕೃತಿಯಾಗಿದ್ದು ಭಾವನೆಗಳ ಮೂಟೆಯನ್ನೇ ಹೊತ್ತು ಕನ್ನಡ ಸಾಹಿತ್ಯ ಲೋಕದೊಳಗೆ ಸಾಹಿತ್ಯಾಸಕ್ತರ ಮನಸ್ಸುಗಳೊಂದಿಗೆ ಭಾವ ಬುಗುರಿ ಆಟವಾಡಲು ಜನತೆಯ ಕೈಗೆ “ಭಾವ ಬುಗುರಿ” ಎಂಬ ಕವಿತೆಗಳ ಗುಚ್ಛ ನೀಡಿದ್ದಾರೆ.

ಬಾವ ಬುಗುರಿ ಎಲ್ಲಿ ಸುಮಾರು 106 ಕವನಗಳಿದ್ದು ಓದುಗರ ಮನ ಸೆಳೆಯುವ ಕವಿತೆಗಳು. ಕವಯಿತ್ರಿಯು ಕಾಣಿಸಿದನು ಕವಿತೆಯ ರೂಪ ನೀಡಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೆರಗು ನೀಡಿದ್ದಾರೆ,

ಕವನಗಳು ಓದುತ್ತಾ ಸಾಗಿದರೆ ಕವಿ ಹೃದಯವು ಮಾನವೀಯ ತುಡಿತಗಳಿಗೆ ಮಿಡಿದ ಮನವೆಂಬುದು ಸಾಕ್ಷಿಯಾಗುತ್ತದೆ.ಅನ್ಯಾಯದ ಜಾಗದಲ್ಲಿ ನ್ಯಾಯದ ನಿಲುವಿಗೆ ನಿಂತಿದ್ದಾರೆ. ಅಸಹಾಯಕರಲ್ಲಿ ಸಹಾಯಕಳಾಗಿ ಕೈ ಹಿಡಿಯುತ್ತಾಳೆ, ಕವಿತೆ ಕಟ್ಟುವ ನೆಪದಲ್ಲಿ ಭಾವನೆಯಲ್ಲಿ ನೋವು ಮರೆಮಾಚಿದ್ದಾರೆ ಭಾವಗಳ ಚಿತ್ತಾರ ಬಿಡಿಸಿ ನಗು ಮುಖದೊಂದಿಗೆ ಬುಗುರಿ ಹಾಡಿದ್ದಾಳೆ, ಭಾವ ಬುಗುರಿ ಯಲ್ಲಿ ಕೆಲವು ಕತೆಗಳನ್ನು ಓದಿದಾಗ ಮನ ಮುಟ್ಟುತ್ತವೆ ಆ ಕವಿತೆಗಳನ್ನು ಈ ರೀತಿಯಾಗಿ ಕಾಣಬಹುದು

“ಹೊಸ ಬಾಳ ಬಂಡಿಯಲಿ ಬಂದಿಯಾದ
ಹಳೆ ಚಕ್ರಗಳು ನಾವು…
ಹೊಸ ದಾರಿಯಲ್ಲಿ ಏನೇ ಬಂದರೂ
ಸಾಗೋಣ ನಾವು ನಗುನಗುತ್ತಾ” ( ಹೊಸ ವರ್ಷ ಕವಿತೆಯಲ್ಲಿ)

ಕವಯಿತ್ರಿ ಶ್ರೀದೇವಿ ಹೂಗಾರ ರವರು ನವ ಬದುಕಿಗೆ ನವಗಾನ ಕಟ್ಟಿ ಬದುಕಿಗೆ ಹೊಸ ಅರ್ಥ ನೀಡಿ ದ್ದಾರೆ ಹೊಸ ಬಾಳ ಬಂಡಿ ಎಂಬ ಬದುಕಿನಲ್ಲಿ ನಾವು ಬಂಧಿಯಾಗಿದ್ದೇವೆ. ಸಾಗುತ್ತಲಿರುವ ಹಾದಿಯಲ್ಲಿ ಏನೇ ಎಡರು ತೊಡರುಗಳು ಬಂದರೂ ನಾವು ನಲಿವಿನಲ್ಲಿ ಸಾಗೋಣ ಎಂದು ಕೂಗಿ ಜೊತೆಗಾರನಿಗೆ ಹೇಳುತ್ತಿದ್ದಾಳೆ.

ಮುಂದೆ ಸಾಗಿ ನೋಡಿದರೆ ‘ಮುತ್ತಿನಂತ ಜೋಡಿ ಕಡಿ ಬೇಡ ನೀ’ ಕವಿತೆಯಲ್ಲಿ ಜನಪದ ಶೈಲಿಯ ಸೊಗಡು ಬೀದರಿ ನೆಲದ ಭಾಷೆಯ ಶೈಲಿ ಭಾಷಾ ಸೌಂದರ್ಯ ಜೊತೆಗೆ ಕವಿತೆಯಲ್ಲಿ ಅಷ್ಟೇ ತೀವ್ರತೆಯಲ್ಲಿ ಈ ಕವಿತೆಯಲ್ಲಿ ಇನಿಯನಿಗೆ ಹುಡುಕಾಟವಿದೆ.

“ತಾಳಿ ಕಟ್ಟಿ ಭಾವದ ಬಳ್ಳಿಗೆ ಬಿಡದೆ
ಸುತ್ತಿದೆ ಓಡಬ್ಯಾಡ ನನ್ನ ಬಿಟ್ಟು
ಬಿಳಿ ಎದೆಯ ಒಳಗೆ ಅಡಿಗಿಸಿನಿ ನಿನ್ನ
ಕಳೆದೋಗ್ ಬ್ಯಾಡ ನನ್ನೊಡೆಯ”
( ಮುತ್ತಿನಂಥ ಜೋಡಿ ಕಡಿಬ್ಯಾಡ ನೀ ಕವಿತೆಯಲ್ಲಿ )

ಒಲವಿನ ಪ್ರೀತಿಯ ಮನ ಇನಿಯನ ಬಗ್ಗೆ ಹೃದಯದ ಹಂದರದೊಳಗೆ ನಿನ್ನನ್ನು ಅಡುಗೆಸಿಟ್ಟಿದ್ದೇನೆ. ಹೋಗ್ಬೇಡ ನನ್ನ ಬಿಟ್ಟು ನಿನ್ನ ಬಿಟ್ಟು ನಾನು ಇರಲಾರದ ಒಂದು ಮೃದುವಾದ ಮನಸ್ಸಿನ ಹಂಬಲ ತುಡಿತ ಈ ಕವಿತೆಯಲ್ಲಿ ಇರುವುದನ್ನು ಕಾಣಬಹುದು.

ಇನಿಯನೇ ಮುಂದೆ ಕವಿತೆಯಲ್ಲಿ ಖಾಕಿ ಧಾರಿಯಾಗಿ ಕಾಣಿಸಿಕೊಳ್ಳುತ್ತಾನೆ. ಪೊಲೀಸ್ ಪದೇ ಕವನ ದೊಳಗೆ ಕವಯಿತ್ರಿ ತುಂಬಾ ಸೊಗಸಾಗಿ, ಪತಿಯ ಬಗ್ಗೆ ತುಂಬಾ ಅಚ್ಚುಕಟ್ಟಾಗಿ ಪದ್ಯವನ್ನು ಕಟ್ಟಿದ್ದಾಳೆ, ಪೊಲೀಸ್ ಕಾಯಕ ದೊಳಗೆ ತಲ್ಲೀನನಾಗಿ ಕಾಯಕ ಮಾಡುತ್ತಿರುವುದರಿಂದ ಸಮಯ ಹೇಳಿ ಕೇಳಿ ಬರುವುದಿಲ್ಲ ಯಾವಾಗಲಾದರೂ ಸಿದ್ಧವಾಗಿರಬೇಕು ಎಂದು ಕಾಯಕದೊಂದಿಗೆ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗದಿರು ಭಾವನೆಗಳೊಂದಿಗೆ ಬದುಕುತ್ತಿರುವ ಜೀವ, ಈ ಭಾವಕ್ಕೆ ಏನು ಹೇಳಲಿ, ಎಂದು ಪತಿಯೊಂದಿಗೆ ಪ್ರಶ್ನೆ ಮಾಡುತ್ತಿದ್ದಾಳೆ, ಬೇಡುವ ಪರಿ ಇಂತಿದೆ.

” ಓ ಇನಿಯ ಎನ್ನ ನಯನಗಳ
ಮುಚ್ಚಿವೆ ಎಂದು ಬೆಚ್ಚನೆಯ
ಹೊದಿಕೆ ಹಾಕಿ ಹೇಳದೆ ಕೇಳದೆ
ಕತ್ತಲೆಯ ಕರ್ತವ್ಯಕ್ಕೆ ಜಾರದಿರು
ಎನ್ನ ಬೆಚ್ಚುವ ಭಾವಕ್ಕೇನು ಹೇಳಲಿ||”

ಇಲ್ಲಿ ಇನಿಯನೇ ಪತಿ ಯಾಗಿದ್ದಾನೆ ನಾನು ಕಣ್ಣು ಮುಚ್ಚಿದೆನೆಂದು ಬೆಚ್ಚನೆಯ ಹೊದಿಕೆ ಹೊಚ್ಚಿ ಹೇಳದೆ ಕೇಳದೆ ಕತ್ತಲಲ್ಲಿ ಒಂಟಿ ಜೀವಕೆ ಬಿಟ್ಟು ಕರ್ತವ್ಯಕ್ಕೆ ಹೋಗದಿರು, ಈ ಹೃದಯದ ಬಡಿತದ ಉಸಿರಿನ ಸದ್ದು ನೀನೇ ಆದಾಗ ಕತ್ತಲಲ್ಲಿ ಬೆಚ್ಚಿದ ಭಾವಕ್ಕೆ ಏನು ಹೇಳಬೇಕೆಂದು ತೋಚುತ್ತಿಲ್ಲ ಣಣiಟಟಚಿ, ಅರಿಯದ ಈ ಬಾವ ಈ ಕವಿತೆಯಲ್ಲಿ ಕಾಣುತ್ತಿದೆ. ಭಾವದೊಳಗೆ ಜೀವಾಳವಾಗಿ ಇನಿಯಾ ಅಥವಾ ಪತಿ ಕಾಣುತ್ತಿದ್ದಾನೆ

ಕವಯಿತ್ರಿ ಭಾವನೆಗಳ ಕಡಲು ಹಾಗಿದ್ದಾಳೆ ಭಾವಗಳನ್ನು ತುಂಬಿಕೊಂಡು ಹೀಡೇರದ ಮನದ ಹಂಬಲ ಗಳು ನೋವು ನೀಡುವ ಬಾಸುಂಡೆ ಗಾಯಗಳ ಮನದ ವೇದನೆ ಗಳಾಗಿ ಕಾಣಿಸಿವೆ ಮನವು ದುಃಖದ ಯೋಚನೆಯಲ್ಲಿ ಮುಳುಗಿದಾಗ ದೂರ ಎಲ್ಲಿಯಾದರೂ ಹೋಗಲೇ ಅಥವಾ ಯಾರಿಗೂ ಕಾಣದ ಹಾಗೆ ಬಂಧಿಯಾಗಲಿ ಎಂದು ಚಂಚಲತೆಯಿಂದ ಕೂಡಿದ ಮನಕ್ಕೆ ಪ್ರಶ್ನೆ ಮಾಡುತ್ತಿದ್ದಾಳೆ.

ದೂರ ಹೋಗಲೇನು ಕವಿತೆಯಲ್ಲಿ
” ಹಸಿ ಅಂಬಲ ಮರೆತು
ಹೃದಯ ವೇದನೆ ತೊರೆದು
ದೂರ ಹೋಗಲೇನು?
ಹಾರಾಡುವ ಮನಕಟ್ಟಿ ತೇಲಾಡುವ ಭಾವ ಕಟ್ಟಿ
ಕಲ್ಲು ಬೆಟ್ಟದಲ್ಲಿ ಬಂದಿಯಾಗಲೇನು?”

ಕವಯಿತ್ರಿಯ ಮನದೊಳಗೆ ದುಃಖ ದುಗುಡ ತುಂಬಿರುವ ಗೂಡು ಆಗಿದೆ, ಅದನ್ನು ಹೇಗೆ ಸಮಾಧಾನಿಸೋದು? ಮನವು ಎಚ್ಚರವಾದಾಗಲ್ಲೆಲ್ಲ ಚುಚ್ಚಿ ಚುಚ್ಚಿ ಗಾಯಗೊಳಿಸಿ ಘಾಸಿಗೊಳಿಸುವ ಸಂಗಾತಿಗಳನ್ನು, ಭಾವನೆಗಳನ್ನು ಮನದೊಳಗೆ ಮಣ್ಣು ಮುಚ್ಚಿ ಸಮಾಧಿ ಕಟ್ಟಿ ಬಿಡುವುದೇ ಎಂದು ಕವಿತ್ರಿ ಹೊಟ್ಟೆಯೊಳಗಿರುವ ಸಂಕಟವನ್ನು ಹೊರ ಪ್ರಪಂಚಕ್ಕೆ ಪರಿಚಯಿಸಲು ಆಗದಿದ್ದರೂ ಅಕ್ಷರ ರೂಪದೋಳಗೆ ರೊಚ್ಚಿಗೆದ್ದಿದ್ದಾರೆ.

‘ಹಸನ ಮಾಡಲೇನು ಹುಸಿ ಹೃದಯಗಳು’ ಕವಿತೆಯಲ್ಲಿ ಕವಯಿತ್ರಿ ತೀವ್ರ ಸ್ವರೂಪದ ಸಮಾಜದೊಳಗೆ ಸುಭಿಕ್ಷೆ ನೆಲೆಸುವ ಉದ್ದೇಶದೊಂದಿಗೆ ಎಲ್ಲ ಜೀವರಾಶಿಗಳು ಭೂಮಿಯಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸಬೇಕು, ನನ್ನಂತೆ ನೋವು ಯಾತನೆ ಕಾಣಬಾರದು ಕಾಣದಂತೆ ಮಾಡಬೇಕಾದರೆ, ನಾನು ಅದಕ್ಕೆ ಯಾವ ರೀತಿ ಏನು ಸಿದ್ಧತೆ ಮಾಡಿಕೊಳ್ಳಬೇಕು, ಅದಕ್ಕೆ ಜೀವಿಗಳಿಗೆ ಮನ ಮಿಡಿಯುತ್ತ ಸಮಾಜದವರಿಗೆ ಸುಬೀಕ್ಷೆ ನೆಲೆ ನಿಲ್ಲಿಸುವ ಉದ್ದೇಶದೊಂದಿಗೆ ಎಲ್ಲ ಜೀವರಾಶಿಗಳು ಭೂಮಿಯಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸಬೇಕು ನನ್ನಂತೆ ನೋವು ಯಾತನೆ ಕಾಣದ ಹಾಗೆ ಇರಬೇಕು, ಪ್ರೀತಿ ವಿಶ್ವಾಸ, ಸಹಾನುಭೂತಿ, ಮಾನವೀಯತೆಯಲ್ಲಿ ತೇಲಾಡಬೇಕಾದರೆ ಏನು ಮಾಡಬೇಕು… ಎನ್ನುವ ಕೊರಗು ಕವಿತೆಗಳಲ್ಲಿ ಕಂಡುಬರುತ್ತದೆ.

ಅದಕ್ಕೆ ನಾನು ಸಿದ್ದ ಸಿದ್ದ ಎಂದು ನನ್ನಂತೆ ಭೂಮಿಯಲ್ಲಿ ಕಣ್ಣೀರು ಸುರಿಸಬಾರದು, ಎಲ್ಲರೂ ನಗುನಗುತ್ತಾ ಬಾಳು ವೆ ಮಾಡಬೇಕು ಎಂಬುದು ಕವಯಿತ್ರಿಯ ತಮ್ಮ ನಿಲುವು ಈ ರೀತಿ ಇದೆ

“ಎನ್ನ ಕಣ್ಣೀರು ನೆಲಕ್ಕುರುಳಿ ವ್ಯರ್ಥವಾಗದಂತೆ
ಆಣೆಕಟ್ಟು ಕಟ್ಟಲೇನು?
ನೊಂದ ಎನ್ನುoತಹ ಎಲ್ಲಾ ಜೀವರಾಶಿಗಳ
ಹೃದಯದ ಹೊಲದೊಳು ಹರಿಸಿ
ಹೊಸ ಬೆಳೆಯ ಬೆಳೆಯಬೇಕು ”

ಸಮಾಜದೊಳಗೆ ಯಾವುದೇ ಜೀವರಾಶಿ ಯಾಗಲಿ ಕಷ್ಟಕ್ಕೆ ಸಿಲುಕಬಾರದು ಎಲ್ಲ ಜೀವಗಳು ಸುಖ ಸಮೃದ್ಧಿ ಎಂದಿಗೆ ಜೀವಿಸ ಬೇಕು, ಎಂದು ಕವಿ ಮನದ ಮಾತೃ ಹೃದಯಿ ತಾಯಿ ಶ್ರೀದೇವಿ ಹೂಗಾರ ಇವರ ತಾಯಿ ವಾತ್ಸಲ್ಯದ ಮಾತುಗಳು ಈ ಕವನ ಸಂಕಲನದಲ್ಲಿ ಕಾಣಬಹುದು.

“ಮರಳಿ ಬಾ, ಆತ್ಮಸಾಕ್ಷಿ, ಓ ಮಗಳೇ, ಬೆಳಕಿಂಡಿಯಾಗು, ಮರೆತೆಯೇಕೆ?, ಬಾಳ ಸೂತ್ರ, ಎನ್ನ ಅಂಬಿಗ ನೀ, ಕನಸುಗಳ ಪೋಣಿಸಿದೆ ” ಮುಂತಾದ ಕವಿತೆಗಳು ಓದಿಸಿಕೊಂಡು ಮನಸನ್ನ ತಡೆದು ನಿಲ್ಲಿಸುತ್ತವೆ. ಭಾವನಾತ್ಮಕವಾಗಿ ಸ್ಪಂದಿಸುವ ಮೃದು ಮೃದು ಹೃದಯದ ತಾಯಿ ಆದ ಶ್ರೀದೇವಿ ಹೂಗಾರ ಅವರ ಕವಿತೆಗಳು ಸಮಾಜಕ್ಕೆ, ಸಮಾಜದ ಏಳಿಗೆಗೆ, ಸಮಾಜದ ಕಲುಸಿತ ಮನಸ್ಸುಗಳಿಗೆ ನೀತಿಪಾಠವನ್ನು ಹೇಳಿಕೊಡುವಂತಹ, ಮಾರ್ಗದರ್ಶನದೊಂದಿಗೆ ಕೂಡಿರುವ ಕವಿತೆಗಳು.

“ಕತ್ತಲೆಯಲ್ಲೇ ಮರೆಯಾಯಿತು, ಮೌನ ಕೂಗು, ಮೌನ ಕೂಗು, ಮುಕ್ತಿ ಇಲ್ಲ, ಜೀವನದ ಪಾಠಶಾಲೆ, ಓ ಕಣ್ಣೀರ ದಾರೆ” ಈ ರೀತಿಯ ಮುಂತಾದ ಕವಿತೆಗಳು ಹತಾಶೆಯ ಪರಿ ತುಂಬಿಕೊಂಡು ಸಮಾಜದೊಳಗೆ ದೈಹಿಕ ಶಕ್ತಿ ಪ್ರದರ್ಶನ ಮಾಡದೆ, ಲೇಖನಿಯ ಮೂಲಕ ಹರಿತವಾದ ಕವಿತೆಗಳನ್ನು ಕಟ್ಟಿಕೊಂಡು, ಮೌನದ ಕೂಗಿನಲ್ಲಿ ಸಮಾಜದ ಉತ್ತಮ ಬದುಕಿನ ಬಾಳಅನ್ನು ರೂಪಿಸಲು ಮೌನ ತಂತ್ರದೊಂದಿಗೆ ಕವಿತೆಯ ಮೂಲಕ ಯುದ್ಧ ಮಾಡುತ್ತಿದ್ದಾರೆ.

ಮತ್ತೊಂದು ಕಡೆ ಕವಿತ್ರಿ ಅವರಿಗೆ ಬೆನ್ನುಡಿ ಬರೆದು ಬೆನ್ನುತಟ್ಟಿದ ಕರ್ನಾಟಕ ಜನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಬೀದರನ ಹಿರಿಯರಾದ ಡಾ|| ಜಗನ್ನಾಥ್ ಹೆಬ್ಬಾಳೆ ತಮ್ಮ ಮಾತುಗಳಲ್ಲಿ ‘ಭಾವ ಬುಗುರಿ’ ಕವನ ಸಂಕಲನ “ಸಮಾಜ, ಕೌಟುಂಬಿಕ ಹಾಗೂ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತದೆ, ಆತ್ಮಸ್ಥೈರ್ಯ ತುಂಬುತ್ತದೆ, ಮಾನವೀಯ ಮೌಲ್ಯಗಳ ಕೊಂಡಿ ಗಟ್ಟಿಗೊಳಿಸುತ್ತದೆ, ವಾಚಕರಿಗೆ ರಸದೌತಣವನ್ನು ನೀಡುತ್ತದೆ, ಮ್ಯಾಕನಿಸಂ ಜಮಾನದಿಂದ ದೂರ ತಳ್ಳುತ್ತವೆ, ಹಾಗಾಗಿಯೇ ಈ ಪದ್ಯಗಳು ಓದಿಸಿಕೊಂಡು ಹೋಗುತ್ತವೆ ಉತ್ತಮ ಉತ್ತಮ ಸಂದೇಶ ನೀಡುತ್ತಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ,

ಭಾವ ಬುಗುರಿ’ ಕವಿತೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಕವಯಿತ್ರಿ ಯು ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸಿ ಕೊಳ್ಳಬೇಕಾಗಿದೆ ಭಾವನೆಗಳು ಕಣ್ಣೀರಿನೊಂದಿ ಜೂಜಾಟ ಆಡುತ್ತಿದೆ, ದೈಹಿಕ ಶಕ್ತಿಯಂತೆ ಮಾನಸಿಕತೆಯನ್ನು ಗಟ್ಟಿ ಗೊಳಿಸಬೇಕಾಗಿದೆ ಕವಯಿತ್ರಿ.

ಹೂವಿ ನಂತೆ ಮೃದುವಾಗಿ ಮುಂದುವರಿಯಬೇಕಾಗದ ಭಾವ ಹಾವಿನಂತೆ ಬುಸುಗುಡುತ್ತ ಸಾಗುತ್ತಿರುವ ರೋಷ ಕವಿತೆಯಲ್ಲಿದೆ.ಸೂಕ್ಷ್ಮವಾಗಿ ಅರಿತುಕೊಂಡ ಮನ ಕವಿತೆಗಳ ಸಮಾಜದೊಳಗಿನ ವೇದನೆಯನ್ನು ನೆನೆಯುತ್ತದೆ, ಶ್ರೀದೇವಿ ಅಮ್ಮ ರವರ ಬಾವ ಬುಗುರಿ ಕವನ ಸಂಕಲನ ದೊಳಗೆ ಭಾವನೆಗಳು ಭೋರ್ಗರೆಯುವ ಕವನಗಳಿಗೆ ಏನೋ ಕೊರತೆ ಇಲ್ಲ.

ಮನದ ನೋವು ವೇದನೆಗಳಿಗೆ ಗಂಡೆದೆಯ ಗುಂಡಿಗೆ, ಸಾಮಾಜಿಕ ಸಮಸ್ಯೆಗಳಿಗೆ ಎದೆ ತಟ್ಟಿ ನಿಲ್ಲುವ ಭಾವನೆಗಳ ತುಡಿತವಿದೆ, ಬೆಂಕಿಯಂತ ಸಮಸ್ಯೆಗಳಿಗೆ ಅವರ ಕವಿತೆಯಲ್ಲಿ ತಣ್ಣನೆಯ ಪರಿಹಾರವಿದೆ, ಹೃದಯದ ಭಾವನೆಗಳಿಗೆ ಸ್ಪಂದಿಸುವ ಪ್ರಭುತ್ವವಿದೆ, ಸಮಾಜದ ಏಳಿಗೆಯನ್ನು ಬಯಸುವ ಕವಿಯ ಭಾವನೆಗಳಿಗೆ ಕನ್ನಡಿಯಂತಿರುವ ಭಾವ ಬುಗುರಿ ಕವಿತೆಗಳು, ಸರಮಾಲೆಯಾಗಿ ಕನ್ನಡದ ಭಂಡಾರಕ್ಕೆ ಒಂದು ರೀತಿಯ ಭಾವನೆಗಳನ್ನು ತುಂಬಿಕೊಂಡಿರುವ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದರೆ,

ಇನ್ನೂ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೃತಿಗಳು ಪ್ರಕಟವಾಗಲಿ ಕವಯಿತ್ರಿ ಶ್ರೀದೇವಿ ಹೂಗಾರ ಅಮ್ಮ ಅವರ ಸಾಹಿತ್ಯದ ಹಾದಿ ಯಶಸ್ವಿಯಾಗಿ ಸುಗಮವಾಗಿ ಸಾಗಲಿ ಎಂಬುದು ನನ್ನ ಕಿರಿಯನ ಆಶಯ.

ಯಲ್ಲಪ್ಪ ಎಮ್ ಮರ್ಚೇಡ್, ರಾಯಚೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x